Recipe: ಮನೆಯಲ್ಲಿ ಸುಲಭವಾಗಿ ಮಾಡಿ ರುಚಿಕರ ಮೇಲುಕೋಟೆ ಪುಳಿಯೋಗರೆ ಪುಡಿ

ಮನೆಯಲ್ಲೇ ತಯಾರಿಸಿ ಮಾಡಬಹುದಾದ ಪುಳಿಯೋಗರೆ ಗೊಜ್ಜಂತೂ ತಿಂದಷ್ಟು ಇನ್ನೂ ತಿನ್ನಬೇಕೆಂಬ ಬಯಕೆಯನ್ನು ಮನದಲ್ಲಿ ಮೂಡಿಸುತ್ತದೆ. ಇದನ್ನು ತಯಾರಿಸಲು ಬಹಳ ಸಮಯ ಬೇಕಾಗಿಲ್ಲ. ಸುಲಭವಾಗಿ ಮನೆಯಲ್ಲೇ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗ್ಗೆ ಬೇಗ ಮಾಡೋ ಅಡುಗೆಯಲ್ಲಿ ಪುಳಿಯೊಗ್ಗರೆಯೂ ಒಂದಾಗಿದೆ. ಬ್ಯಾಚುಲರ್ಸ್​ಗಳಿಗೆ ಪುಳಿಯೋಗರೆ ಪುಡಿ ವರವಿದ್ದಂತೆ. ಅಮ್ಮ ಮಾಡಿದ ಪುಳಿಯೋಗರೆ ಪುಡಿ ಇಷ್ಟ ಪಡುತ್ತಾರೆ. ಮನೆಯಲ್ಲಿ ಸುಲಭವಾಗಿ ಪುಳಿಯೋಗರೆ ಪುಡಿ ಮಾಡಿ ಎಲ್ಲರಿಗೂ ಇಷ್ಟವಾಗುತ್ತದೆ. ಭಾರತೀಯ ತಿಂಡಿ-ತಿನಿಸುಗಳು  ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅಕ್ಕಿ ರೊಟ್ಟಿ (Akki Rotti), ಜೋಳದ ರೊಟ್ಟಿ, ರಾಗಿ ಮುದ್ದೆ, ಚಿತ್ರಾನ್ನ, ಹೀಗೆ ಈ ತಿಂಡಿಗಳನ್ನು ಹೆಸರಿಸುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲದಂತಾಗುತ್ತದೆ. ಅಷ್ಟೊಂದು ವೈವಿಧ್ಯಮಯ ಸ್ವಾದಭರಿತ ತಿಂಡಿಗಳ ಪಟ್ಟಿಯೇ ನಮ್ಮ ಮುಂದಿದೆ. ಇನ್ನು ಈ ಪಟ್ಟಿಯಲ್ಲಿ ಅಗ್ರ ಗಣ್ಯ ಸ್ಥಾನ ಪಡೆದುಕೊಂಡಿರುವುದು ಪುಳಿಯೋಗರೆಯಾಗಿದೆ (Puliyogare) ಅತಿಸರಳವಾಗಿ (Easy) ಮಾಡಬಹುದಾದ ಪುಳಿಯೋಗರೆ ದೂರದ ಅಮೇರಿಕಾದಲ್ಲೂ ಹೆಸರುವಾಸಿಯಾಗಿದೆ (Famous) ಎಂದರೆ ಅದರ ರುಚಿಗೆ ನೀವು ಮಾರು ಹೋಗಲೇಬೇಕು.

ಪುಡಿ ಮಾಡಲು ಬೇಕಾಗುವ  ಸಾಮಾಗ್ರಿಗಳು

ಕೊತ್ತಂಬರಿ ಬೀಜ- 8 ಟೇಬಲ್ ಚಮಚ
ಎಳ್ಳು - 8 ಟೇಬಲ್ ಚಮಚ
ಮೆಂತ್ಯೆ ಕಾಳು - 2 ಟೇಬಲ್ ಚಮಚ
ಜೀರಿಗೆ - 2 ಟೇಬಲ್ ಚಮಚ
ತುರಿದ ಒಣ ಕೊಬ್ಬರಿ – 4 ಟೇಬಲ್ ಚಮಚ
ಬ್ಯಾಡಗಿ ಮೆಣಸಿನಕಾಯಿ -10 ರಿಂದ 12
ಕರಿ ಬೇವಿನ ಎಲೆಗಳು – ಒಂದು ಕಡ್ಡಿ
ಅಡುಗೆ ಎಣ್ಣೆ - 4 ಟೇಬಲ್ ಚಮಚ

ಇದನ್ನೂ ಓದಿ: BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

ಮಾಡುವ ವಿಧಾನ

1. ಮೊದಲು ಬಾಣಲೆ ಬಿಸಿ ಮಾಡಿ, ಎಳ್ಳನ್ನು ಹುರಿಯಿರಿ, ಬಳಿಕ ಕೊಬ್ಬರಿ ತುರಿಯನ್ನು ಹಾಕಿ ಹುರಿಯಿರಿ. ಎಳ್ಳು ಸಿಡಿಯಲು ಆರಂಭಿಸಿದಾಗ ಮತ್ತು ಕೊಬ್ಬರಿ ಬಣ್ಣ ಬದಲಾಗಲು ಆರಂಭವಾಗುತ್ತಿದ್ದಂತೆ ಒಲೆ ಆರಿಸಿ. ಅದನ್ನು ಬಾಣಲೆಯಿಂದ ತೆಗೆಯಿರಿ.
2. ಬಳಿಕ ಬಾಣಲೆಗೆ ಎಣ್ಣೆ ಹಾಕಿ, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಮೆಂತ್ಯೆ ಬೀಜ, ಜೀರಿಗೆ ಹಾಗೂ ಕರಿಬೇವಿನ ಎಲೆಗಳನ್ನು ಒಂದಾದ ಮೇಲೆ ಒಂದು ಹುರಿಯಿರಿ.
3. ಹುರಿದ ಎಲ್ಲಾ ಸಾಮಾಗ್ರಿಗಳನ್ನು ಒಂದು ತಟ್ಟೆಗೆ ವರ್ಗಾಯಿಸಿ, ತಣ್ಣಗಾಗಲು ಬಿಡಿ.
4. ತಣ್ಣಗಾದ ಬಳಿಕ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.

ಬೇಕಾಗುವ ಸಾಮಾಗ್ರಿಗಳು

ಅಕ್ಕಿ - 2 ಕಪ್‌ಗಳು

ನೆನೆಸಿದ ಹುಳಿ - 1 ಕಪ್

ಉದ್ದಿನ ಬೇಳೆ - 1 ಚಮಚ

ಬೆಲ್ಲ - 1 ಚಮಚ

ಕಡಲೆ - ಮುಷ್ಟಿಯಷ್ಟು

ಅರಶಿನ ಪುಡಿ - 1 ಚಮಚ

ಸಾಸಿವೆ - 1 ಚಮಚ

ಇಂಗು - ಸಣ್ಣ ತುಂಡು

ಜೀರಿಗೆ - 1 ಚಮಚ

ಎಳ್ಳಿನ ಪುಡಿ- 1 ಚಮಚ

ಕರಿಬೇವಿನ ಎಲೆ - 6-7

ಒಣ ಕೆಂಪು ಮೆಣಸು - 3-4

ಹಸಿಮೆಣಸು - 3-4 ಉದ್ದಕ್ಕೆ ಸೀಳಿದ್ದು

ಉಪ್ಪು - ರುಚಿಗೆ ತಕ್ಕಷ್ಟು

ತುಪ್ಪ ಅಥವಾ ಬೆಣ್ಣೆ - 1 ಚಮಚ

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

ಮಾಡುವ ವಿಧಾನ

ಅನ್ನವನ್ನು ಎಂದಿನಂತೆ ಉದುರುದುರಾಗಿ ಬೇಯಿಸಿಕೊಳ್ಳಿ. ಬೇಕಾದಷ್ಟು ಮಾತ್ರ ನೀರು ಹಾಕಿ. ಅನ್ನ ಅಂಟದಂತೆ ಜಾಗರೂಕತೆ ವಹಿಸಿ.

ಬೇಯಿಸಿದ ಅನ್ನವನ್ನು ಸ್ವಲ್ಪ ಹೊತ್ತು ತಣಿಯಲು ಬಿಡಿ. ಇದಕ್ಕೆ ಅರಶಿನ ಪುಡಿ ಮತ್ತು ಕರಿಬೇವಿನೆಲೆಯನ್ನು ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ.

ಇನ್ನು ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಳ್ಳಿ ಮತ್ತು ಎಲ್ಲಾ ಸಾಂಬಾರು ಪದಾರ್ಥಗಳನ್ನು ಹಾಕಿ ಒಗ್ಗರಣೆ ನೀಡಿ. ತದನಂತರ ಇದನ್ನು ಸ್ವಲ್ಪ ಹೊತ್ತು ತುಪ್ಪದಲ್ಲಿ ಹುರಿಯಿರಿ. ಕೊನೆಗೆ ಹಸಿಮೆಣಸನ್ನು ಹಾಕಿ.

ನಂತರ ಬೆಲ್ಲ ಮತ್ತು ಹುಳಿಯನ್ನು ಪಾತ್ರೆಗೆ ಹಾಕಿ. ಹುಳಿಯು ಚೆನ್ನಾಗಿ ಬೇಯುವವರೆಗೆ ಮಂದ ಉರಿಯಲ್ಲಿ 5-6 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

ತದನಂತರ ಈ ಮಸಾಲೆ ಮಿಶ್ರಣಕ್ಕೆ ಅನ್ನವನ್ನು ಬೆರೆಸಿ ಹಾಗೂ ಹುರಿದ ಕಡಲೆಕಾಳಿನೊಂದಿಗೆ ಇದನ್ನು ಅಲಂಕರಿಸಿ.
Published by:Pavana HS
First published: