BreakFast Recipe: ಬೆಳಗಿನ ಉಪಹಾರಕ್ಕೆ ಮಕ್ಕಳಿಗಾಗಿ ಚೀಸ್ ಆಮ್ಲೆಟ್ ಮಾಡಿ

ಮೊಟ್ಟೆಯ ಆಮ್ಲೆಟ್ ಗೆ ಹಾಕುವ ಸಾಮಾಗ್ರಿಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದರೂ ರುಚಿಯಲ್ಲಿ ಭಿನ್ನವಾಗಿರುತ್ತದೆ. ಮಕ್ಕಳಿಗೆ ಇಷ್ಟವಾಗುವ ಚೀಸ್​ ಆಮ್ಲೆಟ್​ ಮಾಡಿಕೊಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಿನ ತಿಂಡಿಗೆ (BreakFast) ನಿತ್ಯ ಚಿತ್ರಾನ್ನ, ಇಡ್ಲಿ, ದೋಸೆ ತಿಂದು ಮಕ್ಕಳಿಗೂ ಬೋರ್​ ಆಗಿರುತ್ತೆ ಹೀಗಾಗಿ ಬ್ರೇಕ್​ಫಾಸ್ಟ್​ಗೆ ರುಚಿಕರ ಆಮ್ಲೆಟ್​ನನ್ನುಮಾಡಿಕೊಡಿ ಮಕ್ಕಳು ಸಹ ಇಷ್ಟಪಟ್ಟು ತಿನ್ನುತ್ತಾರೆ. ಮೊಟ್ಟೆಯಲ್ಲಿ ರಿಚ್​ ಪ್ರೋಟೀನ್​ (Protein) ಹೊಂದಿದೆ.  ಮೊಟ್ಟೆಯ ಆಮ್ಲೆಟ್ ಗೆ ಹಾಕುವ ಸಾಮಾಗ್ರಿಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದರೂ ರುಚಿಯಲ್ಲಿ ಭಿನ್ನವಾಗಿರುತ್ತದೆ. ಮೊಟ್ಟೆಗೆ (Egg) ಬರೀ ಉಪ್ಪು, ಮೆಣಸು, ಈರುಳ್ಳಿ ಹಾಕಿದರೆ ಒಂದು ರುಚಿ, ತರಕಾರಿ ಹಾಕಿದರೆ ಬೇರೆಯದೇ ರುಚಿ ದೊರೆಯುತ್ತದೆ. ಇಲ್ಲಿ ನಾವು ತರಕಾರಿ ಹಾಕಿ ತಯಾರಿಸುವ ಆಮ್ಲೆಟ್ (Omelette) ರೆಸಿಪಿ ನೀಡಿದ್ದೇವೆ. ಇದಕ್ಕೆ  ಚೀಸ್ (Cheese) ಕೂಡ ಹಾಕಿದ್ರೆ ಅದರ ರುಚಿಯೇ ಬದಲಾಗುತ್ತೆ.

ಬೇಕಾಗುವ ಸಾಮಾಗ್ರಿಗಳು

ಮೊಟ್ಟೆ 2-3

ಈರುಳ್ಳಿ 1

ಟೊಮೆಟೊ 1 (ದೊಡ್ಡದಾಗಿದ್ದರೆ ಅರ್ಧದಷ್ಟು)

ಹಸಿ ಮೆಣಸಿಕಾಯಿ 1

ಬೀನ್ಸ್ 1

ಕರಿ ಮೆಣಸಿನ ಪುಡಿ ಚಿಟಿಕೆಯಷ್ಟು

ಹಾಲು 1 ಚಮಚ

ಎಣ್ಣೆ 1 ಚಮಚ ಸ್ವಲ್ಪ

ಕೊತ್ತಂಬರಿ ಸೊಪ್ಪು

ಚೀಸ್ (ಬೇಕಿದ್ದರೆ)

ರುಚಿಗೆ ತಕ್ಕ ಉಪ್ಪು

ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

ತಯಾರಿಸುವ ವಿಧಾನ 

* ಎಲ್ಲಾ ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿಬೇಕು.

* ಮೊಟ್ಟೆಯನ್ನು ಒಡೆದು ಅದನ್ನು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಕದಡಬೇಕು. ನಂತರ ಕತ್ತರಿಸಿದ ತರಕಾರಿ ಹಾಗೂ ಉಪ್ಪನ್ನು ಹಾಕಿ ಕದಡಬೇಕು.

* ತವಾವನ್ನು ಬಿಸಿ ಮಾಡಿ ಅದಕ್ಕೆ 1 ಚಮಚ ಎಣ್ಣೆ ಹಾಕಿ ನಂತರ ಕದಡಿದ ಮೊಟ್ಟೆಯನ್ನು ಹಾಕಬೇಕು, ಮೊಟ್ಟೆ ಸ್ವಲ್ಪ ಬೇಯುವಾಗ ಕರಿ ಮೆಣಸಿನ ಪುಡಿ ಉದುರಿಸಿ ಹಾಗೂ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ, ಆಮ್ಲೆಟ್​  ಸ್ವಲ್ಪ ಬೇಯುವಾಗ ಚೀಸ್ ಅನ್ನು ಹಾಕಿ ಉರಿಯಿಂದ ಇಳಿಸಿದರೆ ರುಚಿಕರವಾದ ಆಮ್ಲೆಟ್​ ರೆಡಿ.

ಬೆಳಗಿನ ಉಪಹಾರಕ್ಕೆ ಎಗ್​ ರೋಲ್​ ಮಾಡಿ ​. ದಿನದ ಆರಂಭವನ್ನು ಮೊಟ್ಟೆಯಿಂದ ಮಾಡುವುದು ಆರೋಗ್ಯಕ್ಕೆ ಉತ್ತಮ. ಮೊಟ್ಟೆಯಿಂದ ದೊರೆಯುವ ನೈಸರ್ಗಿಕ ಶಕ್ತಿಯು ನಿಮ್ಮನ್ನು ದಿನವಿಡೀ ಆರೋಗ್ಯವಾಗಿರಲು (Healthy) ಸಹಾಯ ಮಾಡುತ್ತದೆ. ಮೊಟ್ಟೆಯನ್ನು ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ.

ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ- 2 (ಒಡೆದಿಟ್ಟುಕೊಳ್ಳಿ)


ಚೀಸ್- 8 ಸ್ಲೈಸ್

ಬ್ರೆಡ್- 8 ಸ್ಲೈಸ್

ಈರುಳ್ಳಿ- 1 (ಕತ್ತರಿಸಿಟ್ಟುಕೊಳ್ಳಿ)

ಜೋಳದ ಹಿಟ್ಟು- 2 ಟೀ ಚಮಚ

ಶುಂಠಿ- ಸ್ವಲ್ಪ

ಖಾರದ ಪುಡಿ- 1/2 ಟೀ ಚಮಚ

ಚಾಟ್ ಮಸಾಲ- 1/2 ಟೀ ಚಮಚ

ಬೆಣ್ಣೆ- 1 ಟೀ ಚಮಚ

ಎಣ್ಣೆ- 2 ಟೀ ಚಮಚ

ಲೆಟಿಸ್ ಎಲೆ- 4

ಮಾಡುವ ವಿಧಾನ

1. ಮೊದಲಿಗೆ ಲೆಟಿಸ್ ಎಲೆಗೆ ಬೆಣ್ಣೆ ಹಚ್ಚಿ ಒಂದು ಕಡೆ ಇಟ್ಟುಕೊಳ್ಳಿ.‘

2. ಒಂದು ಪಾತ್ರೆಯಲ್ಲಿ ಒಡೆದ ಮೊಟ್ಟೆಯನ್ನು ಹಾಕಿ ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿಯನ್ನು ಸೇರಿಸಿ.

3. ಇವೆಲ್ಲವನ್ನೂ ಚೆನ್ನಾಗಿ ಕಲಸಿದ ನಂತರ ಅದಕ್ಕೆ ಚಾಟ್ ಮಸಾಲ ಹಾಕಿ ಒಂದು ಹದ ಬರುವವರೆಗೆ ಕಲಸಿ ಕೊಳ್ಳಿ.

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

4. ಈಗ ಜೋಳದ ಹಿಟ್ಟನ್ನು ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ನೀರು ಸೇರಿಸಿ ಕಲಸಿಟ್ಟುಕೊಳ್ಳಿ.

5. ಪ್ರತಿ ಸ್ಲೇಸ್ ಬ್ರೇಡ್ಡಿನ ಮೇಲೆ ಚೀಸ್ ಸ್ಲೇಸ್ ಗಳನ್ನು ಇಡಿ.

6. ಈಗ ಮಾಡಿಟ್ಟಿರುವ ಮೊಟ್ಟೆ ಮತ್ತಿತರ ವಸ್ತುಗಳ ಮಿಶ್ರಣವನ್ನು ಈ ಬ್ರೆಡ್ ಸ್ಲೈಸ್ ಗಳ ಮೇಲಿಟ್ಟು ಜೋಳದ ಹಿಟ್ಟನ್ನು ಬಳಸಿ ರೋಲ್ ಮಾಡಿ.

7. ಹೀಗೆ ಮಾಡಿಟ್ಟುಕೊಂಡ ರೋಲ್ ಗಳನ್ನು ಬಾಣಲಿಯಲ್ಲಿ ಎಣ್ಣೆ ಕಾಯಿಸಿಕೊಂಡು ಮಂದ ಉರಿಯಲ್ಲಿಟ್ಟುಕೊಂಡು ರೋಲ್ ಗಳು ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.

8. ಕರಿದ ನಂತರ ಅದನ್ನು ಲೆಟಿಸ್ ಎಲೆಗಳೊಂದಿಗೆ ಸೇರಿಸಿಡಿ. ಎಗ್ ರೋಲ್ ಬಿಸಿಯಾಗಿದ್ದಾಗಲೇ ತಿನ್ನಬೇಕು. ಇದನ್ನು ಚಟ್ನಿ ಅಥವ ಟೊಮೊಟೊ ಸಾಸ್ ನೊಂದಿಗೆ ತಿನ್ನಲು ಹೆಚ್ಚು ರುಚಿಕರವಾಗಿರುತ್ತದೆ.
Published by:Pavana HS
First published: