• Home
  • »
  • News
  • »
  • lifestyle
  • »
  • Meditation: ಧ್ಯಾನದಿಂದ ಮೆದುಳಿನ ಆರೋಗ್ಯ ಹೆಚ್ಚುತ್ತೆ, ಈ ಕುರಿತು ಅಧ್ಯಯನ ತಿಳಿಸಿದ ಮಾಹಿತಿ ಇಲ್ಲಿದೆ

Meditation: ಧ್ಯಾನದಿಂದ ಮೆದುಳಿನ ಆರೋಗ್ಯ ಹೆಚ್ಚುತ್ತೆ, ಈ ಕುರಿತು ಅಧ್ಯಯನ ತಿಳಿಸಿದ ಮಾಹಿತಿ ಇಲ್ಲಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಒಬ್ಬರ ಮಾನಸಿಕ ಸ್ಥಿತಿ ಮತ್ತು ಪರಿಸರದ ಅರಿವನ್ನು ಹೆಚ್ಚಿಸಲು, ಒತ್ತಡ ಕಡಿಮೆ ಮಾಡಲು, ಪ್ರಸ್ತುತ ಕ್ಷಣದ ಕೆಲವು ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಉದ್ದೇಶ ಹೊಂದಿವೆ.

  • Share this:

ಧ್ಯಾನ (Meditation) ಅನ್ನೋದು ಮನಸ್ಸಿನ ದುಗುಡವನ್ನು ನಿವಾರಿಸಿ, ಶಾಂತಿಯನ್ನು, ಸಮಾಧಾನವನ್ನು ನೀಡುತ್ತದೆ. ಭಾವನಾತ್ಮಕವಾಗಿ (Emotional) ಶಾಂತ ಮತ್ತು ಸ್ಥಿರ ಸ್ಥಿತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂಬುದನ್ನು ಕೇಳಿದ್ದೇವೆ. ಪ್ರತಿದಿನ ಧ್ಯಾನವನ್ನು ಮಾಡುವವರಿಗೆ ಅದು ಅನುಭವಕ್ಕೆ (Experience) ಬಂದಿರುತ್ತದೆ. ಹೊಸ ಮೆಟಾ-ವಿಶ್ಲೇಷಣೆಯು ಧ್ಯಾನವು ಮೆದುಳಿನ (Mind) ಚಟುವಟಿಕೆ (Activity) ಮತ್ತು ಸಂಪರ್ಕವನ್ನು ಹೇಗೆ ಬದಲಾಯಿಸುತ್ತದೆ ಎಂಬುದಕ್ಕೆ ಪುರಾವೆಗಳನ್ನು ಪರಿಶೀಲಿಸಿದೆ. ಧ್ಯಾನವು ಮೆದುಳಿನ ಪ್ರಾದೇಶಿಕ ಅಂಗವಿನ್ಯಾಸವನ್ನು ಹೇಗೆ ಮರುಸಂಘಟಿಸುತ್ತದೆ ಎಂದು ಲೇಖಕರು ಕಂಡುಕೊಂಡಿದ್ದಾರೆ.


ಬುದ್ಧನ ಬೋಧನೆಗಳ ಪ್ರಕಾರ, ನಮ್ಮಲ್ಲಿ ಹೆಚ್ಚಿನವರು ಹಿಂದಿನ ಘಟನೆಗಳ ಬಗ್ಗೆ ಕೋಪ ಅಥವಾ ದುಃಖವನ್ನು ಅನುಭವಿಸುತ್ತಾರೆ. ಭವಿಷ್ಯದ ಕುರಿತು ಚಿಂತಿತರಾಗುತ್ತಾರೆ. ಆದ್ರೆ ಪ್ರಸ್ತುತ ಕ್ಷಣದ ಬಗ್ಗೆ ಗಮನವನ್ನೇ ಹರಿಸುವುದಿಲ್ಲ. ಆದ್ರೆ ಇದನ್ನು ಬದಲಾಯಿಸುವುದೇ ಧ್ಯಾನದ ಗುರಿ.


ಈ ಧ್ಯಾನ ಎಂಬ ಪದವು ವ್ಯಾಪಕವಾದ ಅಭ್ಯಾಸಗಳನ್ನು ಸೂಚಿಸುತ್ತದೆ. ಇವೆಲ್ಲವೂ ಒಬ್ಬರ ಮಾನಸಿಕ ಸ್ಥಿತಿ ಮತ್ತು ಪರಿಸರದ ಅರಿವನ್ನು ಹೆಚ್ಚಿಸಲು, ಒತ್ತಡ ಕಡಿಮೆ ಮಾಡಲು, ಪ್ರಸ್ತುತ ಕ್ಷಣದ ಕೆಲವು ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಉದ್ದೇಶ ಹೊಂದಿವೆ. ಸುಧಾರಿತ ಧ್ಯಾನ ಅಭ್ಯಾಸ ಮಾಡುವವರು ಇದನ್ನು "ದ್ವಂದ್ವವಲ್ಲದ ಅರಿವು ಎನ್ನುತ್ತಾರೆ. ಇದು ನಮ್ಮ ಹಾಗೂ ಪರಿಸರದ ನಡುವಿನ ಎಲ್ಲ ಗಡಿಗಳನ್ನೂ ಮೀರಿದ ಸ್ಥಿತಿ ಹಾಗೂ ಜಗತ್ತಿನೊಂದಿಗೆ ಏಕತೆಯನ್ನು ಸಾಧಿಸುವ ಸ್ಥಿತಿಯಾಗಿರುತ್ತದೆ.


ಹಲವಾರು ಮೆದುಳಿನ ಸ್ಕ್ಯಾನಿಂಗ್ ಅಧ್ಯಯನಗಳು ಮೆದುಳಿನ ಕ್ರಿಯೆಯ ಮೇಲೆ ಧ್ಯಾನದ ಪರಿಣಾಮಗಳನ್ನು ಪರೀಕ್ಷಿಸಿವೆ. ಈ ಅಧ್ಯಯನಗಳ ಮೆಟಾ-ವಿಶ್ಲೇಷಣೆಯು ಸ್ವ ಅನುಭವಕ್ಕೆ ಸಂಬಂಧಿಸಿದಂತೆ ಅವರ ಸಂಶೋಧನೆಗಳನ್ನು ಅರ್ಥೈಸುತ್ತದೆ. ಧ್ಯಾನವು ಮೆದುಳಿನ ಚಟುವಟಿಕೆ ಮತ್ತು ಸಂಪರ್ಕವನ್ನು ಹೇಗೆ ಬದಲಾಯಿಸುತ್ತದೆ ಎಂಬುದರ ಹೊಸ ಏಕೀಕೃತ ಮಾದರಿಗೆ ಅದರ ಲೇಖಕರನ್ನು ಕರೆದೊಯ್ಯುತ್ತದೆ.


ಇದನ್ನೂ ಓದಿ: ಋತುಚಕ್ರದ ಸಮಯದಲ್ಲಿ ತ್ವಚೆಯ ಆರೈಕೆಗೆ ಪಾಲಿಸಬೇಕಾದ ಸಲಹೆಗಳು

ಮೆದುಳಿನ ಸಂಸ್ಕರಣೆ


ಹೊಸ ಮಾದರಿಯ ಪ್ರಕಾರ, ಮೆದುಳಿನಲ್ಲಿ ಮೂರು ವಿಭಿನ್ನ ಸ್ವ ಸಂಸ್ಕರಣೆಯ ಪದರಗಳಿವೆ ಎಂದು ಊಹಿಸಲಾಗಿದ್ದು, ಅದು ದೇಹ, ಪರಿಸರ ಮತ್ತು ಮಾನಸಿಕ ಸ್ಥಿತಿಯನ್ನು ಜೋಡಿಸುವುದಾಗಿದೆ.


1) ದೇಹದ ಆಂತರಿಕ ಅಂಗಗಳಿಂದ ಸಂಕೇತಗಳನ್ನು ಪ್ರಕ್ರಿಯೆಗೊಳಿಸುವ ಆಂತರಿಕ ಮಟ್ಟ


2) ಹೊರಗಿನ ಪ್ರಪಂಚದಿಂದ ಸಂವೇದನಾ ಪ್ರಚೋದನೆಗಳನ್ನು ಪ್ರಕ್ರಿಯೆಗೊಳಿಸುವ ಬಾಹ್ಯ ಮಟ್ಟ


3) ವ್ಯಕ್ತಿತ್ವ ಮತ್ತು ನೆನಪುಗಳ ಮಾನಸಿಕ ಮಟ್ಟ.


ಧ್ಯಾನದ ಟೊಪೊಗ್ರಾಫಿಕ್ ಮರುಸಂಘಟನೆಯ ಮಾದರಿಯು ಡೀಫಾಲ್ಟ್ ಮೋಡ್ ನೆಟ್‌ವರ್ಕ್‌ ಹಾಗೂ ಕೇಂದ್ರ ಕಾರ್ಯನಿರ್ವಾಹಕ ನೆಟ್‌ವರ್ಕ್ ನ ಪಾತ್ರಗಳನ್ನು ಒತ್ತಿಹೇಳುತ್ತದೆ. ಇದು ಮಾನಸಿಕ ಸ್ವ ಪ್ರಕ್ರಿಯೆಗೆ ಸಂಬಂಧಿಸಿದೆ. "ಮನಸ್ಸಿನ ಅಲೆದಾಡುವ" ಸಮಯದಲ್ಲಿ ಇದು ಬಲವಾಗಿ ಸಕ್ರಿಯಗೊಳ್ಳುತ್ತದೆ.


ಇನ್ನು, ಕೇಂದ್ರ ಕಾರ್ಯನಿರ್ವಾಹಕ ನೆಟ್‌ವರ್ಕ್, ಇದು ಗಮನ ಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬ್ರೈನ್ ಸ್ಕ್ಯಾನಿಂಗ್ ಅಧ್ಯಯನಗಳ ಪ್ರಕಾರ, ಸುಧಾರಿತ ಧ್ಯಾನ ಪ್ರಕಾರಗಳನ್ನು ಅಭ್ಯಾಸ ಮಾಡಿದವರು ಡೀಫಾಲ್ಟ್ ಮೋಡ್ ನೆಟ್‌ವರ್ಕ್‌ನಲ್ಲಿ ಕಡಿಮೆ ಚಟುವಟಿಕೆಯನ್ನು ತೋರಿಸುತ್ತಾರೆ. ಜೊತೆಗೆ ಕೇಂದ್ರ ಕಾರ್ಯನಿರ್ವಾಹಕ ನೆಟ್‌ವರ್ಕ್‌ನ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಡಾರ್ಸೊಲೇಟರಲ್ ಪ್ರಿಫ್ರಂಟಲ್ ಕಾರ್ಟೆಕ್ಸ್ (dlPFC). ಅದೇ ವೇಳೆ, ಕೇಂದ್ರ ಕಾರ್ಯನಿರ್ವಾಹಕ ನೆಟ್ವರ್ಕ್ ಮತ್ತು ಡೀಫಾಲ್ಟ್ ಮೋಡ್ ನೆಟ್ವರ್ಕ್ ನಡುವಿನ ಕ್ರಿಯಾತ್ಮಕ ಸಂಪರ್ಕವು ಹೆಚ್ಚಾಗುತ್ತದೆ.


ಇದನ್ನೂ ಓದಿ: ಔಷಧಿ ಕೊಳ್ಳುವಾಗ ಅಸಲಿಯಾ, ನಕಲಿಯಾ ಎಂಬ ಆತಂಕವೇ? ಕಂಡು ಹಿಡಿಯೋಕೆ ಇಲ್ಲಿದೆ ಸುಲಭ ದಾರಿ

ಡಿಫಾಲ್ಟ್ ಮೋಡ್ ನೆಟ್‌ವರ್ಕ್


ಹೊಸ ಮಾದರಿಯ ಪ್ರಕಾರ, ಈ ಬದಲಾವಣೆಗಳು ಮೆದುಳಿನ ಪ್ರಾದೇಶಿಕ ಸ್ಥಳಾಕೃತಿಯ ಮರುಸಂಘಟನೆಗೆ ಸಮಾನವಾಗಿವೆ. ಡಿಫಾಲ್ಟ್ ಮೋಡ್ ನೆಟ್‌ವರ್ಕ್ ಚಟುವಟಿಕೆಯಲ್ಲಿನ ಕಡಿತವು ಮಾನಸಿಕ ಸ್ವ ಸಂಸ್ಕರಣೆ ಕಡಿಮೆ ಮಾಡುವುದನ್ನು ಸೂಚಿಸುತ್ತದೆ. ಆದರೆ ಹೆಚ್ಚಿದ dlPFC ಚಟುವಟಿಕೆಯು ಏಕಾಗ್ರತೆಯ ಸಾಮರ್ಥ್ಯಕ್ಕೆ ಸಂಬಂಧಿಸಿದೆ. ಹೀಗಾಗಿ, ಸುಧಾರಿತ ಧ್ಯಾನವನ್ನು ಅಭ್ಯಸಿಸುವವರು, ತಮ್ಮ ಗಮನವನ್ನು ಬೇರೆಡೆ ಕೇಂದ್ರೀಕರಿಸಲು ಮತ್ತು ಮೂರು ಸ್ವ ಸಂಸ್ಕರಣೆಯ ಪದರಗಳನ್ನು ಒಟ್ಟುಗೂಡಿಸಲು ಸಮರ್ಥರಾಗಿದ್ದಾರೆ.


ಮಾನಸಿಕ ಸ್ಥಿತಿಯ ಮೇಲೆ ಕಡಿಮೆ ಗಮನ


ಆಂತರಿಕ ಮತ್ತು ಬಾಹ್ಯ ಸಿಗ್ನಲ್‌ಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಮೂಲಕ ತಮ್ಮ ಮಾನಸಿಕ ಸ್ಥಿತಿಯ ಮೇಲೆ ಕಡಿಮೆ ಗಮನ ಹರಿಸುವುದರಿಂದ ಅವರು ದ್ವಂದ್ವವಲ್ಲದ ಅರಿವನ್ನು ಸಾಧಿಸುತ್ತಾರೆ ಮತ್ತು ಈ ಪ್ರಸ್ತುತ ಕ್ಷಣದಲ್ಲಿ ಜೀವಿಸುತ್ತಾರೆ.First published: