BreakFast Recipe: ಬೆಳಗಿನ ಉಪಹಾರಕ್ಕೆ ರುಚಿಕರ ಪಾಲಕ್ ಪೂರಿ; ಒಮ್ಮೆ ಮನೆಯಲ್ಲಿ ಮಾಡಿ ನೋಡಿ

ಆಹಾರದಲ್ಲಿ ಹೆಚ್ಚಿನ ಸೊಪ್ಪು ಮತ್ತು ತರಕಾರಿಗಳ ಬಳಕೆಯು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ ಮತ್ತು ನಿಮ್ಮಲ್ಲಿ ಉತ್ಸಾಹವನ್ನು ತುಂಬಲು ಕಾರಣವಾಗುತ್ತದೆ. ಹೀಗಾಗಿ ಬೆಳಗಿನ ಆಹಾರ ಸೊಪ್ಪು, ತರಕಾರಿಗಳಿಂದ ಕೂಡಿರಲಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ವಾದಿಷ್ಟ ಮತ್ತು ಆರೋಗ್ಯಕರ ಆಹಾರಗಳನ್ನು (Healthy Food) ಸೇವಿಸುವುದು ಆರೋಗ್ಯ ಭಾಗ್ಯವೆಂಬ ಮಹಾನ್ ತಿಜೋರಿಯ ಕೀಲಿ ಕೈಯಾಗಿದೆ. ಹೊರಗಿನ ಫಾಸ್ಟ್ ಫುಡ್‌ಗಳಿಗಿಂತ (Fast Food) ಮನೆಯಲ್ಲೇ ತಯಾರಿಸುವ ತಿಂಡಿಗಳು ನಿಮ್ಮಲ್ಲಿ ರೋಗಗಳನ್ನು ಕಡಿಮೆ ಮಾಡಿ ಆರೋಗ್ಯಕರವಾದ ಜೀವನ ಶೈಲಿಗೆ (Life Style) ಬುನಾದಿಯನ್ನು ನೀಡುತ್ತದೆ. ನಮ್ಮ ಆಹಾರದಲ್ಲಿ ಹೆಚ್ಚಿನ ಸೊಪ್ಪು ಮತ್ತು ತರಕಾರಿಗಳ ಬಳಕೆಯು ರೋಗನಿರೋಧಕ (Immunity) ಶಕ್ತಿಯನ್ನು ವರ್ಧಿಸುತ್ತದೆ ಮತ್ತು ನಿಮ್ಮಲ್ಲಿ ಉತ್ಸಾಹವನ್ನು ತುಂಬಲು ಕಾರಣವಾಗುತ್ತದೆ.

ವಿಟಮಿನ್ ಅಂಶಗಳು, ಹೇರಳವಾಗಿರುವ ಪ್ರೋಟೀನ್, ಕಾರ್ಬೋಹೈಡ್ರೇಡ್ ಅನ್ನು ಒದಗಿಸುವ ಸೊಪ್ಪುಗಳು ದೃಷ್ಟಿಯನ್ನು ತೀಕ್ಷ್ಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಾಲಾಕ್ ಸೊಪ್ಪನ್ನು ಬಳಸಿ ತಯಾರಿಸಿದ ಪೂರಿ ಇಂದಿನ ನಮ್ಮ ಲೇಖನದ ಪ್ರಮುಖ ವಿಶೇಷತೆಯಾಗಿದೆ. ದೇಹದಲ್ಲಿ ಪ್ರೋಟೀನ್ ನ್ಯೂಟ್ರೀನ್ ಅಂಶಗಳನ್ನು ಹೆಚ್ಚಿಸುವ ಪಾಲಾಕ್ ರುಚಿಯಲ್ಲಿ ಕೂಡ ವಿಶಿಷ್ಟತೆಯನ್ನು ಹೊಂದಿದೆ. ಹಾಗಿದ್ದರೆ ತಡ ಮಾಡದೇ ಕೆಳಗೆ ನಾವು ನೀಡಿರುವ ಪಾಲಾಕ್ ಪೂರಿ ಖಾದ್ಯ ತಯಾರಿ ವಿಧಾನವನ್ನು ಮನದಟ್ಟುಕೊಂಡು ಮಾಡಿಕೊಂಡು ಈ ಸರಳ ರೆಸಿಪಿಯನ್ನು ತಯಾರಿಸಿಕೊಳ್ಳಿ.

ಸಾಮಾಗ್ರಿಗಳು

ಗೋಧಿ ಹಿಟ್ಟು - 250 ಗ್ರಾಂ

ಹಸಿಮೆಣಸಿನ ಕಾಯಿ - 5 (ಕತ್ತರಿಸಿದ್ದು)

ಪಾಲಾಕ್ ಸೊಪ್ಪು - 3 ಕಟ್ಟು

ಜೀರಿಗೆ - 1/2 ಚಮಚ

ಕೊತ್ತಂಬರಿ ಸೊಪ್ಪು - ಸ್ವಲ್ಪ (ಕತ್ತರಿಸಿದ್ದು)

ಉಪ್ಪು - ರುಚಿಗೆ ತಕ್ಕಷ್ಟು

ಎಣ್ಣೆ ಕರಿಯಲು

ಇದನ್ನೂ ಓದಿ:  Breakfast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಓಟ್ಸ್​ ಉಪ್ಪಿಟ್ಟು ರೆಸಿಪಿ

ಮಾಡುವ ವಿಧಾನ

1. ಮೊದಲಿಗೆ ಸೊಪ್ಪಿಗೆ ಉಪ್ಪು ಬೆರೆಸಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. 2. ನಂತರ ಬಾಣಲೆಯಲ್ಲಿ ನೀರು ಹಾಕಿ ಅದನ್ನು ಕುದಿಸಿ ಪಾಲಾಕ್ ಸೊಪ್ಪನ್ನು ಅದರಲ್ಲಿ ಬೇಯಿಸಿಕೊಳ್ಳಿ.

3. ಸೊಪ್ಪು ಆರಿದ ನಂತರ ಇದಕ್ಕೆ ಜೀರಿಗೆ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

4. ಗೋಧಿ ಹಿಟ್ಟಿಗೆ ಈ ಪಾಲಾಕ್ ಮಿಶ್ರಣವನ್ನು ಸೇರಿಸಿ ಪೂರಿ ಹಿಟ್ಟನ್ನು ನಾದಿಕೊಳ್ಳಿ.

5. ಹಿಟ್ಟಿನಿಂದ ಪೂರಿಯನ್ನು ಸಿದ್ಧಪಡಿಸಿಕೊಳ್ಳಿ ಮತ್ತು ಎಣ್ಣೆಯಲ್ಲಿ ಕರಿಯಿರಿ. ಪಾಲಾಕ್ ಪೂರಿ ಸವಿಯಲು ರೆಡಿಯಾಗಿದೆ. ಪಾಲಾಕ್ ಪೂರಿಯನ್ನು ಕಾಯಿ ಚಟ್ನಿ ಅಥವಾ ಸಾಗು ಜೊತೆ ಸವಿಯಲು ನೀಡಿ.

ಇದನ್ನೂ ಓದಿ: ಓಟ್ಸ್​ನಿಂದ ಏನೆಲ್ಲಾ ತಿಂಡಿ ಮಾಡ್ಬೋದು ಗೊತ್ತಾ?

ಪನ್ನೀರ್​ ಕರಿ ಮಾಡುವ ವಿಧಾನ

1) ಮೊದಲು ಪ್ರೆಷರ್ ಕುಕ್ಕರ್ ನಲ್ಲಿ ಸ್ವಲ್ಪ ನೀರು ಹಾಕಿ ನೆನೆಸಿಟ್ಟ ಬಟಾಣಿ ಕಾಳುಗಳನ್ನು ಹಾಕಿ ಎರಡು ಸೀಟಿ ಬರುವವರೆಗೆ ಬೇಯಿಸಿ. ಒಂದು ವೇಳೆ ನೆನೆಸಿಡದೇ ಇದ್ದರೆ ಸುಮಾರು ಆರು ಸೀಟಿಗಳವರೆಗೆ ಬೇಯಿಸಬೇಕು. ಆದರೆ ಈ ಬಟಾಣಿ ಸಪ್ಪೆಯಾಗಿರುತ್ತದೆ. ನೆನೆಸಿಟ್ಟಿದ್ದ ಬಟಾಣಿ ಸಿಹಿಯಾಗಿರುತ್ತದೆ.

2) ಮಿಕ್ಸಿಯ ಜಾರ್ ನಲ್ಲಿ ಕಾಯಿತುರಿ, ಗೋಡಂಬಿ, ಚೆಕ್ಕೆ, ಗಸಗಸೆ, ಕೆಂಪುಮೆಣಸು, ಹಸಿಮೆಣಸು ಮತ್ತು ಕೊಂಚ ನೀರು ಹಾಕಿ ನಯವಾಗುವಷ್ಟು ಅರೆಯಿರಿ.

3) ದಪ್ಪತಳದ ಬಾಣಲೆ ಅಥವ ಪಾತ್ರೆಯನ್ನು ಮಧ್ಯಮ ಉರಿಯಲ್ಲಿಟ್ಟು ಬೆಣ್ಣೆ ಹಾಕಿ. ಬೆಣ್ಣೆ ಕರಗಿದ ಬಳಿಕ ಪನ್ನೀರ್ ಹಾಕಿ ಕೊಂಚ ಕಂದು ಬಣ್ಣ ಬರುವವರೆಗೆ ಹುರಿಯಿರಿ.

4) ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್, ದೊಣ್ಣೆ ಮೆಣಸು, ಕೊತ್ತೊಂಬರಿ ಪುಡಿ ಹಾಕಿ ತಿರುವಿ.

5) ದೊಣ್ಣೆಮೆಣಸಿನ ಅಂಚುಗಳು ಕೊಂಚ ಕಂದು ಬಣ್ಣ ಬರಲು ತೊಡಗಿದ ಬಳಿಕ ಬೇಯಿಸಿಟ್ಟಿರುವ ಬಟಾಣಿ ಹಾಕಿ, ಕೂಡಲೇ ಮಸಾಲೆಯನ್ನೂ ಹಾಕಿ ತಿರುವಿ.

6) ನಿಮ್ಮ ಆಯ್ಕೆಗೆ ತಕ್ಕಂತೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ತಿರುಗಿಸುತ್ತಾ ಹೋಗಿ. ಕುದಿ ಬರುತ್ತಿದ್ದಂತೆ ಮತ್ತಷ್ಟು ನೀರು ಸೇರಿಸಿ. ಒಮ್ಮೆಲೇ ಎಲ್ಲಾ ನೀರು ಹಾಕಬೇಡಿ (ಇದರಿಂದ ರುಚಿ ಚಪ್ಪೆಯಾಗುತ್ತದೆ). ಗಸಿ ಕೊಂಚ ಗಾಢವಾಗಿಯೇ ಇರಲಿ, ಹೆಚ್ಚು ನೀರು ಸೇರಿಸಿ ತೆಳ್ಳಗಾಗಿಸಬೇಡಿ.

7) ನೀರು ಕುದಿ ಬರುತ್ತಿದ್ದಂತೆ ಉರಿಯನ್ನು ಅತಿ ಚಿಕ್ಕದಾಗಿಸಿ ಮುಚ್ಚಳ ಮುಚ್ಚಿ ಸುಮಾರು ಎರಡು ನಿಮಿಷ ಬೇಯಿಸಿ.

8 ಉರಿ ಆರಿಸಿ ಪಾತ್ರೆಯನ್ನು ಕೆಳಗಿಟ್ಟು ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಮೇಲೆ ಹಾಕಿ ಬಿಸಿಯಿರುವಂತೆಯೇ ಬಡಿಸಿ. 
Published by:Pavana HS
First published: