Breakfast Recipe: ಬೆಳಗಿನ ಉಪಹಾರಕ್ಕೆ ಟೇಸ್ಟಿ ಫುಡ್; ಮಸಾಲ ಪೂರಿ with ಆಲೂ ಕರಿ

ಬೆಳಗಿನ ಉಪಹಾರವನ್ನು (Breakfast) ಮತ್ತಷ್ಟು ರುಚಿಯಾಗಿಸಲು ಹೊರಗೆ ತಿನ್ನಬೇಡಿ. ಮನೆಯಲ್ಲಿಯೇ ಮಸಾಲ ಪೂರಿ, ಅಲೂ ಕರಿ ಮಾಡಿ  ತಿನ್ನಿ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೊರಗಿನ ಫಾಸ್ಟ್ ಫುಡ್‌ಗಳಿಗಿಂತ (Fast Food) ಮನೆಯಲ್ಲೇ ತಯಾರಿಸುವ ತಿಂಡಿಗಳು ನಿಮ್ಮಲ್ಲಿ ರೋಗಗಳನ್ನು ಕಡಿಮೆ ಮಾಡಿ ಆರೋಗ್ಯಕರವಾದ ಜೀವನ ಶೈಲಿಗೆ (Life Style) ಸಹಕಾರಿ. ಬೆಳಗಿನ ಉಪಹಾರವನ್ನು (Breakfast) ಮತ್ತಷ್ಟು ರುಚಿಯಾಗಿಸಲು ಹೊರಗೆ ತಿನ್ನಬೇಡಿ. ಮನೆಯಲ್ಲಿಯೇ ಮಸಾಲ ಪೂರಿ, ಅಲೂ ಕರಿ ಮಾಡಿ  ತಿನ್ನಿ.  ಮಾಡೋದು ಸುಲಭ ರುಚಿಕರವಾಗಿಯೂ ಇರುತ್ತದೆ. 

ಬೇಕಾಗುವ ಸಾಮಾಗ್ರಿಗಳು

ಮೈದಾ 2 ಕಪ್

ಮೊಸರು ಎರಡು ಚಮಚ

ರುಚಿಗೆ ತಕ್ಕ ಉಪ್ಪು

ಚಿಟಿಕೆಯಷ್ಟು ಅಜ್ವೈನ್

ಬಿಸಿ ಎಣ್ಣೆ 2 ಚಮಚ

ನೀರು

ಮಸಾಲೆ ಸಾಮಾಗ್ರಿಗಳು

ಸ್ವಲ್ಪ ಶುಂಠಿ 4-5 ಎಸಳು

ಬೆಳ್ಳುಳ್ಳಿ ಸ್ವಲ್ಪ ಪುದೀನಾ

ಕೊತ್ತಂಬರಿ ಬೀಜ 1 ಚಮಚ

ಹಸಿ ಮೆಣಸಿನಕಾಯಿ 2-3

ಅರಿಶಿಣ ಪುಡಿ ಅರ್ಧ ಚಮಚ

ಕಡಲೆ ಹಿಟ್ಟು 2 ಚಮಚ

ಗರಂ ಮಸಾಲ 1/2 ಚಮಚ

ಆಮ್ ಚೂರು - ಅರ್ಧ ಚಮಚ ಎಣ್ಣೆ

ತಯಾರಿಸುವ ವಿಧಾನ:

* ಮಸಾಲೆ ಸಾಮಾಗ್ರಿಗಳಲ್ಲಿ ಎಣ್ಣೆಯನ್ನು ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

* ಈಗ ದೊಡ್ಡ ಬಟ್ಟಲಿಗೆ ಮೈದಾ ಹಾಕಿ ಅದಕ್ಕೆ ಅಜ್ವೈನ್, ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಹಾಗೂ ರುಬ್ಬಿದ ಮಸಾಲೆ, 2 ಚಮಚ ಬಿಸಿ ಎಣ್ಣೆ ಹಾಕಿ , ಸ್ವಲ್ಪ ನೀರು ಹಾಕಿ ಪೂರಿ ಹದಕ್ಕೆ ಕಲೆಸಿ. ಈಗ ಪೂರಿಗೆ ತಟ್ಟುವಂತೆ ತಟ್ಟಿ.

* ಬಾಣಲಿಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ. ಈಗ ಕಾದ ಎಣ್ಣೆಗೆ ತಟ್ಟಿದ ಹಿಟ್ಟನ್ನು ಹಾಕಿ, ಅದು ಉಬ್ಬಿ ಬಂದು ಸ್ವಲ್ಪ ಕಂದು ಬಣ್ಣ ಬರುವಾಗ ಒಮ್ಮೆ ಮಗುಚಿ ಹಾಕಿ ನಂತರ ತೆಗೆಯಿರಿ. ಈ ರೀತಿ ಉಳಿದ ಮಸಾಲೆ ಪೂರಿಗಳನ್ನು ಮಾಡಿ. ಬಿಸಿ- ಬಿಸಿ ಮಸಾಲೆ ಪೂರಿಯನ್ನು ಆಲೂ ಕರಿ ಜೊತೆ ಸವಿಯಿರಿ

ಆಲೂ ಕರಿ ಮಾಡುವ ವಿಧಾನ

ಸಾಮಾಗ್ರಿಗಳು

ಎಣ್ಣೆ - 2 ಚಮಚ , ಜೀರಿಗೆ - 1/2 ಚಮಚ , ಈರುಳ್ಳಿ - 3/4 ಕಪ್ (ಕತ್ತರಿಸಿದ್ದು), ಬೆಳ್ಳುಳ್ಳಿ - 1 ಚಮಚ , ಶುಂಠಿ - 1 ಚಮಚ (ಕತ್ತರಿಸಿದ್ದು) ,  ಹಸಿಮೆಣಸಿನ ಪೇಸ್ಟ್ - 1 ಚಮಚ , ಟೊಮೇಟೊ - 1 ಕಪ್ (ಕತ್ತರಿಸಿದ್ದು) , ನೀರು ಬೇಕಾದಷ್ಟು , ಬಟಾಣಿ - 1 ಕಪ್ (ಬೇಯಿಸಿದ್ದು) ,ಆಲೂಗಡ್ಡೆ ಕತ್ತರಿಸಿದ್ದು - 1 1/2 ಕಪ್ (ಬೇಯಿಸಿದ್ದು) , ಉಪ್ಪು ರುಚಿಗೆ ತಕ್ಕಷ್ಟು,. ಮೆಣಸಿನ ಹುಡಿ - 1 1/2 ಚಮಚ , ಗರಂ ಮಸಾಲಾ - 1/2 ಚಮಚ,ಅರಿಶಿನ - ಚಿಟಿಕೆಯಷ್ಟು, ಕರಿಬೇವಿನೆಸಳು - 1 ಚಮಚ (ಕತ್ತರಿಸಿದ್ದು)

ಮಾಡುವ ವಿಧಾನ

1. ನಾನ್ ಸ್ಟಿಕ್ ಪ್ಯಾನ್ ಅನ್ನು ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ

2. ಈಗ, ಇದಕ್ಕೆ ಜೀರಿಗೆಯನ್ನು ಹಾಕಿ, ಇದು ಸಿಡಿಯುತ್ತಿದ್ದಂತೆ, ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ 3. ಚೆನ್ನಾಗಿ ಹುರಿಯಿರಿ, ಈರುಳ್ಳಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿಯಿರಿ

4. ಇನ್ನು, ಬೆಳ್ಳುಳ್ಳಿ, ಶುಂಠಿ, ಟೊಮೇಟೊ, ಮತ್ತು ಹಸಿಮೆಣಸಿನ ಪೇಸ್ಟ್ ಅನ್ನು ಹಾಕಿ. ಟೊಮೇಟೊ ಬೇಯಲು ಇನ್ನೂ ಸಮಯ ಬೇಕು ಎಂದಾದಲ್ಲಿ ಸ್ವಲ್ಪ ನೀರನ್ನು ಹಾಕಿ.

5. ಈಗ, ಚೆನ್ನಾಗಿ ಮಿಶ್ರ ಮಾಡಿಕೊಂಡು ಟೊಮೇಟೊವನ್ನು ಸ್ವಲ್ಪ ಒತ್ತಿ. ಎಲ್ಲಾ ಮಸಾಲೆ ಪದಾರ್ಥಗಳು ಬೆಂದ ನಂತರ, ಬಟಾಣಿ ಮತ್ತು ಆಲೂಗಡ್ಡೆಯನ್ನು ಇದಕ್ಕೆ ಹಾಕಿ

6. ಉಪ್ಪು, ಕೆಂಪು ಮೆಣಸಿನ ಹುಡಿ, ಅರಿಶಿನ ಹುಡಿ ಮತ್ತು ಗರಂ ಮಸಾಲಾ ಹುಡಿಯನ್ನು ಇದಕ್ಕೆ ಹಾಕಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ

7. ಈಗ, ಒಂದು ಕಪ್‎ನಷ್ಟು ನೀರನ್ನು ಹಾಕಿ ಮತ್ತು ಕರಿಯನ್ನು ಬೇಯಲು ಬಿಡಿ

8. ಆಲೂಗಡ್ಡೆಯನ್ನು ಹಿಸುಕಿ, ಇದರಿಂದ ಕರಿ ಕೊಂಚ ದಪ್ಪಗಾಗುತ್ತದೆ

9. ಆಲೂ ಬಟಾಣಿ ಇಲ್ಲವೇ ಆಲೂ ಟರ್ ಕರಿ ಸವಿಯಲು ಸಿದ್ಧವಾಗಿದೆ.
Published by:Pavana HS
First published: