Breakfast Recipe: ದೋಸೆ, ಚಪಾತಿಗೆ ಮಾಡಿ ರುಚಿಕರ ಬಟಾಣಿ ಕುರ್ಮ

ಚಪಾತಿ, ದೋಸೆ ಮಾಡಿದ್ರೆ ಅದಕ್ಕೆ ಏನ್​ ಪಲ್ಯ ಅಥವಾ ಸಾಗು ಮಾಡೋದು ಅನ್ನೋ ಚಿಂತೆ ಮಹಿಳೆಯರಿಗೆ ಸಾಮಾನ್ಯವಾಗಿದೆ. ಬಾಯಲ್ಲಿ ನೀರೂರಿಸುವ  ಬಟಾಣಿ ಕುರ್ಮ ಮಾಡಿ. ತಿನ್ನಲು ಸಹ ರುಚಿಕರವಾಗಿರುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗ್ಗೆ (Morning) ಆದ್ರೆ ಹೆಣ್ಣು ಮಕ್ಕಳಿಗೆ (Women) ಬ್ರೇಕ್​ ಫಾಸ್ಟ್ (Breakfast)​ ಮಾಡೋದೇ ದೊಡ್ಡ ತಲೆನೋವಾಗಿರುತ್ತೆ. ಇವತ್ತು ತಿಂಡಿಗೆ ಏನ್​ ಮಾಡೋದು ಅನ್ನೋದೇ ಸಮಸ್ಯೆ. ನಿತ್ಯ ರೈಸ್ (Rice) ಐಟಂ ತಿಂದು ಮನೆ ಮಂದಿಗೆಲ್ಲಾ ಬೇಜಾರ್​ ಆಗಿರುತ್ತೆ. ಚಪಾತಿ, (Chapati) ದೋಸೆ ಮಾಡಿದ್ರೆ ಅದಕ್ಕೆ ಏನ್​ ಪಲ್ಯ ಅಥವಾ ಸಾಗು ಮಾಡೋದು ಅನ್ನೋ ಚಿಂತೆ ಮಹಿಳೆಯರಿಗೆ ಸಾಮಾನ್ಯವಾಗಿದೆ. ಬಾಯಲ್ಲಿ ನೀರೂರಿಸುವ  ಬಟಾಣಿ ಕುರ್ಮ ಮಾಡಿ. ತಿನ್ನಲು ಸಹ ರುಚಿಕರವಾಗಿರುತ್ತೆ.  ಮಾಡೋದು ಸುಲಭ ಅನ್ನ, ಚಪಾತಿ ದೋಸೆ ಎಲ್ಲದಕ್ಕೂ ತಿನ್ನಬಹುದು.

ಬೇಕಾಗುವ ಸಾಮಾಗ್ರಿಗಳು

10 ಗಂಟೆ ನೆನೆಸಿದ ಬಟಾಣಿ – 2 ಕಪ್

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – 3 ದೊಡ್ಡ ಚಮಚ

ಚಕ್ಕೆ – 2 ಇಂಚು

ಏಲಕ್ಕಿ – 1

ಲವಂಗ – 4

ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ದೊಡ್ಡ ಚಮಚ

ಈರುಳ್ಳಿ – 1(ಸಣ್ಣಗೆ ಹೆಚ್ಚಿದ್ದು)

ಹಸಿ ಮೆಣಸಿನಕಾಯಿ – 2 (ಉದ್ದಕ್ಕೆ ಸೀಳಿದ್ದು)

ಈರುಳ್ಳಿ ಪೇಸ್ಟ್ – ಅರ್ಧ ಕಪ್

ಟೊಮೆಟೊ ಪೇಸ್ಟ್ – ಒಂದೂವರೆ ಕಪ್

ಕೊತ್ತಂಬರಿ ಬೀಜದ ಪುಡಿ – ಮುಕ್ಕಾಲು ಚಮಚ

ಜೀರಿಗೆ ಪುಡಿ – ಅರ್ಧ ಚಮಚ

ಅಚ್ಛ ಖಾರದಪುಡಿ – 1 ಚಮಚ

ಗರಂ ಮಸಾಲಾ – ಅರ್ಧ ಚಮಚ

ಅರಸಿನ ಪುಡಿ – ಅರ್ಧ ಚಮಚ

ಕಸೂರಿ ಮೇಥಿ – 1 ಚಮಚ

ನಿಂಬೆ ರಸ – 1 ಚಮಚ

ತುಪ್ಪ – 1 ಚಮಚ

ಕಾಶ್ಮೀರಿ ಅಚ್ಛ ಖಾರದಪುಡಿ – ಅರ್ಧ ಚಮಚ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

ಮಾಡುವ ವಿಧಾನ

ಕುಕ್ಕರಿಗೆ 2 ಕಪ್ ಆಗುವಷ್ಟು 10 ಗಂಟೆ ನೆನೆಸಿದ ಬಟಾಣಿ 1 ಚಮಚ ಉಪ್ಪು, ಮೂರುವರೆ ಕಪ್ ನೀರು ಹಾಕಿ ಕಲಕಿ, ಮುಚ್ಚಳ ಮುಚ್ಚಿ ದೊಡ್ಡ ಉರಿಯಲ್ಲಿ5 ಕೂಗು ಕೂಗಿಸಿ.

ಒಂದು ಬಾಣಲೆಗೆ3 ದೊಡ್ಡ ಚಮಚ ಎಣ್ಣೆ , 2 ಇಂಚು ಚಕ್ಕೆ, 1 ಏಲಕ್ಕಿ, 4 ಲವಂಗ, 1 ದೊಡ್ಡ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ.

ಇದಕ್ಕೆ 1ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ 2 ಉದ್ದಕ್ಕೆ ಸೀಳಿದ ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಅರ್ಧ ಕಪ್ ಈರುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಒಂದೂವರೆ ಕಪ್ ಟೊಮೆಟೊ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ.

ಈಗ ಇದಕ್ಕೆ ಮುಕ್ಕಾಲು ಚಮಚ ಕೊತ್ತಂಬರಿ ಬೀಜದ ಪುಡಿ, ಅರ್ಧ ಚಮಚ ಜೀರಿಗೆ ಪುಡಿ, 1 ಚಮಚ ಅಚ್ಛ ಖಾರದಪುಡಿ, ಅರ್ಧ ಚಮಚ ಗರಂ ಮಸಾಲಾ, ಅರ್ಧ ಚಮಚ ಅರಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ.

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 3 ನಿಮಿಷ ಬೇಯಿಸಿ. ಪುನಃ ಚೆನ್ನಾಗಿ ಕಲಸಿ, ಇದಕ್ಕೆ ಬೇಯಿಸಿದ ಬಿಳಿ ಕಡಲೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ.

ಬೇಕೆನಿಸಿದರೆ ಇದಕ್ಕೆ 1 ಕಪ್ ನೀರು ಹಾಕಿ ಕಲಸಿ, ಮುಚ್ಚಳ ಮುಚ್ಚಿಮಧ್ಯಮ ಉರಿಯಲ್ಲಿ 8  ರಿಂದ 10 ನಿಮಿಷ ಬೇಯಿಸಿ.

ಇದಕ್ಕೆ  1 ಚಮಚ ಕಸೂರಿ ಮೇಥಿಯನ್ನು ಕೈಯಿಂದ ಪುಡಿ ಮಾಡಿ ಹಾಕಿ, ಚೆನ್ನಾಗಿ ಕಲಸಿ.

ನಂತರ 1ಚಮಚ ನಿಂಬೆ ರಸ ಹಾಕಿ, ಚೆನ್ನಾಗಿ ಕಲಸಿ. ಈಗ ಚಿಕ್ಕ ಬಾಣಲೆಗೆ 1 ಚಮಚ ತುಪ್ಪ, ಅರ್ಧ ಚಮಚ ಕಾಶ್ಮೀರಿ ಅಚ್ಛ ಖಾರದಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಹುರಿಯಿರಿ. ಇದನ್ನು ಮಟರ್‍ ಚೋಲೆಗೆ ಹಾಕಿ, ಚೆನ್ನಾಗಿ ಕಲಸಿ.

ಈ ರುಚಿಯಾದ ಮಟರ್‍ ಚೋಲೆಯನ್ನು ಪೂರಿ ಜೊತೆ ಸವಿಯಿರಿ.
Published by:Pavana HS
First published: