BreakFast Recipe: ಬೆಳಗಿನ ಉಪಹಾರಕ್ಕೆ ಸಖತ್ ಟೇಸ್ಟಿ ಬ್ರೆಡ್ ಟೋಸ್ಟ್

ಸುಲಭವಾಗಿ ಮಾಡಬಹುದಾದ ಮತ್ತೊಂದು ತಿಂಡಿಯೆಂದರೆ ಆಲೂ ಬ್ರೆಡ್ ಟೋಸ್ಟ್. ಇದನ್ನು ಮಾಡಲು ಟೊಸ್ಟರ್ ಸಹ ಬೇಕಾಗಿಲ್ಲ, ದೋಸೆ ಮಾಡುವ ಹೆಂಚಿನ ಮೇಲೆ ತುಪ್ಪ ಬಳಸಿ ಮಾಡಿ ಈ ಹೊಸ ರುಚಿಯನ್ನು ಮಾಡಿ ಸವಿಯಬಹುದು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಲವರು ಬೆಳಗಿನ ಉಪಹಾರಕ್ಕೆ ಬ್ರೆಡ್ ಟೋಸ್ಟ್  (Bread Toast) ತಿನ್ನಲು ಇಷ್ಟಪಡುತ್ತಾರೆ. ಬ್ರೆಡ್ ಬಳಸಿ ಹಲವು ರೀತಿಯ ತಿಂಡಿಗಳನ್ನು ಮಾಡಬಹುದು. ಅದರಲ್ಲಿ ಹೆಚ್ಚು ಜನ ಮಾಡುವುದು ಬ್ರೆಡ್ ಟೋಸ್ಟ್, ಸ್ಯಾಂಡ್ ವಿಚ್ ಮತ್ತು ಫ್ರೆಂಚ್ ಟೋಸ್ಟ್.  ಸಸ್ಯಾಹಾರಿಗಳು (Vegetarians) ಹೆಚ್ಚಾಗಿ ಸರಳವಾದ ವೆಜಿಟೆಬಲ್ ಸ್ಯಾಂಡ್ ವಿಚ್, ಬ್ರೆಡ್ ಕಟ್ಲೆಟ್​ಗಳನ್ನು (Cutlet) ಮಾಡುತ್ತಾರೆ. ಇದರ ಜೊತೆಗೆ ಸುಲಭವಾಗಿ ಮಾಡಬಹುದಾದ ಮತ್ತೊಂದು ತಿಂಡಿಯೆಂದರೆ ಆಲೂ ಬ್ರೆಡ್ ಟೋಸ್ಟ್. ಇದನ್ನು ಮಾಡಲು ಟೊಸ್ಟರ್ ಸಹ ಬೇಕಾಗಿಲ್ಲ, ದೋಸೆ ಮಾಡುವ ಹೆಂಚಿನ ಮೇಲೆ ತುಪ್ಪ ಬಳಸಿ ಮಾಡಿ ಈ ಹೊಸ ರುಚಿಯನ್ನು ಮಾಡಿ ಸವಿಯಬಹುದು.  ಬೆಳಗಿನ ಉಪಹಾರಕ್ಕೆ ಬ್ರೆಡ್​ ಟೋಸ್ಟ್ ಅತ್ಯುತ್ತಮವಾಗಿದೆ.​ 

ಬೇಕಾಗುವ ಸಾಮಗ್ರಿಗಳು

1. ಬ್ರೆಡ್ ಸ್ಲೈಸ್ ಗಳು- 8

2. ಆಲೂಗಡ್ಡೆ- 5-6 (ಬೇಯಿಸಿ ಸಿಪ್ಪೆ ಬಿಡಿಸಿಟ್ಟುಕೊಳ್ಳಿ)

3. ಹಸಿಮೆಣಸಿನಕಾಯಿ- 3(ಕತ್ತರಿಸಿಟ್ಟುಕೊಳ್ಳಿ)

4. ಶುಂಠಿ- 1/2 ಇಂಚು (ತುರಿದುಕೊಳ್ಳಿ)

5. ಬಟಾಣಿ- ಒಂದು ಹಿಡಿ

6. ಕ್ಯಾರೆಟ್ಸ್- 2 (ತುರಿದುಕೊಳ್ಳಿ)

7. ಕ್ಯಾಪ್ಸಿಕಂ- 1 (ಕತ್ತರಿಸಿಕೊಳ್ಳಿ)

8. ಅರಿಶಿನ ಪುಡಿ- 1 1/2 ಟೀಚಮಚ

9. ಅಚ್ಚ ಖಾರದ ಪುಡಿ- 2 ಟೀಚಮಚ

10. ಚಾಟ್ ಮಸಾಲ- ಒಂದು ಚಿಟಿಕೆ

11. ಗರಂ ಮಸಾಲ- ಒಂದು ಚಿಟಿಕೆ

12. ಉಪ್ಪು- ರುಚಿಗೆ ತಕ್ಕಷ್ಟು

13. ಎಣ್ಣೆ- 1 ಟೀಚಮಚ

14. ತುಪ್ಪ- 1/2 ಕಪ್

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

ಮಾಡುವ ವಿಧಾನ:

1. 2 ಟೀ ಚಮಚ ಎಣ್ಣೆಯನ್ನು ಬಾಣಲಿಯಲ್ಲಿ ಕಾಯಿಸಿಕೊಳ್ಳಿ. ಅದಕ್ಕೆ ಈರುಳ್ಳಿ ಹಾಕಿ ಸುಮಾರು  1 ನಿಮಿಷ ಹುರಿಯಿರಿ.

2. ಇದಕ್ಕೆ ಕ್ಯಾರೆಟ್, ಹಸಿಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ ಮತ್ತು ಶುಂಠಿ ಸ್ವಲ್ಪ ಬೆರಸಿ ಮಿಶ್ರ ಮಾಡಿ 6-7 ನಿಮಿಷಗಳವರೆಗೆ ಬೇಯಿಸಿ.

3. ಇದಕ್ಕೆ ಉಪ್ಪು, ಬಟಾಣಿ, ಅರಿಶಿನ ಹಾಕಿ ಕಲಸಿ. ಅದಕ್ಕೆ ಅಚ್ಚ ಖಾರದ ಪುಡಿ, ಚಾಟ್ ಮಸಾಲ ಮತ್ತು ಗರಂ ಮಸಾಲ ಹಾಕಿ.

4. ಇದಕ್ಕೆ ಪುಡಿ ಮಾಡಿಟ್ಟುಕೊಂಡ ಆಲೂಗಡ್ಡೆ ಹಾಕಿ ಕಲಸಿ. ಎಲ್ಲವನ್ನು ಚೆನ್ನಾಗಿ ಪಲ್ಯದ ಹಾಗೆ ಕಲಸಿದ ಮೇಲೆ ಸ್ಟವ್​ ಆಫ್​ ಮಾಡಿ ಕೆಳಗೆ ಇಳಿಸಿ.

5. ಈಗ ಹೆಂಚನ್ನು ಕಾಯಿಸಿ. ಅದರ ಮೇಲೆ ಬ್ರೆಡ್ ತುಂಡುಗಳನ್ನು ಮಾಡಿಟ್ಟುಕೊಂಡ ಪಲ್ಯವನ್ನು ಮಧ್ಯಕ್ಕೆ ಹಾಕಿ . ಅದರ ಮೇಲೆ ಮತ್ತೊಂದು ಬ್ರೆಡ್ ತುಂಡನ್ನು ಮುಚ್ಚಿ.

6. ತುಪ್ಪ ಅಥವ ಬೆಣ್ಣೆಯನ್ನು ಹಾಕಿ ಈ ತುಂಡುಗಳನ್ನು ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ ನಂತರ ತಟ್ಟೆಯಲ್ಲಿ ತೆಗೆದಿಡಿ.

ಇದರ ಜೊತೆಗೆ ನೀವು ಸೌತೆಕಾಯಿ ಸ್ಯಾಂಡ್​ ವಿಚ್​​ ಕೂಡ ಮಾಡಬಹುದು.  ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದು ಒಳ್ಳೆಯದು,  ಸೌತೆಕಾಯಿಯಿಂದ ಸಲಾಡ್, ಸಾರು, ಜ್ಯೂಸ್ ಹೀಗೆ ಅನೇಕ ಬಗೆ ಭಕ್ಯಗಳನ್ನು ತಯಾರಿಸಬಹುದು. ಇಲ್ಲಿ ನಾವು ಸೌತೆಕಾಯಿ ಬಳಸಿ ಮಾಡುವ ಸ್ಯಾಂಡ್ ವಿಚ್ ರೆಸಿಪಿ ಮಾಡೋದನ್ನು ತಿಳಿಸಿದ್ದೇವೆ. ಒಮ್ಮೆ ಮನೆಯಲ್ಲಿ ಟ್ರೈ ಮಾಡಿ

ಇದನ್ನೂ ಓದಿ: BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

ಬೇಕಾಗುವ ಸಾಮಾಗ್ರಿಗಳು

ಬ್ರೆಡ್ ತುಂಡು 4-6

ಸೌತೆಕಾಯಿ 1

ಸ್ವಲ್ಪ ಚೀಸ್

ಬೆಣ್ಣೆ 2 ಚಮಚ

ಕರಿ ಮೆಣಸಿನ ಪುಡಿ ಚಿಟಿಕೆಯಷ್ಟು

ಚಾಟ್ ಮಸಾಲ ಚಿಟಿಕೆಯಷ್ಟು

ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಸೌತೆಕಾಯಿಯನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು.

* ಬ್ರೆಡ್ ನ ತುದಿಯನ್ನು ಕತ್ತರಿಸಿ , ನಂತರ ಬ್ರೆಡ್ ಗೆ ಬೆಣ್ಣೆ ಸವರಬೇಕು.

* ನಂತರ ಚೀಸ್ ಹಾಕಿ ಸೌತೆ ಕಾಯಿ ಹಾಕಿ, ಕರಿ ಮೆಣಸಿನ ಪುಡಿ, ಉಪ್ಪು, ಚಾಟ್ ಮಸಾಲ ಪುಡಿ ಮತ್ತೊಂದು ಬ್ರೆಡ್ ನಿಂದ ಕವರ್ ಮಾಡಿ.

* ಈಗ ತವಾವನ್ನು ಬಿಸಿ ಮಾಡಿ ಅದಕ್ಕೆ ಬೆಣ್ಣೆ ಸವರಿ ಅದರಲ್ಲಿ ಬ್ರೆಡ್ ಇಟ್ಟು ಎರಡೂ ಬದಿ ರೋಸ್ಟ್ ಮಾಡಿದರೆ ಸೌತೆಕಾಯಿಯ ಸ್ಯಾಂಡ್ ವಿಚ್ ರೆಡಿ.
Published by:Pavana HS
First published: