ದೋಸೆ, (Dose) ಚಪಾತಿ (Chapati), ರೊಟ್ಟಿಗೆ ತುಪ್ಪದೊಂದಿಗೆ ಸ್ವಲ್ಪಯಿದ್ದರೆ ಎಂಥಾ ರುಚಿ ಅಲ್ವಾ. ಅದರಲ್ಲೂ ಈ ಚಳಿಗಾಲ ಮಳೆಗಾಲದಲ್ಲಿ ಸಂಜೆ ಹೊತ್ತು ಹಪ್ಪಳದೊಟ್ಟಿಗೆ ಚಟ್ನಿ ಪುಡಿ (Chutney Powder) ಇನ್ನೂ ರುಚಿ ನೀಡುತ್ತೆ. ಆದರೆ ಚಟ್ನಿ ಪುಡಿಯನ್ನು ಅಂಗಡಿಯಲ್ಲಿ ಕೊಂಡುಕೊಳ್ಳುವ ಬದಲು ಮನೆಯಲ್ಲೇ (Home) ಮಾಡಿ ರುಚಿ ನೋಡಬಹುದು. ಚಟ್ನಿ ಪುಡಿ ತಯಾರಿಸೋದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.
ಚಟ್ನಿ ಪುಡಿಗೆ ಬೇಕಾಗುವ ಸಾಮಾಗ್ರಿ:
*1 ಬಟ್ಟಲು ಉದ್ದಿನಬೇಳೆ
* 1 ಬಟ್ಟಲು ಕಡಲೆಬೇಳೆ
* 1 ಕಪ್ ಒಣಕೊಬ್ಬರಿ ತುರಿ
* ಒಣ ಮೆಣಸಿನ ಕಾಯಿ
* ಸ್ವಲ್ಪ ಹುಣಸೇ ಹಣ್ಣು
* ಬೆಲ್ಲ ಸ್ವಲ್ಪ
* ಜೀರಿಗೆ, ಕರಿಬೇವು
* ಉಪ್ಪು
ಚಟ್ನಿ ತಯಾರಿಸುವ ವಿಧಾನ:
*ಉದ್ದಿನಬೇಳೆ ಮತ್ತು ಕಡಲೆಬೇಳೆಯನ್ನು ಸ್ವಲ್ಪ ಕೆಂಪಾಗುವವರೆಗೆ, ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಮೆಣಸಿನಕಾಯಿ, ಕರಿಬೇವು, ಹುಣಸೇಹಣ್ಣನ್ನು ಹುರಿದುಕೊಳ್ಳಬೇಕು.
*ಕೊಬ್ಬರಿಯನ್ನು ಹುರಿದುಕೊಂಡು ಹುರಿದಿಟ್ಟ ಎಲ್ಲಾ ಸಾಮನುಗಳನ್ನು ಸೇರಿಸಿ ಅದರ ಜೊತೆ ಬೆಲ್ಲ ಮತ್ತು ಉಪ್ಪು ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಂಡರೆ ರುಚಿಕರ ಚಟ್ನಿ ಪುಡಿ ತಿನ್ನಲು ಸಿದ್ಧ.
* ಶರೀರವನ್ನು ತಯಾರಿಸಲು ತೆಂಗಿನಕಾಯಿತುರಿಯನ್ನು ಹಾಕಬೇಕಾಗಿಲ್ಲ. ಹಾಗಾಗಿ ಡಯಾಬಿಟಿಸ್ ಹಾಗೂ ಕೊಲೆಸ್ಟ್ರಾಲ್ ಸಮಸ್ಯೆಗಳಿರುವವರೂ ಇದನ್ನು ಧಾರಾಳವಾಗಿ ಬಳಸಬಹುದಾಗಿದೆ.
*ಕಾಯಿಯನ್ನು ಬಳಸದಿದ್ದರೂ ಇದರ ಸ್ವಾದ ತುಂಬಾ ರುಚಿಕರ. ಅಲ್ಲದೇ ಇದರ ತಯಾರಿಕೆಯಲ್ಲಿ ಕೇವಲ ಕಾಲು ಚಮಚ ಎಣ್ಣೆಯನ್ನು ಬಳಸುವುದರಿಂದ ಇದು ಹೆಚ್ಚು ಸಮಯ ಬಾಳಿಕೆ ಬರುವುದು. ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 3-4 ತಿಂಗಳ ಕಾಲದವರೆಗೂ ರುಚಿಕೆಡದಂತಿರುತ್ತದೆ.
ಇದನ್ನೂ ಓದಿ: Recipe: ಮನೆಯಲ್ಲೇ ಬಿಸಿಬೇಳೆ ಬಾತ್ ಪೌಡರ್ ತಯಾರಿಸೋದು ಹೇಗೆ ಗೊತ್ತಾ?
*ಈ ಚಟ್ನಿಪುಡಿಯ ತಯಾರಿಕೆಯಲ್ಲಿ ಬಳಸುವ ಬೇವಿನ ಗರಿಗಳ ಪ್ರಮಾಣ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಹಿತಕರ. ಅದೂ ಅಲ್ಲದೇ ಕೊಲೆಸ್ಟ್ರಾಲ್ ಹೆಚ್ಚಿರುವವರು ಬೇವಿನೆಲೆಯನ್ನು ಹೆಚ್ಚು ಸೇವಿಸಿದರೆ ಕೊಬ್ಬು ಕಡಿಮೆಯಾಗುತ್ತದೆ.
* ಟೊಮೇಟೋ ತಿಳಿಸಾರನ್ನೋ ಇಲ್ಲಾ ಯಾವುದೇ ಬಗೆಯ ಪಲ್ಯವನ್ನೋ ದಿಡೀರನೆ ತಯಾರಿಸುವಾಗ, ಈ ಚಟ್ನಿಪುಡಿಯನ್ನು (ಮೆಣಸಿನ ಪುಡಿಯ ಬದಲು, ಇಲ್ಲಾ ಮೆಣಸಿನ ಪುಡಿಯ ಜೊತೆಗೆ) 2-3 ಚಮಚ ಹಾಕಿ ಮಾಡಿದರೆ ಬೇರೇಯೇ ಸ್ವಾದದೊಂದಿಗೆ ಘಮ ಘಮಿಸುವ ಪರಿಮಳವನ್ನೂ ನೀಡುತ್ತದೆ.
ಕಾಯಿ ಹಾಕದೇ ಚಟ್ನಿ ಪುಡಿ ಮಾಡಿ
ಬೇಕಾಗುವ ಸಾಮಾಗ್ರಿಗಳು
ಕಡಲೇ ಬೇಳೆ - 1
ಲೋಟ ಉದ್ದಿನ ಬೇಳೆ - 1
ಲೋಟ ಬಿಳೇ ಎಳ್ಳು - 1/2 ಲೋಟ
ಇಂಗು - 5 ಗ್ರಾಂ
ಕರಿಬೇವಿನ ಎಲೆಗಳು - 10 (ಕೇವಲ 10 ಎಲೆಗಳಲ್ಲ, ಎಲೆಗಳನ್ನೊಳಗೊಂಡ ಗರಿಗಳು ಒಟ್ಟೂ 10)
ಕೊತ್ತೊಂಬರಿ - 1 ಚಮಚ
ಜೀರಿಗೆ - 1 ಚಮಚ
ಜಾಯಿಕಾಯಿ - ಸಣ್ಣ ಚೂರು
ತೆಂಗಿನೆಣ್ಣೆ - 1/4 ಚಮಚ
ಹುಳಿ ಪುಡಿ - 1/4 ಚಮಚ (ರುಚಿಗೆ ತಕ್ಕಷ್ಟು, ನಿಮಗೆ ಬೇಕಿದ್ದಷ್ಟು)
ಉಪ್ಪು - ರುಚಿಗೆ ತಕ್ಕಷ್ಟು ಮೆಣಸಿನ ಪುಡಿ - ಸಾಮಾನ್ಯವಾಗಿ 2-3 ಚಮಚ. (ಖಾರವನ್ನು ಉಪಯೋಗಿಸುವುದರ ಮೇಲೆ
ಪ್ರಮಾಣವನ್ನು ಹೆಚ್ಚು/ಕಡಿಮೆ ಮಾಡಿಕೊಳ್ಳಬಹುದು. ಮೆಣಿಸಿನ ಪುಡಿಯನ್ನು ಜಾಸ್ತಿ ಪ್ರಮಾಣದಲ್ಲಿ ಹಾಕಿದರೆ ಉಪ್ಪು, ಹುಳಿಯನ್ನೂ ಜಾಸ್ತಿ ಪ್ರಮಾಣದಲ್ಲಿ ಹಾಕಬೇಕು.
ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಹೆಲ್ದಿ ಬೀಟ್ರೂಟ್ ಬಾತ್ ಮಾಡಿ
ಮಾಡುವ ವಿಧಾನ
ಕಡಲೇ ಬೇಳೆ + ಉದ್ದಿನ ಬೇಳೆ + ಬಿಳೇ ಎಳ್ಳು + ಕರಿಬೇವಿನೆಲೆಗಳನ್ನು ಬೇರೆಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು. ಕೊತ್ತಂಬರಿ ಹಾಗೂ ಜೀರಿಗೆ ಎರಡನ್ನೂ ಒಟ್ಟಿಗೇ ಸೇರಿಸಿ ಹುರಿದುಕೊಂಡು ಪುಡಿಮಾಡಿಟ್ಟುಕೊಳ್ಳಬೇಕು.
ಇಂಗಿಗೆ ಕೇವಲ 1/4 ಚಮಚ ತೆಂಗಿನೆಣ್ಣೆಯನ್ನು ಸೇರಿಸಿ ಅದು ಕಂದು ಬಣ್ಣಕ್ಕೆ ಬರುವಷ್ಟು ಹುರಿಯಬೇಕು. ಗ್ಯಾಸ್ ಆರಿಸಿ, ಹುರಿದ ಇಂಗಿಗೆ ಮೊದಲಿಗೆ ಹುರಿದಿಟ್ಟು ಕೊಂಡಿರುವ ಬೇಳೆಗಳನ್ನು, ಜಾಯಿಕಾಯಿ ಚೂರನ್ನೂ ಹಾಗೂ ಜೀರಿಗೆ+ ಕೊತ್ತುಂಬರಿ ಪುಡಿಯನ್ನೂ ಸೇರಿಸಬೇಕು. ಚೆನ್ನಾಗಿ ತಣಿದ ನಂತರ ಮಿಕ್ಸಿಯಲ್ಲಿ ಹಾಕಿ ಸಣ್ಣದಾಗಿ ಪುಡಿಮಾಡಬೇಕು.
ನಂತರ ದೊಡ್ಡ ಬಾಣಲೆಯಲ್ಲಿ ಈ ಪುಡಿಯನ್ನು ಹಾಕಿ ಅದಕ್ಕೆ ಉಪ್ಪು, ಹುಳಿಪುಡಿ ಹಾಗೂ ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಘಮ್ಮೆನ್ನುವ ರುಚಿಕರ ಚಟ್ನಿ ಪುಡಿ ಸೇವಿಸಲು ಸಿದ್ಧ. ಊಟದ ಮೇಜಿನ ಮೇಲೆ ಚಟ್ನಿಪುಡಿ ಡಬ್ಬ ಇಲ್ಲದಿದ್ದರೆ ಊಟಕ್ಕೆ ಕಳೆಯಿಲ್ಲ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ