BreakFast Recipe: ಬೆಳಗಿನ ಉಪಹಾರಕ್ಕೆ ಎಲೆಕೋಸಿನಿಂದ ಮಾಡಿ ಹೆಲ್ದಿ ದೋಸೆ

ಕ್ಯಾಬೇಜ್ ನಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಉತ್ತಮವಾಗಿರುತ್ತದೆ. ಆದ್ದರಿಂದ ಇದರ ದೋಸೆಯನ್ನು ನಿಮ್ಮ ಬೆಳಗಿನ ಉಪಹಾರದಲ್ಲಿ ಸೇರಿಸಿಕೊಳ್ಳುವುದರಿಂದ, ನಿಮಗೆ ಸಾಕಷ್ಟು ಉತ್ತಮವಾದ ಪೋಷಕಾಂಶಗಳು ಲಭ್ಯವಾಗುತ್ತವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಎಲೆಕೋಸು (Cabbage) ಅಥವಾ ಕ್ಯಾಬೇಜನ್ನು ಪಲ್ಯ, ಪಕೋಡಾ ಮಾಡಲು ಬಳಕೆ ಮಾಡುತ್ತೇವೆ. ಆದರೆ ಇದರಿಂದ ದೋಸೆ (Dosa) ತಯಾರಿಸುವವರ ಸಂಖ್ಯೆ ತೀರಾ ಕಡಿಮೆ. ಅದಕ್ಕಾಗಿ ನಾವಿಂದ ಕ್ಯಾಬೇಜ್ ನಿಂದ ಬಿಸಿಬಿಸಿ ದೋಸೆ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡ್ತೀವಿ. ಕ್ಯಾಬೇಜ್ ನಲ್ಲಿ ಫೈಬರ್ (Fiber) ಅಂಶ ಹೆಚ್ಚಿರುವುದರಿಂದ ನಿಮ್ಮ ಜೀರ್ಣಕ್ರಿಯೆಗೆ (Digestion) ಉತ್ತಮವಾಗಿರುತ್ತದೆ. ಆದ್ದರಿಂದ ಇದರ ದೋಸೆಯನ್ನು ನಿಮ್ಮ ಬೆಳಗಿನ ಉಪಹಾರದಲ್ಲಿ ಸೇರಿಸಿಕೊಳ್ಳುವುದರಿಂದ, ನಿಮಗೆ ಸಾಕಷ್ಟು ಉತ್ತಮವಾದ ಪೋಷಕಾಂಶಗಳು ಲಭ್ಯವಾಗುತ್ತವೆ. ಹಾಗಾದ್ರೆ ಬನ್ನಿ ಕ್ಯಾಬೇಜ್ ದೋಸೆ ಮಾಡುವ ವಿಧಾನವನ್ನು ನೋಡಿಕೊಂಡು ಬರೋಣ.

ಬೇಕಾಗುವ ಸಾಮಾಗ್ರಿಗಳು:

1 ಕಪ್ ಅಕ್ಕಿ

2 ಚಮಚ ಉದ್ದಿನ ಬೇಳೆ

ಳಿ ಟೀ ಸ್ಪೂನ್ ಮೆಂತ್ಯೆ

10 ಒಣ ಮೆಣಸಿನಕಾಯಿ

1 ಕಪ್ ತೆಂಗಿನಕಾಯಿ

2 ಟೀಸ್ಪೂನ್ ಕೊತ್ತಂಬರಿ ಬೀಜ

1 ಚಮಚ ಜೀರಿಗೆ

¼ ಕಪ್ ಬೆಲ್ಲ

3 ಚಮಚ ಹುಣಸೆಹಣ್ಣಿನ ತಿರುಳು

ಅರ್ಧ ಟೀಸ್ಪೂನ್ ಅರಿಶಿನ

1 ಟೀ ಸ್ಪೂನ್ ಉಪ್ಪು

3 ಕಪ್ ಎಲೆಕೋಸು (ನುಣ್ಣಗೆ ಕತ್ತರಿಸಿದ)

1 ಕಪ್ ನೀರು

ತಯಾರಿಸುವ ವಿಧಾನ:

ಮೊದಲನೆಯದಾಗಿ, ಒಂದು ದೊಡ್ಡ ಬಟ್ಟಲಿನಲ್ಲಿ 1 ಕಪ್ ಅಕ್ಕಿ, 2 ಟೀ ಸ್ಪೂನ್ ಉದ್ದಿನ ಬೇಳೆ ಮತ್ತು ಳಿ ಟೀಸ್ಪೂನ್ ಮೆಂತ್ಯೆ ತೆಗೆದುಕೊಂಡು, ಚೆನ್ನಾಗಿ ತೊಳೆದು, 10 ಒಣ ಮೆಣಸಿನಕಾಯಿ ಸೇರಿಸಿ, 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.

5 ಗಂಟೆಗಳ ನಂತರ, ಮೆಣಸಿನಕಾಯಿ ಚೆನ್ನಾಗಿ ನೆನೆದಿರುತ್ತದೆ.

ಪೇಸ್ಟ್ ತಯಾರಿಸಲು, ಈಗ ನೆನೆಸಿದ ಮೆಣಸಿನಕಾಯಿಯನ್ನು ಮಿಕ್ಸಿ ಜಾರ್ ಗೆ ಹಾಕಿ, 1 ಕಪ್ ತೆಂಗಿನಕಾಯಿ, 2 ಚಮಚ ಕೊತ್ತಂಬರಿ ಬೀಜ, 1 ಚಮಚ ಜೀರಿಗೆ, ¼ ಕಪ್ ಬೆಲ್ಲ, 3 ಸ್ವಲ್ಪ ಹುಣಸೆಹಣ್ಣಿನ ತಿರುಳು, ಳಿ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ, ಅಗತ್ಯವಿರುವಷ್ಟು ನೀರನ್ನು ಸೇರಿಸಿ ನೈಸ್ ಆಗಿ ಪೇಸ್ಟ್ ಮಾಡಿ.

ಮಸಾಲಾ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ, ಪಕ್ಕಕ್ಕೆ ಇಡಿ.

ಅದೇ ಮಿಕ್ಸಿಗೆ ನೆನೆಸಿದ ಅಕ್ಕಿಯನ್ನು ಹಾಕಿ, ಚೆನ್ನಾಗಿ ಪೇಸ್ಟ್ ಮಾಡಿ, ಅಕ್ಕಿ ಹಿಟ್ಟನ್ನು ಮಸಾಲೆಯ ಪೇಸ್ಟ್‌ನ ಅದೇ ಬಟ್ಟಲಿಗೆ ಹಾಕಿ.

ಈಗ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಗಮನಿಸಿ, ಯಾವಾಗಲೂ ಅಕ್ಕಿ ಮತ್ತು ಮಸಾಲೆಯನ್ನು ಪ್ರತ್ಯೇಕವಾಗಿ ರುಬ್ಬಿಕೊಳ್ಳಿ, ಇಲ್ಲದಿದ್ದರೆ ಮಸಾಲೆ ಸರಿಯಾಗಿ ಗ್ರೈಂಡ್ ಆಗುವುದಿಲ್ಲ.

ಮುಂದೆ, ಈ ಮಿಶ್ರಣಕ್ಕೆ 3 ಕಪ್ ಎಲೆಕೋಸು ಅಥವಾ ಕ್ಯಾಬೇಜ್ ಮತ್ತು 1 ಕಪ್ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ದೋಸೆ ಹಿಟ್ಟಿನ ಹದಕ್ಕೆ ರೆಡಿಮಾಡಿಕೊಳ್ಳಿ.

ಪ್ಯಾನ್‌ಗೆ ಎಣ್ಣೆ ಹಾಕಿ, ಹಿಟ್ಟನ್ನು ಸುರಿದು, ನಿಧಾನವಾಗಿ ಹರಡಿ, ಅದರ ಮೇಲೆ 1 ಟೀಸ್ಪೂನ್ ತೆಂಗಿನ ಎಣ್ಣೆಯನ್ನು ಹಾಕಿ.

ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

ದೋಸೆ ಚೆನ್ನಾಗಿ ಬೇಯುವವರೆಗೆ ಮುಚ್ಚಿಟ್ಟು ಬೇಯಿಸಿ. ಒಂದು ನಿಮಿಷದ ನಂತರ ತಿರುಗಿಸಿ ಹಾಕಿ, ಇನ್ನೊಂದು ಬದಿಯಲ್ಲಿ ಬೇಯಿಸಿ. ದೋಸೆ ಸ್ವಲ್ಪ ದಪ್ಪ ಮತ್ತು ಎಲೆಕೋಸು ಹಸಿ ಆಗಿರುವುದರಿಂದ ಎರಡೂ ಬದಿ ಬೇಯಿಸಬೇಕಾಗುತ್ತದೆ.

ಈಗ ಸವಿಯಲು ಬಿಸಿಬಿಸಿ ಕ್ಯಾಬೇಜ್ ದೋಸೆ ಸವಿಯಲು ಸಿದ್ಧ.

ಈರುಳ್ಳಿ ಚಟ್ನಿ

ಬೇಕಾಗುವ ಪದಾರ್ಥಗಳು :  10 ಸಣ್ಣ ಈರುಳ್ಳಿ, 1 ಸಣ್ಣ ಬೆಳ್ಳುಳ್ಳಿ, 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಉದ್ದಿನ ಬೇಳೆ,  1 ಚಮಚ ಕಡೆಲೆ ಬೇಳೆ,  1 ಟೀಸ್ಪೂನ್ ಕೊತ್ತಂಬರಿ ಬೀಜ, 4 ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಸಣ್ಣ ತುಂಡು ಹುಣಸೆಹಣ್ಣು, ಅರ್ಧ ಟೀಸ್ಪೂನ್ ಉಪ್ಪು , ಕಾಲು ಕಪ್ ನೀರು 1 ಟೀಸ್ಪೂನ್ ಸಾಸಿವೆ ಪಿಂಚ್ ಹಿಂಗ್  ಸ್ವಲ್ಪ ಅರಿಶಿನ 1 ಟೀಸ್ಪೂನ್ ಮೆಣಸಿನ ಪುಡಿ

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

ಮಾಡುವ ವಿಧಾನ: 

ಗ್ಯಾಸ್ ಮೇಲೆ ಒಂದು ಜಾಲರಿ ಇಟ್ಟು, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಸುಟ್ಟುಕೊಳ್ಳಿ. ಈರುಳ್ಳಿ ಒಳಗಿನಿಂದ ಮೃದುವಾಗುವವರೆಗೆ ಚೆನ್ನಾಗಿ ಸುಡಿ. ಸುಟ್ಟ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಸಿಪ್ಪೆತೆಗೆದು, ಮಿಕ್ಸಿ ಜಾರಿಗೆ ಹಾಕಿ, ಬದಿಯಲ್ಲಿಡಿ. ಬಾಣಲಿಗೆ 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, ಕೊತ್ತಂಬರಿ ಬೀಜ ಜೊತೆಗೆ, 4 ಒಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಹುರಿದು, ತಣ್ಣಗಾಗಿಸಿ ಅದೇ ಮಿಕ್ಸಿ ಜಾರಿಗೆ ಸೇರಿಸಿ, ಒಂದು ಸುತ್ತು ರುಬ್ಬಿಕೊಳ್ಳಿ.ಹೆಚ್ಚುವರಿಯಾಗಿ, ಒಂದು ಸಣ್ಣ ತುಂಡು ಹುಣಸೆಹಣ್ಣು, 1 ಟೀಸ್ಪೂನ್ ಉಪ್ಪು ಮತ್ತು ನೀರು ಸೇರಿಸಿ. ಅಗತ್ಯವಿದ್ದರೆ ನೀರನ್ನು ಸೇರಿಸಿ ನಯವಾದ ಪೇಸ್ಟ್‌ ಆಗಿ ರುಬ್ಬಿಕೊಳ್ಳಿ.
Published by:Pavana HS
First published: