• Home
  • »
  • News
  • »
  • lifestyle
  • »
  • Upma Recipe: ಬಾಯಲ್ಲಿ ಇಟ್ರೆ ಕರಗುತ್ತೆ ತುಪ್ಪದ ಉಪ್ಪಿಟ್ಟು; ರೆಸಿಪಿ ತುಂಬಾನೇ ಸಿಂಪಲ್, ನೀವು ಟ್ರೈ ಮಾಡಿ

Upma Recipe: ಬಾಯಲ್ಲಿ ಇಟ್ರೆ ಕರಗುತ್ತೆ ತುಪ್ಪದ ಉಪ್ಪಿಟ್ಟು; ರೆಸಿಪಿ ತುಂಬಾನೇ ಸಿಂಪಲ್, ನೀವು ಟ್ರೈ ಮಾಡಿ

ತುಪ್ಪದ ಉಪ್ಪಿಟ್ಟು

ತುಪ್ಪದ ಉಪ್ಪಿಟ್ಟು

ತುಪ್ಪದ ಉಪ್ಪಿಟ್ಟು ಹೇಗೆ ಮಾಡಬೇಕು? ಬೇಕಾಗುವ ಸಾಮಾಗ್ರಿಗಳು ಏನು ಎಂಬುದರ ಮಾಹಿತಿ ಇಲ್ಲಿದೆ. ಈ ಉಪ್ಪಿಟ್ಟು ನೀವು ಬಾಯಲ್ಲಿ ಇಟ್ರೆ ಸಾಕು  ಕರಗುತ್ತೆ ಅಷ್ಟು ಸಾಫ್ಟ್​ ಆಗಿರುತ್ತೆ ತುಪ್ಪದ ಉಪ್ಪಿಟ್ಟು.

  • Share this:

ಬೆಳಗ್ಗೆ ತಿಂಡಿ (Breakfast Recipe) ಏನು ಮಾಡೋದು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಮನೆಯಲ್ಲಿರುವ ಮಕ್ಕಳಿಂದ ಹಿಡಿದು ಹಿರಿಯರು ಪ್ರತಿದಿನ ಹೊಸ ತಿಂಡಿಗಾಗಿ (Tiffin) ಕಾಯುತ್ತಿರುತ್ತಾರೆ. ದಕ್ಷಿಣ ಭಾರತದ (South India Food) ಭಾಗದಲ್ಲಿ ಇಡ್ಲಿ, ದೋಸೆ, ಚಿತ್ನನ್ನ, ಉಪ್ಪಿಟ್ಟು ಅಥವಾ ಉಪ್ಮಾ, ಅವಲಕ್ಕಿ ಎವರ್​ಗ್ರೀನ್ ತಿಂಡಿಗಳು. ಆದ್ರೆ ಈ ತಿಂಡಿ ತಿಂದು ಬೇಜಾರು ಆದೋರು ಅಯ್ಯೋ ಮತ್ತೆ ಇದೇನಾ ಅಂತ ತಿನ್ನುವ ಮೊದಲೇ ರಾಗ ಎಳೆಯುತ್ತಾರೆ. ಈ ಮೇಲಿನ ತಿಂಡಿಗಳಲ್ಲಿ ಹೊಸ ರುಚಿಯನ್ನು ನೀಡಬಹುದು. ಈಗಾಗಲೇ ನಿಮ್ಮ ನ್ಯೂಸ್​ 18 ಕನ್ನಡ ಅಡುಗೆ ವಿಭಾಗದಲ್ಲಿ ವೆರೈಟಿಯಾಗಿ ಇಡ್ಲಿ (Idly), ದೋಸೆ (Dosa), ಉಪ್ಪಿಟ್ಟು (Uppittu/Upma) ಮಾಡೋದನ್ನು ಹೇಳಿದ್ದೇವೆ.


ಇಂದು ನಾವು ನಿಮಗೆ ಬಹುತೇಕರು ಇಷ್ಟಪಡದ ತಿಂಡಿ ಉಪ್ಪಿಟ್ಟು ಹೊಸ ರುಚಿಯಲ್ಲಿ ಹೇಗೆ ಮಾಡೋದನ್ನು ಹೇಳುತ್ತಿದ್ದೇವೆ. ಈ ಉಪ್ಪಿಟ್ಟು ಆರೋಗ್ಯಕರ ತಿಂಡಿಯಾಗಿದೆ. ಇಂದು ತುಪ್ಪದ ಉಪ್ಪಿಟ್ಟು ಹೇಗೆ ಮಾಡಬೇಕು? ಬೇಕಾಗುವ ಸಾಮಾಗ್ರಿಗಳು ಏನು ಎಂಬುದರ ಮಾಹಿತಿ ಇಲ್ಲಿದೆ. ಈ ಉಪ್ಪಿಟ್ಟು ನೀವು ಬಾಯಲ್ಲಿ ಇಟ್ರೆ ಸಾಕು  ಕರಗುತ್ತೆ ಅಷ್ಟು ಸಾಫ್ಟ್​ ಆಗಿರುತ್ತೆ ತುಪ್ಪದ ಉಪ್ಪಿಟ್ಟು.


ಬೇಕಾಗುವ ಸಾಮಾಗ್ರಿಗಳು


ಚಿರೋಟಿ ರವೆ: 1 ಕಪ್


ಹಸಿ ಮೆಣಸಿನಕಾಯಿ: 2 ರಿಂದ 3


ಕರಿಬೇವು: 3 ರಿಂದ 4


ಈರುಳ್ಳಿ: 1 (ಚಿಕ್ಕದು)


ಕೋತಂಬರಿ ಸೊಪ್ಪು


ಹಸಿ ಶುಂಠಿ: ಅರ್ಧ ಇಂಚು


ಸಾಸವೆ, ಜೀರಿಗೆ: ಎರಡೂ ಸೇರಿಸಿ ಅರ್ಧ ಟೀ ಸ್ಪೂನ್


ಉದ್ದಿನಬೇಳೆ: 1 ಟೀ ಸ್ಪೂನ್


ಹುಣಸೆಹಣ್ಣು: ಬೆಳ್ಳುಳ್ಳಿ ಗಾತ್ರದಷ್ಟು


ಗೋಡಂಬಿ: 4 ರಿಂದ 5


ತುಪ್ಪ: 4 ರಿಂದ 5 ಟೀ ಸ್ಪೂನ್


ಸಕ್ಕರೆ: ಅರ್ಧ ಟೀ ಸ್ಪೂನ್


ಉಪ್ಪು: ರುಚಿಗೆ ತಕ್ಕಷ್ಟು


Breakfast How to make tasty ghee upma mrq
ಉಪ್ಪಿಟ್ಟು


ತುಪ್ಪದ ಉಪ್ಪಿಟ್ಟು ಮಾಡುವ ವಿಧಾನ


*ಮೊದಲಿಗೆ ಸ್ಟೌವ್  ಆನ್ ಮಾಡಿಕೊಂಡು ಪಾತ್ರೆ ಇಟ್ಟುಕೊಳ್ಳಿ. ಪಾತ್ರೆಗೆ ಒಂದು ಟೀ ಸ್ಪೂನ್​ನಷ್ಟು ತುಪ್ಪ ಹಾಕಿಕೊಂಡು ಗೋಡಂಬಿಯನ್ನು ಫ್ರೈ ಮಾಡಿಕೊಂಡು ಎತ್ತಿಟ್ಟುಕೊಳ್ಳಿ.


*ಗೋಡಂಬಿಗೆ ತೆಗೆದ ಬಳಿಕ ಇದೇ ಪಾತ್ರೆ ರವೆ ಹಾಕಿಕೊಂಡು ಅರ್ಧ ಟೀ ಸ್ಪೂನ್​ನಷ್ಟು ತುಪ್ಪ ಹಾಕಿ ಹುರಿದುಕೊಳ್ಳಿ. ಹುರಿಯುವಾಗ ರವೆ ಸುವಾಸನೆ ಬರಬೇಕು ಮತ್ತು ಸ್ವಲ್ಪ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಸ್ಟೌವ್ ಆಫ್ ಮಾಡಿಕೊಳ್ಳಿ.


*ಈಗ ಈರುಳ್ಳಿ, ಹಸಿಮೆಣಸಿನ ಕಾಯಿ, ಕೋತಂಬರಿಯನ್ನು ಸಣ್ಣದಾಗಿ ಕತ್ತಿರಿಸಿಟ್ಟುಕೊಳ್ಳಿ. ಒಂದು ಬೌಲ್​ನಲ್ಲಿ ನೀರು ಹಾಕಿಕೊಂಡು ಹುಣಸೆಹಣ್ಣು ನೆನಸಿಟ್ಟುಕೊಳ್ಳಿ. (ಹುಣಸೆ ಬದಲಾಗಿ ಟೊಮಾಟೋ ಅಥವಾ ನಿಂಬೆಹಣ್ಣು ಸಹ ಬಳಸಬಹುದು).


*ತದನಂತರ ಸ್ಟೌವ್ ಆನ್ ಮಾಡ್ಕೊಂಡು ಪಾತ್ರೆಯನ್ನು ಇರಿಸಿಕೊಳ್ಳಿ. ಪಾತ್ರೆಗೆ ಎರಡು ಟೀ ಸ್ಪೂನ್ ತುಪ್ಪ ಹಾಕಿಕೊಳ್ಳಿ. ತುಪ್ಪ ಬಿಸಿಯಾಗುತ್ತಿದ್ದಂತೆ ಜೀರಿಗೆ, ಸಾಸವೆ ಹಾಕಿ. ನಂತರ ಉದ್ದಿನಬೇಳೆ ಹಾಕಿ ಫ್ರೈ ಮಾಡಿಕೊಂಡ ನಂತರ ಕತ್ತರಿಸಿದ ಈರುಳ್ಳಿ ಸೇರಿಸಿಕೊಳ್ಳಿ.


Breakfast How to make tasty ghee upma mrq
ಉಪ್ಪಿಟ್ಟು


ಇದನ್ನೂ ಓದಿ:  Breakfast Recipe: ಬೇಡ ಬೇಡ ಅನ್ನೋರು ಸಹ ಚಪ್ಪರಿಸಿಕೊಂಡು ತಿಂತಾರೆ ‘ಮಜ್ಜಿಗೆ ಉಪ್ಪಿಟ್ಟು’; ಇಲ್ಲಿದೆ ಸ್ಪೆಷಲ್ ರೆಸಿಪಿ


*ಈರುಳ್ಳಿಯ ಹಸಿ ವಾಸನೆ ಹೋಗುತ್ತಿದ್ದಂತೆ ಜಜ್ಜಿದ ಅಥವಾ ಕತ್ತರಿಸಿದ ಹಸಿ ಶುಂಠಿ, ಕರಿಬೇವು ಮತ್ತು ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ.


*ತದನಂತರ ಹುಣಸೆಹಣ್ಣಿನ ರಸ, ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎರಡು ನಿಮಿಷ ಬೇಯಿಸಿದ ನಂತರ ರವೆಗೆ ತಕ್ಕಂತೆ ಎರಡು ಕಪ್ ನೀರು ಹಾಕಿಕೊಳ್ಳಿ.


*ನೀರು ಕುದಿಯಲು ಆರಂಭಿಸುತ್ತಿದ್ದಂತೆ ಹುರಿದುಕೊಂಡಿರುವ ರವೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ರವೆ ಗಂಟು ಆಗದಂತೆ ನೋಡಿಕೊಳ್ಳಿ.


ಇದನ್ನೂ ಓದಿ:  Breakfast: ಬೆಳಗಿನ ಉಪಹಾರಕ್ಕೆ ಊದಲು ಅಕ್ಕಿಯ ಉಪ್ಪಿಟ್ಟು ರೆಸಿಪಿ ಹೀಗೆ ಮಾಡಿ!


*ಈಗ ಪಾತ್ರೆಗೆ ಮುಚ್ಚಳ ಮುಚ್ಚಿ ಎರಡರಿಂದ ಮೂರು ನಿಮಿಷ ಬೇಯಿಸಿದ್ರೆ ತುಪ್ಪದ ಉಪ್ಪಿಟ್ಟು ಸವಿಯಲು ಸಿದ್ಧ.


*ಕೊನೆಗೆ ಫ್ರೈ ಮಾಡಿಕೊಂಡಿರುವ ಗೋಡಂಬಿ ಮತ್ತು ಕೋತಂಬರಿ ಸೊಪ್ಪು ಉದುರಿಸಿದ್ರೆ ನಿಮ್ಮ ರುಚಿಯಾದ ತುಪ್ಪದ ಉಪ್ಪಿಟ್ಟು ಸುಂದರಿಯಂತೆ ಕಂಗೊಳಿಸುತ್ತದೆ.

Published by:Mahmadrafik K
First published: