ಇವತ್ತು ವೀಕೆಂಡ್ (Weekend) ಬೆಳಗಿನ ಉಪಹಾರಕ್ಕೆ (BreakFast) ಏನ್ ಮಾಡೋದು ಅಂತ ಚಿಂತೆ ಮಾಡ್ತಿದ್ದೀರಾ? ನಾನ್ ವೆಜ್ ಮಾಡಲು ಹೆಚ್ಚಿನ ಸಮಯ ಬೇಕು. ನಿತ್ಯ ರೈಸ್ (Rice) ತಿಂದು ಬೇಜಾರಾಗಿ ಚಪಾತಿ, ದೋಸೆ ಮಾಡ್ತಿದ್ರೆ. ಅದಕ್ಕೆ ರುಚಿಯಾಗಿ ಎಗ್ ಮಸಾಲ (Egg Masala) ಮಾಡಿ, ಎಗ್ ಮಸಾಲೆ ಫ್ರೈ ಮಾಡಿದರೆ ಕೋಳಿಮಾಂಸಕ್ಕಿಂತಲೂ ರುಚಿಕರವಾದ ಖಾದ್ಯವನ್ನು ಸವಿಯಬಹುದು. ಇದಕ್ಕಾಗಿ ಹೆಚ್ಚು ಅಲೆಯುವುದೂ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ಸುಲಭ ಸಾಮಾಗ್ರಿಗಳಿಂದ ಇದನ್ನು ತಯಾರಿಸಬಹುದು.
ಈ ಖಾದ್ಯದ ಉತ್ತಮ ಗುಣವೆಂದರೆ ಇದನ್ನು ಊಟಕ್ಕೂ ಮೊದಲು ಸ್ಟಾರ್ಟರ್ ಆಗಿ ಬಡಿಸಬಹುದು ಅಥವಾ ಅನ್ನ, ಚಪಾತಿಯೊಡನೆ ಬಡಿಸಬಹುದು. ಇದರೊಂದಿಗೆ ಇತರ ಪಾನೀಯಗಳೂ ಚೆನ್ನಾಗಿ ಒಪ್ಪುತ್ತವೆ. ಇದರ ರುಚಿ ಕಂಡವರು ಇದನ್ನು ಬರೆಯ ವಾರಾಂತ್ಯಕ್ಕೆ ಮಾತ್ರವಲ್ಲ, ವಾರದ ಎಲ್ಲಾ ದಿನವೂ ತಯಾರಿಸಿ ತಿನ್ನಲು ಮನಸ್ಸು ಮಾಡಬಹುದು. ಇದು ಆರೋಗ್ಯಕರವೂ, ಹಾಗೂ ಕಡಿಮೆ ಸಮಯದಲ್ಲಿ ತಯಾರಿಸುವಂತಹದ್ದೂ ಆಗಿರುವ ಕಾರಣ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಇಷ್ಟಪಡುವ ಪದಾರ್ಥವಾಗಿದೆ.
ಎಗ್ ಮಸಾಲ ಮಾಡಲು ಅಗತ್ಯವಿರುವ ಸಾಮಾಗ್ರಿಗಳು:
ಮೊಟ್ಟೆ (ಬೇಯಿಸಿದ್ದು) - 4 (ಚಿಕ್ಕದಾಗಿ ತುಂಡರಿಸಿದ್ದು)
ಈರುಳ್ಳಿ - 1 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
ಟೊಮೆಟೊ - 1 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
ಈರುಳ್ಳಿ - 1 ಕಪ್
ಹಸಿಮೆಣಸು - 5 ರಿಂದ 6
ಕೆಂಪು ಮೆಣಸಿನ ಪುಡಿ (ಬ್ಯಾಡಗಿ) - 1/2 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂದು ಚಿಕ್ಕ ಚಮಚ)
ಜೀರಿಗೆ ಪುಡಿ- 1/2 ಚಿಕ್ಕ ಚಮಚ
ಕೊತ್ತೊಂಬರಿ ಪುಡಿ - 1/2 ಚಿಕ್ಕ ಚಮಚ
ಬೆಳ್ಳುಳ್ಳಿ - 4 ರಿಂದ 5 ಎಸಳು
ಉಪ್ಪು - ರುಚಿಗನುಸಾರ
ಎಣ್ಣೆ -ಅಗತ್ಯಕ್ಕೆ ತಕ್ಕಂತೆ
ಕೊತ್ತಂಬರಿ ಸೊಪ್ಪು-ಅರ್ಧ ಕಟ್ಟು
ತಯಾರಿಸುವ ವಿಧಾನ:
1) ಮಿಕ್ಸಿಯ ದೊಡ್ಡ ಜಾರ್ನಲ್ಲಿ ಟೊಮೆಟೊ, ಬೆಳ್ಳುಳ್ಳಿ ಮತ್ತು ಕೊಂಚವೇ ನೀರು ಹಾಕಿ ಅರೆದು ನುಣ್ಣಗಾಗಿಸಿ.
2) ಒಂದು ದಪ್ಪತಳದ ಪಾತ್ರೆಯನ್ನು ಮಧ್ಯಮ ಉರಿಯ ಮೇಲಿರಿಸಿ ಕೊಂಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಈರುಳ್ಳಿ, ಹಸಿಮೆಣಸು ಹಾಕಿ ಈರುಳ್ಳಿ ಕೊಂಚ ಕಂದು ಬಣ್ಣ ಬರುವವರೆಗೆ ಹುರಿಯಿರಿ.
3) ಇದಕ್ಕೆ ಅರೆದ ಟೊಮೆಟೊ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಬಿಡದೇ ತಿರುವುತ್ತಾ ಇರಿ. ತಳ ಹಿಡಿಯಲು ಆಸ್ಪದ ನೀಡಬಾರದು. ತಳ ಕೊಂಚ ಹಿಡಿದರೂ ರುಚಿ ಕಹಿಯಾಗಿಬಿಡುತ್ತದೆ.
ಇದನ್ನೂ ಓದಿ: Quick Breakfast: ಈ 5 ಸೂಪರ್ ಫಾಸ್ಟ್ ರೆಸಿಪಿ ನೋಡಿ, 15 ನಿಮಿಷದಲ್ಲಿ ಬೆಳಗಿನ ತಿಂಡಿ ರೆಡಿಯಾಗುತ್ತೆ
4) ಇನ್ನು ಇದಕ್ಕೆ ಜೀರಿಗೆ ಪುಡಿ, ಕೆಂಪುಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ ಸೌಟು ಆಡಿಸಿ. ಸುಮಾರು ಅರ್ಧ ನಿಮಿಷದ ಬಳಿಕ ಮೊಟ್ಟೆಯ ತುಂಡುಗಳನ್ನು ಹಾಕಿ ಸತತವಾಗಿ ತಿರುವುತ್ತಿರಿ.
5) ಮೊಟ್ಟೆಯ ಕತ್ತರಿಸಿದ ಅಂಚುಗಳು ಕೊಂಚವೇ ಕಂದು ಬಣ್ಣ ಬರುತ್ತಿದ್ದಂತೆ ಕೆಳಗಿಸಿಳಿ. ಬಳಿಕ ಕೊತ್ತಂಬರಿ ಸೊಪ್ಪಿನ ದಂಟು ನಿವಾರಿಸಿ ಎಲೆಗಳಿಂದ ಅಲಂಕರಿಸಿ.
ಅನ್ನ, ಚಪಾತಿ, ರೊಟ್ಟಿ ಮೊದಲಾದವುಗಳೊಂದಿಗೆ ಬಡಿಸಿ.
ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ
ಚೀಸ್ ಆಮ್ಲೆಟ್ ತಯಾರಿಸುವ ವಿಧಾನ
* ಎಲ್ಲಾ ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿಬೇಕು.
* ಮೊಟ್ಟೆಯನ್ನು ಒಡೆದು ಅದನ್ನು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಕದಡಬೇಕು. ನಂತರ ಕತ್ತರಿಸಿದ ತರಕಾರಿ ಹಾಗೂ ಉಪ್ಪನ್ನು ಹಾಕಿ ಕದಡಬೇಕು.
* ತವಾವನ್ನು ಬಿಸಿ ಮಾಡಿ ಅದಕ್ಕೆ 1 ಚಮಚ ಎಣ್ಣೆ ಹಾಕಿ ನಂತರ ಕದಡಿದ ಮೊಟ್ಟೆಯನ್ನು ಹಾಕಬೇಕು, ಮೊಟ್ಟೆ ಸ್ವಲ್ಪ ಬೇಯುವಾಗ ಕರಿ ಮೆಣಸಿನ ಪುಡಿ ಉದುರಿಸಿ ಹಾಗೂ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ, ಆಮ್ಲೆಟ್ ಸ್ವಲ್ಪ ಬೇಯುವಾಗ ಚೀಸ್ ಅನ್ನು ಹಾಕಿ ಉರಿಯಿಂದ ಇಳಿಸಿದರೆ ರುಚಿಕರವಾದ ಆಮ್ಲೆಟ್ ರೆಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ