BreakFast Recipe: ಬೆಳಗಿನ ಉಪಹಾರಕ್ಕೆ ಫಟಾಫಟ್ ಅಂತ ಮಾಡಿ ಅವಲಕ್ಕಿ ಒಗ್ಗರಣೆ

ಐದೇ ನಿಮಿಷದಲ್ಲಿ ಮಾಡಿ ಬಡಿಸಲು ಸಾಧ್ಯವಿರವ ಅವಲಕ್ಕಿ ಒಗ್ಗರಣೆ ಬೆಳಗ್ಗಿನ ಧಾವಂತದಲ್ಲಿ ಕೆಲಸ ಮಾಡಿ ಮುಗಿಸಲು ಸೂಕ್ತವಾಗಿದೆ. ಮಕ್ಕಳಿಗೂ ಕೂಡ ತುಂಬಾ ಇಷ್ಟವಾಗುತ್ತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಿನ ತಿಂಡಿ (BreakFast) ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. ಬೆಳಗಿನ ತಿಂಡಿ (Morning Tiffin) ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ ಮತ್ತು ಆರೋಗ್ಯವಂತ ಜೀವನ ಶೈಲಿ (Life Style) ನಾವು ಪಡೆಯುತ್ತೇವೆ. ಆದರೆ ಈ ಸರಳ ಆಹಾರ (Food) ಪದ್ಧತಿಯನ್ನು  ತಯಾರಿಸುವುದು ಕೂಡ ತುಸು ಸವಾಲಿನ ವಿಚಾರವೇ. ಏಕೆಂದರೆ ದಿನವೂ ಒಂದೇ ಬಗೆಯ ರುಚಿಯಿಲ್ಲದ ಪಥ್ಯದ ಆಹಾರವನ್ನು ಸೇವಿಸುತ್ತಿದ್ದರೆ ನಮ್ಮ ದೃಷ್ಟಿ ಜಂಕ್ ಫುಡ್‌ಗಳತ್ತ (Junk Food) ವಾಲುವುದು ಸಾಮಾನ್ಯ.

ಈ ಸಮಯದಲ್ಲಿ ನಿಮ್ಮ ನೆರವಿಗೆ ಬರಲಿದೆ ಹುಳಿ ಅವಲಕ್ಕಿ. ಇದನ್ನು ಐದೇ ನಿಮಿಷದಲ್ಲಿ ಮಾಡಿ ಬಡಿಸಲು ಸಾಧ್ಯವಿರುವುದರಿಂದ ಬೆಳಗ್ಗಿನ ಧಾವಂತದಲ್ಲಿ ಮಾಡಿ ಮುಗಿಸಲು ಸೂಕ್ತವಾಗಿದೆ. ಅಲ್ಲದೆ ಇದು ಸುಲಭವಾಗಿ ಮತ್ತು ನಿಧಾನವಾಗಿ ಜೀರ್ಣವಾಗುವುದರಿಂದ ಮಧ್ಯಾಹ್ನದವರೆಗೂ ಹಸಿವನ್ನು ತಣಿಸುವಲ್ಲಿ ಸಮರ್ಥವಾಗಿದೆ. ಕೇವಲ ಉಪಾಹಾರಕ್ಕೇ ಏಕೆ, ಮಧ್ಯಾಹ್ನದ ಊಟ ಅಥವಾ ಸಂಜೆಯ ತಿಂಡಿಯ ರೂಪದಲ್ಲಿಯೂ ಸೇವಿಸಬಹುದು. ಬನ್ನಿ, ಧಿಡೀರನೇ ತಯಾರಿಸಬಹುದಾದ ಈ ರುಚಿಕರ ಮತ್ತು ಆರೋಗ್ಯಕರ ತಿಂಡಿಯನ್ನು ತಯಾರಿಸುವ ವಿಧಾನವನ್ನು ನೋಡೋಣ: ಒಮ್ಮೆ ಮಾಡಿ, ಸವಿದು ನೋಡಿ-ಪಾಲಕ್ ಅವಲಕ್ಕಿ!

ಅಗತ್ಯವಿರುವ ಸಾಮಾಗ್ರಿಗಳು:

ಅವಲಕ್ಕಿ - ಒಂದು ಕಪ್, ಅರಿಶಿನ ಪುಡಿ: ಕಾಲು ಚಿಕ್ಕ ಚಮಚ, ಹುಣಸೆ ಹುಳಿಯ ಪೇಸ್ಟ್ ಒಂದು ಚಿಕ್ಕ ಚಮಚ,  ಉಪ್ಪು-ರುಚಿಗನುಸಾರ

ಒಗ್ಗರಣೆಗೆ:

ಎಣ್ಣೆ - ಎರಡು ಚಿಕ್ಕ ಚಮಚ,  ಸಾಸಿವೆ - ಒಂದು ಚಿಕ್ಕ ಚಮಚ,  ಹಿಂಗು - ಒಂದು ಚಿಟಿಕೆ, ಕಡ್ಲೆ ಬೇಳೆ - ಎರಡು ಚಿಕ್ಕ ಚಮಚ, ಒಣಮೆಣಸು - ಎರಡು
ಹಸಿಮೆಣಸು-ಒಂದು, ಹುರಿದ ಶೇಂಗಾಬೀಜ -ಸುಮಾರು ಮೂರು ದೊಡ್ಡಚಮಚ, ಕರಿಬೇವಿನ ಎಲೆ-ಒಂದು ಎಸಳು

ಮಾಡುವ  ವಿಧಾನ:

1) ಮೊದಲು ಅವಲಕ್ಕಿಯನ್ನು ಎರಡು ಬಾರಿ ತೊಳೆದು ನೀರು ಬಸಿಯಿರಿ. ಬಳಿಕ ನೀರು ಬಸಿದು ಹೋಗುವ ಜಾಲರಿಯಲಿಟ್ಟು ಪೂರ್ಣವಾಗಿ ನೀರು ಹೊರಹೋಗುವಂತೆ ಮಾಡಿ.
2) ಬಳಿಕ ಇದಕ್ಕೆ ಅರಿಶಿನ ಪುಡಿ, ಹುಳಿಯ ಪೇಸ್ಟ್, ಉಪ್ಪು ಹಾಕಿ ಚೆನ್ನಾಗಿ ಕಲಕಿ ಬದಿಗಿಡಿ.
3) ಒಗ್ಗರಣೆಗಾಗಿ ಒಂದು ಬಾಣಲೆ ಅಥವಾ ದಪ್ಪತಳದ ಚಿಕ್ಕ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಹಾಕಿ. ಸಾಸಿವೆ ಸಿಡಿದ ಬಳಿಕ ಇಂಗು, ಕಡ್ಲೆಬೇಳೆ, ಒಣಮೆಣಸು, ಹಸಿಮೆಣಸು, ಶೇಂಗಾಬೀಜ, ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ. 4) ಬೇಳೆಗಳು ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ನೀರು ಬಸಿದ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊಂಚ ರುಚಿ ನೋಡಿ ಉಪ್ಪು ಕಡಿಮೆಯೆನಿಸಿದರೆ ಸೇರಿಸಬಹುದು. ಸುಮಾರು ಮೂರು ನಿಮಿಷಗಳವರೆಗೆ ನಿಧಾನವಾಗಿ ತಿರುವುತ್ತಿರಿ. ಬಳಿಕ ಉರಿ ನಂದಿಸಿ ಬಿಸಿಬಿಸಿಯಿರುವಂತೆಯೇ ಹಪ್ಪಳ ಅಥವಾ ಆಲುಗಡ್ಡೆ ಚಿಪ್ಸ್ ನೊಂದಿಗೆ ನೀಡಿ. ಹುಳಿ ಅವಲಕ್ಕಿಯೊಂದಿಗೆ ಗರಿಗರಿ ಹಪ್ಪಳ ವಿಶಿಷ್ಟವಾದ ಅನುಭವ ನೀಡುತ್ತದೆ.

ಇದನ್ನೂ ಓದಿ:  Bread For Breakfast: ಪ್ರತಿದಿನ ಬ್ರೇಕ್​ಫಾಸ್ಟ್​​ಗೆ ಬ್ರೆಡ್ ತಿನ್ನುತ್ತೀರಾ? ಆರೋಗ್ಯದ ಕಥೆ ಏನು?

ಮೊಳಕೆ ಕಾಳಿನ ಸಲಾಡ್​

ಬೇಕಾಗಿರುವ ಸಾಮಾಗ್ರಿಗಳು: 

ಮೊಳಕೆ ಬರಿಸಿದ ಹೆಸರುಕಾಳು - 1

1/2 ಕಪ್ ಟೊಮೇಟೊ - 1 ಕಪ್ (ತುಂಡರಿಸಿದ್ದು)

ಮುಳ್ಳುಸೌತೆ - 1ಕಪ್ (ತುಂಡರಿಸಿದ್ದು)

ಕರಿಬೇವಿನ ಎಸಳು- 1 ಟೇಸ್ಫೂನ್ (ಕತ್ತರಿಸಿದ್ದು)

ಹಸಿಮೆಣಸು - 1 (ಕತ್ತರಿಸಿದ್ದು)

ಸಲಾಡ್ - ಸ್ವಲ್ಪ ಅಲಂಕಾರಕ್ಕಾಗಿ ಕಾಳುಮೆಣಸು - 1/2 ಟೇಸ್ಪೂನ್

ಉಪ್ಪು - ರುಚಿಗೆ ತಕ್ಕಷ್ಟು

ಹುರಿದ ಜೀರಿಗೆ – 1 ಚಮಚ

ನಿಂಬೆ ರಸ - 1ಟೇಸ್ಫೂನ್ ಮೊಸರು – 2 ಚಮಚ

ಶುಂಠಿ ರಸ – 1 ಚಮಚ

ಆಲೀವ್ ಆಯಿಲ್- 1 ಚಮಚ

ಇದನ್ನೂ ಓದಿ:  BreakFast Recipe: ಮಕ್ಕಳಿಗಾಗಿ ರುಚಿಕರವಾದ ದಹಿ ವಡಾ ಮಾಡಿ ಕೊಡಿ

ಮಾಡುವ ವಿಧಾನ

ಸಲಾಡ್ ಅಲಂಕಾರ ಸಾಮಾಗ್ರಿಗಳನ್ನು ಜೊತೆಯಾಗಿ ಮಿಶ್ರ ಮಾಡಿಕೊಳ್ಳಿ.ನಂತರ ಮೊಳಕೆ ಬರಿಸಿರುವ ಹೆಸರುಕಾಳನ್ನು ಉಪ್ಪು ಮತ್ತು 1/4 ಕಪ್ ನೀರನ್ನು ಸೇರಿಸಿ ಪ್ಯಾನ್‌ಗೆ ಹಾಕಿಕೊಳ್ಳಿ. ಸಣ್ಣ ಉರಿಯಲ್ಲಿ 10 ನಿಮಿಷಗಳಷ್ಟು ಕಾಲ ಬೇಯಿಸಿಕೊಳ್ಳಿ. 5. ಬೆಂದ ನಂತರ, ಗ್ಯಾಸ್ ಆಫ್ ಮಾಡಿ.  ಪ್ಯಾನ್‌ಗೆ ಮುಚ್ಚಳ ಮುಚ್ಚಿ 3 ರಿಂದ ನಾಲ್ಕು ನಿಮಿಷಗಳಷ್ಟು ಕಾಲ ಹಾಗೆಯೇ ಬಿಡಿ. ಮೊಳಕೆ ಕಾಳನ್ನು ಆರಲು ಬಿಡಿ.  ಈಗ ಅಲಂಕಾರ ಪದಾರ್ಥಗಳನ್ನು ಮೊಳಕೆ ಕಾಳಿನೊಂದಿಗೆ ಮಿಶ್ರ ಮಾಡಿಕೊಳ್ಳಿ. ಬಡಿಸುವ ಪಾತ್ರೆಯಲ್ಲಿ ಟೊಮೇಟೊ ಮತ್ತು ಮುಳ್ಳುಸೌತೆಯನ್ನು ಸಿದ್ಧಪಡಿಸಿಕೊಳ್ಳಿ. 10. ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನೊಂದಿಗೆ ಅಲಂಕರಿಸಿಕೊಳ್ಳಿ. ಆರೋಗ್ಯವಂತ ಮೊಳಕೆ ಬರಿಸಿದ ಹೆಸರುಕಾಳು ಸಲಾಡ್ ಸವಿಯಲು ಸಿದ್ಧವಾಗಿದೆ. ಈ ಉಪಹಾರದೊಂದಿಗೆ ಶುಭದಿನ ನಿಮ್ಮದಾಗಲಿ.
Published by:Pavana HS
First published: