BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

ಬೆಳಗ್ಗೆ ಸ್ವಲ್ಪ ಸಮಯ ಕೊಟ್ರೆ ಸಾಕು ನೀವು ಒಳ್ಳೆ ಹೆಲ್ದಿ ಫುಡ್​ ತಯಾರಿಸಬಹುದು. ಮೆಂತ್ಯ ಸೊಪ್ಪು ಮತ್ತು ಪಾಲಕ್ ಸೊಪ್ಪುಗಳನ್ನು ಸೇರಿಸಿ ಮಾಡಿದ ಅಕ್ಕಿರೊಟ್ಟಿಯೂ ಅತ್ಯಂತ ಆರೋಗ್ಯಕರ ಉಪಹಾರವಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಿನ ಉಪಹಾರ (Breakfast) ಪೌಷ್ಠಿಕಾಂಶದ ಆಹಾರ ಸೇವಿಸೋದು ಅತ್ಯಗತ್ಯ.  ಪ್ರೋಟೀನ್ (Protein)​ ಫುಡ್​ಗಳು ಆರೋಗ್ಯಕ್ಕೆ (Health) ಅತಿ ಅಗತ್ಯವಾಗಿದೆ. ಸಮಯದ ಆಭಾವದಿಂದ ಎಷ್ಟೋ ಜನ ಬರಿ ಬ್ರೆಡ್ ಜಾಮ್ ನಂತಹ ಅನಾರೋಗ್ಯಕರ ಉಪಹಾರ ಸೇವಿಸಿ ಕಚೇರಿ ಕೆಲಸಕ್ಕೆ ಹೋಗ್ತಾರೆ.  ಬೆಳಗ್ಗೆ ಸ್ವಲ್ಪ ಸಮಯ ಕೊಟ್ರೆ ಸಾಕು ನೀವು ಒಳ್ಳೆ ಹೆಲ್ದಿ ಫುಡ್​ ತಯಾರಿಸಬಹುದು. ಮೆಂತ್ಯ ಸೊಪ್ಪು ಮತ್ತು ಪಾಲಕ್ ಸೊಪ್ಪುಗಳನ್ನು ಸೇರಿಸಿ ಮಾಡಿದ ಅಕ್ಕಿರೊಟ್ಟಿಯೂ (Akki Rotti) ಒಂದು ಅತ್ಯಂತ ಆರೋಗ್ಯಕರ ಉಪಹಾರವಾಗಿದೆ. ಅಲ್ಲದೆ ಬೆಳಗಿನ ಉಪಹಾರಕ್ಕೆ ಮಾತ್ರವಲ್ಲ ಮಧ್ಯಾಹ್ನ ಹಾಗೂ ರಾತ್ರಿಯೂಟಕ್ಕೂ ಇದನ್ನು ಮಾಡಿ ತಿನ್ನಬಹುದು. 

ಅಗತ್ಯವಿರುವ ಸಾಮಾಗ್ರಿಗಳು:

*ಅಕ್ಕಿಹಿಟ್ಟು: ಎರಡು ಕಪ್

*ಮೆಂತ್ಯ ಸೊಪ್ಪು : ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು)  ತಾಜಾ ಸೊಪ್ಪಾದ್ರೆ ಉತ್ತಮ

*ಪಾಲಕ್ ಸೊಪ್ಪು: ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು)

*ಜೀರಿಗೆ - ಒಂದು ಚಿಕ್ಕ ಚಮಚ

*ಕಾಯಿತುರಿ: ಒಂದು ಕಪ್

*ಹಸಿಮೆಣಸು:  3 ಅಥವಾ 4

*ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು, ಚಿಕ್ಕದಾಗಿ ಹೆಚ್ಚಿದ್ದು.

*ಅಡುಗೆ ಎಣ್ಣೆ - ಎರಡು ದೊಡ್ಡ ಚಮಚ

*ಉಪ್ಪು - ರುಚಿಗೆ ತಕ್ಕಷ್ಟು

ಮೆಂತ್ಯ, ಪಾಲಕ್​ ಸೊಪ್ಪಿನ ರೊಟ್ಟಿ ಮಾಡುವ ವಿಧಾನ:

1) ಒಂದು ಪಾತ್ರೆಯಲ್ಲಿ ಮೆಂತೆ ಸೊಪ್ಪು, ಪಾಲಕ್ ಸೊಪ್ಪು, ಜೀರಿಗೆ, ಕಾಯಿತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಕೈಗಳಿಂದ ಚೆನ್ನಾಗಿ ಕಲಕಿ.

2) ಈಗ ಇದಕ್ಕೆ ಅಕ್ಕಿ ಹಿಟ್ಟುಹಾಕಿ ಕಲಸುತ್ತಾ ಹೋಗಿ. ನಡುನಡುವೆ ಸ್ವಲ್ಪಸ್ವಲ್ಪವಾಗಿಯೇ ನೀರು ಸೇರಿಸುತ್ತಾ ಹೋಗಿ ರೊಟ್ಟಿ ತಟ್ಟುವಷ್ಟು ಹದ ಬರುವವರೆಗೆ ಕಲಸುತ್ತಾ ಹೋಗಿ. ನೀರು ಹೆಚ್ಚಾಗದಂತೆ ಎಚ್ಚರವಹಿಸಿ, ಹೆಚ್ಚಾದರೆ ತಟ್ಟಲು ಬರುವುದಿಲ್ಲ, ಬಂದರೂ ಕಾವಲಿಯ ಮೇಲೆ ಇಡುವಾಗ ತುಂಡುತುಂಡಾಗುತ್ತದೆ. ಈ ಹಿಟ್ಟನ್ನು ಒಂದು ಬದಿಗಿಡಿ.

3) ಒಂದು ದಪ್ಪತಳದ ಕಾವಲಿಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ ಎಣ್ಣೆ ಸವರಿ.

4) ಅಕ್ಕಿಹಿಟ್ಟಿನ ಒಂದು ಚಿಕ್ಕ ಮುದ್ದೆಯನ್ನು ಬಾಳೆ ಎಲೆ ಅಥವಾ ಸ್ವಚ್ಛಗೊಳಿಸಿದ ದಪ್ಪ ಪ್ಲಾಸ್ಟಿಕ್ ಹಾಳೆಯ ಮೇಲೆ ಎಣ್ಣೆ ಸವರಿ ರೊಟ್ಟಿಯನ್ನು ಅತಿ ದಪ್ಪವೂ ಅಲ್ಲ, ಅತಿ ತೆಳ್ಳಗೂ ಅಲ್ಲವೆನ್ನುವ ರೀತಿ ತಟ್ಟಿ.

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

5) ತಟ್ಟಿದ ರೊಟ್ಟಿಯನ್ನು ಕಾವಲಿಯ ಮೇಲೆ ಉಲ್ಟಾ ಹಾಕಿ ಬಾಳೆಯೆಲೆ ಅಥವಾ ಪ್ಲಾಸ್ಟಿಕ್ ಹಾಳೆಯನ್ನು ಒಂದು ಕಡೆಯಿಂದ ತೆಗೆದು ಬಿಡಿ

6) ಒಂದೆರಡು ನಿಮಿಷದ ಬಳಿಕ ರೊಟ್ಟಿಯನ್ನು ತಿರುವಿ ಇನ್ನೊಂದು ಬದಿಯನ್ನು ಬೇಯಿಸಿ

7) ಕಾವಲಿಗೆ ಮುಚ್ಚಳ ಮುಚ್ಚಬೇಡಿ, ಮುಚ್ಚಿದರೆ ರೊಟ್ಟಿ ಸೀದು ಹೋಗಬಹುದು.

8) ಬಿಸಿಬಿಸಿಯಿದ್ದಂತೆಯೇ ನಿಮ್ಮ ನೆಚ್ಚಿನ ಸಾರು, ಚಟ್ನಿ  ಇತರ ಪಲ್ಯದೊಂದಿಗೆ ಬಡಿಸಿ

ಈರುಳ್ಳಿ ಚಟ್ನಿ

ಬೇಕಾಗುವ ಪದಾರ್ಥಗಳು :  10 ಸಣ್ಣ ಈರುಳ್ಳಿ, 1 ಸಣ್ಣ ಬೆಳ್ಳುಳ್ಳಿ, 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಉದ್ದಿನ ಬೇಳೆ,  1 ಚಮಚ ಕಡೆಲೆ ಬೇಳೆ,  1 ಟೀಸ್ಪೂನ್ ಕೊತ್ತಂಬರಿ ಬೀಜ, 4 ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಸಣ್ಣ ತುಂಡು ಹುಣಸೆಹಣ್ಣು, ಅರ್ಧ ಟೀಸ್ಪೂನ್ ಉಪ್ಪು , ಕಾಲು ಕಪ್ ನೀರು 1 ಟೀಸ್ಪೂನ್ ಸಾಸಿವೆ ಪಿಂಚ್ ಹಿಂಗ್  ಸ್ವಲ್ಪ ಅರಿಶಿನ 1 ಟೀಸ್ಪೂನ್ ಮೆಣಸಿನ ಪುಡಿ

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಮಾಡಿ ಆರೋಗ್ಯಕರ ಗೋಧಿ ನುಚ್ಚಿನ ಕಿಚಡಿ

ಮಾಡುವ ವಿಧಾನ
ಗ್ಯಾಸ್ ಮೇಲೆ ಒಂದು ಜಾಲರಿ ಇಟ್ಟು, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಸುಟ್ಟುಕೊಳ್ಳಿ. ಈರುಳ್ಳಿ ಒಳಗಿನಿಂದ ಮೃದುವಾಗುವವರೆಗೆ ಚೆನ್ನಾಗಿ ಸುಡಿ. ಸುಟ್ಟ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಸಿಪ್ಪೆತೆಗೆದು, ಮಿಕ್ಸಿ ಜಾರಿಗೆ ಹಾಕಿ, ಬದಿಯಲ್ಲಿಡಿ. ಬಾಣಲಿಗೆ 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, ಕೊತ್ತಂಬರಿ ಬೀಜ ಜೊತೆಗೆ, 4 ಒಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಹುರಿದು, ತಣ್ಣಗಾಗಿಸಿ ಅದೇ ಮಿಕ್ಸಿ ಜಾರಿಗೆ ಸೇರಿಸಿ, ಒಂದು ಸುತ್ತು ರುಬ್ಬಿಕೊಳ್ಳಿ.ಹೆಚ್ಚುವರಿಯಾಗಿ, ಒಂದು ಸಣ್ಣ ತುಂಡು ಹುಣಸೆಹಣ್ಣು, ಳಿ ಟೀಸ್ಪೂನ್ ಉಪ್ಪು ಮತ್ತು ನೀರು ಸೇರಿಸಿ. ಅಗತ್ಯವಿದ್ದರೆ ನೀರನ್ನು ಸೇರಿಸಿ ನಯವಾದ ಪೇಸ್ಟ್‌ ಆಗಿ ರುಬ್ಬಿಕೊಳ್ಳಿ.

Published by:Pavana HS
First published: