Breakfast Recipe: ಬೆಳಗಿನ ಉಪಹಾರಕ್ಕೆ ಮಕ್ಕಳಿಗಾಗಿ ಹೆಲ್ದಿ ಪಾಲಕ್ ಕಿಚಡಿ

ಭಾರತದ ಪ್ರಸಿದ್ಧ ಆಹಾರಗಳಲ್ಲಿ ಕಿಚಡಿಯೂ ಒಂದಾಗಿದೆ. ಕಿಚಡಿ ಆರೊಗ್ಯಕರವಾದ (Healthy) ಆಹಾರವಾಗಿದ್ದು, ಇದನ್ನು ಬೆಳಗ್ಗೆ, ಸಂಜೆ ಯಾವ ಹೊತ್ತಿನಲ್ಲಿ ಬೇಕಾದರೂ ಸವಿಯಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿತ್ಯ ಬೆಳಗ್ಗೆ ಎದ್ದು ಏನಪ್ಪಾ ಅಡುಗೆ ಮಾಡೋದು ಅನ್ನೋ ಚಿಂತೆ ನಮ್ಮೆಲ್ಲರನ್ನು ಕಾಡುತ್ತೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ರೆ ಅವರಿಗೆ ಪೌಷ್ಠಿಕ (Nutritional) ಆಹಾರದ ಅವಶ್ಯಕತೆ ಹೆಚ್ಚಾಗಿಯೇ ಇರುತ್ತೆ. ಮಕ್ಕಳಿಗಾಗಿ ಬೆಳಗಿನ ಉಪಹಾರವಾಗಿ ರುಚಿಕರ ಹಾಗೂ ಆರೋಗ್ಯಕರವಾದ ಅಡುಗೆಯನ್ನೇ ಮಾಡಿಕೊಡಬೇಕು. ಇದ್ರಿಂದ ಮಕ್ಕಳ (Children) ಆರೋಗ್ಯವು ಚೆನ್ನಾಗಿರುತ್ತೆ. ​ಹೀಗಾಗಿ ಮಕ್ಕಳಿಗೆ ಬೆಳೆ, ಕಾಳು, ತರಕಾರಿಯಿಂದ ಕೂಡಿರೋ ನ್ಯೂಟ್ರಿಶಿಯನ್​ ಫುಡ್​ ಮಾಡಿಕೊಡಿ. ಪೌಷ್ಠಿಕ ಆಹಾರವಾಗಿ ನೀವು ಪಾಲಕ್​​ ಕಿಚಡಿ (Palak khichdi)ಯನ್ನು ಆಯ್ಕೆ ಮಾಡಿಕೊಳ್ಳಬಹುದು. ಭಾರತದ ಪ್ರಸಿದ್ಧ ಆಹಾರಗಳಲ್ಲಿ ಕಿಚಡಿಯೂ ಒಂದಾಗಿದೆ. ಕಿಚಡಿ ಆರೊಗ್ಯಕರವಾದ (Healthy) ಆಹಾರವಾಗಿದ್ದು, ಇದನ್ನು ಬೆಳಗ್ಗೆ, ಸಂಜೆ ಯಾವ ಹೊತ್ತಿನಲ್ಲಿ ಬೇಕಾದರೂ ಸವಿಯಬಹುದು.

ಸರಳವಾದ, ಸುಲಭವಾದ, ಟೇಸ್ಟಿ ಮತ್ತು ಹೆಚ್ಚು ಮುಖ್ಯವಾಗಿ ಆರೋಗ್ಯಕರ ಖಾದ್ಯ ಇದು  ಇದನ್ನು ಬೆಳೆ ಮತ್ತು ಅಕ್ಕಿಯಿಂದ ತಯಾರಿಸಲಾಗುತ್ತದೆ. ಮಕ್ಕಳು ಸೇವಿಸುವ ಘನ ಆಹಾರ ಪಾಕವಿಧಾನಗಳಲ್ಲಿ ಒಂದಾಗಿದೆ ಮತ್ತು ಅಜೀರ್ಣ ಸಮಸ್ಯೆಗಳಿರುವ ವಯಸ್ಕರಿಗೆ ಸಹ ಇದನ್ನು ನೀಡಬಹುದು. ಇದನ್ನು ಮಕ್ಕಳಿಗೆ ಸ್ವಲ್ಪ ಖಾರ ಕಡಿಮೆ ಮಾಡಿ ತಯಾರಿಸಿ ಕೊಟ್ಟರೆ ಅವರಿಗೆ ಪೌಷ್ಠಿಕಾಂಶದ ಆಹಾರ ನೀಡಿದಂತಾಗುವುದು. ಇದನ್ನು ತಿನ್ನಲು ರುಚಿಕರವಾಗಿರುವುದರಿಂದ ಮಕ್ಕಳಿಗೆ ತುಂಬಾನೇ ಇಷ್ಟವಾಗುವುದು.

ಬೇಕಾಗಿರೋ ಸಾಮಾಗ್ರಿಗಳು

ಹೆಸರು ಬೇಳೆ –1/2 ಕಪ್

ಅಕ್ಕಿ – 1 ಕಪ್

ಉಪ್ಪು – 1 ಚಮಚ

ತುಪ್ಪ – 2ದೊಡ್ಡ ಚಮಚ

ಪಾಲಕ್ – 1 ಗೊಂಚಲು

ಹಸಿ ಮೆಣಸಿನಕಾಯಿ – 2

ಜೀರಿಗೆ – 1 ಚಮಚ

ಕರಿಬೇವು – 10

ಉದ್ದಿನ ಬೇಳೆ – 1 ಚಮಚ

ಹಸಿ ಶುಂಠಿ – 2 ಚಮಚ (ಸಣ್ಣಗೆ ಹೆಚ್ಚಿದ್ದು)

ಹಸಿ ಕೊಬ್ಬರಿ ಚೂರುಗಳು – 2 ದೊಡ್ಡ ಚಮಚ

ಗೋಡಂಬಿ – 20

ತೆಂಗಿನ ಹಾಲು – 2 ಕಪ್

ಕೊತ್ತಂಬರಿ ಸೊಪ್ಪು – ಸ್ವಲ್ಪ

ನಿಂಬೆ ರಸ – 1 ಚಮಚ

ಇದನ್ನೂ ಓದಿ: Breakfast Recipe: ಬೆಳಗಿನ ತಿಂಡಿಗೆ ಚಪಾತಿ ಜೊತೆ ಗೆಣಸಿನ ಪಲ್ಯ ಮಾಡಿ, ಸಖತ್ ಟೇಸ್ಟಿಯಾಗಿರುತ್ತೆ!

ಮಾಡುವ ವಿಧಾನ

ಒಂದು ಬಾಣಲೆಗೆ ಅರ್ಧ ಕಪ್ ಹೆಸರು ಬೇಳೆ ಹಾಕಿ ೩ ರಿಂದ ೪ ನಿಮಿಷ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಇದನ್ನು ಪಾತ್ರೆಗೆ ಹಾಕಿ, ಸ್ವಲ್ಪ ನೀರು ಹಾಕಿ ತೊಳೆಯಿರಿ.

ಈಗ ಕುಕ್ಕರಿಗೆ ಹುರಿದು ತೊಳೆದ ಹೆಸರು ಬೇಳೆ, 1 ಕಪ್ ತೊಳೆದ ಅಕ್ಕಿ, 1 ಚಮಚ ಉಪ್ಪು, 1 ಚಮಚ ತುಪ್ಪ, 5 ಕಪ್ ನೀರು ಹಾಕಿ ಕಲಕಿ.

ಮುಚ್ಚಳ ಮುಚ್ಚಿ ದೊಡ್ಡ ಉರಿಯಲ್ಲಿ 3 ಕೂಗು ಕೂಗಿಸಿ.

ಪಾತ್ರೆಯಲ್ಲಿ 2 ಕಪ್ ನೀರನ್ನು ಕುದಿಯಲು ಇಡಿ.ಇದಕ್ಕೆ ೧ ಗೊಂಚಲು ಪಾಲಕ್ ಹಾಕಿ, 2 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ. ಇದನ್ನು ತಣ್ಣೀರಿಗೆ ಹಾಕಿ ತೆಗೆಯಿರಿ.

ಈಗ ಇದನ್ನು ಮಿಕ್ಸಿ ಜಾರಿಗೆ ಹಾಕಿ, ೨ ಹಸಿ ಮೆಣಸಿನಕಾಯಿ ಹಾಕಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿ.

ಈಗ ಕುಕ್ಕರಿಗೆ 2 ದೊಡ್ಡ ಚಮಚ ತುಪ್ಪ ಹಾಕಿ. ಬಿಸಿಯಾದ ಬಳಿಕ 1 ಚಮಚ ಜೀರಿಗೆ, ಕರಿಬೇವು, ಉದ್ದಿನ ಬೇಳೆ, ಸಣ್ಣಗೆ ಹೆಚ್ಚಿದ ಹಸಿ ಶುಂಠಿ ಹಾಕಿ ಹುರಿಯಿರಿ.

ಇದನ್ನೂ ಓದಿ: Breakfast Recipe: ರುಚಿ ರುಚಿಯಾದ ಅವರೆಕಾಳು ಚಿತ್ರಾನ್ನ ರೆಸಿಪಿ ಇಲ್ಲಿದೆ

ನಂತರ ಇದಕ್ಕೆ 2 ದೊಡ್ಡ ಚಮಚ ಹಸಿ ಕೊಬ್ಬರಿ ಚೂರುಗಳು,  ಗೋಡಂಬಿ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ರುಬ್ಬಿದ ಪಾಲಕ್ ಹಾಕಿ, ಚೆನ್ನಾಗಿ ಕಲಸಿ. ನಂತರ 2 ಕಪ್ ತೆಂಗಿನ ಹಾಲು ಹಾಕಿ ಕಲಕಿ, ಸಣ್ಣ ಉರಿಯಲ್ಲಿ 2 ನಿಮಿಷ ಕುದಿಸಿ.

ಇದಕ್ಕೆ ಬೇಯಿಸಿದ ಅನ್ನ ಬೇಳೆಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ.

ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಚಮಚ ನಿಂಬೆ ರಸ ಹಾಕಿ ಕಲಸಿದರೆ, ಪಾಲಕ್ ಕಿಚಡಿ ಸಿದ್ಧ.
Published by:Pavana HS
First published: