• Home
  • »
  • News
  • »
  • lifestyle
  • »
  • BreakFast Recipe: ಬೆಳಗಿನ ಉಪಹಾರಕ್ಕೆ ರುಚಿಯಾದ ಆಲೂ ಪರೋಟ ಮಾಡಿ

BreakFast Recipe: ಬೆಳಗಿನ ಉಪಹಾರಕ್ಕೆ ರುಚಿಯಾದ ಆಲೂ ಪರೋಟ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉತ್ತರ ಭಾರತದಲ್ಲಿ ಹೆಸರು ವಾಸಿಯಾಗಿರುವ ಫುಡ್​ ಅಂದ್ರೆ ಅದು ಆಲೂ ಪರೋಟಾ, ದಕ್ಷಿಣ ಭಾರತದಲ್ಲಿ ದೋಸೆ, ಇಡ್ಲಿ ಹೇಗೆ ಖ್ಯಾತಿ ಪಡೆದುಕೊಂಡಿದೆಯೋ ಅಂತೆಯೇ ಉತ್ತರದಲ್ಲಿ ಆಲೂ ಪರೋಟಾ ಅಲ್ಲಿನವರಿಗೆ ಹೆಚ್ಚು ಪ್ರಿಯವಾದುದು.

  • Share this:

ನಮ್ಮ ಜನರು ಆಹಾರ ಪ್ರಿಯರು, ಹೋಟೆಲ್, (Hotel)​ ರೆಸ್ಟೋರೆಂಟ್​ಗಳಿಗೆ ಹೋಗಿ ರುಚಿ ರುಚಿಯಾದ ಊಟ ತಿನ್ನೋದನ್ನೇ ಅಭ್ಯಾಸ ಮಾಡಿಕೊಂಡಿರ್ತಾರೆ. ಇಂತವರಿಗೆ ನೀವು ಮನೆಯಲ್ಲಿ ಚಿತ್ರಾನ್ನ, ಉಪ್ಪಿಟ್ಟು, ದೋಸೆಯಂತಹ (Dosa) ಅಡುಗೆ ಮಾಡಿಕೊಟ್ರೆ ಇಷ್ಟವಾಗೋದೇ ಇಲ್ಲ. ಅಯ್ಯೋ ಏನಿದು ದಿನ ಇದನ್ನೇ ಮಾಡ್ತೀರಾ ಎಂದು ಗೊಣಗುತ್ತಾರೆ. ಸರಿಯಾಗಿ ಊಟ ಕೂಡ ಮಾಡಲ್ಲ. ಇನ್ನು ಈಗಿನ ಕಾಲದ ಮಕ್ಕಳಂತೂ ಅಡುಗೆ ರುಚಿಯಾಗಿದ್ರಷ್ಟೆ ಊಟ ಮಾಡೋದು. ಹೀಗಾಗಿ ನಿತ್ಯ ವೆರೈಟಿ ಫುಡ್​  (Verity Food)ಮಾಡಿ ಕೊಡುವಂತೆ ಹಠ ಮಾಡ್ತಾರೆ. ಹೋಟೆಲ್​ ಸ್ಟೈಲ್​ನಲ್ಲಿ ಆಲೂ ಪರೋಟ (Aloo Paratha) ಮಾಡಿ ಕೊಟ್ರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ.  


ಉತ್ತರ ಭಾರತದಲ್ಲಿ ಹೆಸರು ವಾಸಿಯಾಗಿರುವ ಫುಡ್​ ಅಂದ್ರೆ ಅದು ಆಲೂ ಪರೋಟಾ, ದಕ್ಷಿಣ ಭಾರತದಲ್ಲಿ ದೋಸೆ, ಇಡ್ಲಿ ಹೇಗೆ ಖ್ಯಾತಿ ಪಡೆದುಕೊಂಡಿದೆಯೋ ಅಂತೆಯೇ ಉತ್ತರದಲ್ಲಿ ಆಲೂ ಪರೋಟಾ ಅಲ್ಲಿನವರಿಗೆ ಹೆಚ್ಚು ಪ್ರಿಯವಾದುದು. ಆಲೂಗಡ್ಡೆ ಪಲ್ಯದೊಂದಿಗೆ ತಯಾರು ಮಾಡಲಾದ ಈ ಪರೋಟಾ ರೆಸಿಪಿ ಆರೋಗ್ಯಕರ ಬ್ರೇಕ್ ಫಾಸ್ಟ್​ ನಂತೆ ಕೂಡ ಸೇವಿಸ ಬಹುದು ಮಧ್ಯಾಹ್ನದೂಟಕ್ಕೂ ತಿನ್ನ ಬಹುದು ಹಾಗಿದ್ದರೆ ಅತಿ ಸರಳ ವಿಧಾನದಲ್ಲಿ ಆಲೂ ಪರೋಟಾವನ್ನು ತಯಾರು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ


ಬೇಕಾಗುವ ಸಾಮಾಗ್ರಿಗಳು


*3-4 ಬೇಯಿಸಿ ಸಿಪ್ಪೆ ಸುಲಿದ ಆಲೂಗಡ್ಡೆ


*1 ಅಥವಾ 2 ಹಸಿಮೆಣಸು


*1/2 ಚಮಚ ಮೆಣಸಿನ ಹುಡಿ


*1/2 ಚಮಚ ಅಮೆಚೂರ್ ಹುಡಿ


*2 ರಿಂದ 3 ಚಮಚ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು


*ಉಪ್ಪು ರುಚಿಗೆ ತಕ್ಕಷ್ಟು


*ಎಣ್ಣೆ ಅಥವಾ ತುಪ್ಪ


ಪರೋಟಾ ತಯಾರಿಗೆ ಬೇಕಾಗುವ ಸಾಮಾಗ್ರಿ


*2 ಕಪ್ ಗೋಧಿ ಹಿಟ್ಟು


*1/2 ಚಮಚ ಉಪ್ಪು


*1-2 ಚಮಚ ತುಪ್ಪ ಅಥವಾ ಎಣ್ಣೆ


*ಹಿಟ್ಟು ಕಲಸಲು ಸಾಕಷ್ಟು ನೀರು


ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಹೆಲ್ದಿ ಬೀಟ್​ರೂಟ್​ ಬಾತ್ ಮಾಡಿ


*ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದಿಟ್ಟುಕೊಳ್ಳಿ.


ನಂತರ ಅದನ್ನು ಚೆನ್ನಾಗಿ ಹಿಸುಕಿ ಹಸನಾಗಿಸಿಕೊಳ್ಳಿ


* ಆಲೂಗಡ್ಡೆಯನ್ನು ಚೆನ್ನಾಗಿ ಹಿಸುಕಿಕೊಂಡಿರಿ ಯಾವುದೇ ಗಂಟುಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.


* ಇದೀಗ ಸಣ್ಣಗೆ ಹೆಚ್ಚಿದ ಹಸಿಮೆಣಸನ್ನು, ಗರಂ ಮಸಾಲ ಪೌಡರ್, ಮೆಣಸಿನ ಹುಡಿ, ಅಮೆಚೂರ್ ಹುಡಿ ಮತ್ತು ಉಪ್ಪನ್ನು ಆಲೂ ಪಲ್ಯಕ್ಕೆ ಸೇರಿಸಿ, ಬೇಕಾದಲ್ಲಿ ಕರಿಬೇವು ಮತ್ತು ಸಣ್ಣಗೆ ಹೆಚ್ಚಿನ ಈರುಳ್ಳಿಯನ್ನು ಆಲೂ ಜೊತೆಗೆ ಮಿಶ್ರ ಮಾಡಿಕೊಳ್ಳಿ.


*ಪರೋಟಾಗಾಗಿ ಗೋಧಿ ಹಿಟ್ಟು ಕಲಸುವ ವಿಧಾನ -ಪಾತ್ರೆಯಲ್ಲಿ, ಗೋಧಿ ಹಿಟ್ಟನ್ನು ತೆಗೆದುಕೊಂಡು ಉಪ್ಪು ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಸ್ವಲ್ಪ ಸಮಯ ಕಲಸಿದ ಹಿಟ್ಟನ್ನು ಹಾಗೆಯೇ ತೆಗೆದಿಡಿ.


ಮಾಡುವ ವಿಧಾನ


ಮೊದಲಿಗೆ ಚೆನ್ನಾಗಿ ನಾದಿದ ಚಪಾತಿ ಹಿಟ್ಟನ್ನು ಪೂರಿ ಗಾತ್ರಕ್ಕೆ ಲಟ್ಟಿಸಿಕೊಳ್ಳಿ. ನಂತರ ಮಧ್ಯಭಾಗಕ್ಕೆ ಆಲೂ ಪಲ್ಯವನ್ನಿಟ್ಟು 4 ಭಾಗ ಮಡಚಿಕೊಳ್ಳಿ.


ಸ್ವಲ್ಪ ಗೋಧಿ ಹಿಟ್ಟನ್ನು ತೆಗೆದುಕೊಂಡು ಕಲಸಿದ ಉಂಡೆಯನ್ನು ಲಟ್ಟಿಸಿಕೊಳ್ಳಿ ಆದಷ್ಟು ಮೃದುವಾಗಿ ಲಟ್ಟಿಸಿ. ಬಿರುಸಾಗಿ ಲಟ್ಟಿಸಿದಲ್ಲಿ ಪಲ್ಯ ಹೊರಕ್ಕೆ ಬರಬಹುದು.


ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹಾಗೂ ರುಚಿಕರ ಮೊಳಕೆ ಕಾಳಿನ ಬಾತ್


ಗ್ಯಾಸ್‌ನಲ್ಲಿ ತವಾ ಇಟ್ಟುಕೊಂಡು 1/2 ಚಮಚದಷ್ಟು ಎಣ್ಣೆ ಹಾಕಿ. ತವಾ ಕಾಯುತ್ತಿದ್ದಂತೆ ನಿಧಾನವಾಗಿ ಲಟ್ಟಿಸಿದ ಪರೋಟಾವನ್ನು ತವಾದಲ್ಲಿರಿಸಿ. ಬೇಕಾದಷ್ಟು ಎಣ್ಣೆಯನ್ನು ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿಕೊಳ್ಳಿ.


ಇದೇ ರೀತಿ ಉಳಿದ ಪರೋಟಾಗಳನ್ನು ಸಿದ್ಧಪಡಿಸಿಕೊಳ್ಳಿ.


ಬೆಳಗಿನ ಉಪಹಾರಕ್ಕೆ ಆಲೂ ಪರೋಟ ಮಾಡಿ ಮಕ್ಕಳಿಗೆ ನೀಡಿ, ಬ್ರೇಕ್​ ಫಾಸ್ಟ್​ ಗೆ ಮಾತ್ರವಲ್ಲ  ಲಂಚ್​ ಬಾಕ್ಸ್​ಗೂ ಆಲೂ ಪರೋಟವನ್ನು ಹಾಕಿ ಕೊಡಬಹುದು. ಮೊಸರು, ವಿವಿಧ ಕರಿಗಳೊಂದಿಗೆ ತಿನ್ನಬಹುದು

Published by:Pavana HS
First published: