• Home
  • »
  • News
  • »
  • lifestyle
  • »
  • Recipe: ಬೆಳಗಿನ ಉಪಹಾರಕ್ಕೆ ದಿಢೀರ್ ರವಾ ಇಡ್ಲಿ; ಮಾಡೋದು ಬಲು ಸುಲಭ

Recipe: ಬೆಳಗಿನ ಉಪಹಾರಕ್ಕೆ ದಿಢೀರ್ ರವಾ ಇಡ್ಲಿ; ಮಾಡೋದು ಬಲು ಸುಲಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಿಸಿ ಬಿಸಿಯಾಗಿ ರುಚಿಯಾಗಿ ಮಾಡಲಾಗುವ ರವಾ ಇಡ್ಲಿಯ ಪಾಕ ವಿಧಾನಗಳನ್ನು ತಿಳಿಸಿಕೊಡುತ್ತಿದ್ದೇವೆ. ನೀವು ತರಾತುರಿಯಲ್ಲಿರುವಾಗ ಇಡ್ಲಿ ಸಿದ್ಧಪಡಿಸಬೇಕು ಎಂದಾದಲ್ಲಿ ಆಗ ರವೆ ಇಡ್ಲಿ ಮಾಡಿ ಸುಲಭವಾಗಿ ತಯಾರಿಸಬಹುದು.

  • Share this:

ದಕ್ಷಿಣ ಭಾರತದವರಿಗೆ ಇಡ್ಲಿ ಸಾಂಬಾರ್  (Idli Sambar) ಎಲ್ಲರು ಇಷ್ಟಪಡುವ ತಿಂಡಿ .  ಮಲ್ಲಿಗೆಯಂತಹ ಇಡ್ಲಿಯೊಂದಿಗೆ ಬೆಣ್ಣೆ, ಜೊತೆಗೆ ಬಿಸಿ ಬಿಸಿ ತೊಗರಿ ಬೇಳೆ ಸಾಂಬಾರ್ ಬೆರೆಸಿ ತಿಂದರಂತೂ ಆಹಾ ಅದೇ ಸಖತ್​ ಟೇಸ್ಟಿ ಫುಡ್​, ಇನ್ನು ಮನೆಯಲ್ಲೇ (Home) ದಿಢೀರರ ಆಗಿ ಇಡ್ಲಿ ಮಾಡಬಹುದು ಅಂದ್ರೆ ಸಾಕು ಇಡ್ಲಿ ಪ್ರಿಯರು ಫುಲ್​ ಖುಷ್​ ಆಗ್ತಾರೆ.  ಈ ಇಡ್ಲಿಯನ್ನು ಕೇವಲ 20 ನಿಮಿಷಗಳಲ್ಲಿಯೇ (20 Minutes) ಮಾಡಿಕೊಳ್ಳಬಹುದು. ಹಬೆಯಲ್ಲಿ ಬೇಯಿಸಿದ ರವೆ ಇಡ್ಲಿ ಸಾಂಬಾರ್ ಮತ್ತು ಚಟ್ನಿಯೊಂದಿಗೆ (Sambar And Chutney) ಬಡಿಸಲಾಗುತ್ತದೆ. ಇಡ್ಲಿ ದಿನದ ಯಾವುದೇ ಸಮಯದಲ್ಲಿ ಸೇವಿಸಿದರೂ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಇದು ತುಂಬಾ ಹಗುರ ಮತ್ತು ಮೃದುವಾಗಿದ್ದು ಸೇವಿಸಲು ಒಳ್ಳೆಯ ಭಕ್ಷ್ಯ (Tasty Food) ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಅಷ್ಟೊಂದು ರುಚಿಯ ಶಕ್ತಿಯನ್ನು ಇಡ್ಲಿ ಪಡೆದುಕೊಂಡಿದೆ. ಚಟ್ನಿ ಮತ್ತು ಸಾಂಬಾರ್ ಇಡ್ಲಿಗೆ ಉತ್ತಮ ಕಾಂಬಿನೇಶನ್ ಎಂದೆನಿಸಿದ್ದು, ಎರಡನ್ನೂ ಇಡ್ಲಿಯೊಂದಿಗೆ ಸೇವಿಸುತ್ತಾರೆ. ಇಡ್ಲಿಯಲ್ಲಿ ಹಲವಾರು ವಿಧಗಳಿದ್ದು ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ, ವೆಜಿಟೇಬಲ್ ಇಡ್ಲಿ, ಬೆಣ್ಣೆ ಇಡ್ಲಿ ಹೀಗೆ ಇಡ್ಲಿಯ ನಾನಾ ಹೆಸರುಗಳನ್ನು ಕೇಳಿದರೆ ಬಾಯಲ್ಲಿ ನೀರು ಬರುವುದಂತೂ ನಿಜ.


ಇಂದು ಬಿಸಿ ಬಿಸಿಯಾಗಿ ರುಚಿಯಾಗಿ ಮಾಡಲಾಗುವ ರವಾ ಇಡ್ಲಿಯ ಪಾಕ ವಿಧಾನಗಳನ್ನು ತಿಳಿಸಿಕೊಡುತ್ತಿದ್ದೇವೆ. ನೀವು ತರಾತುರಿಯಲ್ಲಿರುವಾಗ ಇಡ್ಲಿ ಸಿದ್ಧಪಡಿಸಬೇಕು ಎಂದಾದಲ್ಲಿ ಆಗ ರವೆ ಇಡ್ಲಿ ಮಾಡಿ ಸುಲಭವಾಗಿ ತಯಾರಿಸಬಹುದು. ಹೆಚ್ಚು ಸಮಯ ಬೇಕಿಲ್ಲ, ಮಾಡೋದು ಕೂಡ ತುಂಬಾ ಸುಲಭವಾಗಿದೆ.


ರವೆ ಇಡ್ಲಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು


ಹಿಟ್ಟಿಗಾಗಿ
1. ರವೆ - 1 ಕಪ್
2. ಮೊಸರು - 1/4 ಕಪ್
3. ಕೊತ್ತಂಬರಿ ಸೊಪ್ಪು - 1 ಚಮಚ
4. ಫ್ರುಟ್ ಸಾಲ್ಟ್ - 3/4 ಚಮಚ
5. ಉಪ್ಪು - ರುಚಿಗೆ ತಕ್ಕಷ್ಟು


ಇತರ ಸಾಮಾಗ್ರಿಗಳು 


ಎಣ್ಣೆ - 1 ಚಮಚ


ತುಪ್ಪ - 1/2 ಚಮಚ


ಉದ್ದಿನ ಬೇಳೆ - 1 ಚಮಚ


ಸಾಸಿವೆ - 1/2 ಚಮಚ


ಗೋಡಂಬಿ - 1 ಚಮಚ (ತುಂಡರಿಸಿದ್ದು)


ಜೀರಿಗೆ - 1/2 ಚಮಚ


ಕರಿಬೇವಿನೆಸಳು - 4


ಹಸಿಮೆಣಸು - 2 ಚಮಚ


ಚಿಟಿಕೆಯಷ್ಟು ಇಂಗು


ಇದನ್ನೂ ಓದಿ: 20 ನಿಮಿಷದಲ್ಲಿ ರೆಡಿಯಾಗುತ್ತೆ ಗೋಲಿ ಇಡ್ಲಿ, ಬೆಳಗ್ಗಿನ ಗಡಿಬಿಡಿಗೆ ಸೂಪರ್ ತಿಂಡಿ - ಟ್ರೈ ಮಾಡಿ


ಮಾಡುವ ವಿಧಾನ:


1. ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ರವೆ, ಮೊಸರು ಮತ್ತು ಉಪ್ಪನ್ನು ಸೇರಿಸಿ. ನಿಧಾನವಾಗಿ ನೀರನ್ನು ಸೇರಿಸಿಕೊಂಡು ಹಿಟ್ಟನ್ನು ಮಿಶ್ರ ಮಾಡಿಕೊಳ್ಳಿ ಗಂಟುಗಳು ಆಗದಂತೆ ಕಲಸುತ್ತಿರಿ.


2. ಈಗ, ಇದಕ್ಕೆ ಒಗ್ಗರಣೆ ಹಾಕಿ, ಸಣ್ಣ ಪ್ಯಾನ್ ತೆಗೆದುಕೊಂಡು ಅದರಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದಕ್ಕೆ ಸಾಸಿವೆ, ಉದ್ದಿನಬೇಳೆ, ಕರಿಬೇವಿನೆಸಳು, ಗೋಡಂಬಿ, ಜೀರಿಗೆ, ಇಂಗು ಮತ್ತು ಕರಿಬೇವಿನ ಸೋಪ್ಪು ಸೇರಿಸಿ ಒಗ್ಗರಣೆ ಹಾಕಿ


3. ಎಲ್ಲವೂ ಚೆನ್ನಾಗಿ ಹುರಿದ ಮೇಲೆ, ಹಿಟ್ಟಿಗೆ ಒಗ್ಗರಣೆಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಫ್ರುಟ್ ಸಾಲ್ಟ್ ಅನ್ನು ಸೇರಿಸಿ ಮತ್ತು ಸ್ವಲ್ಪ ನೀರು ಮಿಶ್ರ ಮಾಡಿ. ಹಿಟ್ಟಿನಲ್ಲಿ ಹುದುಗು ಉಂಟಾಗುತ್ತದೆ ಮತ್ತು ಚೆನ್ನಾಗಿ ಮಿಶ್ರ ಮಾಡಿ.


4. ಈಗ ಇಡ್ಲಿ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಚ್ಚಿ. ಇಡ್ಲಿ ತಟ್ಟೆಗೆ ಸ್ವಲ್ಪ ಹಿಟ್ಟನ್ನು ಹಾಕಿ ಮತ್ತು ಸ್ಟೀಮರ್‌ನಲ್ಲಿ ತಟ್ಟೆಯನ್ನಿರಿಸಿ.


ಇದನ್ನೂ ಓದಿ: ದೋಸೆ ಜೊತೆಗೆ ಟೊಮೊಟೊ-ಈರುಳ್ಳಿ ಚಟ್ನಿ ಇದ್ರೆ ಸೂಪರ್ ಅಲ್ವಾ, ಇಲ್ಲಿದೆ ನೋಡಿ ರೆಸಿಪಿ


5. ಸ್ಟೀಮ್‌ಗಾಗಿ 7-8 ನಿಮಿಷಗಳು ಬೇಕು. ಚಮಚದ ಸಹಾಯದಿಂದ ಇಡ್ಲಿಗಳನ್ನು ಹೊರತೆಗೆಯಿರಿ ಮತ್ತು ಪ್ಲಾಟರ್ ಮೇಲಿರಿಸಿ.


6. ಬಿಸಿಯಾದ ರವಾ ಇಡ್ಲಿ ಸೇವನೆಗೆ ಸಿದ್ಧವಾಗಿದೆ. ಇಡ್ಲಿಯೊಂದಿಗೆ ಬಿಸಿ ಸಾಂಬಾರ್ ಇಲ್ಲವೇ ಚಟ್ನಿ ಉತ್ತಮ ಕಾಂಬಿನೇಶನ್ ಆಗಿದೆ. ಈ ವಿಶಿಷ್ಟ ರೆಸಿಪಿಯನ್ನು ನೀವೂ ಟ್ರೈ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.

Published by:Pavana HS
First published: