ಬೆಳಗ್ಗೆ (Morning) ಆದ್ರೆ ಹೆಣ್ಣು ಮಕ್ಕಳಿಗೆ (Women) ಬ್ರೇಕ್ ಫಾಸ್ಟ್ (Breakfast) ಮಾಡೋದೇ ದೊಡ್ಡ ತಲೆನೋವಾಗಿರುತ್ತೆ. ಇವತ್ತು ತಿಂಡಿಗೆ ಏನ್ ಮಾಡೋದು ಅನ್ನೋದೇ ಸಮಸ್ಯೆ. ನಿತ್ಯ ರೈಸ್ (Rice) ಐಟಂ ತಿಂದು ಮನೆ ಮಂದಿಗೆಲ್ಲಾ ಬೇಜಾರ್ ಆಗಿರುತ್ತೆ. ಚಪಾತಿ, (Chapati) ದೋಸೆ ಮಾಡಿದ್ರೆ ಅದಕ್ಕೆ ಏನ್ ಪಲ್ಯ ಅಥವಾ ಸಾಗು ಮಾಡೋದು ಅನ್ನೋ ಚಿಂತೆ ಮಹಿಳೆಯರಿಗೆ ಸಾಮಾನ್ಯವಾಗಿದೆ. ಬಾಯಲ್ಲಿ ನೀರೂರಿಸುವ ಬೆಂಡೆಕಾಯಿ ಮಸಾಲ ಮಾಡಿ. ತಿನ್ನಲು ಸಹ ರುಚಿಕರವಾಗಿರುತ್ತೆ. ಮಾಡೋದು ಸುಲಭ ಅನ್ನ, ಚಪಾತಿ ದೋಸೆ ಎಲ್ಲದಕ್ಕೂ ತಿನ್ನಬಹುದು.
ಬೇಕಾಗುವ ಸಾಮಾಗ್ರಿಗಳು
*ಬೆಂಡೆಕಾಯಿ - 1/2 ಕಿಲೊ (ಸಣ್ಣದಾಗಿ ಹೆಚ್ಚಿದ್ದು)
*ಈರುಳ್ಳಿ - 2 (ದೊಡ್ಡದು ಮತ್ತು ಸಣ್ಣದಾಗಿ ಹೆಚ್ಚಿದ್ದು)
*ಎಣ್ಣೆ - 1/2 ಚಮಚ
*ಟೊಮೆಟೊ - 2 ( ಸಣ್ಣದಾಗಿ ಹೆಚ್ಚಿದ್ದು)
*ಶುಂಠಿ - 1/2 ಚಮಚ (ಸಣ್ಣದಾಗಿ ಹೆಚ್ಚಿದ್ದು)
*ಬೆಳ್ಳುಳ್ಳಿ ಪೇಸ್ಟ್ - 1/2 ಚಮಚ
*ಉದ್ದಿನ ಬೇಳೆ - 1 ಚಮಚ
*ಮೆಣಸಿನ ಹುಡಿ - 1 ಚಮಚ
*ಸಾಸಿವೆ - 1/2 ಚಮಚ
*ಅರಿಶಿನ ಹುಡಿ - 1/2 ಚಮಚ
*ತುರಿದ ಕೊಬ್ಬರಿ - 1/2 ಚಮಚ
*ಗರಂ ಮಸಾಲಾ - 1 ಚಮಚ
*ಕರಿಬೇವು - 4-5
*ಅಮಚೂರ್ - 1/2 ಚಮಚ
*ಗೋಡಂಬಿ - 10 (ಹಾಲಿನಲ್ಲಿ ನೆನೆಸಿದ್ದು)
*ಕಸೂರಿ ಮೇಥಿ - 1/2 ಚಮಚ (ಹುಡಿ ಮಾಡಿದ್ದು)
* ದನಿಯಾ - 1 1/2 ಚಮಚ
*ಮೊಸರು - 1 ಕಪ್
*ಉಪ್ಪು ರುಚಿಗೆ ತಕ್ಕಷ್ಟು
*ನೀರು - 2 ಕಪ್ಗಳು
*ಇಂಗು - ಚಿಟಿಕೆಯಷ್ಟು
*ಜೀರಿಗೆ - 1/2 ಚಮಚ
ಮಾಡುವ ವಿಧಾನ
1. ಹಾಲಿನಲ್ಲಿ ನೆನೆಯಿಸಿದ ಗೋಡಂಬಿಯನ್ನು ಕೊಬ್ಬರಿಯೊಂದಿಗೆ ರುಬ್ಬಿಕೊಳ್ಳಿ
2. ಉಪ್ಪಿನಲ್ಲಿ ಬೆಂಡೆಕಾಯಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ
3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಬೆಂಡೆಕಾಯಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ ಟಿಶು ಪೇಪರ್ನಲ್ಲಿ ಅದನ್ನು ಇಡಿ ಇದರಿಂದ ಹೆಚ್ಚುವರಿ ಎಣ್ಣೆಯನ್ನು ಟಿಶು ಹೀರಿಕೊಳ್ಳುತ್ತದೆ
4. ಮತ್ತೊಮ್ಮೆ ಬಾಣಲೆಗೆ ಎಣ್ಣೆ ಸುರಿಯಿರಿ. ಮತ್ತು ಮೃದುವಾಗುವರೆಗೆ ಮತ್ತೊಮ್ಮೆ ಹುರಿಯಿರಿ. ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಜೀರಿಗೆಯೊಂದಿಗೆ ಒಗ್ಗರಣೆಯನ್ನು ಮಾಡಿ. ಮತ್ತು ಕಂದು ಬಣ್ಣ ಬರಲು ಹುರಿಯುತ್ತಿರಿ.
5. ಈರುಳ್ಳಿ ಮತ್ತು ಶುಂಠಿಯನ್ನು ಬಾಣಲೆಗೆ ಹಾಕಿ ಹುರಿಯಿರಿ. ಮೆಣಸಿನ ಹುಡಿ, ಅರಿಶಿನ, ಕೊತ್ತಂಬರಿ ಪುಡಿ, ಕಸೂರಿ ಮೇಥಿ, ಅಮೆಚೂರ್ ಹುಡಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಗರಂ ಮಸಾಲಾ ಹುಡಿಯನ್ನು ಬಾಣಲೆಗೆ ಹಾಕಿ ಮತ್ತು ಚೆನ್ನಾಗಿ ಫ್ರೈ ಮಾಡಿ.
6. ಇನ್ನು ಮಸಾಲೆಗೆ ಟೊಮೆಟೊವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈಗ ಗೋಡಂಬಿ ಮತ್ತು ತೆಂಗಿನ ಪೇಸ್ಟ್ ಅನ್ನು ಸೇರಿಸಿಕೊಳ್ಳಿ ಮತ್ತು ಮೊಸರನ್ನು ಬಾಣಲೆಗೆ ಹಾಕಿ.
7. ಬೆಂಡೆಕಾಯಿ ಹೋಳುಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದರಿಂದ ಮಸಾಲೆಯೊಂದಿಗೆ ಬೆಂಡೆಕಾಯಿ ಬೆರೆತುಕೊಳ್ಳುತ್ತದೆ. ಈಗ ನೀರು ಹಾಕಿ ಮತ್ತು ಬೇಯಲು ಬಿಡಿ.
8. ನಿಮ್ಮ ಕರಿಯ ಅಳತೆಯನ್ನು ನೋಡಿಕೊಳ್ಳಿ. ನಿಮಗೆ ನೀರು ಹೇಗೆ ಬೇಕೋ ಹಾಗೆ ಸೇರಿಸಿಕೊಳ್ಳಿ. ಚಪಾತಿ ಮತ್ತು ಅನ್ನದೊಂದಿಗೆ ಈ ಕರಿ ತುಂಬಾ ಚೆನ್ನಾಗಿದೆ.
ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ
ಮಶ್ರೂಮ್ ಪರೋಟ ಮಾಡಲು ಬೇಕಾದ ಸಾಮಾಗ್ರಿಗಳು:
ಗೋಧಿ ಹಿಟ್ಟು - 2 ಕಪ್ , ಮಶ್ರೂಮ್ಗಳು - 200 ಗ್ರಾಮ್ಸ್ , ಟೊಮೆಟೊ - 2 (ಹೆಚ್ಚಿದ್ದು), ಈರುಳ್ಳಿ - 1 (ಹೆಚ್ಚಿದ್ದು), ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್, ಮೆಣಸಿನಕಾಯಿ ಪುಡಿ - 1 ಸ್ಪೂನ್, ಗರಂ ಮಸಾಲಾ - ಸ್ವಲ್ಪ, ಎಣ್ಣೆ - 1 ಸ್ಪೂನ್, ನೀರು - 1 ಕಪ್
ಮಶ್ರೂಮ್ ಪರೋಟ ಮಾಡುವ ವಿಧಾನ:
1. ಮೊದಲು ಹಿಟ್ಟನ್ನು ತಯಾರು ಮಾಡಿಕೊಳ್ಳಬೇಕು. ಹಿಟ್ಟು ಸಿದ್ಧಮಾಡಿಕೊಳ್ಳುವಾಗ ಸ್ವಲ್ಪ ಉಪ್ಪು ಸೇರಿಸಿ. ಹಿಟ್ಟು ಸಿದ್ಧಗೊಳ್ಳುತ್ತಿದ್ದಂತೆ ಅದನ್ನು ಪಕ್ಕದಲ್ಲಿರಿಸಿ.
2. ಈಗ, ಪ್ಯಾನ್ನಲ್ಲಿ ಎಣ್ಣೆ ಇಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ, ಹೆಚ್ಚಿದ ಈರುಳ್ಳಿ ಸೇರಿಸಿ ಹಾಗೂ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.
3. ಇದೀಗ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಸ್ವಲ್ಪ ಮೆಣಸಿನ ಹುಡಿ ಹಾಕಿ. ಪೇಸ್ಟ್ನಂತೆ ಸಾಮಾಗ್ರಿಗಳನ್ನು ಹುರಿದುಕೊಳ್ಳಿ.
4. ಹೆಚ್ಚಿದ ಟೊಮೆಟೊವನ್ನು ಪ್ಯಾನ್ಗೆ ಹಾಕಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.
5. ಟೊಮೆಟೊ ಬೇಯುತ್ತಿದ್ದಂತೆ ಸಣ್ಣ ಗುಳ್ಳೆಗಳು ಬರಲಾರಂಭಿಸುತ್ತವೆ ಆಗ ಮಶ್ರೂಮ್ ಸೇರಿಸಿ.
6. ಉಳಿದ ಸಾಮಾಗ್ರಿಗಳೊಂದಿಗೆ ಮಶ್ರೂಮ್ ಅನ್ನು ತಿರುಗಿಸುತ್ತಿರಿ. ಬೇಯುತ್ತಿದ್ದಂತೆ ಅವು ಗಾತ್ರದಲ್ಲಿ ಸಣ್ಣದಾಗುತ್ತವೆ.
7. ಉಪ್ಪು ಸೇರಿಸಿ ಮತ್ತು ಮಶ್ರೂಮ್ಗಳನ್ನು ಚೆನ್ನಾಗಿ ತಿರುಗಿಸಿ.
8. ಮಶ್ರೂಮ್ ಬೇಯುತ್ತಿರುವಾಗ, ಗರಂ ಮಸಾಲಾವನ್ನು ಅದರ ಮೇಲೆ ಚಿಮುಕಿಸಿ ಮತ್ತು ಕೊನೆಯ ಬಾರಿಗೆ ಮತ್ತೊಮ್ಮೆ ತಿರುಗಿಸಿ.
ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ
ಫಿಲ್ಲಿಂಗ್ ಮಾಡುವ ವಿಧಾನ
ಫಿಲ್ಲಿಂಗ್ ಮಾಡಲು ಹಿಟ್ಟಿನಿಂದ ಸಣ್ಣ ಉಂಟೆಗಳನ್ನು ಮಾಡಿಕೊಳ್ಳಿ ಮತ್ತು ರೋಲರ್ ಬಳಸಿಕೊಂಡು ಅದನ್ನು ಚಪ್ಪಟೆಯಾಗಿ ಲಟ್ಟಿಸಿಕೊಳ್ಳಿ. ಮಶ್ರೂಮ್ ತುಂಬಿಸಿ ಪುನಃ ಉಂಡೆ ಮಾಡಿಕೊಳ್ಳಿ ಹಾಗೂ ಪುನಃ ಚಪ್ಪಟೆಯಾಗಿ ಲಟ್ಟಿಸಿಕೊಳ್ಳಿ. ಪರೋಟಾದ ಆಕಾರದಲ್ಲಿ ಫಿಲ್ಲಿಂಗ್ ಅನ್ನು ಲಟ್ಟಿಸಿಕೊಳ್ಳಿ.
ಪೂರ್ತಿ ಆದಾಗ, ಮಧ್ಯಮ ಉರಿಯಲ್ಲಿ ಪ್ಯಾನ್ನಲ್ಲಿ ಪರೋಟಾವನ್ನು ಬೇಯಿಸಿ. ಪರೋಟಾದ ಎರಡೂ ಬದಿ ಎಣ್ಣೆ ಸವರಿ. ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ್ದಂತೆ ನಿಮ್ಮ ಮಶ್ರೂಮ್ ಪರೋಟಾ ಸಿದ್ಧವಾಗಿದೆ ಎಂದರ್ಥ. ನಿಮ್ಮ ರುಚಿಕರವಾದ ಮಶ್ರೂಮ್ ಪರೋಟಾ ಸವಿಯಲು ಸಿದ್ಧವಾಗಿದೆ. ರಾಯಿತದೊಂದಿಗೆ ಬಿಸಿಯಾಗಿ ಸವಿಯಲು ನೀಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ