Breakfast Recipe: ಬೆಳಗಿನ ಉಪಹಾರಕ್ಕೆ ರುಚಿಕರ ಮಶ್ರೂಮ್ ಪೆಪ್ಪರ್ ರೈಸ್

ಈ ಮಶ್ರೂಮ್ ಪೆಪ್ಪರ್ ರೈಸ್ ರೆಸಿಪಿಯು ಸುಲಭವಾಗಿ ತಕ್ಷಣಕ್ಕೆ ಮಾಡಿ ಮುಗಿಸಬಹುದಾದ ಖಾದ್ಯವಾಗಿದ್ದು, ಇದರಲ್ಲಿ ಅಧಿಕ ಪೋಷಕಾಂಶಗಳಿದ್ದು ಆರೋಗ್ಯಕ್ಕೂ ಉತ್ತಮವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಿನ ಉಪಹಾರಕ್ಕೆ ಏನ್​ ಮಾಡ್ಬೇಕು ಎಂದು ಚಿಂತೆ ಮಾಡ್ತಿದ್ದೀರಾ?  ನಾವು ಒಳ್ಳೆಯ ಆರೋಗ್ಯ (Health) ಪದ್ಧತಿಯನ್ನು ನಾವು ರೂಢಿಸಿಕೊಳ್ಳಬೇಕು. ಬೆಳಗಿನ ತಿಂಡಿ (Breakfast) ಹಿತವಾಗಿ, ಮಧ್ಯಾಹ್ನದೂಟ ತುಸು ಹೆಚ್ಚಾಗಿ, ರಾತ್ರಿಯೂಟ ಹೊಟ್ಟೆ ಭರ್ತಿಯಾಗದಂತೆ ಆಹಾರ ವಿಧಾನವನ್ನು ನಾವು ಅನುಸರಿಸಬೇಕಾಗಿದೆ ಬೆಳಗಿನ ಉಪಹಾರಕ್ಕೆ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಅತ್ಯವಶ್ಯಕವಾಗಿದೆ. ಮಕ್ಕಳು (Children) ಹಾಗೂ ಮನೆ ಮಂದಿಗೆಲ್ಲಾ ಒಳ್ಳೆ ಪ್ರೋಟೀನ್ ಫುಡ್​  ಕೊಡ್ಬೇಕು ಇದಕ್ಕೆ ನೀವು ಮಶ್ರೂಮ್​ ಆಯ್ಕೆ ಮಾಡಿಕೊಳ್ಳಬಹುದು. ಈ ರುಚಿಕರವಾದ ಮಶ್ರೂಮ್​ ಪೆಪ್ಪರ್​  (Mushroom) ನಿಮ್ಮ ಮಕ್ಕಳಿಗೂ ಇಷ್ಟವಾಗುತ್ತೆ. 

ಈ ಮಶ್ರೂಮ್ ಪೆಪ್ಪರ್ ರೈಸ್ ರೆಸಿಪಿಯು ಸುಲಭವಾಗಿ ತಕ್ಷಣಕ್ಕೆ ಮಾಡಿ ಮುಗಿಸಬಹುದಾದ ಖಾದ್ಯವಾಗಿದ್ದು, ಇದರಲ್ಲಿ ಅಧಿಕ ಪೋಷಕಾಂಶಗಳು ಸಹ ಇದೆ. ಬನ್ನಿ ತಡ ಮಾಡದೆ ಇದನ್ನು ತಯಾರಿಸುವ ಬಗೆ ತಿಳಿದುಕೊಳ್ಳೋಣ

ಅಗತ್ಯವಾಗಿರುವ ಪದಾರ್ಥಗಳು

*ಅನ್ನ - 1 ಕಪ್

*ಅಣಬೆ - 500 ಗ್ರಾಂ

*ಈರುಳ್ಳಿ - 1 (ಕತ್ತರಿಸಿದ್ದು)

*ಮೆಣಸು - 2 ಟೀ ಚಮಚ

*ಖಾರದಪುಡಿ - 1 ಟೀ ಚಮಚ

*ಸಾಸಿವೆ ಪುಡಿ - 1 ಟೀ ಚಮಚ

*ಕೊತ್ತಂಬರಿ ಪುಡಿ - 1 ಟೀ.ಚಮಚ

*ಹಸಿ ಮೆಣಸಿನಕಾಯಿಗಳು - 4

*ಬೆಣ್ಣೆ - 1 ಟೀ ಚಮಚ

*ಎಣ್ಣೆ - 2 ಟೀ ಚಮಚ

*ಉಪ್ಪು ರುಚಿಗೆ ತಕ್ಕಷ್ಟು

ಇದನ್ನೂ ಓದಿ:Breakfast Recipe: ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹೆಸರುಕಾಳಿನ ದೋಸೆ

ಮಾಡುವ ವಿಧಾನ

*ಮೊದಲು ನೀವು ಅನ್ನವನ್ನು ಪ್ರತ್ಯೇಕವಾದ ತಯಾರಿಸಿಕೊಳ್ಳಬೇಕು. ಇದಾದ ಮೇಲೆ, ಬೆಂದ ಅನ್ನವನ್ನು ಪಕ್ಕದಲ್ಲಿ ಆರಲು ಬಿಡಿ.

*ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿಕೊಳ್ಳಿ. ಇದು ಕಾದ ಮೇಲೆ, ಇದಕ್ಕೆ ಕತ್ತರಿಸಿದ ಈರುಳ್ಳಿಗಳನ್ನು ಹಾಕಿ. ಅವುಗಳನ್ನು ಹೊಂಬಣ್ಣಕ್ಕೆ ಬರುವವರೆಗು ಮಧ್ಯಮ ಗಾತ್ರದ ಉರಿಯಲ್ಲಿ ಚೆನ್ನಾಗಿ ಉರಿಯಿರಿ. ನಂತರ ಅದಕ್ಕೆ ಹಸಿ ಮೆಣಸಿನ ಕಾಯಿಗಳನ್ನು ಹಾಕಿ. *ಈ ಎರಡು ಪದಾರ್ಥಗಳನ್ನು ಎಣ್ಣೆಯೊಂದಿಗೆ 5 ನಿಮಿಷಗಳ ಕಾಲ ಚೆನ್ನಾಗಿ ಉರಿಯಿರಿ. ನಂತರ ಅದಕ್ಕೆ ಖಾರದ ಪುಡಿ, ಸಾಸಿವೆ ಪುಡಿ ಮತ್ತು ಕೊತ್ತಂಬರಿ ಪುಡಿ ಗಳನ್ನು ಬೆರೆಸಿ. ಈಗ ಎಲ್ಲಾ ಮಸಾಲೆಗಳನ್ನು ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳ ಜೊತೆಗೆ ಚೆನ್ನಾಗಿ ಉರಿಯಿರಿ.

*ಇದಕ್ಕೆ ಅಣಬೆಗಳನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸುತ್ತ ಚೆನ್ನಾಗಿ ಕಲೆಸಿಕೊಡಿ. ನಂತರ ಅಣಬೆಗಳ ಜೊತೆಗೆ ಪೆಪ್ಪರ್ ಪುಡಿಯನ್ನು ಹಾಕಿ, ಚೆನ್ನಾಗಿ ಕಲೆಸಿ ಕೊಡಿ.

ಇದನ್ನೂ ಓದಿ: World Idli Day: ವಿಶ್ವ ಪ್ರಸಿದ್ಧ 'ರಾಮಸ್ಸೆರಿ ಇಡ್ಲಿ' ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ರೆಸಿಪಿ

*ಈ ಅನ್ನವು ಎಲ್ಲಾ ಪದಾರ್ಥಗಳ ಜೊತೆಗೆ ಸ್ವಲ್ಪ ಬೆರೆಯಲು ಬಾಣಲೆಯಲ್ಲಿಯೇ ಬಿಡಿ. ಅದಕ್ಕಾಗಿ ಒಂದು 10 ನಿಮಿಷ ಬೇಯಿಸಿ. ಇದು ಮುಗಿದ ಮೇಲೆ, ಈ ಪೆಪ್ಪರ್ ಮಶ್ರೂಮ್ ರೈಸ್ ಮೇಲೆ ಉಪ್ಪನ್ನು ಹಾಕಿ. ಈಗ ನಿಮ್ಮ ಮುಂದೆ ಪೆಪ್ಪರ್ ಮಶ್ರೂಮ್ ರೈಸ್ ರೆಸಿಪಿ ತಯಾರಾಗಿದೆ. ಅನ್ನದ ಮೇಲೆ ಬೆಣ್ಣೆಯನ್ನು ಹಾಕಿ ಸವಿಯಲು ನೀಡಿ.

ಮತ್ತೊಂದು ಪಾಕ ವಿಧಾನ ಪಾಲಕ್​ ಪಲಾವ್​ 

ಪಾಲಕ್ ಸೊಪ್ಪು - ಎರಡು ಕಟ್ಟು, ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿದ್ದು.

ಅಕ್ಕಿ - ಎರಡು ಕಪ್ (ತಣ್ಣೀರಿನಲ್ಲಿ ನೆನೆಸಿದ್ದು)

ಏಲಕ್ಕಿ - ಎರಡು, ಲವಂಗ - ಎರಡು ,

ಚೆಕ್ಕೆ - ಒಂದಿಂಚಿನ ತುಂಡು

ಕಾಳುಮೆಣಸು-ಎಂಟು ಕಾಳು

*ದಾಲ್ಚಿನ್ನಿ ಎಲೆ - ಒಂದು

*ಜೀರಿಗೆ- 1 ಚಿಕ್ಕ ಚಮಚ

ಟೊಮೇಟೋ - 1 (ಚಿಕ್ಕದಾಗಿ ಹೆಚ್ಚಿದ್ದು)

ಹಸಿಮೆಣಸು- 2 (ಉದ್ದಕ್ಕೆ ಸೀಳಿದ್ದು)

ಅರಿಶಿನ- ಳಿ ಚಿಕ್ಕ ಚಮಚ

ಕೊತ್ತೊಂಬರಿ ಪುಡಿ - 1 ಚಿಕ್ಕ ಚಮಚ

ಜೀರಿಗೆ ಪುಡಿ- 1 ಚಿಕ್ಕ ಚಮಚ

ಉಪ್ಪು - ರುಚಿಗನುಸಾರವಾಗಿ

ತುಪ್ಪ- 2 ದೊಡ್ಡ ಚಮಚ

ಪಾಲಕ್ ಪಲಾವ್​ ಮಾಡುವ ವಿಧಾನ:

ಪ್ರೆಶರ್ ಕುಕ್ಕರ್ ಅನ್ನು ಒಲೆಯ ಮೇಲಿಟ್ಟು ಮಧ್ಯಮ ಉರಿಯಲ್ಲಿ ಕೊಂಚ ಬಿಸಿಯಾದ ಬಳಿಕ ತುಪ್ಪ ಹಾಕಿ ಕರಗಿಸಿ  ಇದಕ್ಕೆ ದಾಲ್ಚಿನ್ನಿ ಎಲೆ, ಜೀರಿಗೆ, ಹಸಿಮೆಣಸು, ಏಲಕ್ಕಿ, ಕಾಳುಮೆಣಸು, ಚೆಕ್ಕೆ ಮೊದಲಾದ ಎಲ್ಲಾ ಮಸಾಲೆ ವಸ್ತುಗಳನ್ನು ಹಾಕಿ ಒಂದು ನಿಮಿಷ ಹುರಿಯಿರಿ. ಬಳಿಕ ಹೆಚ್ಚಿದ ಪಾಲಕ್ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಚಿಕ್ಕ ಉರಿಯಲ್ಲಿ ನಡುನಡುವೆ ತಿರುವುತ್ತಾ ನೀರೆಲ್ಲಾ ಆವಿಯಾಗುವಂತೆ ಮಾಡಿ. ಪಾಲಕ್ ಸೊಪ್ಪಿನಲ್ಲಿಯೇ ಸಾಕಷ್ಟು ನೀರು ಇರುವುದರಿಂದ ನೀರು ಪ್ರತ್ಯೇಕವಾಗಿ ಸೇರಿಸುವ ಅಗತ್ಯವಿಲ್ಲ.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ 3 ಬಗೆಯ ಗರಿ ಗರಿ ದೋಸೆ

ಈಗ ಟೊಮೇಟೊ, ಉಪ್ಪು, ಅರಿಶಿನ, ಕೊತ್ತೊಂಬರಿ ಪುಡಿ ಮತ್ತು ಜೀರಿಗೆ ಪುಡಿ ಹಾಕಿ ಸುಮಾರು ಎರಡರಿಂದ ಮೂರು ನಿಮಿಷ ತಿರುವಿ.  ಈಗ ನೆನೆಸಿಟ್ಟ ಅಕ್ಕಿಯನ್ನು ಹಾಕಿ ನಯವಾಗಿ ತಿರುವಿ. ಚಿಕ್ಕ ಉರಿಯಲ್ಲಿಯೇ ಸುಮಾರು ನಾಲ್ಕು ನಿಮಿಷ ಬೇಯಲಿ ಈಗ ನಾಲ್ಕು ಕಪ್ ನೀರು ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ ಉರಿಯನ್ನು ಹೆಚ್ಚಿಸಿ ಮಧ್ಯಮ ಗಾತ್ರವಾಗಿಸಿ. ಎರಡು ಸೀಟಿ ಬರುತ್ತಿದ್ದಂತೆಯೇ ಉರಿ ನಂದಿಸಿ ಕುಕ್ಕರ್ ಕೆಳಗಿಸಿ ತಣ್ಣೀರಿನ ಕೆಳಗೆ ಸೀಟಿ ತಣ್ಣಗಾಗಿಸಿ ಒತ್ತಡ ನಿವಾರಿಸಿ ಮುಚ್ಚಳ ತೆರೆಯಿರಿ.  ಬಿಸಿ ಬಿಸಿಯಿದ್ದಂತೆಯೇ ಸೇವಿಸಲು ಸಿದ್ಧರಾಗಿ. ಇದನ್ನು ಮಕ್ಕಳಿಗೆ ಬೆಳಗಿನ ಉಪಹಾರವಾಗಿ ನೀಡೋದು ಅತ್ಯುತ್ತಮವಾಗಿದೆ.
Published by:Pavana HS
First published: