Breakfast Recipe: ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹೆಸರುಕಾಳಿನ ದೋಸೆ

ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿರುವ ಹೆಸರು ತಂಪಿನ ಗುಣವನ್ನು ಹೇರಳವಾಗಿ ಹೊಂದಿದೆ. ಹೆಸರು ಕಾಳಿನ ದೋಸೆಯನ್ನು ಹೆಚ್ಚಿನ ಪರಿಶ್ರಮವಿಲ್ಲದೆ ತ್ವರಿತವಾಗಿ ಸಿದ್ಧಪಡಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ದೈನಂದಿನ ಜೀವನದಲ್ಲಿ ಆಹಾರಗಳು (Food) ಪ್ರಮುಖ ಪಾತ್ರವನ್ನು ವಹಿಸುತ್ತವೆ. ದೇಹವನ್ನು ಆರೋಗ್ಯವಾಗಿರಿಸಿ (Health) ಬಲವರ್ಧನೆಯನ್ನು ಮಾಡುವ ಈ ಆಹಾರಗಳು ಹೆಚ್ಚು ಕೊಬ್ಬಿನಿಂದ ಕೂಡಿರದೇ ನಮ್ಮ ದೇಹಕ್ಕೆ ಶಕ್ತಿಯನ್ನು ತುಂಬುವಂತಿರಬೇಕು. ಪೋಷಕಾಂಶಗಳ ಕೊರತೆಯನ್ನು ನಾವು ಸೇವಿಸುವ ಆಹಾರ ಎದುರಿಸುತ್ತಿದೆ ಎಂದಾದಲ್ಲಿ ದೇಹವು ನ್ಯೂನತೆಗಳಿಂದ ಬಳಲುವುದು ಖಂಡಿತ. ಈ ನ್ಯೂನತೆಗಳು ನಮ್ಮ ದೇಹವನ್ನು ಸಮೀಪಿಸಬಾರದು ಎಂದಾದಲ್ಲಿ ನಾವು ಸೇವಿಸುವ ಆಹಾರದ ಮೇಲೆ ಹೆಚ್ಚುವರಿ ಗಮನವನ್ನು ನೀಡುವುದು ಅಗತ್ಯವಾಗಿದೆ. ಹಾಲು, ಹಣ್ಣು, ಹಸಿರು ಸೊಪ್ಪು, ತರಕಾರಿ, ಮೊಳಕೆ ಕಾಳುಗಳನ್ನು (Sprout seedlings) ಆಹಾರ ಹೊಂದಿದೆಯೇ ಎಂಬುದನ್ನು ಪರಿಶೀಲಿಸುವುದು ಅತೀ ಅಗತ್ಯ. ಜಿಡ್ಡಿನಿಂದ ಕೂಡಿದ ಮತ್ತು ಸಿದ್ಧ ಆಹಾರಗಳ (Ready Food ಸೇವನೆಯಿಂದ ನಮ್ಮ ದೇಹ ಬಳಲುವುದು ಖಂಡಿತ

ಇನ್ನು ಈ ಮೊದಲೇ ತಿಳಿಸಿದಂತೆ ಹಾಲು ಹಣ್ಣುಗಳೊಂದಿಗೆ ಮೊಳಕೆ ಕಾಳುಗಳು ಕೂಡ ದೈಹಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಿದ್ದರೆ ಮೊಳಕೆ ಕಾಳುಗಳನ್ನು ನಿಯಮಿತವಾಗಿ ಸೇವಿಸುವಂತೆ ಅದರಿಂದ ತಿಂಡಿಗಳನ್ನು ತಯಾರಿಸುವುದು ಹೇಗೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಹೆಚ್ಚಿನ ಪ್ರೋಟೀನ್ ವಿಟಮಿನ್‌ಗಳನ್ನು ತನ್ನಲ್ಲಿ ಸಮೃದ್ಧವಾಗಿ ಒಳಗೊಂಡಿರುವ ಧಾನ್ಯ ಹೆಸರು ಕಾಳಿನ ದೋಸೆಯನ್ನು ಸವಿಯಿರಿ. ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿರುವ ಹೆಸರು ತಂಪಿನ ಗುಣವನ್ನು ಹೇರಳವಾಗಿ ಹೊಂದಿದೆ. ಹೆಸರು ಕಾಳಿನ ದೋಸೆಯನ್ನು ಹೆಚ್ಚಿನ ಪರಿಶ್ರಮವಿಲ್ಲದೆ ತ್ವರಿತವಾಗಿ ಸಿದ್ಧಪಡಿಸಬಹುದು.

ಸಾಮಾಗ್ರಿಗಳು

*ಹೆಸರು ಕಾಳು 250 ಗ್ರಾಂ

*ಶುಂಠಿ - 1 ತುಂಡು

*ಜೀರಿಗೆ ಸ್ವಲ್ಪ

*ಉಪ್ಪು - ರುಚಿಗೆ

*ಹಸಿಮೆಣಸಿನಕಾಯಿ - 4

*ಕೊತ್ತಂಬರಿ ಸೊಪ್ಪು - ಸ್ವಲ್ಪ

*ಎಣ್ಣೆ - 50 ಗ್ರಾಮ್

ಮಾಡುವ ವಿಧಾನ

ಮೊದಲಿಗೆ ಹೆಸರು ಕಾಳನ್ನು ನೀರಿನಲ್ಲಿ 5 ಗಂಟೆಗಳ ಕಾಲ ನೆನೆಸಿ.  ನಂತರ ಕಾಳಿನಿಂದ ನೀರನ್ನು ಬಸಿದು, ಸಣ್ಣಗೆ ಹೆಚ್ಚಿದ ಹಸಿಮೆಣಸು, ಶುಂಠಿ, ಜೀರಿಗೆಯನ್ನು ಸೇರಿಸಿ ಚೆನ್ನಾಗಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಕೊನೆಗೆ ಉಪ್ಪು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ದೋಸೆ ಹಿಟ್ಟಿಗೆ ಸೇರಿಸಿ. ಈ ಸಮಯದಲ್ಲಿ ತವಾ ಬಿಸಿ ಮಾಡಿಕೊಳ್ಳಿ ಮತ್ತು ವೃತ್ತಾಕಾರವಾಗಿ ದೋಸೆಯನ್ನು ಹುಯ್ಯಿರಿ. ರುಚಿಕರವಾದ ಹೆಸರುಕಾಳಿನ ದೋಸೆ ಸವಿಯಲು ಸಿದ್ಧವಾಗಿದೆ. ಹಸಿರು ಚಟ್ನಿಯೊಂದಿಗೆ ಈ ದೋಸೆಯನ್ನು ಸವಿಯುವುದು ಅತ್ಯುತ್ತಮ ರುಚಿಯನ್ನು ನೀಡುತ್ತದೆ.

ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

ಈರುಳ್ಳಿ ಚಟ್ನಿ

ಬೇಕಾಗುವ ಪದಾರ್ಥಗಳು :  10 ಸಣ್ಣ ಈರುಳ್ಳಿ, 1 ಸಣ್ಣ ಬೆಳ್ಳುಳ್ಳಿ, 2 ಟೀಸ್ಪೂನ್ ಎಣ್ಣೆ, 1 ಟೀಸ್ಪೂನ್ ಉದ್ದಿನ ಬೇಳೆ,  1 ಚಮಚ ಕಡೆಲೆ ಬೇಳೆ,  1 ಟೀಸ್ಪೂನ್ ಕೊತ್ತಂಬರಿ ಬೀಜ, 4 ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಸಣ್ಣ ತುಂಡು ಹುಣಸೆಹಣ್ಣು, ಅರ್ಧ ಟೀಸ್ಪೂನ್ ಉಪ್ಪು , ಕಾಲು ಕಪ್ ನೀರು 1 ಟೀಸ್ಪೂನ್ ಸಾಸಿವೆ ಪಿಂಚ್ ಹಿಂಗ್  ಸ್ವಲ್ಪ ಅರಿಶಿನ 1 ಟೀಸ್ಪೂನ್ ಮೆಣಸಿನ ಪುಡಿ

ಇದನ್ನೂ ಓದಿ:BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ

ಮಾಡುವ ವಿಧಾನ: 

ಗ್ಯಾಸ್ ಮೇಲೆ ಒಂದು ಜಾಲರಿ ಇಟ್ಟು, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಸುಟ್ಟುಕೊಳ್ಳಿ. ಈರುಳ್ಳಿ ಒಳಗಿನಿಂದ ಮೃದುವಾಗುವವರೆಗೆ ಚೆನ್ನಾಗಿ ಸುಡಿ. ಸುಟ್ಟ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಸಿಪ್ಪೆತೆಗೆದು, ಮಿಕ್ಸಿ ಜಾರಿಗೆ ಹಾಕಿ, ಬದಿಯಲ್ಲಿಡಿ. ಬಾಣಲಿಗೆ 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, ಕೊತ್ತಂಬರಿ ಬೀಜ ಜೊತೆಗೆ, 4 ಒಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಹುರಿದು, ತಣ್ಣಗಾಗಿಸಿ ಅದೇ ಮಿಕ್ಸಿ ಜಾರಿಗೆ ಸೇರಿಸಿ, ಒಂದು ಸುತ್ತು ರುಬ್ಬಿಕೊಳ್ಳಿ.ಹೆಚ್ಚುವರಿಯಾಗಿ, ಒಂದು ಸಣ್ಣ ತುಂಡು ಹುಣಸೆಹಣ್ಣು, ಳಿ ಟೀಸ್ಪೂನ್ ಉಪ್ಪು ಮತ್ತು ನೀರು ಸೇರಿಸಿ. ಅಗತ್ಯವಿದ್ದರೆ ನೀರನ್ನು ಸೇರಿಸಿ ನಯವಾದ ಪೇಸ್ಟ್‌ ಆಗಿ ರುಬ್ಬಿಕೊಳ್ಳಿ.
Published by:Pavana HS
First published: