• Home
  • »
  • News
  • »
  • lifestyle
  • »
  • Breakfast Recipe: ಬೆಳಗಿನ ಉಪಹಾರಕ್ಕೆ ರಾಜ್ಮಾ ರೈಸ್ ಮಾಡಿ ನೋಡಿ, ಸಖತ್​ ಟೇಸ್ಟಿ ಫುಡ್​

Breakfast Recipe: ಬೆಳಗಿನ ಉಪಹಾರಕ್ಕೆ ರಾಜ್ಮಾ ರೈಸ್ ಮಾಡಿ ನೋಡಿ, ಸಖತ್​ ಟೇಸ್ಟಿ ಫುಡ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಮಾ ರೈಸ್ (Rajma Rice)​ ಮಾಡಲು ಹೆಚ್ಚಿನ ಸಾಮಾಗ್ರಿಗಳು ಬೇಕಾದರೂ ಕೂಡ ಮಾಡುವ ವಿಧಾನ ಮಾತ್ರ ಸರಳವಾಗಿದೆ. ಇದನ್ನು ಒಮ್ಮೆ ಕಲಿತುಕೊಂಡರೆ ಬೇಕಾದಾಗ ಮತ್ತೆ ಮತ್ತೆ ಸುಲಭವಾಗಿ ಮಾಡಿಕೊಳ್ಳಬಹುದು

  • Share this:

ಬೆಳಗಿನ ಬ್ರೇಕ್​ ಫಾಸ್ಟ್ (Breakfast)​ ರೆಸಿಪಿಗೆ (Recipe) ಏನ್​ ಮಾಡ್ಲಿ ಎಂದು ಚಿಂತೆ ಮಾಡ್ತಿದ್ದೀರಾ? ಈ ರಾಜ್ಮಾ ರೈಸ್ ಮಾಡಿ.  ರಾಜ್ಮಾ ರೈಸ್ (Rajma Rice)​ ಮಾಡಲು ಹೆಚ್ಚಿನ ಸಾಮಾಗ್ರಿಗಳು ಬೇಕಾದರೂ ಕೂಡ ಮಾಡುವ ವಿಧಾನ ಮಾತ್ರ ಸರಳವಾಗಿದೆ. ಮಾಡುವ ವಿಧಾನವನ್ನು ಒಮ್ಮೆ ಕಲಿತುಕೊಂಡರೆ ಬೇಕಾದಾಗ ಮತ್ತೆ ಮತ್ತೆ ಸುಲಭವಾಗಿ ಮಾಡಿಕೊಳ್ಳಬಹುದು. ಮನೆಯಲ್ಲಿನ ಚಿಕ್ಕಪುಟ್ಟ ಕಾರ್ಯಕ್ರಮಗಳಿಗೆ ಮಾಡಿಕೊಂಡರೆ ಎಲ್ಲರೂ ತಿಂದು ಖಾಲಿ ಮಾಡುತ್ತಾರೆ. ಅಷ್ಟೊಂದು ರುಚಿಯಾಗಿರುತ್ತದೆ ಈ ರಾಜ್ಮಾ ರೈಸ್. ಹಾಗಾದರೆ ಇನ್ನೇಕೆ ತಡ! ಬೇಗ ಮಾಡುವ ವಿಧಾನವನ್ನು ನೋಡಿಕೊಂಡು ಉಪಹಾರಕ್ಕೆ ಇದನ್ನೇ ಮಾಡಿ ಸವಿಯಿರಿ.


ಬೇಕಾಗುವ ಸಾಮಾಗ್ರಿಗಳು


ಎಣ್ಣೆ – 3 ದೊಡ್ಡ ಚಮಚ


ಬೆಣ್ಣೆ –1 ದೊಡ್ಡ ಚಮಚ


ಬೆಳ್ಳುಳ್ಳಿ – 1 ದೊಡ್ಡ ಚಮಚ (ಸಣ್ಣಗೆ ಹೆಚ್ಚಿದ್ದು)


ಈರುಳ್ಳಿ – 1 (ಸಣ್ಣಗೆ ಹೆಚ್ಚಿದ್ದು)


ಹಸಿ ಮೆಣಸಿನಕಾಯಿ – 1 (ಸಣ್ಣಗೆ ಹೆಚ್ಚಿದ್ದು)


30 ನಿಮಿಷ ನೆನೆಸಿದ ಬಾಸುಮತಿ ಅಕ್ಕಿ – 1 ಕಪ್


ಹಸಿ ಬಟಾಣಿ – 3 ದೊಡ್ಡ ಚಮಚ


ಸಿಹಿ ಕಾರ್ನ್ – 3 ದೊಡ್ಡ ಚಮಚ


ಹಸಿರು ದೊಡ್ಡ ಮೆಣಸಿನ ಕಾಯಿ – 2 ದೊಡ್ಡ ಚಮಚ


ಕೆಂಪು ದೊಡ್ಡ ಮೆಣಸಿನ ಕಾಯಿ – 2 ದೊಡ್ಡ ಚಮಚ


ಹಳದಿ ದೊಡ್ಡ ಮೆಣಸಿನ ಕಾಯಿ – 2 ದೊಡ್ಡ ಚಮಚ


ರುಬ್ಬಿದ ಟೊಮೆಟೊ – ಅರ್ಧ ಕಪ್


ಟೊಮೆಟೊ ಸಾಸ್ – 1 ದೊಡ್ಡ ಚಮಚ


ಚಿಲ್ಲಿ ಸಾಸ್ – 1 ದೊಡ್ಡ ಚಮಚ


ಅಚ್ಛ ಖಾರದ ಪುಡಿ – ಅರ್ಧ ಚಮಚ


ಉಪ್ಪು – ಮುಕ್ಕಾಲು ಚಮಚ


ಒಣ ಮೆಣಸಿನಕಾಯಿ ತರಿ (ರೆಡ್ ಚಿಲ್ಲಿ ಫ್ಲೇಕ್ಸ್) – ಅರ್ಧ ಚಮಚ


ಒರಿಗ್ಯಾನೊ – ಅರ್ಧ ಚಮಚ


ಬೇಯಿಸಿದ ರಾಜ್ಮಾ – ಅರ್ಧ ಕಪ್


ಹಸಿರು ಈರುಳ್ಳಿ ಸೊಪ್ಪು – 2 ದೊಡ್ಡ ಚಮಚ (ಸಣ್ಣಗೆ ಹೆಚ್ಚಿದ್ದು)


ಇದನ್ನೂ ಓದಿ: BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ


ಮಾಡುವ  ಸರಳ ವಿಧಾನ


ಒಂದು ಬಾಣಲೆಗೆ 1 ದೊಡ್ಡ ಚಮಚ ಎಣ್ಣೆ, 1 ದೊಡ್ಡ ಚಮಚ ಬೆಣ್ಣೆ ಹಾಕಿ. ಇದಕ್ಕೆ 1 ದೊಡ್ಡ ಚಮಚ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ದೊಡ್ಡ ಉರಿಯಲ್ಲಿ ಹುರಿಯಿರಿ. ಈರುಳ್ಳಿ , ಹಸಿ ಮೆಣಸಿನಕಾಯಿ ಹಾಕಿ ಹುರಿಯಿರಿ. ಈಗ ಇದಕ್ಕೆ 1 ಕಪ್ ಆಗುವಷ್ಟು ನೆನೆಸಿದ ಬಾಸುಮತಿ ಅಕ್ಕಿಯನ್ನು ಹಾಕಿ, ಬಳಿಕ 2-3 ನಿಮಿಷ ಸಣ್ಣ ಉರಿಯಲ್ಲಿ ನಿಧಾನವಾಗಿ ಹುರಿದು ತೆಗೆದಿಡಿ.


ಹುರಿದ ಅಕ್ಕಿಯನ್ನು ತೆಗೆದ ಮೇಲೆ ಅದೇ ಬಾಣಲೆಗೆ 2 ದೊಡ್ಡ ಚಮಚ ಎಣ್ಣೆ ಹಾಕಿ, ಅದಕ್ಕೆ 3 ದೊಡ್ಡ ಚಮಚ ಹಸಿ ಬಟಾಣಿ, 3 ದೊಡ್ಡ ಚಮಚ ಸಿಹಿ ಕಾರ್ನ್, 3 ಬಗೆಯ ದೊಡ್ಡ ಮೆಣಸಿನ ಕಾಯಿ, 2 ದೊಡ್ಡ ಚಮಚ ಸಣ್ಣಗೆ ಹೆಚ್ಚಿದ ಹಳದಿ ದೊಡ್ಡ ಮೆಣಸಿನ ಕಾಯಿ ಹಾಕಿ 2 ರಿಂದ 3 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ಇದಕ್ಕೆ ಅರ್ಧ ಕಪ್ ರುಬ್ಬಿದ ಟೊಮೆಟೊ, 1 ದೊಡ್ಡ ಚಮಚ ಟೊಮೆಟೊ ಸಾಸ್, 1 ದೊಡ್ಡ ಚಮಚ ಚಿಲ್ಲಿ ಸಾಸ್, ಅರ್ಧ ಚಮಚ ಅಚ್ಚ ಖಾರದ ಪುಡಿ, ಮುಕ್ಕಾಲು ಚಮಚ ಉಪ್ಪು ಹಾಕಿ ಚೆನ್ನಾಗಿ ಕಲಸಿ.


ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ


ಒಂದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಈಗ ಇದಕ್ಕೆ ಅರ್ಧ ಚಮಚ ಒಣ ಮೆಣಸಿನಕಾಯಿ ತರಿ, ಅರ್ಧ ಚಮಚ ಒರಿಗ್ಯಾನೊ ಹಾಕಿ ಚೆನ್ನಾಗಿ ಕಲಸಿ. ನಂತರ ಇದಕ್ಕೆ ಒಂದೂ ಕಾಲು ಕಪ್ ನೀರು ಹಾಕಿ ನೀರು ಕುದಿಯುತ್ತಿರುವಾಗ ಅರ್ಧ ಕಪ್ ಬೇಯಿಸಿದ ರಾಜ್ಮಾ ಹಾಕಿ. ನಂತರ ಇದಕ್ಕೆ ಹುರಿದಿಟ್ಟುಕೊಂಡಿರುವ ಅಕ್ಕಿ ಹಾಕಿ, ನಿಧಾನವಾಗಿ ಕಲಸಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 6-7ನಿಮಿಷ ಬೇಯಿಸಿದ್ರೆ ಸಾಕು ರಾಜ್ಮಾ ರೈಸ್ ಸವಿಯಲು ಸಿದ್ಧ.

Published by:ಪಾವನ ಎಚ್ ಎಸ್
First published: