ಈಗಂತೂ ಒತ್ತಡದ ಬದುಕಿನಲ್ಲಿ ನಮ್ಮ ದೇಹದ ಆರೋಗ್ಯ (Health) ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ, ಅದರಲ್ಲೂ ನಮ್ಮ ದೇಹದ ಬಹುತೇಕ ಭಾಗಗಳನ್ನು ನಿಯಂತ್ರಿಸುವ ಮೆದುಳಿನ ಆರೋಗ್ಯದ ಬಗ್ಗೆ ನಮಗೆ ಹೆಚ್ಚು ಕಾಳಜಿ ಇರಲೇಬೇಕು. ಏಕೆಂದರೆ ನಮ್ಮ ಮೆದುಳಿನ ಆರೋಗ್ಯ ಒಮ್ಮೆ ಹದಗೆಟ್ಟರೆ ಇದು ಅನೇಕ ಅಸ್ವಸ್ಥತೆಗಳಿಗೆ (Disorders) ದಾರಿ ಮಾಡಿಕೊಡುತ್ತದೆ ಎಂದು ಹೇಳಬಹುದು.ನೀವು ಈ ಬ್ರೈನ್ ಟ್ಯೂಮರ್ (Brain Tumor) ಬಗ್ಗೆ ಕೇಳಿರುತ್ತೀರಿ ಅಲ್ಲವೇ? ಮೆದುಳಿನಲ್ಲಿ ಕ್ಯಾನ್ಸರ್ ( Brain Cancer) ಅಥವಾ ಕ್ಯಾನ್ಸರ್ ಅಲ್ಲದ ಜೀವಕೋಶಗಳ ರಾಶಿ ಬೆಳೆಯುವ ಸ್ಥಿತಿಯನ್ನು ಇದು ಸೂಚಿಸುತ್ತದೆ. ಈ ಗೆಡ್ಡೆಗಳು ಕೆಲವೊಮ್ಮೆ ಮೆದುಳಿನ ಒಳಗೆ ಬೆಳೆಯುತ್ತವೆ ಮತ್ತು ಕೆಲವೊಮ್ಮೆ ಅವು ದೇಹದ ಮತ್ತೊಂದು ಭಾಗದಲ್ಲಿ ಪ್ರಾರಂಭವಾಗಿ ನಂತರ ಮೆದುಳಿಗೆ ಹರಡುತ್ತವೆ.
ಆದರೂ, ಈ ಬ್ರೈನ್ ಟ್ಯೂಮರ್ ತುಂಬಾನೇ ವೇಗವಾಗಿ ಬೆಳೆಯುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆ ಗೆಡ್ಡೆ ಮೆದುಳಿನ ಯಾವ ಭಾಗದಲ್ಲಿ ಬೆಳೆದಿದೆ ಮತ್ತು ನರವ್ಯೂಹದ ಮೇಲೆ ಅದು ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿದುಕೊಂಡ ನಂತರವೇ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇತರ ಎಲ್ಲಾ ರೋಗಗಳಂತೆಯೇ, ಸಮಯೋಚಿತ ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆಯಲು ಮೆದುಳಿನ ಗೆಡ್ಡೆಯ ಲಕ್ಷಣಗಳನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.
ನೀವು ಗಮನಿಸಬೇಕಾದ ಕೆಲವು ರೋಗಲಕ್ಷಣಗಳು ಇಲ್ಲಿವೆ ನೋಡಿ
ಬ್ರೈನ್ ಟ್ಯೂಮರ್ ರೋಗಲಕ್ಷಣಗಳು ಮತ್ತು ಅವುಗಳ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಗೆಡ್ಡೆಯು ಯಾವ ಭಾಗದಲ್ಲಿ ಬೆಳೆದಿದೆ ಎಂಬುದರ ಆಧಾರದ ಮೇಲೆ, ರೋಗಿಗಳು ಈ ಕೆಳಗಿನ ಪ್ರಮುಖ ರೋಗಲಕ್ಷಣಗಳನ್ನು ಅನುಭವಿಸುವ ಸಾಧ್ಯತೆಯಿದೆ.
1. ವಿಪರೀತ ತಲೆ ತಿರುಗುವಿಕೆ
2. ವಾಸನೆ ಬಾರದೇ ಇರುವುದು
3. ಕೈಕಾಲುಗಳು ಮತ್ತು ಮುಖದ ಭಾಗಗಳಲ್ಲಿನ ದೌರ್ಬಲ್ಯ
4. ದೇಹದ ವಿವಿಧ ಭಾಗಗಳಲ್ಲಿ ಮರಗಟ್ಟುವಿಕೆ
5. ದೇಹದ ಸಮತೋಲನ ಕಳೆದುಕೊಳ್ಳುವುದು
6. ಗೊಂದಲ ಅನ್ನಿಸುವುದು
7. ವಿವರಿಸಲಾಗದ ವ್ಯಕ್ತಿತ್ವ ಬದಲಾವಣೆಗಳು
8. ಮಂಪರು
9. ನಿರಂತರ ವಾಕರಿಕೆ ಮತ್ತು ವಾಂತಿ
10. ಮಾತು ಮತ್ತು ದೃಷ್ಟಿ ಸಮಸ್ಯೆಗಳು
ಮೆದುಳಿನ ಆಯಾ ಪ್ರದೇಶದಿಂದ ನಿಯಂತ್ರಿಸಲ್ಪಡುವ ದೇಹದ ಭಾಗಗಳ ಮೇಲೆ ಈ ಗೆಡ್ಡೆಯು ಪರಿಣಾಮ ಬೀರಬಹುದು, ಅಸ್ವಸ್ಥತೆ ಅನುಭವಿಸಬಹುದು. ಆದರೂ, ಕೆಲವು ಆರಂಭಿಕ ರೋಗಲಕ್ಷಣಗಳಿವೆ, ಅವು ಕೆಲವು ಸಮಯದವರೆಗೆ ಬಂದು ಹೋಗಬಹುದು, ಆದರೆ ಸಮಯದೊಂದಿಗೆ ವಿಶೇಷವಾಗಿ ಬೆಳಗ್ಗೆ ಈ ರೋಗಲಕ್ಷಣಗಳು ಇನ್ನಷ್ಟು ತೀವ್ರಗೊಳ್ಳಬಹುದು.
ಮೆದುಳಿನ ಗೆಡ್ಡೆಯ ಆರಂಭಿಕ ರೋಗಲಕ್ಷಣಗಳಲ್ಲಿ ತಲೆ ನೋವು ಮತ್ತು ಅತಿಯಾದ ಒತ್ತಡದಿಂದಾಗಿ ತಲೆಬುರುಡೆಯೊಳಗಿನ ಅನಾರೋಗ್ಯದ ಸಂವೇದನೆಗಳು ಸೇರಿವೆ.
ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ತಲೆನೋವು ಸಾಮಾನ್ಯಕ್ಕಿಂತ ಭಿನ್ನವಾಗಿದ್ದರೆ ಅಥವಾ ಅದು ಆಗಾಗ್ಗೆ ಇನ್ನಷ್ಟು ತೀವ್ರವಾಗುತ್ತಿದ್ದರೇ, ನೀವು ವೈದ್ಯರ ಬಳಿ ಹೋಗಿ ನಿಮ್ಮ ಮೆದುಳಿನ ಆರೋಗ್ಯದ ತಪಾಸಣೆ ಮಾಡಿಸುವುದು ಸೂಕ್ತ.
ನಾನು ಬ್ರೈನ್ ಟ್ಯೂಮರ್ ಅಪಾಯದಲ್ಲಿದ್ದೇನೆಯೇ..? ಇದಕ್ಕೆ ಕಾರಣಗಳನ್ನು ತಿಳಿಯಿರಿ
ಒಬ್ಬ ವ್ಯಕ್ತಿಗೆ ಬ್ರೈನ್ ಟ್ಯೂಮರ್ ಬರಲು ಅನೇಕ ಅಂಶಗಳು ಕಾರಣವಾಗುತ್ತವೆ. ಈ ಬ್ರೈನ್ ಟ್ಯೂಮರ್ ಅಪಾಯ ಹೆಚ್ಚಾಗಲು ಈ ಕೆಳಗಿನ ಅಂಶಗಳು ಹೆಚ್ಚಾಗಿ ಕಾರಣವಾಗುತ್ತವೆ.
1. ವಯಸ್ಸು- ಹೆಚ್ಚಿನ ರೋಗಿಗಳಲ್ಲಿ ಇದನ್ನು 80ರ ವಯಸ್ಸಿನಲ್ಲಿ ಪತ್ತೆ ಹಚ್ಚಲ್ಪಡುತ್ತದೆ.
2. ವಿಕಿರಣಕ್ಕೆ ಒಡ್ಡಿಕೊಳ್ಳುವುದು- ಮೆದುಳಿನ ಎಕ್ಸ್ ರೇ, ಸಿಟಿ ಸ್ಕ್ಯಾನ್ ಮತ್ತು ರೇಡಿಯೋಥೆರಪಿ
3. ಆನುವಂಶಿಕ ಅಸ್ವಸ್ಥತೆಗಳು– ಆನುವಂಶಿಕ ಅಸ್ವಸ್ಥತೆಗಳಾದ ಸ್ಕ್ಲೆರೋಸಿಸ್, ಟರ್ನರ್ ಸಿಂಡ್ರೋಮ್, ಟೈಪ್ 1 ಮತ್ತು ಟೈಪ್ 2 ನ್ಯೂರೋಫೈಬ್ರೊಮ್ಯಾಟೋಸಿಸ್
4. ಕುಟುಂಬದಲ್ಲಿ ಬ್ರೈನ್ ಟ್ಯೂಮರ್ ಆಗಿರುವುದು
5. ಲಿಂಗ -ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಚಾಗಿ ಈ ಮೆದುಳಿನ ಗೆಡ್ಡೆಯಿಂದ ಬಳಲುತ್ತಿದ್ದಾರೆ
6. ತಲೆಗೆ ಗಾಯ
7. ವೈರಸ್, ಅಲರ್ಜಿಕಾರಕಗಳು ಮತ್ತು ಸೋಂಕುಗಳಿಗೆ ಒಡ್ಡಿಕೊಳ್ಳುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ