Breakfast Recipe: ಬೆಳಗಿನ ಉಪಹಾರಕ್ಕೆ ಫಟಾಫಟ್ ಅಂತ ಮಾಡಿ ಪನೀರ್ ಅವಲಕ್ಕಿ

ಬೆಳಗಿನ ತಿಂಡಿ (Morning Tiffin) ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ ಮತ್ತು ಆರೋಗ್ಯಕರ ಜೀವನ ಶೈಲಿ (Life Style) ನಾವು ಪಡೆಯುತ್ತೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಿನ ತಿಂಡಿ (BreakFast) ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. ಬೆಳಗಿನ ತಿಂಡಿ (Morning Tiffin) ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ ಮತ್ತು ಆರೋಗ್ಯಕರ ಜೀವನ ಶೈಲಿ (Life Style) ನಾವು ಪಡೆಯುತ್ತೇವೆ. ಆದರೆ ಈ ಸರಳ ಆಹಾರ (Food) ಪದ್ಧತಿಯನ್ನು  ತಯಾರಿಸುವುದು ಕೂಡ ಸವಾಲಿನ ವಿಚಾರವೇ. ಏಕೆಂದರೆ ದಿನವೂ ಒಂದೇ ಬಗೆಯ ರುಚಿಯಿಲ್ಲದ ಪಥ್ಯದ ಆಹಾರವನ್ನು ಸೇವಿಸುತ್ತಿದ್ದರೆ ನಮ್ಮ ದೃಷ್ಟಿ ಜಂಕ್ ಫುಡ್‌ಗಳತ್ತ (Junk Food) ವಾಲುವುದು ಸಾಮಾನ್ಯ. ಹೀಗಾಗಿ ಮನೆಯಲ್ಲೇ ರುಚಿಕರ ಫುಡ್​ ತಯಾರಿಸಿ, ಇದಕ್ಕಾಗಿ ಬೆಳಗ್ಗೆ ಪನೀರ್​ ಅವಲಕ್ಕಿ ಮಾಡಿ ಇದು ಮಕ್ಕಳಿಗೂ ತುಂಬಾ ಇಷ್ಟವಾಗುತ್ತದೆ.

ಬೇಕಾಗುವ ಸಾಮಾಗ್ರಿಗಳು

ಗಟ್ಟಿ ಅವಲಕ್ಕಿ – ಒಂದೂವರೆ ಕಪ್

ಎಣ್ಣೆ – ಸ್ವಲ್ಪ

ಪನೀರ್‍ – 100 ಗ್ರಾಂ

ಗೋಡಂಬಿ – 10 ರಿಂದ 15

ಶೇಂಗಾ ಬೀಜ – 2 ದೊಡ್ಡ ಚಮಚ

ಸಾಸಿವೆ – ಅರ್ಧ ಚಮಚ

ಉದ್ದಿನ ಬೇಳೆ – 1 ದೊಡ್ಡ ಚಮಚ

ಕರಿಬೇವು – 10 ರಿಂದ 12

ಈರುಳ್ಳಿ – 2 (ಸಣ್ಣಗೆ ಹೆಚ್ಚಿದ್ದು)

ಹಸಿ ಮೆಣಸಿನಕಾಯಿ – 3 (ತೆಳ್ಳಗೆ ಹೆಚ್ಚಿದ್ದು)

ಅರಸಿನ ಪುಡಿ – ಕಾಲು ಚಮಚ

ಉಪ್ಪು – ಅರ್ಧ ಚಮಚ

ಸಕ್ಕರೆ – ಅರ್ಧ ಚಮಚ

ಕೊತ್ತಂಬರಿ ಸೊಪ್ಪು – 3 ದೊಡ್ಡ ಚಮಚ

ನಿಂಬೆ ರಸ – 1 ಚಮಚ

ಇದನ್ನೂ ಓದಿ:  Bread For Breakfast: ಪ್ರತಿದಿನ ಬ್ರೇಕ್​ಫಾಸ್ಟ್​​ಗೆ ಬ್ರೆಡ್ ತಿನ್ನುತ್ತೀರಾ? ಆರೋಗ್ಯದ ಕಥೆ ಏನು?

ಮಾಡುವ ವಿಧಾನ

ಒಂದು ಪಾತ್ರೆಗೆ ಒಂದೂವರೆ ಕಪ್ ಗಟ್ಟಿ ಅವಲಕ್ಕಿ ಹಾಕಿ 2 ರಿಂದ 3 ಬಾರಿ ಚೆನ್ನಾಗಿ ತೊಳೆದು ನೀರು ಬಸಿದು, ಅದಕ್ಕೆ ಅರ್ಧ ಕಪ್ ನೀರು ಹಾಕಿ 10 ನಿಮಿಷ ಬಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ 100 ಗ್ರಾಂ ಸಣ್ಣಗೆ ಕತ್ತರಿಸಿದ ಪನೀರ್‍ ಹಾಕಿ, ಕಂದು ಬಣ್ಣ ಬರುವವರೆಗೆ ಕರಿದು ತೆಗೆಯಿರಿ.

ಈಗ ಅದೇ ಎಣ್ಣೆಯಲ್ಲಿ 10 ರಿಂದ 15ಗೋಡಂಬಿ ಹಾಕಿ, ಕಂದು ಬಣ್ಣ ಬರುವವರೆಗೆ ಕರಿದು ತೆಗೆಯಿರಿ. ನಂತರ 2 ದೊಡ್ಡ ಚಮಚ ಶೇಂಗಾ ಬೀಜ ಹಾಕಿ, ಕಂದು ಬಣ್ಣ ಬರುವವರೆಗೆ ಕರಿದು ತೆಗೆಯಿರಿ.

ಬಾಣಲೆಗೆ 2 ದೊಡ್ಡ ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಅರ್ಧ ಚಮಚ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ 1 ದೊಡ್ಡ ಚಮಚ ಉದ್ದಿನ ಬೇಳೆ, 10 ರಿಂದ 12 ಕರಿಬೇವು ಹಾಕಿ ಚೆನ್ನಾಗಿ ಹುರಿಯಿರಿ.

ಇದಕ್ಕೆ 2 ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ, 2 ರಿಂದ 3 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ.ನಂತರ 3 ತೆಳ್ಳಗೆ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ.

ಈಗ ಇದಕ್ಕೆ ಕಾಲು ಚಮಚ ಅರಸಿನ ಪುಡಿ, ಅರ್ಧ ಚಮಚ ಉಪ್ಪು ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ನೆನೆಸಿದ ಅವಲಕ್ಕಿ ಹಾಕಿ ನಿಧಾನವಾಗಿ ಕಲಸಿ.

ನಂತರ ಹುರಿದ ಪನೀರ್‍, ಗೋಡಂಬಿ ಮತ್ತು ಶೇಂಗಾ ಬೀಜ ಹಾಕಿ, ಅರ್ಧ ಚಮಚ ಸಕ್ಕರೆ ಹಾಕಿ ನಿಧಾನವಾಗಿ ಕಲಸಿ.

ಇದನ್ನೂ ಓದಿ:  BreakFast Recipe: ಮಕ್ಕಳಿಗಾಗಿ ರುಚಿಕರವಾದ ದಹಿ ವಡಾ ಮಾಡಿ ಕೊಡಿ

ಈಗ 3 ದೊಡ್ಡ ಚಮಚ ಕೊತ್ತಂಬರಿ ಸೊಪ್ಪು, 1 ಚಮಚ ನಿಂಬೆ ರಸ ಹಾಕಿ ನಿಧಾನವಾಗಿ ಕಲಸಿ.ಬಿಸಿಯಾದ ಪನೀರ್‍ ಅವಲಕ್ಕಿ ಸವಿಯಲು ಸಿದ್ಧ.

ಈ ಪನೀರ್​ ಅವಲಕ್ಕಿ ಬೆಳಗಿನ ಉಪಹಾರಕ್ಕೆ ಬೆಸ್ಟ್​ ಆದ್ರೆ ಇದನ್ನು ಮಧ್ಯಾಹ್ನದ ಊಟ, ಸಂಜೆ ಸ್ನ್ಯಾಕ್​ ಆಗಿಯೂ ತಿನ್ನಬಹುದು. ಈ ರೆಸಿಪಿಯನ್ನು ಮಾಡೋದು ಕೂಡ ಸುಲಭವಾಗಿದೆ.
Published by:Pavana HS
First published: