ಬೆಳಗಿನ ಬ್ರೇಕ್ ಫಾಸ್ಟ್ (BreakFast) ಯಾವಾಗಲೂ ರುಚಿಕರ ಹಾಗೂ ಪ್ರೊಟಿನ್ (Portion ) ಭರಿತವಾಗಿರಬೇಕು. ಮನೆಯಲ್ಲಿ ಮಕ್ಕಳು, ವಯಸ್ಸಾದವರು ಇದ್ರೆ ಅವರಿಗಾಗಿ ಬೆಳಗ್ಗೆ ಉತ್ತಮ ಆಹಾರವನ್ನೇ (Best Food) ನೀಡ್ಬೇಕು. ಮಹಿಳೆಯರಿಗೆ ಬೆಳಗ್ಗೆ ಎದ್ದ ತಕ್ಷಣ ಕಾಡುವ ಪ್ರಶ್ನೆ ಎಂದ್ರೆ ಏನು ತಿಂಡಿ ಮಾಡ್ಬೇಕು ಎಂದು ತರಕಾರಿ , ಧಾನ್ಯ ಹಾಕಿ ಹಲವು ಖಾದ್ಯಗಳನ್ನು ಮಾಡ್ಬೋದು. ಆರೋಗ್ಯಕ್ಕೆ ಉತ್ತಮವಾಗಿರೋ ಕಾಬೂಲ್ ಕಡಲೆ ಬಳಸಿ ಅಡುಗೆ ಮಾಡೋದು ಅನೇಕರಿಗೆ ತಿಳಿದಿಲ್ಲ. ಹೀಗಾಗಿ ನಾವು ಕಾಬೂಲ್ ಕಡಲೆ ಬಳಸಿ ಮಾಡೋದು ಹೇಗೆ ಎಂದು ತಿಳಿಸಿದುಕೊಳ್ಳಿ
ಅಗತ್ಯವಾದ ಪದಾರ್ಥಗಳು
*ಕಾಬೂಲ್ ಕಡಲೆ - 2 ಕಪ್ಗಳು (ಬೇಯಿಸಿರುವ)
*ಬಾಸುಮತಿ ಅಕ್ಕಿ - 2 ಕಪ್ಗಳು
*ತೆಂಗಿನ ಹಾಲು - 2 ಕಪ್ಗಳು
*ನೀರು- 1 1/2 ಕಪ್
*ಈರುಳ್ಳಿ - 2 (ಕತ್ತರಿಸಿದ್ದು)
*ಟೊಮೇಟೊ - 2 (ಕತ್ತರಿಸಿದ್ದು)
*ಮೆಣಸಿನ ಪುಡಿ - 1ಟೀ ಚಮಚ
*ಗರಂ ಮಸಾಲ - 1ಟೀ ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1ಟೀ ಚಮಚ
*ತುಪ್ಪ - 2 ಟೀ.ಚಮಚ
*ಎಣ್ಣೆ - 1 ಟೀ.ಚಮಚ
*ಮಸಾಲೆ - ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಅನಾನಸ್ ಹೂವು
ಮಸಾಲೆ ಪೇಸ್ಟ್ಗಾಗಿ
*ಸ್ವಲ್ಪ ಕೊತ್ತಂಬರಿ ಸೊಪ್ಪು- ಕತ್ತರಿಸಿದಂತಹುದು
*ಸ್ವಲ್ಪ ಪುದಿನಾ ಸೊಪ್ಪು- ಕತ್ತರಿಸಿದಂತಹುದು
*ತೆಂಗಿನಕಾಯಿ - 1 (ತುರಿದಂತಹುದು)
*ಬೆಳ್ಳುಳ್ಳಿ - 2 -3 ತುಣುಕುಗಳು
*ಚಿಕ್ಕ ಈರುಳ್ಳಿ - 4 -5
*ಹಸಿ ಮೆಣಸಿನ ಕಾಯಿ- 2
ತಯಾರಿಸುವ ವಿಧಾನ
1. ಪ್ರೆಶ್ಶರ್ ಕುಕ್ಕರಿನಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ.
2. ಇದು ಬಿಸಿಯಾದ ಮೇಲೆ ಇದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಅನಾನಸ್ ಹೂವು ಹಾಗು ಚಿಕ್ಕ ಈರುಳ್ಳಿಯನ್ನು ಹಾಕಿ ಉರಿದುಕೊಳ್ಳಿ. ಈರುಳ್ಳಿ ಹೊಂಬಣ್ಣಕ್ಕೆ ಬರಬೇಕು.
3. ಅದೇ ಸಮಯದಲ್ಲಿ ಕೊತ್ತಂಬಂರಿ, ಪುದಿನಾ, ಈರುಳ್ಳಿ, ತುರಿದ ತೆಂಗಿನಕಾಯಿ, ಹಸಿ ಮೆಣಸಿನ ಕಾಯಿಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ.
4. ಈರುಳ್ಳಿಯು ಹೊಂಬಣ್ಣಕ್ಕೆ ಬಂದ ಮೇಲೆ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಬೆರೆಸಿ. ಆಮೇಲೆ ಅದಕ್ಕೆ ಟೊಮೇಟೊ ಬೆರೆಸಿ, ನಂತರ ಈ ಪದಾರ್ಥಗಳನ್ನು ಹುರಿದುಕೊಳ್ಳಿ.
5. ಈಗ ಇದಕ್ಕೆ ಖಾರದ ಪುಡಿ, ಗರಂ ಮಸಾಲ ಪುಡಿ, ಉಪ್ಪು ಮತ್ತು ಬೇಯಿಸಿದ ಕಾಬೂಲ್ ಕಡಲೆಯನ್ನು ಹಾಕಿ ಕುಕ್ಕರಿನಲ್ಲಿ 3 ನಿಮಿಷ ಬೇಯಿಸಿ.
6. ಇನ್ನು 1 1/2 ಕಪ್ ನೀರನ್ನು ಬೆರೆಸಿ ಪ್ರೆಶ್ಶರ್ ಕುಕ್ಕರಿನಲ್ಲಿಡಿ.
7. ಕುಕ್ಕರಿನ ಮುಚ್ಚಳವನ್ನು ಮುಚ್ಚಿ, 2-3 ವಿಶಲ್ ಬರುವವರೆಗೆ ಒಲೆಯ ಮೇಲೆ ಇಡಿ.
ದಹಿ ತಡ್ಕಾ ಪಲಾವ್ ರೆಸಿಪಿ
ಬೇಕಾಗುವ ಸಾಮಾಗ್ರಿಗಳು
ಬಾಸುಮತಿ ಅಕ್ಕಿ ಅರ್ಧ ಕೆಜಿ
ಮೊಸರು ಕಾಲು ಲೀಟರ್ ಹಾಲು1 ಕಪ್ ಈರುಳ್ಳಿ 2 (ಕತ್ತರಿಸಿದ್ದು)
ಹಸಿ ಮೆಣಸಿನ ಕಾಯಿ 4
ಮಿಶ್ರ ತರಕಾರಿಗಳು 1 ಕಪ್ (ಆಲೂಗಡ್ಡೆ, ಬೀನ್ಸ್, ಬಟಾಣಿ, ಕ್ಯಾರೆಟ್)
ಕಾಳು ಮೆಣಸು 6
ಲವಂಗ 2 ಒಂದು
ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಏಲಕ್ಕಿ 2
ಸ್ವಲ್ಪ ಗೋಡಂಬಿ ಮತ್ತು ದ್ರಾಕ್ಷಿ
ಚಿಟಿಕೆಯಷ್ಟು ಕೇಸರಿ
ಹಳದಿ, ಕಿತ್ತಳೆ ಮಿಶ್ರಿತ ಕಲರ್ 1 ಚಮಚ
ರುಚಿಗೆ ತಕ್ಕ ಉಪ್ಪು
ತುಪ್ಪ 4 ಚಮಚ
ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಹೆಲ್ದಿ ಬೀಟ್ರೂಟ್ ಬಾತ್ ಮಾಡಿ
ದಹಿ ತಡ್ಕಾ ಪಲಾವ್ ತಯಾರಿಸುವ ವಿಧಾನ
* ಹೆಚ್ಚಿದ ತರಕಾರಿಯನ್ನು ಒಂದು ಪಾತ್ರೆಯಲ್ಲಿ ಹಾಕಿ,. ಉಪ್ಪು ಹಾಕಿ ಬೇಯಿಸಿ, ತುಂಬಾ ಬೇಯಿಸಿಬೇಡಿ. ನಂತರ ಅದರ ನೀರು ಬಸಿದು ತರಕಾರಿಯನ್ನು ಒಂದೆಡೆ ಇಡಿ
* ಈಗ ಪಾತ್ರೆಗೆ 1 ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಹುರಿದು ಒಂದು ಪಾತ್ರೆಯಲ್ಲಿ ಹಾಕಿಡಿ.
* ಈಗ ಅಕ್ಕಿಯನ್ನು ತೊಳೆದು ಕುಕ್ಕರ್ ನಲ್ಲಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಅನ್ನವನ್ನು ಅರ್ಧ ಬೇಯಿಸಿ ಅಂದ್ರೆ 80 ಪರ್ಸೆಂಟ್ ಬೇಯಿಸಿ. ನಂತರ ತಣ್ಣಗಾಗಲು ಇಡಿ. ನಂತರ ಅದನ್ನು ಮೂರು ಭಾಗ ಮಾಡಿ ಅದಕ್ಕೆ ಕೆಂಪು, ಹಳದಿ, ಕಿತ್ತಳೆ ಬಣ್ಣದ ಪುಡಿಯನ್ನು ಹಾಕಿ ಮಿಶ್ರಣ ಮಾಡಿಡಿ.
* ಈಗ ತುಪ್ಪವನ್ನು ಪಾತ್ರೆಯಲ್ಲಿ ಹಾಕಿ ಅದು ಬಿಸಿಯಾದಾಗ ಈರುಳ್ಳಿ ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ
* ನಂತರ ಚಕ್ಕೆ, ಲವಂಗ ಹಾಕಿ ಹುರಿದು ನಂತರ ಬೇಯಿಸಿದ ತರಕಾರಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ ನಂತರ ಮೊಸರು ಹಾಕಿ ಬಾಡಿಸಿಕೊಳ್ಳಿ ಜಾಸ್ತಿ ಹುರಿಯಬೇಡಿ ಸ್ಟವ್ ಆಫ್ ಮಾಡಿ.
ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹಾಗೂ ರುಚಿಕರ ಮೊಳಕೆ ಕಾಳಿನ ಬಾತ್
* ಈಗ ಪಲಾವ್ ಮಾಡುವ ಪಾತ್ರೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಸವರಿ. ಈಗ ಹಳದಿ ಅನ್ನವನ್ನು ಹಾಕಿ ಸ್ವಲ್ಪ ತರಕಾರಿ ಮತ್ತು ಮೊಸರು ಹಾಕಿ ಈ ರೀತಿ ಪದರ-ಪದರವಾಗಿ ಹಾಕಿ ನಂತರ ಉಳಿದ ತರಕಾರಿ ಮತ್ತು ನಟ್ಸ್ ಅನ್ನು ಮೇಲೆ ಹಾಕಿ, ಕೇಸರಿ ಹಾಕಿ ಅದರ ಮೇಲೆ ಹಾಲು ಹಾಕಿ ಪಾತ್ರೆಯನ್ನು ಪ್ಲೇಟ್ನಿಂದ ಮುಚ್ಚಿ, ಕಡಿಮೆ ಉರಿಯಲ್ಲಿ 15 ನಿಮಿಷ ಬೇಯಿಸಿದರೆ ರುಚಿ ರುಚಿಯಾದ ದಹಿ ತಡ್ಕಾ ಪಲಾವ್ ರೆಡಿ.
ದಿನ ಅದೇ ರೀತಿಯ ಪಲಾವ್ ಮಾಡಿ ತಿಂದು ಬೇಜಾರ್ ಆಗಿದ್ರೆ. ಬಿರಿಯಾನಿ ಶೈಲಿಯಲ್ಲಿ ಮಾಡುವ ದಹಿ ತಡ್ಕಾ ಪಲಾವ್ ಟ್ರೈ ಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ