ಗೆಳೆತನವನ್ನು ದೂರ ಮಾಡುತ್ತಿರುವ ಶೋ ಆಫ್ !

zahir | news18
Updated:August 19, 2018, 8:37 PM IST
ಗೆಳೆತನವನ್ನು ದೂರ ಮಾಡುತ್ತಿರುವ ಶೋ ಆಫ್ !
zahir | news18
Updated: August 19, 2018, 8:37 PM IST
-ನ್ಯೂಸ್ 18 ಕನ್ನಡ

ಗೆಳೆಯ ಅಥವಾ ಗೆಳೆತಿ ಅನ್ನುವಾಗಲೇ ಅದೋನೊ ಖುಷಿ ಮೂಡುತ್ತದೆ. ನಮ್ಮ ಜೀವನದಲ್ಲಿ ಸದಾ ಸಾಥ್ ನೀಡುವುದರಲ್ಲಿ ಗೆಳೆಯರ ಪಾಲು ಬಲು ದೊಡ್ಡದು.ಇಂತಹ ಗೆಳೆತನ ಸೃಷ್ಟಿಯಾಗಲು ಕೆಲವೊಂದು ಅಡೆ ತೆಡೆಗಳಿವೆ ಎಂದರೆ ನಂಬುವಿರಾ. ಹೌದು, ಇತ್ತೀಚೆಗೆ ಅಮೆರಿಕದಲ್ಲಿ ನಡೆಸಲಾದ ಅಧ್ಯಯನದಿಂದ ಗೆಳೆತನಕ್ಕೂ ಕೆಲ ಕಾರಣಗಳಿವೆ ಎಂಬುದನ್ನು ಕಂಡು ಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಹೈ ಕ್ಲಾಸ್ ಸ್ಟೇಟಸ್ ಮತ್ತು ಶೋ ಆಫ್ ​ಇರುವವರೊಂದಿಗೆ ಯಾರೂ ಹೆಚ್ಚಾಗಿ ಸ್ನೇಹಬಂಧ ಬಯಸುವುದಿಲ್ಲ ಎಂದು ತಿಳಿದು ಬಂದಿದೆ. ಐಷರಾಮಿ ಕಾರುಗಳು, ಬ್ರಾಡೆಂಡ್ ವಸ್ತುಗಳನ್ನು ಹೆಚ್ಚಾಗಿ ತೋರ್ಪಡಿಸುವವರೊಂದಿಗೆ ಗೆಳೆತನ ಹೊಂದಲು ಹಿಂಜರಿಯುತ್ತಾರೆ ಎಂದು ಈ ಸಂಶೋಧನೆ ಸೂಚಿಸಿದೆ.

ಈ ಅಧ್ಯಯನಕ್ಕಾಗಿ ಸಂಶೋಧಕರು ಆರು ತಂಡಗಳನ್ನು ರಚಿಸಿದ್ದರು. ಎಲ್ಲರನ್ನು ಹಲವು ಗುಂಪುಗಳಲ್ಲಿ ತೊಡಗಿಸಿಕೊಳ್ಳಲಾಗಿತ್ತಾದರೂ, ಹೆಚ್ಚಿನವರನ್ನು ಉನ್ನತ ಸ್ಥಾನಮಾನದವರೊಂದಿಗೆ ಸೇರಿಸಲಾಗಿತ್ತು. ಆದರೆ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಲು ಕೇಳಿಕೊಂಡಾಗ ಅಧಿಕ ಮಂದಿ ಕಡಿಮೆ ಅಂತಸ್ತಿನ ಅಥವಾ ಸಾಮಾನ್ಯ ಮನೆತನದವರ ಗೆಳೆತನಕ್ಕೆ ಆದ್ಯತೆ ನೀಡಿದ್ದರು.

ಈ ಪ್ರಯೋಗಳಿಗಾಗಿ ಸಂಶೋಧಕರು ಬ್ರಾಂಡೆಂಡ್ ಟಿ ಶರ್ಟ್​ಗಳನ್ನು ಆಯ್ಕೆ ಮಾಡಿದ್ದರು. ಅಲ್ಲದೆ ಇಂತಹ ಟೀ ಶರ್ಟ್​ಗಳನ್ನು ಧರಿಸಿ ಪಿಕ್ನಿಕ್​ಗೆ ತೆರಳಲು ಸೂಚಿಸಲಾಗಿತ್ತು. ಅದರಲ್ಲೂ ಬ್ರಾಂಡೆಂಡ್ ಟಿ ಶರ್ಟ್​ಗಳ ಲೊಗೊ ಇದ್ದ ಜನರೊಂದಿಗೆ ಗೆಳೆತನ ಬೆಳೆಸಲು ಹಿಂದೇಟು ಹಾಕುತ್ತಿದ್ದರು. ಸೋಷಿಯಲ್ ಸೈಕಾಲಿಜಿಕಲ್ ಅಂಡ್​ ಪರ್ಸನಾಲಿಟಿ ನಡೆಸಿರುವ ಈ ಸಂಶೋಧನೆಯಿಂದ ಐಷಾರಾಮಿ ವ್ಯಕ್ತಿಗಳೊಂದಿಗೆ ಸ್ನೇಹ ಸಂಬಂಧ ಹೊಂದಲು ಸಾಮಾನ್ಯ ವ್ಯಕ್ತಿಗಳು ಹಿಂಜರಿಯುತ್ತಿರುವುದನ್ನು ಪತ್ತೆ ಹಚ್ಚಲಾಯಿತು.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ