ಜೇಡದ ವಿಷದಿಂದ ಸಿದ್ಧಗೊಳ್ಳುವ ಈ ಔಷಧ​ ವಯಾಗ್ರಕ್ಕಿಂತಲೂ ಹೆಚ್ಚು ಪ್ರಭಾವಶಾಲಿ!

ಬ್ರೆಜಿಲ್​ನಲ್ಲಿರುವ ವಾಂಡರಿಂಗ್​ ಸ್ಪೈಡರ್​ನಿಂದ ಸಿದ್ಧಗೊಳ್ಳುವ ಜೆಲ್​ ಸಹಾಯದಿಂದ ಪುರಷನ ಲೈಂಗಿಕ ಶಕ್ತಿ ಹೆಚ್ಚಲಿದೆ. ಪುರುಷ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬಳಕೆ ಮಾಡುವ ವಯಾಗ್ರಕ್ಕಿಂತಲೂ ಹೆಚ್ಚು ಪ್ರಭಾವಶಾಲಿ!

news18
Updated:March 5, 2019, 3:39 PM IST
ಜೇಡದ ವಿಷದಿಂದ ಸಿದ್ಧಗೊಳ್ಳುವ ಈ ಔಷಧ​ ವಯಾಗ್ರಕ್ಕಿಂತಲೂ ಹೆಚ್ಚು ಪ್ರಭಾವಶಾಲಿ!
ಸಾಂದರ್ಭಿಕ ಚಿತ್ರ
  • News18
  • Last Updated: March 5, 2019, 3:39 PM IST
  • Share this:
ಜಗತ್ತಿನಲ್ಲಿರುವ ಸಾಕಷ್ಟು ಜೇಡಗಳು ವಿಷಕಾರಿ ಎಂಬುದು ಅನೇಕರಿಗೆ ಗೊತ್ತಿದೆ. ಜೇಡ ಕಚ್ಚಿದ ನಂತರ ದೇಹದಲ್ಲಿ ನಂಜಾಗಿ ಆಸ್ಪತ್ರೆಗೆ ದಾಖಲಾದ ಸಾಕಷ್ಟು ಉದಾಹರಣೆಗಳಿವೆ. ಕೆಲ ಜೇಡಗಳು ಅದೆಷ್ಟು ವಿಷಕಾರಿಯಾಗಿರುತ್ತವೆ ಎಂದರೆ ಅವು ಒಮ್ಮೆ ಕಚ್ಚಿದರೆ ಸಾವು ಖಚಿತ. ಆದರೆ, ಇಂಥ ಜೇಡಗಳಿಂದ ಲಾಭವೂ ಇದೆ. ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಕ್ರಿಮಿ ಸಹಕಾರಿ ಎಂದರೆ ನೀವು ನಂಬಲೇಬೇಕು!

ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು ಅನೇಕರು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಾರೆ. ಕೆಲವರು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಇನ್ನೂ ಕೆಲವರು ವೈದ್ಯಕೀಯ ಜಗತ್ತಿನ ಮೊರೆ ಹೋಗುತ್ತಾರೆ. ಕೆಲವರು ಟ್ಯಾಬ್ಲೆಟ್​ ತಿನ್ನುವ ಮೂಲಕ ಲೈಂಗಿಕ ಶಕ್ತಿ ವೃದ್ಧಿಸಿಕೊಳ್ಳುತ್ತಾರೆ. ಇಂಥವರಿಗೋಸ್ಕರವೇ ವಿಜ್ಞಾನಿಗಳು ಹೊಸ ಔಷಧಿ ಕಂಡು ಹಿಡಿದ್ದಾರೆ. ಅದು ಜೇಡದ ವಿಷದಿಂದ!

ಇದನ್ನೂ ಓದಿ: ಲೈಂಗಿಕ ಜೀವನದಲ್ಲಿ ಯಶಸ್ಸು ಕಾಣಲು ಇಲ್ಲಿವೆ ಕೆಲ ಸೂತ್ರಗಳು!

ಬ್ರೆಜಿಲ್​ನಲ್ಲಿರುವ ವಾಂಡರಿಂಗ್​ ಸ್ಪೈಡರ್​ ತುಂಬಾನೇ ವಿಷಕಾರಿ. ಇದು ಮಕ್ಕಳಿಗೆ ಕಚ್ಚಿದರೆ ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆಯಂತೆ. ಆದರೆ, ಇದರಿಂದ ಧನಾತ್ಮಕ ಲಾಭವೂ ಇದೆ! ಈ ಜೇಡದ ವಿಷದಿಂದ ಸಿದ್ಧಗೊಳ್ಳುವ ಜೆಲ್​ ಸಹಾಯದಿಂದ ಪುರಷನ ಲೈಂಗಿಕ ಶಕ್ತಿ ಹೆಚ್ಚಲಿದೆ. ಪುರುಷ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬಳಕೆ ಮಾಡುವ ವಯಾಗ್ರಕ್ಕಿಂತಲೂ ಹೆಚ್ಚು ಪ್ರಭಾವಶಾಲಿ ಎಂಬುದು ವೈದ್ಯರ ಅಭಿಪ್ರಾಯ.

ಈ ಜೇಡದಲ್ಲಿರುವ ನಂಜಿನ ಅಂಶ ಮನುಷ್ಯನ ದೇಹಕ್ಕೆ ಸೇರಿದರೆ ಶಿಶ್ನಕ್ಕೆ ಪೂರೈಕೆ ಆಗುವ ರಕ್ತದ ಪ್ರಮಾಣ ದ್ವಿಗುಣಗೊಳ್ಳುತ್ತದೆ. ಇದರಿಂದ ಅವನ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲವಂತೆ.

ಇದನ್ನೂ ಓದಿ:  ವಾರದ ನಿದ್ರೆಯನ್ನೆಲ್ಲ ವೀಕೆಂಡ್​ನಲ್ಲಿ ಮುಗಿಸಿಬಿಡ್ತೀರಾ?; ಇನ್ನು ಹಾಗೆ ಮಾಡಬೇಡಿ

“ನಾವು ಈ ಔಷಧವನ್ನು ಅಭಿವೃದ್ಧಿ ಪಡಿಸಿರುವುದು ಪುರುಷರಿಗೆ ತುಂಬಾ ಸಹಾಯಕಾರಿಯಾಗಲಿದೆ. ಈಗಾಗಲೇ ಪ್ರಯೋಗ ಹಂತದಲ್ಲಿ ಈ ಔಷಧಿ ಯಶಸ್ವಿಕಂಡಿದೆ. ಶೀಘ್ರದಲ್ಲೇ ಈ ಔಷಧಿಯನ್ನು ಮಾರುಕಟ್ಟೆಗೆ ಬಿಡುವ ಆಲೋಚನೆ ಇದೆ,” ಎನ್ನುತ್ತಾರೆ ತಜ್ಞರು.
First published:March 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ