ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕಾದ ಅತ್ಯುತ್ತಮ ಸಾಮಾಗ್ರಿಗಳಲ್ಲಿ ಮೊಟ್ಟೆ (Egg) ಕೂಡ ಒಂದಾಗಿದೆ. ನಿಮ್ಮ ದಿನವನ್ನು ಮೊಟ್ಟೆ ಸೇವಿಸುವುದರೊಂದಿಗೆ ಪ್ರಾರಂಭಿಸಿದರೆ ನೀವು ದಿನಪೂರ್ತಿ ಚಟುವಟಿಕೆಯಿಂದ ಕೂಡಿರುತ್ತೀರಿ. ಮಕ್ಕಳಿಗೂ (Children) ಇದು ಇಷ್ಟವಾದ ಖಾದ್ಯವಾಗಿದೆ, (Dishes) ಆದ್ದರಿಂದ ತಮ್ಮ ಊಟದಲ್ಲಿ ಪ್ರತಿಯೊಬ್ಬರೂ ಸೇರಿಸಿಕೊಳ್ಳಲೇಬೇಕಾದ ಖಾದ್ಯ ಮೊಟ್ಟೆಯಾಗಿದೆ. ಮೊಟ್ಟೆಯ ಬಿಳಿ ಮತ್ತು ಹಳದಿ ಬಣ್ಣದ ಲೋಳೆಯು ಪೋಷಕಾಂಶಗಳಿಂದ ಕೂಡಿದ್ದು, ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ. (Healthy) ಇಲ್ಲಿ ನಾವು ನೀಡುತ್ತಿರುವ ರೆಸಿಪಿ ಪೋಷಕಾಂಶಗಳಿಂದ ಭರಿತವಾದ ನಿಮ್ಮ ಬೆಳಗಿನ ಉಪಹಾರಕ್ಕೆ (BreakFast) ಹೇಳಿ ಮಾಡಿಸಿದ ಕ್ಯಾಪ್ಸಿಕಂ ಆಮ್ಲೆಟ್ ಆಗಿದೆ.
ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ - 3
ಈರುಳ್ಳಿ - 2 (ಕತ್ತರಿಸಿದ್ದು)
ಟೊಮೆಟೊ - 2 (ಕತ್ತರಿಸಿದ್ದು)
ಹಸಿಮೆಣಸು - 2 (ತುಂಡರಿಸಿದ್ದು)
ಕ್ಯಾಪ್ಸಿಕಂ - 1 (ಕತ್ತರಿಸಿದ್ದು)
ಕರಿಬೇವಿನ ಎಲೆ - 2 ಟೀ ಸ್ಪೂನ್
ಕೇಸರಿ - 1 ಎಸಳು
ಮೆಣಸಿನ ಹುಡಿ - 1/2 ಟೀ ಸ್ಪೂನ್
ಕಾಳುಮೆಣಸಿನ ಪುಡಿ - 1 ಟೀ ಸ್ಪೂನ್
ಗರಂ ಮಸಾಲಾ ಪುಡಿ - 1/2 ಟೀ ಸ್ಪೂನ್
ಎಣ್ಣೆ ಕರಿಯಲು ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
1. ಮೊದಲು ಈರುಳ್ಳಿಯ ಸಿಪ್ಪೆ ತೆಗೆದು ಅದನ್ನು ಕತ್ತರಿಸಿಟ್ಟುಕೊಳ್ಳಿ. ಟೊಮೆಟೊ ಮತ್ತು ಹಸಿಮೆಣಸಿನ ಕಾಯಿಯನ್ನು ತುಂಡರಿಸಿಟ್ಟುಕೊಳ್ಳಿ, ಹಾಗೂ ಕ್ಯಾಪ್ಸಿಕಂ ಮತ್ತು ಕರಿಬೇವಿನ ಎಲೆಯನ್ನು ಕತ್ತರಿಸಿಟ್ಟುಕೊಳ್ಳಿ.
2. ಸಣ್ಣ ಬಾಣಲೆಯನ್ನು ತೆಗೆದುಕೊಳ್ಳಿ, ಅದಕ್ಕೆ ಅರಶಿನ ಹುಡಿ ಹಾಕಿ, ಹಾಗೂ ಉಪ್ಪು, ಮೆಣಸಿನ ಹುಡಿ, ಮತ್ತು ಕಾಳುಮೆಣಸಿನ ಹುಡಿಯನ್ನು ಸೇರಿಸಿ. ಗರಂ ಮಸಾಲಾ ಹುಡಿಯನ್ನು ಹಾಕಿ ಎಲ್ಲಾವನ್ನೂ ಮಿಶ್ರ ಮಾಡಿಕೊಳ್ಳಿ.
3. ಈ ಮಿಶ್ರಣಕ್ಕೆ, ಸ್ವಲ್ಪ ನೀರನ್ನು ಹಾಕಿ, ನಂತರ ಮಿಶ್ರಣವನ್ನು ಪೇಸ್ಟ್ ಮಾಡಿಕೊಳ್ಳಿ.
4. ಪೇಸ್ಟ್ ಸಿದ್ಧಗೊಂಡ ನಂತರ, ಬ್ಲೆಂಡರ್ ಅನ್ನು ಬಳಸಿಕೊಂಡು ಮೊಟ್ಟೆಯನ್ನು ಒಡೆಯಿರಿ, ಈ ಮಿಶ್ರಣಗಳೊಂದಿಗೆ ಅದನ್ನು ಮಿಶ್ರ ಮಾಡಿಕೊಳ್ಳಿ.
5. ಮೊಟ್ಟೆ ಮಿಶ್ರಣ ಸ್ವಲ್ಪ ದಪ್ಪಗಾದ ನಂತರ ಇದಕ್ಕೆ ತುಂಡರಿಸಿದ ತರಕಾರಿಗಳನ್ನು ಹಾಕಿ ನಂತರ 10-15 ನಿಮಿಷಗಳಷ್ಟು ಕಾಲ ಮಿಶ್ರ ಮಾಡಿ.
ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ
6. ಸಣ್ಣ ಉರಿಯಲ್ಲಿ ತವಾ ಬಿಸಿ ಮಾಡಿಕೊಂಡು ಅದಕ್ಕೆ ಎಣ್ಣೆ ಹಾಕಿ. ಅದು ಕಾದ ನಂತರ ಈ ಆಮ್ಲೆಟ್ ಮಿಶ್ರಣವನ್ನು ಹಾಕಿ. ಈ ಮಿಶ್ರಣವನ್ನು ತವಾದ ಸುತ್ತಲೂ ಹಾಕಿ.
7. ತದನಂತರ ಮಿಶ್ರಣ ಕಂದು ಬಣ್ಣಕ್ಕೆ ಬರುವವರೆಗೆ ತವಾದಲ್ಲಿ ಅದನ್ನು ಹುರಿಯಿರಿ.
ನಿಮ್ಮ ಕ್ಯಾಪ್ಸಿಕಂ ಆಮ್ಲೆಟ್ ಸವಿಯಲು ಸಿದ್ಧವಾಗಿದೆ. ಈ ಆಮ್ಲೆಟ್ ರೆಸಿಪಿಯನ್ನು ಬ್ರೆಡ್ ಟೋಸ್ಟ್ನೊಂದಿಗೆ ಸವಿಯಿರಿ.'
ಮತ್ತೊಂದು ಡಿಶ್- ಎಗ್ ರೋಲ್ ಮಾಡುವ ವಿಧಾನ
ಬೇಕಾಗುವ ಸಾಮಾಗ್ರಿಗಳು
1ಮೊಟ್ಟೆ- 2 (ಒಡೆದಿಟ್ಟುಕೊಳ್ಳಿ)
ಚೀಸ್- 8 ಸ್ಲೈಸ್
ಬ್ರೆಡ್- 8 ಸ್ಲೈಸ್
ಈರುಳ್ಳಿ- 1 (ಕತ್ತರಿಸಿಟ್ಟುಕೊಳ್ಳಿ)
ಜೋಳದ ಹಿಟ್ಟು- 2 ಟೀ ಚಮಚ
ಶುಂಠಿ- ಸ್ವಲ್ಪ
ಖಾರದ ಪುಡಿ- 1/2 ಟೀ ಚಮಚ
ಚಾಟ್ ಮಸಾಲ- 1/2 ಟೀ ಚಮಚ
ಬೆಣ್ಣೆ- 1 ಟೀ ಚಮಚ
ಎಣ್ಣೆ- 2 ಟೀ ಚಮಚ
ಲೆಟಿಸ್ ಎಲೆ- 4
ಮಾಡುವ ವಿಧಾನ
1. ಮೊದಲಿಗೆ ಲೆಟಿಸ್ ಎಲೆಗೆ ಬೆಣ್ಣೆ ಹಚ್ಚಿ ಒಂದು ಕಡೆ ಇಟ್ಟುಕೊಳ್ಳಿ.‘
2. ಒಂದು ಪಾತ್ರೆಯಲ್ಲಿ ಒಡೆದ ಮೊಟ್ಟೆಯನ್ನು ಹಾಕಿ ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿಯನ್ನು ಸೇರಿಸಿ.
3. ಇವೆಲ್ಲವನ್ನೂ ಚೆನ್ನಾಗಿ ಕಲಸಿದ ನಂತರ ಅದಕ್ಕೆ ಚಾಟ್ ಮಸಾಲ ಹಾಕಿ ಒಂದು ಹದ ಬರುವವರೆಗೆ ಕಲಸಿ ಕೊಳ್ಳಿ.
4. ಈಗ ಜೋಳದ ಹಿಟ್ಟನ್ನು ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ನೀರು ಸೇರಿಸಿ ಕಲಸಿಟ್ಟುಕೊಳ್ಳಿ.
ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ
5. ಪ್ರತಿ ಸ್ಲೇಸ್ ಬ್ರೇಡ್ಡಿನ ಮೇಲೆ ಚೀಸ್ ಸ್ಲೇಸ್ ಗಳನ್ನು ಇಡಿ.
6. ಈಗ ಮಾಡಿಟ್ಟಿರುವ ಮೊಟ್ಟೆ ಮತ್ತಿತರ ವಸ್ತುಗಳ ಮಿಶ್ರಣವನ್ನು ಈ ಬ್ರೆಡ್ ಸ್ಲೈಸ್ ಗಳ ಮೇಲಿಟ್ಟು ಜೋಳದ ಹಿಟ್ಟನ್ನು ಬಳಸಿ ರೋಲ್ ಮಾಡಿ.
7. ಹೀಗೆ ಮಾಡಿಟ್ಟುಕೊಂಡ ರೋಲ್ ಗಳನ್ನು ಬಾಣಲಿಯಲ್ಲಿ ಎಣ್ಣೆ ಕಾಯಿಸಿಕೊಂಡು ಮಂದ ಉರಿಯಲ್ಲಿಟ್ಟುಕೊಂಡು ರೋಲ್ ಗಳು ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.
8. ಕರಿದ ನಂತರ ಅದನ್ನು ಲೆಟಿಸ್ ಎಲೆಗಳೊಂದಿಗೆ ಸೇರಿಸಿಡಿ. ಎಗ್ ರೋಲ್ ಬಿಸಿಯಾಗಿದ್ದಾಗಲೇ ತಿನ್ನಬೇಕು. ಇದನ್ನು ಚಟ್ನಿ ಅಥವ ಟೊಮೊಟೊ ಸಾಸ್ ನೊಂದಿಗೆ ತಿನ್ನಲು ಹೆಚ್ಚು ರುಚಿಕರವಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ