ನೀವು ತುಂಬಾ ಕಟ್ಟುನಿಟ್ಟಿನ ಡಯೆಟ್ನಲ್ಲಿದ್ದಾಗ (Diet), ಎಣ್ಣೆಯನ್ನು (Oil) ಆದಷ್ಟು ದೂರವಿರಿಸಲು ನೋಡುತ್ತೀರಿ ಅಲ್ಲವೇ? ಒಂದು ತೊಟ್ಟು ಎಣ್ಣೆ ಕೂಡ ನಿಮ್ಮ ಕೊಬ್ಬಿನ ಸಂಗ್ರಹಣೆಯನ್ನು ಹೆಚ್ಚಿಸುತ್ತಿರುತ್ತದೆ. ಹಾಗಿದ್ದರೆ ಎಣ್ಣೆ ಇಲ್ಲದೆ ಆಹಾರವನ್ನು (Food) ಸೇವಿಸುವುದು ಹೇಗೆ ಎಂಬುದು ನಿಮ್ಮ ಚಿಂತೆಯಾಗಿದ್ದರೆ ಇಲ್ಲಿ ನಿಮಗಾಗಿ ನಾವು ನೀಡುತ್ತಿದ್ದೇವೆ ಎಣ್ಣೆ ರಹಿತ ಗರಿ ಗರಿ ದೋಸೆ (Dosa) ಖಾದ್ಯವನ್ನು ತಯಾರಿಸಬಹುದು
ಇದನ್ನು ತಯಾರಿಸಲು ನಿಮ್ಮಲ್ಲಿ ನಾನ್ಸ್ಟಿಕ್ ಪ್ಯಾನ್ ಇದ್ದರೆ ಸಾಕು ಎಣ್ಣೆ ಹಾಕದೆಯೇ ಹಾಗೆಯೇ ಮೇಲೇಳುವ ಗರಿ ಗರಿ ದೋಸೆಯನ್ನು ನಿಮಗೆ ಸವಿಯಬಹುದಾಗಿದೆ. ಇದನ್ನು ತಯಾರಿಸುವಾಗ ನೀವು ಗಮನದಲ್ಲಿಡಬೇಕಾದ ಅಂಶವೆಂದರೆ ಇದನ್ನು ನೇರವಾಗಿ ಫ್ರಿಡ್ಜ್ನಿಂದ ತೆಗೆದು ಹಾಗೆಯೇ ಬಳಸುವುದಿಲ್ಲ
ಕಡಿಮೆ ಕ್ಯಾಲೋರಿಗಳನ್ನು ಸೇವಿಸುವವರಿಗೆ ಕಟ್ಟುನಿಟ್ಟಿನ ಡಯೆಟ್ ಪಾಲಿಸುವವರಿಗೆ ಈ ದೋಸೆ ಹೇಳಿ ಮಾಡಿಸಿದ್ದು. ಸಾಮಾನ್ಯ ಮಸಾಲೆ ದೋಸೆಗಿಂತ ಎಣ್ಣೆ ಇಲ್ಲದ ದೋಸೆಯಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ಮತ್ತು ಇದರ ರುಚಿ ಕೂಡ ಅಷ್ಟೇ ಸ್ವಾದಿಷ್ಟವಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು
*ಅಕ್ಕಿ ಹುಡಿ - 1 ಕಪ್
*ರವೆ - 1 ಕಪ್
*ಮೊಸರು - 3 ಚಮಚ
*ಶುಂಠಿ - ಹಸಿಮೆಣಸಿನ ಪೇಸ್ಟ್ - 2 ಚಮಚ
*ಈರುಳ್ಳಿ - 1/2 ಕಪ್ (ಕತ್ತರಿಸಿದ್ದು)
*ಟೊಮೇಟೊ - 3 (ಕತ್ತರಿಸಿದ್ದು)
*ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
1. ರವೆ, ಮೊಸರು, ಉಪ್ಪು ಮತ್ತು ಅಕ್ಕಿ ಹುಡಿಯನ್ನು ಪಾತ್ರೆಯಲ್ಲಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಇದನ್ನು ಚೆನ್ನಾಗಿ ಮಿಶ್ರಗೊಳಿಸಲು ಅಗತ್ಯವಾಗಿರುವ ನೀರನ್ನು ಬೆರೆಸಿಕೊಳ್ಳಿ.
2.ಇದು ಪೂರ್ತಿ ಆದ ನಂತರ ಇದನ್ನು ಚೆನ್ನಾಗಿ ಮುಚ್ಚಿ, ಆರು ಗಂಟೆಗಳ ಕಾಲ ಹುಳಿ ಬರಲು ಇರಿಸಿ.
3.ಈಗ ಟೊಮೇಟೊ ಪೂರಿ, ಈರುಳ್ಳಿ, ಉಪ್ಪು ಶುಂಠಿ ಹಸಿಮೆಣಸು ಪೇಸ್ಟ್ ಅನ್ನು ಸೇರಿಸಿಕೊಳ್ಳಿ. ಇದೆಲ್ಲಾ ಸಾಮಾಗ್ರಿಗಳನ್ನು ಹಿಟ್ಟಿಗೆ ಸೇರಿಸಿಕೊಳ್ಳಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
4.ಹಿಟ್ಟು ಸಿದ್ಧಗೊಂಡಾಗ, ನಾನ್ ಸ್ಟಿಕ್ ತವಾವನ್ನು ಗ್ಯಾಸ್ ಮೇಲೆ ಇಡಿ ಮತ್ತು ಬಿಸಿಯಾಗುತ್ತಿದ್ದಂತೆ ದೋಸೆಯನ್ನು ಹುಯ್ಯಿರಿ. ವೃತ್ತಾಕಾರವಾಗಿ ಚಪ್ಪಟೆ ಚಮಚದಲ್ಲಿ ದೋಸೆಯನ್ನು ಎಲ್ಲಾ ಕಡೆ ಹರಡಿಸಿ.
5.ಮುಚ್ಚಳವನ್ನು ಮುಚ್ಚಿ ಮತ್ತು ಸ್ವಲ್ಪ ನಿಮಿಷಗಳ ಇದನ್ನು ಬೇಯಿಸಿಕೊಳ್ಳಿ.
6.ಒಂದು ಬದಿಯಲ್ಲಿ ತೆಳು ಕಂದು ಬಣ್ಣ ಬರುತ್ತಿದ್ದಂತೆ ತವಾದಿಂದ ದೋಸೆಯನ್ನು ತೆಗೆಯಿರಿ.
ನಿಮ್ಮ ಎಣ್ಣೆ ಇಲ್ಲದ ದೋಸೆ ಸವಿಯಲು ಸಿದ್ಧವಾಗಿದೆ. ಇದನ್ನು ತಯಾರಿಸುವಾಗ ಬೆಂಕಿಯ ಉರಿಯನ್ನು ಆದಷ್ಟು ಕಡಿಮೆ ಇರಿಸಿಕೊಳ್ಳಬೇಕು ಏಕೆಂದರೆ ಇದಕ್ಕ ಎಣ್ಣೆ ಹಾಕದೇ ಇರುವುದರಿಂದ ಆದಷ್ಟು ಜಾಗರೂಕರಾಗಿ ಬೇಯಿಸಬೇಕು ಇಲ್ಲ ಅಂಟುತ್ತೆ. ತೆಗೆಯುವಾಗ ಪ್ಯಾನ್ಗೆ ಅಂಟಿಕೊಂಡಂತಿದ್ದಲ್ಲಿ ಸ್ವಲ್ಪ ನೀರು ಚಿಮುಕಿಸಿ. ಇದರಿಂದ ದೋಸೆ ಮೆತ್ತಗಾಗುತ್ತದೆ.
ಇದನ್ನೂ ಓದಿ: BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ
ದೋಸೆಗೆ ಕಡ್ಲೆ ಬೇಳೆ ಚಟ್ನಿ
ಅಗತ್ಯವಿರುವ ಸಾಮಾಗ್ರಿಗಳು:
*ಕಡಲೆಬೇಳೆ - ಎರಡು ದೊಡ್ಡಚಮಚ (ಕೆಂಪಗೆ ಹುರಿದದ್ದು)
*ಕಾಯಿತುರಿ-ನೂರು ಗ್ರಾಂ
*ಕೆಂಪು ಮೆಣಸಿನ ಕಾಯಿ -ಮೂರು
*ಹುಣಸೆ ಹುಳಿ - ಸ್ವಲ್ಪ
*ಉಪ್ಪು -ರುಚಿಗನುಸಾರ *
ಕೊತ್ತಂಬರಿ ಸೊಪ್ಪು - ಒಂದು ಕಟ್ಟು
ಒಗ್ಗರಣೆಗೆ:
ಎಣ್ಣೆ: ಎರಡು ಚಿಕ್ಕ ಚಮಚ
ಸಾಸಿವೆ : ಒಂದು ಚಿಕ್ಕಚಮಚ
ಉದ್ದಿನ ಬೇಳೆ : ಅರ್ಧ ಚಿಕ್ಕ ಚಮಚ
ಚಿಕ್ಕ ಈರುಳ್ಳಿ (ಸಾಂಬಾರ್ ಈರುಳ್ಳಿ) - ಐದು(ಚಿಕ್ಕದಾಗಿ ಹೆಚ್ಚಿದ್ದು )
ಬೇವಿನ ಎಲೆಗಳು : ಸ್ವಲ್ಪ
ವಿಧಾನ:
1) ಒಂದು ಪಾತ್ರೆಯಲ್ಲಿ ಕಾಲು ಚಿಕ್ಕ ಚಮಚ ಎಣ್ಣೆ ಬಿಸಿಮಾಡಿ ಕೆಂಪುಮೆಣಸನ್ನು ಚಿಕ್ಕ ಉರಿಯಲ್ಲಿ ಕೊಂಚ ಕಾಲ ಹುರಿಯಿರಿ. ಬಳಿಕ ಮೆಣಸನ್ನು ಪಕ್ಕಕ್ಕಿಡಿ.
2) ಇದೇ ಪಾತ್ರೆಯಲ್ಲಿ ಅರ್ಧ ಚಮಚ ಎಣ್ಣೆ ಹಾಕಿ ಹುರಿದ ಹುರಿದ ಕಡಲೆ ಬೇಳೆಯನ್ನು ಹಾಕಿ ಚಿಕ್ಕ ಉರಿಯಲ್ಲಿ ಕೊಂಚ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಒಂದು ಚಿಕ್ಕ ತಟ್ಟೆಯಲ್ಲಿ ಹರಡಿ ತಣಿಯಲು ಪಕ್ಕಕ್ಕಿಡಿ.
ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ
3) ಈಗ ಉಳಿದ ಎಣ್ಣೆಯನ್ನು ಇದೇ ಪಾತ್ರೆಯಲ್ಲಿ ಹಾಕಿ ಸಾಸಿವೆ ಸಿಡಿಸಿ. ಬಳಿಕ ಉದ್ದಿನ ಬೇಳೆ ಮತ್ತು ಬೇವಿನ ಎಲೆಗಳನ್ನು ಹಾಕಿ ತಿರುವಿ.
4) ಬಳಿಕ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ತಿರುವುತ್ತಾ ಇರಿ. ಬಳಿಕ ಉರಿ ನಂದಿಸಿ ಪಾತ್ರೆ ಕೆಳಗಿಳಿಸಿ.
5) ಈ ಹೊತ್ತಿಗೆ ಬೇಳೆ ಮತ್ತು ಮೆಣಸು ತಣ್ಣಗಾಗಿರುತ್ತದೆ. ಒಗ್ಗರಣೆಯ ಹೊರತಾಗಿ ಎಲ್ಲವನ್ನೂ ಮಿಕ್ಸಿಯ ಜಾರ್ನೊಳಗೆ ಹಾಕಿ ಕಡೆಯಿರಿ.
6) ಬೇಳೆ ನುಣ್ಣಗಾದ ಬಳಿಕ ಒಗ್ಗರಣೆಯನ್ನು ಹಾಕಿ ಮಿಶ್ರಣ ಮಾಡಿ. ಸ್ವಾದಿಷ್ಟ ಬೇಳೆಯ ಚಟ್ನಿ ತಯಾರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ