Breakfast Recipe: ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹೆಸರು ಬೇಳೆ ದೋಸೆ ಮಾಡಿ

ಹೆಸರು ಬೇಳೆ ಆರೋಗ್ಯಕ್ಕೂ ಕೂಡ ಒಳ್ಳೆಯದು. ಇದು ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ. ಈ ದೋಸೆಯ ರುಚಿಯು ಕೂಡ ವಿಭಿನ್ನವಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತೀಯರ (South Indians) ಫೆವರೇಟ್‌ ತಿಂಡಿಗಳಲ್ಲಿ (Favorite Food) ಪ್ರಮುಖವಾದುದು ದೋಸೆ (Dose) ಮತ್ತು ಇಡ್ಲಿ (Idli). ಈ ಪೈಕಿ ಎರಡರಲ್ಲೂ ವೈರೆಟಿ ವೈರೆಟಿ ದೋಸೆ, ಇಡ್ಲಿಗಳಿವೆ. ಇನ್ನು ದೋಸೆ ವಿಚಾರಕ್ಕೆ ಬಂದ್ರೆ ಹಲವು ವೆರೈಟಿ  ದೋಸೆಗಳನ್ನ ( Dose) ಮನೆಯಲ್ಲಿ ಮಾಡ್ತಾರೆ. ಆರೋಗ್ಯಕರ ಹೆಸರುಬೆಳೆ ದೋಸೆಯನ್ನು ಬೆಳಗಿನ ಉಪಹಾರಕ್ಕೆ (Breakfast) ಮಾಡಿ ತಿನ್ನಿ. ಹೆಸರುಬೆಳೆ ದೋಸೆ ಮಾಡೋದು ಹೇಗೆ ಅಂತ ತಲೆ ಕೆಡಿಸಿಕೊಂಡಿದ್ದೀರಾ? ಹಾಗಿದ್ರೆ ಚಿಂತೆ ಬಿಡಿ, ನಾವು ಕೊಟ್ಟಿರುವ ಈ ರೆಸಿಪಿ (Recipe) ಓದಿ, ನಿಮ್ಮ ಮನೆಯಲ್ಲೂ ಗರಿ ಗರಿಯಾದ, ರುಚಿ ರುಚಿಯಾದ ಹೆಸರುಬೆಳೆ ದೋಸೆ ಮಾಡಿ, ಸಖತ್ ಬ್ರೇಕ್‌ಫಾಸ್ಟ್ ತಿನ್ನಿ.

ಹೆಸರು ಬೇಳೆ ಆರೋಗ್ಯಕ್ಕೂ ಕೂಡ ಒಳ್ಳೆಯದು. ಇದು ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ. ಈ ದೋಸೆಯ ರುಚಿಯು ಕೂಡ ವಿಭಿನ್ನವಾಗಿರುತ್ತದೆ. ದೋಸೆ ಮಾಡುವಾಗ ಹಸಿ ಮೆಣಸಿನಕಾಯಿ ಹಾಗು ಶುಂಠಿಯನ್ನು ಹಿಟ್ಟಿಗೆ ಹಾಕಿ ರುಬ್ಬುವುದರಿಂದ ಒಳ್ಳೆಯ ರುಚಿ ಬರುತ್ತದೆ. ಈ ದೋಸೆಯು ಶುಂಠಿ ಚಟ್ನಿ ಅಥವಾ ಕಾಯಿ ಚಟ್ನಿ ಜೊತೆ ತುಂಬಾ ಚೆನ್ನಾಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು

ಹಸಿ ಮೆಣಸಿನಕಾಯಿ – 2

ಹಸಿ ಶುಂಠಿ – 1 ಇಂಚು

2 ಗಂಟೆ ನೆನೆಸಿದ ಹೆಸರು ಬೇಳೆ – 1 ಕಪ್

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – 2 ಚಮಚ

ಈರುಳ್ಳಿ – ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)

ಕೊತ್ತಂಬರಿ ಸೊಪ್ಪು – ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)

ಇದನ್ನೂ ಓದಿ: Recipe: ಮನೆಯಲ್ಲಿ ಸುಲಭವಾಗಿ ಮಾಡಿ ರುಚಿಕರ ಮಜ್ಜಿಗೆ ಸಾಂಬಾರ್

ಮಾಡುವ ವಿಧಾನ

ಒಂದು ಮಿಕ್ಸಿ ಜಾರಿಗೆ 2 ಹಸಿ ಮೆಣಸಿನಕಾಯಿ, 1 ಇಂಚು ಹಸಿ ಶುಂಠಿ, 1 ಕಪ್  ನೆನೆಸಿದ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ನೀರು ಬಸಿದು ಹಾಕಿ, ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಇದನ್ನು ಒಂದು ಪಾತ್ರೆಗೆ ಹಾಕಿ, ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ.

ಈಗ ಕಾವಲಿ ಬಿಸಿಮಾಡಿ, ಅದಕ್ಕೆ 1 ಚಮಚ ಎಣ್ಣೆ ಹಾಕಿ. ದೋಸೆ ಹಿಟ್ಟನ್ನು ಅದರ ಮೇಲೆ ಹಾಕಿ ಸಮವಾಗಿ ಹರಡಿ. ಇದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸ್ವಲ್ಪ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಉದುರಿಸಿ. ಈಗ ಮೇಲೆ ಎಣ್ಣೆ ಹಾಕಿ ಮಗುಚಿ ಹಾಕಿ ಎರಡೂ ಬದಿ ಬೇಯಿಸಿ. ರುಚಿಯಾದ ಹೆಸರು ಬೇಳೆ ದೋಸೆಯನ್ನು ಚಟ್ನಿ ಜೊತೆ ಬಡಿಸಿ.

ಮಸಾಲೆ ದೋಸೆಗೆ ಬೇಕಾಗುವ ಪದಾರ್ಥಗಳು

* ಇಡ್ಲಿ ಅಕ್ಕಿ - 2 ಬಟ್ಟಲು

* ಮೆಂತ್ಯ- 2 ಚಮಚ

*ಉದ್ದಿನ  ಬೇಳೆ – ಅರ್ಧ ಬಟ್ಟಲು

* ಕಡಲೆ ಬೇಳೆ – ಕಾಲು ಬಟ್ಟಲು

* ತೊಗರಿಬೇಳೆ -ಕಾಲು ಬಟ್ಟಲು

* ಅವಲಕ್ಕಿ - ಕಾಲು ಬಟ್ಟಲು

* ಅರಿಶಿಣದ ಪುಡಿ – ಕಾಲು ಚಮಚ

* ರವೆ - 1 ಬಟ್ಟಲು

* ಸಕ್ಕರೆ - ಅರ್ಧ ಚಮಚ

* ಎಣೆ – ಅಗತ್ಯಕ್ಕನುಗುಣವಾಗಿ

* ಉಪ್ಪು - ರುಚಿಗೆ ತಕ್ಕಷ್ಟು

* ಪಾತ್ರೆಯೊಂದನ್ನು ತೆಗೆದುಕೊಂಡು ಅಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ, ತೊಗರಿ ಬೇಳೆ ಹಾಗೂ ಮೆಂತ್ಯೆದ ಕಾಳುಗಳನ್ನು ಹಾಕಿ ಕನಿಷ್ಠ 4 ಗಂಟೆಗಳ ಕಾಲ ನೆನೆಸಬೇಕು.

 ಇದನ್ನೂ ಓದಿ: Recipe: ರುಚಿಕರ ಮಾವಿನಹಣ್ಣಿನ ಕರಿ ರೆಸಿಪಿ, ನೀವು ಒಮ್ಮೆ ಟ್ರೈ ಮಾಡಿ

* ಅವಲಕ್ಕಿಯನ್ನು ಪ್ರತ್ಯೇಕವಾಗಿ 1 ಗಂಟೆಗಳ ಕಾಲ ನೆನೆಹಾಕಬೇಕು.

* ನಂತರ ಮಿಕ್ಸಿ ಜಾರ್ ತೆಗೆದುಕೊಂಡು ನೆನೆ ಹಾಕಿದ್ದ ಅಕ್ಕಿ, ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು.

* ನಂತರ ಅವಲಕ್ಕಿಯನ್ನು ರುಬ್ಬಿಕೊಂಡು, ಪಾತ್ರೆಯೊಂದಕ್ಕೆ ಹಾಕಿ ಉಪ್ಪು ಹಾಕಿ 12 ಗಂಟೆಗಳ ಕಾಲ ನೆನೆಯಲು ಬಿಡಬೇಕು.

* ನಂತರ ಈ ಹಿಟ್ಟಿಗೆ ಅರ್ಧ ಚಮಚ ಸಕ್ಕರೆ, ರವೆ, ಅರಿಶಿಣದ ಪುಡಿ, ಚಿಟಿಕೆ ಅಡುಗೈ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಮೈಸೂರು ಮಸಾಲೆ ದೋಸೆ ಮಾಡುವ ವಿಧಾನ

* ಹಿಟ್ಟು ರೆಡಿಯಾದ ಬಳಿಕ ದೋಸೆ ಮಾಡಲು ತಯಾರಿ ಮಾಡಿಕೊಳ್ಳಬೇಕು

* ಒಲೆಯ ಮೇಲೆ ಪ್ಯಾನ್ ಇಟ್ಟು ಚೆನ್ನಾಗಿ ಕಾದ ನಂತರ ಹಿಟ್ಟನ್ನು ಹಾಕಿ ದೋಸೆಯ ಆಕಾರದಲ್ಲಿ ಹಾಕಿ, ಕೆಂಪಗೆ ಸುಡಬೇಕು.

* ನಂತರ ಕೆಂಪು ಚಟ್ಟಿಯನ್ನು ಒಂದು ಭಾಗದಲ್ಲಿ ಹಚ್ಚಿ ತೆಗೆಯಬೇಕು.

Published by:Pavana HS
First published: