BreakFast Recipe: ಮನೆಯಲ್ಲೇ ಸುಲಭವಾಗಿ ಮಾಡಿ ರುಚಿಕರ ಪನೀರ್ ಬಿರಿಯಾನಿ

ಹೆಚ್ಚು ಹೊತ್ತು ಹಸಿವಾಗದಂತೆ ಇರಿಸುವ ಮತ್ತು ಶಕ್ತಿಯನ್ನು ನೀಡುವ ತಿಂಡಿ ಅಂದ್ರೆ ಅದು ಪನೀರ್ ಬಿರಿಯಾನಿ. ಮನೆಯಲ್ಲೇ ಪನೀರ್​ ಬಿರಿಯಾನಿಯನ್ನು ಸುಲಭವಾಗಿ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಿನ ಉಪಹಾರಕ್ಕೇನು (BreakFast) ಏನ್ ಮಾಡೋದು ಅಂತ ಚಿಂತೆನಾ ಅದೇ ದೋಸೆ (Dosa), ಉಪ್ಪಿಟ್ಟು, ಚಿತ್ರಾನ್ನ ತಿಂದು ಬೇಜಾರ್ ಆಗಿದ್ಯಾ ಹಾಗಾದ್ರೆ ಪನೀರ್​ ಬಿರಿಯಾನಿ (Paneer Biriyani) ಒಮ್ಮೆ ಟ್ರೈ ಮಾಡಿ. ಬೆಳಗಿನ ಉಪಹಾರಕ್ಕೆ ಇದನ್ನು ಮಾಡಲು ಸ್ವಲ್ಪ ಸಮಯವಂತೂ ಬೇಕೆ ಬೇಕೆ ಆದ್ರೆ  ಮಧ್ಯಾಹ್ನದವರೆಗೂ (Afternoon) ಹಸಿವಾಗದಂತೆ ಇರಿಸುವ ಮತ್ತು ಶಕ್ತಿಯನ್ನು ನೀಡುವ ತಿಂಡಿ ಅಂದ್ರೆ ಅದು ಪನೀರ್ ಬಿರಿಯಾನಿಯಾಗಿದೆ. ಮನೆಯಲ್ಲೇ ಪನೀರ್​ ಬಿರಿಯಾನಿಯನ್ನು ಸುಲಭವಾಗಿ (Easy) ಹೇಗೆ ಮಾಡೋದು ಅನ್ನೋದನ್ನು ಹೇಳ್ತಿವೆ ತಿಳಿದು ಟ್ರೈ ಮಾಡಿ

 ಅಗತ್ಯವಿರುವ ಸಾಮಾಗ್ರಿಗಳು

ತುಂಡು ಮಾಡಿದ ಪನ್ನೀರ್ - 300ಗ್ರಾಂ

ಅಕ್ಕಿ - 1.ಕೆಜಿ (ಬಾಸ್ಮತಿ ಅಕ್ಕಿಯಾದರೆ ಉತ್ತಮ)

ಬೇಯಿಸಿದ ಬಟಾಣಿ ಕಾಳು - 1 ಕಪ್

ಶುಂಠಿ ಮತ್ತು ಬೆಳ್ಳುಳ್ಳಿ ಮಿಶ್ರಣ - 1 ದೊಡ್ಡ ಚಮಚ

ಮೊಸರು - 2 ಕಪ್

ಉದ್ದಕ್ಕೆ ಕತ್ತರಿಸಿದ ಹಸಿಮೆಣಸು- 4 (ಚಿಕ್ಕ ಗಾತ್ರದ್ದಾದರೆ 6)

ಅರಿಶಿನ ಪುಡಿ - ¼ ಚಿಕ್ಕ ಚಮಚ

ಒಣಮೆಣಸಿನ ಪುಡಿ -  1 ಚಿಕ್ಕ ಚಮಚ

*ಗರಂ ಮಸಾಲಾ ಪುಡಿ- 1 ಚಿಕ್ಕ ಚಮಚ

ಏಲಕ್ಕಿ ಪುಡಿ - 2 ಚಿಕ್ಕ ಚಮಚ

ದಾಲ್ಚಿನ್ನಿ ಎಲೆ - 1 (ಒಣ ಎಲೆ)

ಕಪ್ಪು ಏಲಕ್ಕಿ - 1

ಲವಂಗ - 2

ಕಾಳುಮೆಣಸು-3ರಿಂದ 4

ಲಿಂಬೆಹಣ್ಣಿನ ರಸ - 1 (ಚಿಕ್ಕ ಗಾತ್ರದ ಲಿಂಬೆಯಾದರೆ 2)

ಕೇಸರಿ - 1 ಚಿಕ್ಕ ಚಮಚ

ಹಾಲು - 2 ದೊಡ್ಡ ಚಮಚ

ಕೊತ್ತಂಬರಿ ಸೊಪ್ಪು - ಸ್ವಲ್ಪ (ನಯವಾಗಿ ಹೆಚ್ಚಿದ್ದು)

ಪುದಿನಾ ಸೊಪ್ಪಿನ ಎಲೆಗಳು- ಸ್ವಲ್ಪ (ನಯವಾಗಿ ಹೆಚ್ಚಿದ್ದು)

ಅಪ್ಪಟ ತುಪ್ಪ - 2 ದೊಡ್ಡ ಚಮಚ

ಉಪ್ಪು - ರುಚಿಗೆ ತಕ್ಕಷ್ಟು

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

ಪನೀರ್​ ಬಿರಿಯಾನಿ ಮಾಡಲು ಕೆಲ ಸಿದ್ಧತೆ

1) ಅಕ್ಕಿಯನ್ನು ಚೆನ್ನಾಗಿ ತೊಳೆದು ಬೇಯಲು ಇಡಿ. (ಒಂದು ಪ್ರಮಾಣದ ಅಕ್ಕಿಗೆ ಎರಡು ಪ್ರಮಾಣದಷ್ಟು ನೀರು ಹಾಕಿ) ಇದಕ್ಕೆ ಉಪ್ಪು, ದಾಲ್ಚಿನ್ನಿ ಎಲೆ, ಕಪ್ಪು ಏಲಕ್ಕಿ, ಲವಂಗ ಮತ್ತು ಕಾಳುಮೆಣಸು ಹಾಕಿ ಸುಮಾರು 90 ಭಾಗ ಬೆಂದಿರುವಂತೆ ಇಳಿಸಿ ನೀರು ಬಸಿಯಿರಿ. ನೀರು ಪೂರ್ಣ ಬಸಿದ ಬಳಿಕ ಒಂದು ಪಕ್ಕದಲ್ಲಿಡಿ.

2) ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ಮೆಣಸಿನ ಪುಡಿ, ಅರಿಸಿನ ಪುಡಿ ಮತ್ತು ಲಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಪನ್ನೀರ್‌ನ ತುಂಡುಗಳನ್ನು ಸೇರಿಸಿ ಎಲ್ಲಾ ಪನ್ನೀರ್ ತುಂಡುಗಳೂ ದ್ರವದಲ್ಲಿ ಅವೃತ್ತವಾಗುವಂತೆ ಮಿಶ್ರಣ ಮಾಡಿ ಪಕ್ಕದಲ್ಲಿಡಿ. ಪನ್ನೀರ್ ತುಂಡಾಗದಂತೆ ಅಥವಾ ಪುಡಿಯಾಗದಂತೆ ಎಚ್ಚರ ವಹಿಸಿ.

3) ಒಂದು ಲೋಟದಲ್ಲಿ ಹಾಲು ಮತ್ತು ಕೇಸರಿ ಪುಡಿಯನ್ನು ಮಿಶ್ರಣ ಮಾಡಿ ಪಕ್ಕದಲ್ಲಿಡಿ.

ಮಾಡುವ ವಿಧಾನ:

1. ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ತುಪ್ಪ ಕರಗಿದ ಬಳಿಕ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಮಿಶ್ರಣ ಸೇರಿಸಿ ಹುರಿಯಿರಿ. ಕೆಲವು ಕ್ಷಣಗಳ ಬಳಿಕ ಪನ್ನೀರ್ ತುಂಡುಗಳನ್ನು  ಸೇರಿಸಿ ಹುರಿಯಿರಿ.

2. ಪನ್ನೀರ್‌ನ ಎಲ್ಲಾ ಬದಿಗಳು ಕೊಂಚ ನಸುಗಂದು ಬರುವವರೆಗೆ ಹುರಿಯಿರಿ. ಈಗ ದಪ್ಪತಳದ ಮತ್ತು ಅಗಲವಾದ ಪಾತ್ರೆಯೊಂದನ್ನು ಚಿಕ್ಕ ಉರಿಯ ಮೇಲಿರಿಸಿ.

ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

3. ಇನ್ನು ಒಂದು ಪದರ ಅಕ್ಕಿಯನ್ನು ಹರಡಿ ಅದರ ಮೇಲೆ ಹುರಿದ ಪನ್ನೀರ್ ಹರಡಿ. ಇದರ ಮೇಲೆ ಅಕ್ಕಿಯ ಇನ್ನೊಂದು ಪದರ ಹರಡಿ ಅದರ ಮೇಲೆ ಬೇಯಿಸಿದ ಬಣಾಟಿ, ಗರಂ ಮಸಾಲೆ ಪುಡಿ, ಏಲಕ್ಕಿ ಪುಡಿ, ಹಾಲು ಮತ್ತು ಕೇಸರಿ, ಕೊತ್ತಂಬರಿ ಮತ್ತು ಪುದಿನಾ ಸೊಪ್ಪು, ಹರಡಿ. ಕೊಂಚ ಕರಗಿದ ತುಪ್ಪವನ್ನು ಕೊಂಚ ಕೊಂಚವಾಗಿ ಹರಡುವಂತೆ ಚಿಮುಕಿಸಿ.

4.ತದನಂತರ ಉಳಿದ ಎಲ್ಲಾ ಅಕ್ಕಿಯನ್ನು ಇದರ ಮೇಲೆ ಹರಡಿ ಏಕಪ್ರಕಾರವಾಗಿರುವಂತೆ ಚಪ್ಪಟೆ ಚಮಚದಲ್ಲಿ ಸವರಿ. ಈ ಪಾತ್ರೆಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ.

5. ಇಷ್ಟೆಲ್ಲಾ ಆದ ನಂತರ ಮಧ್ಯಮಕ್ಕಿಂತ ಕೊಂಚ ಕೆಳಗಿನ ಉರಿಯಲ್ಲಿ ಸುಮಾರು 10 ನಿಮಿಷ ಹಬೆಯಲ್ಲಿ ಬೇಯಲು ಬಿಡಿ. ಹತ್ತು ನಿಮಿಷದ ಬಳಿಕ ಉರಿಯಿಂದಿಳಿಸಿ, ಆ ಕೂಡಲೇ ಮುಚ್ಚಳ ತೆರೆಯಬೇಡಿ, ಇನ್ನೂ ಸುಮಾರು ಹತ್ತು ನಿಮಿಷ ಅಥವಾ ಹದಿನೈದು ನಿಮಿಷ ಹಾಗೆಯೇ ತಣಿಯಲು ಬಿಡಿ. ಬಿಸಿಬಿಸಿಯಿರುವಂತೆಯೇ ಬಡಿಸಿ.
Published by:Pavana HS
First published: