Breakfast Recipe: ಬೇಡ ಬೇಡ ಅನ್ನೋರು ಸಹ ಚಪ್ಪರಿಸಿಕೊಂಡು ತಿಂತಾರೆ ‘ಮಜ್ಜಿಗೆ ಉಪ್ಪಿಟ್ಟು’; ಇಲ್ಲಿದೆ ಸ್ಪೆಷಲ್ ರೆಸಿಪಿ

ಕಟ್ಟಾ ಮಿಟ್ಟಾ ಟೇಸ್ಟ್ ಇಷ್ಟಪಡುವ ಜನರು ಇದರಲ್ಲಿ ಸಕ್ಕರೆ ಸಹ ಬಳಸಿಕೊಳ್ಳಬಹುದು. ಕೆಲವರು ಮಕ್ಕಳಿಗೆ ಉಪ್ಮಾ ಕಲರ್​ಫುಲ್ ಆಗಿ ಕಾಣಲೆಂದು ಅರಿಶಿನ ಸಹ ಬಳಸುತ್ತಾರೆ

ಮಜ್ಜಿಗೆ ಉಪ್ಪಿಟ್ಟು

ಮಜ್ಜಿಗೆ ಉಪ್ಪಿಟ್ಟು

  • Share this:
    ಬೆಳಗ್ಗೆ ಆದ್ರೆ ಸಾಕು ಮಹಿಳೆಯರಿಗೆ ತಿಂಡಿ (Breakfast) ಏನು ಮಾಡಬೇಕು ಎಂಬುವುದೇ ದೊಡ್ಡ ತಲೆನೋವು. ಇನ್ನು ಬ್ಯಾಚುಲರ್​ಗಳಿಗೆ ಬೇಗ ಸಿದ್ಧವಾಗುವ ತಿಂಡಿ ಹುಡುಕಾಟದಲ್ಲಿರುತ್ತಾರೆ.  ಸಾಮಾನ್ಯವಾಗಿ ಬಹುತೇಕರ ಮನೆಯಲ್ಲಿ ಉಪ್ಪಿಟ್ಟು, ಪೋಹಾ, ದೋಸೆ, ಇಡ್ಲಿ ಮಾಡುತ್ತಾರೆ. ಆದರೆ ಪದೇ ಪದೇ ಇದೇ ತಿಂಡಿ ತಿಂದು ಬೇಜಾರು ಆಗಿದ್ರೆ, ಇದರಲ್ಲಿಯೇ ಹೊಸ ರೆಸಿಪಿಗಳನ್ನು ಟ್ರೈ ಮಾಡಬಹುದು. ಈಗಾಗಲೇ ಬಗೆ ಬಗೆಯ ದೋಸೆ (Dosa Recipe) ಮತ್ತು ಇಡ್ಲಿ (Idly Recipe) ಹೇಗೆ ಮಾಡಬೇಕು ಎಂಬುದರ ರೆಸಿಪಿಯನ್ನು ಹೇಳಿದ್ದೇವೆ. ಇಂದು ಅದೇ ರೀತಿಯ ಹೊಸ ರೆಸಿಪಿ ನಿಮಗೆ ತಂದಿದ್ದೇವೆ. ಮನೆಯಲ್ಲಿ ಉಪ್ಪಿಟ್ಟು ಮಾಡಿದ್ರೆ ಮಕ್ಕಳು ಮುಖ ಸಿಂಡರಿಸುತ್ತಾರೆ. ಆದ್ರೆ ನಾವು ಹೇಳುವ ರೀತಿ ಉಪ್ಪಿಟ್ಟು ತಯಾರಿಸಿದ್ರೆ ಬೇಡ ಅನ್ನೋರು ಸಹ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಇಂದು ನಾವು ನಿಮಗೆ ಮಜ್ಜಿಗೆ ಉಪ್ಪಿಟ್ಟು ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ.

    ಕೆಲವು ಭಾಗಗಳಲ್ಲಿ ಆಯಾ ಋತುಮಾನಕ್ಕೆ ತಕ್ಕಂತೆ ಸಿಗುವ ತರಕಾರಿಯನ್ನು ಉಪ್ಪಿಟ್ಟಿನಲ್ಲಿ ಬಳಕೆ ಮಾಡುತ್ತಾರೆ. ಮಕ್ಕಳು ಸೇರಿದಂತೆ ಬಹುತೇಕರಿಗೆ ಉಪ್ಮಾದಲ್ಲಿ ವಿವಿಧ ತರಕಾರಿ ನೋಡಿಯೇ ನೋ ನೋ ಎಂದು ಹೇಳುತ್ತಾರೆ. ಆದ್ರೆ ಈ ಮಜ್ಜಿಗೆ ಉಪ್ಪಿಟ್ಟು ತಯಾರಿಸಲು ಹೆಚ್ಚಿನ ತರಕಾರಿ ಬಳಸುವ ಅಗತ್ಯವಿಲ್ಲ.

    ಮಜ್ಜಿಗೆ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು

    ರವೆ: 1 ಕಪ್

    ಮಜ್ಜಿಗೆ: ಒಂದೂವರೆ ಕಪ್

    ಹಸಿ ಮೆಣಸಿನಕಾಯಿ: 2 ರಿಂದ 3

    ಜೀರಿಗೆ: 1 ಟೀ ಸ್ಪೂನ್

    ಸಾಸಿವೆ: 1 ಟೀ ಸ್ಪೂನ್

    ಕರಿಬೇವು: 4 ರಿಂದ 5

    ಎಣ್ಣೆ; 2 ರಿಂದ 3 ಟೀ ಸ್ಪೂನ್

    ಕೋತಂಬರಿ ಸೊಪ್ಪು

    ಉಪ್ಪು

    ಮಜ್ಜಿಗೆ ಉಪ್ಪಿಟ್ಟು ಮಾಡುವ ವಿಧಾನ

    *ಮೊದಲಿಗೆ ಒಲೆ ಹಚ್ಚಿಕೊಂಡು ಅಗಲವಾದ ಪ್ಯಾನ್ ಇರಿಸಿಕೊಳ್ಳಿ. ಪ್ಯಾನ್ ಬಿಸಿಯಾಗುತ್ತಿದ್ದಂತೆ ಎರಡು ಟಿ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ, ಸಾಸಿವೆ ಹಾಕಿ.

    *ಜೀರಿಗೆ ಸಾಸಿವೆ ಸಿಡಿಯುತ್ತಿದ್ದಂತೆ ರವೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.

    *ರವೆ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಮೊದಲೇ ಬಿಸಿ ಮಾಡಿಕೊಂಡಿದ್ದ ಒಂದು ಗ್ಲಾಸ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ರವೆ ಗಂಟು ಆಗದಂತೆ ನೋಡಿಕೊಳ್ಳಿ.

    ಇದನ್ನೂ ಓದಿ:  Breakfast Recipe: ಮೃದುವಾದ, ಹೂವಿನಂತಹ ಮಲ್ಲಿಗೆ ಇಡ್ಲಿ ಮಾಡುವ ವಿಧಾನ ಇಲ್ಲಿದೆ

    *ತದನಂತರ ಮತ್ತೊಂದು ಪ್ಯಾನ್​​ನಲ್ಲಿ ಎಣ್ಣೆ ಹಾಕಿ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಒಗ್ಗರಣೆ ಹಾಕಿಕೊಳ್ಳಿ.

    *ನಂತರ ಕರಿಬೇವು ಮತ್ತು ಹಸಿಮೆಣಸಿನಕಾಯಿ ಒಗ್ಗರಣೆಯನ್ನು ಕುದಿಯುತ್ತಿರುವ ರವೆಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.



    *ಈಗ  ಒಂದೂವರೆ ಗ್ಲಾಸ್​ನಷ್ಟು  ಮಜ್ಜಿಗೆ ಸೇರಿಸಿ ಎರಡರಿಂದ ಮೂರು ನಿಮಿಷ ಬೇಯಿಸಿ ಒಲೆ ಆರಿಸಿ. ನಂತರ ಎರಡರಿಂದ ಮೂರು ನಿಮಿಷ ಮುಚ್ಚಳ ಮುಚ್ಚಿ ತೆಗೆದರೆ ರುಚಿ ರುಚಿಯಾದ ಮಜ್ಜಿಗೆ ಉಪ್ಪಿಟ್ಟು ಸಿದ್ಧವಾಗುತ್ತದೆ. ಸಿದ್ಧವಾದ ಮಜ್ಜಿಗೆ ಉಪ್ಪಿಟ್ಟು ಮೇಲೆ ಕತ್ತರಿಸಿದ ಕೋತಂಬರಿ ಹಾಕಿದ್ರೆ ಹೊಸ ರುಚಿಯ ಬ್ರೇಕ್ ಫಾಸ್ಟ್ ಸವಿಯಲು ಸಿದ್ಧ.

    ಇದನ್ನೂ ಓದಿ:  Morning Breakfast: ಬೆಳಗಿನ ತಿಂಡಿಗೆ ತರಕಾರಿಗಳಿಂದ ಸಮೃದ್ಧ ಬಿಸಿ ಬೇಳೆ ಬಾತ್ ಹೀಗೆ ಮಾಡಿ!

    ಗಟ್ಟಿ ಮೊಸರು ಅಥವಾ ಶೇಂಗಾ ಚಟ್ನಿ ಜೊತೆ ಸವಿಯಿರಿ

    ಇನ್ನು ಕಟ್ಟಾ ಮಿಟ್ಟಾ ಟೇಸ್ಟ್ ಇಷ್ಟಪಡುವ ಜನರು ಇದರಲ್ಲಿ ಸಕ್ಕರೆ ಸಹ ಬಳಸಿಕೊಳ್ಳಬಹುದು. ಕೆಲವರು ಮಕ್ಕಳಿಗೆ ಉಪ್ಮಾ ಕಲರ್​ಫುಲ್ ಆಗಿ ಕಾಣಲೆಂದು ಅರಿಶಿನ ಸಹ ಬಳಸುತ್ತಾರೆ. ಶೇಂಗಾ ಚಟ್ನಿ ಪುಡಿ ಮತ್ತು ಗಟ್ಟಿ ಮೊಸರು ಜೊತೆ ಮಜ್ಜಿಗೆ ಉಪ್ಪಿಟ್ಟು ಸವಿದ್ರೆ ಪದೇ ಪದೇ ಬೇಕು ಎಂದು ಹೇಳುತ್ತೀರಿ.
    Published by:Mahmadrafik K
    First published: