Breakfast Recipe: ಬೆಳಗಿನ ಉಪಹಾರಕ್ಕೆ ಮಾಡಿ ಕ್ಯಾರೆಟ್ ರೈಸ್, ಸಖತ್ ಟೇಸ್ಟಿ

ಆರೋಗ್ಯಕ್ಕೆ ಕ್ಯಾರೆಟ್​ ಒಳ್ಳೆಯದು, ಮಕ್ಕಳ ಉತ್ತಮ ಬೆಳವಣಿಗೆಗೂ ಸಹಕಾರಿಯಾಗಿದೆ. ಮಕ್ಕಳಿಗೆ ಕ್ಯಾರೆಟ್​ ನೀಡುವುದರಿಂದ ಅವರಿಗೆ ಅಗತ್ಯವಾದ ಪೌಷ್ಠಿಕಾಂಶ ದೊರೆಯುತ್ತದೆ. ಹಾಗಾದ್ರೆ ಕ್ಯಾರೆಟ್​ ರೈಸ್​ನನ್ನು ಸರಳ ಹಾಗೂ ಸುಲಭವಾಗಿ ಹೇಗೆ ಮಾಡೋದು ಅನ್ನೋದನ್ನು ನೋಡೋಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಿನ ತಿಂಡಿ (BreakFast) ಹೇಗಿರಬೇಕು ಗೊತ್ತಾ? ಯಾವಾಗಲೂ ಮಸಾಲೆ (Masala) ಕಡಿಮೆ ಮಾಡಿ ಲೈಟ್​ ಆಗಿರೋ ಫುಡ್​ ಮಾಡಿ ಅದು ನಮಗೆ ದಿನವಿಡೀ ಉತ್ಸಾಹ ತುಂಬುತ್ತದೆ ಎಂದು  ತಜ್ಞರು ಹೇಳಿದ್ದಾರೆ.  ಬೆಳಗಿನ ಜಾವದ ತಿಂಡಿ ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ. ಆರೋಗ್ಯಕರ ಆಹಾರ (Healthy Food) ಹೆಚ್ಚಿನ ಚೈತನ್ಯ ತುಂಬುತ್ತದೆ.

ಬೆಳಗಿನ ಬ್ರೇಕ್‌ಫಾಸ್ಟ್ ರುಚಿಯಾಗಿರಬೇಕು. ಮಕ್ಕಳು ವಯಸ್ಸಾದವರಿಗೆ ತಿಂಡಿ ಪ್ರೋಟೀನ್​ ನಿಂದ ಕೂಡಿರಬೇಕು. ಇದಕ್ಕೆ ಕ್ಯಾರೆಟ್​ ರೈಸ್​ ಅತ್ಯುತ್ತಮವಾಗಿದೆ. ಮಕ್ಕಳ ಲಂಚ್​ ಬಾಕ್ಸಿಗೂ ನೀವು ಇದನ್ನೇ ಕೊಡಬಹುದು. ಮಧ್ಯಾಹ್ನ ಕೂಡ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಬೆಳಗಿನ ಉಪಹಾರ ರುಚಿಯಾಗಿದ್ರೆ ಮಕ್ಕಳು ಹಾಗೂ ಮನೆ ಮಂದಿಯಲ್ಲಾ ಇಡೀ ದಿನ ಖುಷಿಯಾಗಿರುತ್ತಾರೆ.

ಕ್ಯಾರೆಟ್ ರೈಸ್​ನನ್ನು ಸುಲಭವಾಗಿ ಮಾಡಬಹುದು.  ಸಮೃದ್ಧ ಪೋಷಕಾಂಶಗಳ ಆಗರವಾಗಿರುವ ಕ್ಯಾರೆಟ್‌ನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಅತಿ ಕಡಿಮೆ ಇರುವುದರಿಂದ ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದರ ಜೊತೆಗೆ ಹೃದ್ರೋಗವನ್ನು ನಿಯಂತ್ರಿಸುತ್ತದೆ. ಆರೋಗ್ಯಕ್ಕೆ ಕ್ಯಾರೆಟ್​ ಒಳ್ಳೆಯದು, ಮಕ್ಕಳ ಉತ್ತಮ ಬೆಳವಣಿಗೆಗೂ ಸಹಕಾರಿಯಾಗಿದೆ. ಮಕ್ಕಳಿಗೆ ಕ್ಯಾರೆಟ್​ ನೀಡುವುದರಿಂದ ಅವರಿಗೆ ಅಗತ್ಯವಾದ ಪೌಷ್ಠಿಕಾಂಶ ದೊರೆಯುತ್ತದೆ. ಹಾಗಾದ್ರೆ ಕ್ಯಾರೆಟ್​ ರೈಸ್​ನನ್ನು ಸರಳ ಹಾಗೂ ಸುಲಭವಾಗಿ ಹೇಗೆ ಮಾಡೋದು ಅನ್ನೋದನ್ನು ನೋಡೋಣ

ಬೇಕಾಗುವ ಪದಾರ್ಥಗಳು

*ಅನ್ನ- 2 ಕಪ್

*ಕ್ಯಾರೆಟ್‍ಗಳು- 4-5 (ಉದ್ದುದ್ದಕ್ಕೆ ಕತ್ತರಿಸಿರಬೇಕು)

*ಈರುಳ್ಳಿಗಳು - 2 (ಕತ್ತರಿಸಿದ್ದು)

*ದಪ್ಪ ಮೆಣಸಿನ ಕಾಯಿ - 1 (ಕತ್ತರಿಸಿದ್ದು)

*ಹಸಿ ಮೆಣಸಿನ ಕಾಯಿ- 3-4 (ಕತ್ತರಿಸಿದ್ದು)

*ಬೆಳ್ಳುಳ್ಳಿ - 3

*ಶುಂಠಿ -  ಅರ್ಧ ಇಂಚು (ಸಣ್ಣಗೆ ಕತ್ತರಿಸಿದ್ದು)

*ಅರಿಶಿನ ಪುಡಿ- 1 ಟೀ ಚಮಚ

*ಖಾರದ ಪುಡಿ - 1 ಟೀ ಚಮಚ

*ಪಲಾವ್ ಮಸಾಲ - ಅರ್ಧ ಟೀ.ಚಮಚ

*ಕರಿ ಮೆಣಸು - ಅರ್ಧ ಟೀ.ಚಮಚ (ಪುಡಿ ಮಾಡಿದಂತಹುದು)

*ಜೀರಿಗೆ - ಅರ್ಧ ಟೀ.ಚಮಚ

*ಉಪ್ಪು - ರುಚಿಗೆ ತಕ್ಕಷ್ಟು

*ಎಣ್ಣೆ- 2 ಟೀ.ಚಮಚ

*ಕೊತ್ತಂಬರಿ ಸೊಪ್ಪು - 1 ಟೀ ಚಮಚ (ಕತ್ತರಿಸಿದ್ದು)

ಇದನ್ನೂ ಓದಿ: Recipe: ಮಳೆಗಾಲಕ್ಕೆ 2 ಬಗೆಯ ಬಿಸಿ ಬಿಸಿ ರಸಂ ಮಾಡಿ; ಶೀತ, ಕೆಮ್ಮಿಗೂ ಇದೆ ರಾಮಬಾಣ

ಮಾಡುವ ವಿಧಾನ

*ಆಳವಾದ ತಳವಿರುವ ಬಾಣಲೆಯನ್ನು ತೆಗೆದುಕೊಂಡು ಎಣ್ಣೆಯನ್ನು ಕಾಯಿಸಿ, ಅದು ಹಬೆಯಾಡಲು ಆರಂಭಿಸಿದಾಗ ಅದಕ್ಕೆ ಜೀರಿಗೆ ಹಾಕಿ ಸೌಟು ಆಡಿಸಿ, ನಂತರ ಈರುಳ್ಳಿಯನ್ನು ಹಾಕಿ, ಅದು ಕೆಂಪಾಗುವವರೆಗೆ ಚೆನ್ನಾಗಿ ಹುರಿಯಿರಿ

* ಒಮ್ಮೆ ಈರುಳ್ಳಿ ಕೆಂಪು ಬಣ್ಣಕ್ಕೆ ತಿರುಗಿದ ನಂತರ, ಶುಂಠಿ, ಬೆಳ್ಳುಳ್ಳಿ, ಕ್ಯಾರೆಟ್ ಮತ್ತು ದಪ್ಪ ಮೆಣಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ,

*ಇಷ್ಟೆಲ್ಲಾ ಆದ ನಂತರ ಅದಕ್ಕೆ ರುಚಿಗಷ್ಟು ಉಪ್ಪು ಮತ್ತು ಅರಿಶಿನ ಪುಡಿಯನ್ನು ಚಿಮುಕಿಸಿ.

* ಇನ್ನು ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು 4-5 ನಿಮಿಷಗಳ ಕಾಲ ಚೆನ್ನಾಗಿ ತಿರುಗಿಸುತ್ತಿರಿ. ಈ ತರಕಾರಿಗಳು ಸ್ವಲ್ಪ ಮೃದುವಾಗುವವರೆಗೂ ಇದನ್ನು ಮುಂದುವರಿಸಿ.

*ಈಗ ಇದಕ್ಕೆ ಮಸಾಲೆಯನ್ನು ಬೆರೆಸಿ, ಅಂದರೆ ಕರಿಮೆಣಸು, ಖಾರದ ಪುಡಿ, ಪಲಾವ್ ಮಸಾಲೆ, ಹಾಗು ಹಸಿ ಮೆಣಸಿನ ಕಾಯಿಗಳನ್ನು ಬೆರೆಸಿ, ಚೆನ್ನಾಗಿ ಕಲೆಸಿ ಕೊಡಿ.

*ಇದಕ್ಕೆ ನಿಧಾನವಾಗಿ ಅನ್ನವನ್ನು ಬೆರೆಸಿ ಮತ್ತು ಮಸಾಲೆಯು ಸಂಪೂರ್ಣವಾಗಿ ಬೆರೆಸಲಾಗಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

*ತದನಂತರ ಇದನ್ನು ಮಧ್ಯಮ ಗಾತ್ರದ ಉರಿಯ ಮೇಲೆ ಸ್ವಲ್ಪ ಹೊತ್ತು ಇಡಿ.

*ಕ್ಯಾರೆಟ್ ರೈಸ್  ರೆಸಿಪಿ ಈಗ ಬಡಿಸಲು ಸಿದ್ಧವಾಗಿದೆ,  ಇದರ ಮೇಲೆ ಅಲಂಕಾರಕ್ಕಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ರಾಯಿತ ಅಥವಾ ಸಲಾಡ್ ಜೊತೆಗೆ ಬಿಸಿ ಬಿಸಿಯಾಗಿ ಬಡಿಸಿಕೊಳ್ಳಿ.
Published by:Pavana HS
First published: