• Home
  • »
  • News
  • »
  • lifestyle
  • »
  • Sweet Potato: ಸಿಹಿ ಗೆಣಸು, ತಿಂದರೆ ಆರೋಗ್ಯಕ್ಕೆ ಸೊಗಸು! ಮಧುಮೇಹ ನಿಯಂತ್ರಣಕ್ಕೆ ಇದರಲ್ಲಿದೆ ಮದ್ದು!

Sweet Potato: ಸಿಹಿ ಗೆಣಸು, ತಿಂದರೆ ಆರೋಗ್ಯಕ್ಕೆ ಸೊಗಸು! ಮಧುಮೇಹ ನಿಯಂತ್ರಣಕ್ಕೆ ಇದರಲ್ಲಿದೆ ಮದ್ದು!

ಸಿಹಿ ಗೆಣಸು

ಸಿಹಿ ಗೆಣಸು

ಸಿಹಿ ಗೆಣಸು ಆಲೂಗಡ್ಡೆಯಂತೆ ನೆಲದೊಳಗೆ ಬೇರಿನಲ್ಲಿ ಬೆಳೆಯುತ್ತದೆ. ಹೆಚ್ಚಿನ ಜನರು ಸಿಹಿ ಗೆಣಸನ್ನು ಹಲ್ವಾ ಮತ್ತಿತರ ಸಿಹಿ ಪದಾರ್ಥ ಮಾಡಲು ಬಳಕೆ ಮಾಡ್ತಾರೆ. ಅಂದ ಹಾಗೇ ಸಿಹಿ ಗೆಣಸು ಫೈಬರ್, ಜೀವಸತ್ವ ಮತ್ತು ಖನಿಜ ಸೇರಿದಂತೆ ಹಲವು ಪೋಷಕ ತತ್ವಗಳಿಂದ ಸಮೃದ್ಧವಾಗಿದೆ.

  • Share this:

    ಚಳಿಗಾಲದಲ್ಲಿ (Winter) ಅನೇಕ ಪದಾರ್ಥಗಳು (Ingredients) ಸಿಗುತ್ತವೆ. ಅವುಗಳಲ್ಲಿ ಒಂದು ಸಿಹಿ ಗೆಣಸು (Sweet Potato). ಸಿಹಿ ಗೆಣಸನ್ನು ಚೆನ್ನಾಗಿ ತೊಳೆದು, ನೀರಿನಲ್ಲಿ (Water) ಕುದಿಸಿ, ಉಪ್ಪು ಅಥವಾ ಬೆಲ್ಲದ (Jaggery) ಜೊತೆ ಹಾಗೂ ಬೆಲ್ಲ ಮತ್ತು ಹಾಲಿನ ಜೊತೆ ತಿನ್ನುವ ರೂಢಿ ಇದೆ. ಸಿಹಿ ಗೆಣಸು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ನಿಮ್ಮ ಆರೋಗ್ಯಕ್ಕೆ ಹಲವು ರೀತಿಯ ಲಾಭ ತಂದು ಕೊಡುತ್ತದೆ. ಸಿಹಿ ಗೆಣಸನ್ನು ಸ್ವೀಟ್ ಪೊಟ್ಯಾಟೋ ಎಂದು ಕರೆಯುತ್ತಾರೆ. ಸಿಹಿ ಗೆಣಸು ಮಣ್ಣಿನೊಳಗೆ, ಭೂಮಿಯೊಳಗೆ ಆಗುವ ಗೆಡ್ಡೆ ಆಗಿದೆ. ಸಿಹಿ ಗೆಣಸು ರುಚಿಯಲ್ಲಿ ಸಿಹಿ ಆಗಿರುತ್ತದೆ. ಕೆಲವರು ಇದನ್ನು ಕುದಿಸಿ ತಿನ್ನುತ್ತಾರೆ. ಇನ್ನು ಕೆಲವರು ಹಸಿಯಾಗಿ ಸೇವನೆ ಮಾಡ್ತಾರೆ.


    ಸಿಹಿ ಗೆಣಸು ಸೇವನೆಯ ಲಾಭಗಳು


    ಸಿಹಿ ಗೆಣಸು ಇದು ಒಂದು ರೀತಿಯ ನೆಲದೊಳಗೆ ಆಗುವ ತರಕಾರಿ. ಇದು ಆಲೂಗಡ್ಡೆಯಂತೆ ನೆಲದೊಳಗೆ ಬೇರಿನಲ್ಲಿ ಬೆಳೆಯುತ್ತದೆ. ಹೆಚ್ಚಿನ ಜನರು ಸಿಹಿ ಗೆಣಸನ್ನು ಹಲ್ವಾ ಸಿಹಿ ಪದಾರ್ಥ ಮಾಡಲು ಬಳಕೆ ಮಾಡ್ತಾರೆ. ಅಂದ ಹಾಗೇ ಸಿಹಿ ಗೆಣಸು ಫೈಬರ್, ಜೀವಸತ್ವ ಮತ್ತು ಖನಿಜ ಸೇರಿದಂತೆ ಹಲವು ಪೋಷಕ ತತ್ವಗಳಿಂದ ಸಮೃದ್ಧವಾಗಿದೆ.


    ಸಿಹಿ ಗೆಣಸು ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ ಆಗಿದೆ. ಇದು ನಿಮ್ಮ ದೇಹವನ್ನು ಸ್ವತಂತ್ರ ರಾಡಿಕಲ್ಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಣೆ ಮಾಡುವ ಕೆಲಸ ಮಾಡುತ್ತದೆ. ಸಿಹಿ ಗೆಣಸಿನ ಪ್ರಯೋಜನಗಳ ಬಗ್ಗೆ ಪೌಷ್ಟಿಕತಜ್ಞ ಲವನೀತ್ ಬಾತ್ರಾ ವಿವರಣೆ ನೀಡಿದ್ದಾರೆ. ಎಲ್ಲಾ ತರಕಾರಿಗಳಲ್ಲಿ ಸಿಹಿ ಗೆಣಸು ಅತ್ಯಂತ ಪೌಷ್ಟಿಕ ಪದಾರ್ಥ ಎಂದು ಹೇಳಿದ್ದಾರೆ.




    ಸಿಹಿ ಗೆಣಸನ್ನು ಅತ್ಯಂತ ಹಳೆಯ ತರಕಾರಿಗಳ ವರ್ಗದಲ್ಲಿ ಎಣಿಕೆ ಮಾಡಲಾಗುತ್ತದೆ. ಸಿಹಿ ಗೆಣಸು ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಆಹಾರದಲ್ಲಿ ಸಿಹಿ ಗೆಣಸು ಸೇರಿಸುವುದು ಹಲವು ಆರೋಗ್ಯ ಪ್ರಯೋಜನ ಪಡೆಯಲು ಸಹಕಾರಿ ಆಗಿದೆ.


    ಸಿಹಿ ಗೆಣಸು ಮಧುಮೇಹ ವಿರೋಧಿ ಗುಣ ಹೊಂದಿದೆ


    ಎನ್ ಸಿಬಿಐ ವರದಿ ಪ್ರಕಾರ, ಸಿಹಿ ಗೆಣಸು ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುವ ಗುಣ ಹೊಂದಿದೆ. ಅಂತಹ ವೇಳೆ ನೀವು ಮಧುಮೇಹ ರೋಗಿಗಳಾಗಿದ್ದರೆ, ಸಿಹಿ ಗೆಣಸನ್ನು ಆಹಾರದಲ್ಲಿ ಸಂಪೂರ್ಣವಾಗಿ ಸೇರಿಸಬಹುದು ಅಂತಾರೆ ತಜ್ಞರು.


    ಕಯಾಪೊ ಎಂಬ ಬಿಳಿ ಸಿಪ್ಪೆ ಹೊಂದಿರುವ ಸಿಹಿ ಆಲೂಗಡ್ಡೆಗಳ ಸಾರವನ್ನು ಮಿತವಾಗಿ ಸೇವಿಸಿದರೆ ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡಬಹುದು ಎಂದು ತಜ್ಞರು ಹೇಳ್ತಾರೆ.


    ಮೆದುಳಿನ ಆರೋಗ್ಯ ಮತ್ತು ಕ್ರಿಯಾಶೀಲವಾಗಿಸಲು ಸಹಕಾರಿ


    ಸಿಹಿಗೆಣಸು ಕೋಲಿನ್ ಎಂಬ ಅಂಶ ಹೊಂದಿದೆ ಅಂತಾರೆ ಆಹಾರ ತಜ್ಞರು. ಇದು ಸ್ನಾಯುವಿನ ಚಲನೆ, ಕಲಿಕೆ ಮತ್ತು ಸ್ಮರಣೆ ಹೆಚ್ಚಿಸಲು ಸಹಾಯ ಮಾಡುವ ಪೋಷಕ ಅಂಶ. ಜೊತೆಗೆ ಇದು ನರಮಂಡಲ ಬೆಂಬಲಿಸಲು ಸಹಕಾರಿ. ಹಾಗಾಗಿ ನಿಮ್ಮ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.


    ಸಿಹಿ ಗೆಣಸು ಕಣ್ಣುಗಳಿಗೆ ಪ್ರಯೋಜನ ನೀಡುತ್ತದೆ


    ಸಿಹಿ ಗೆಣಸು ಬೀಟಾ ಕ್ಯಾರೋಟಿನ್ ಮತ್ತು ಆಂಥೋಸಯಾನಿನ್‌, ಆಂಟಿ ಆಕ್ಸಿಡೆಂಟ್‌ ಹೊಂದಿದೆ. ಸಿಹಿ ಗೆಣಸಿನಲ್ಲಿರುವ ಪೋಷಕ ಗುಣಗಳು ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ. ಜೊತೆಗೆ ಬೆಳಕಿನ ನಷ್ಟ ತಡೆಯುತ್ತದೆ.


    ಇದನ್ನೂ ಓದಿ: ಎಚ್ಚರಿಕೆ: ನಿಂತು ನೀರು ಕುಡೀತೀರಾ? ಹಾಗಿದ್ರೆ ನಿಮ್ಮ ಆರೋಗ್ಯದಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುವುದು ಖಚಿತ!


    ಸಿಹಿ ಗೆಣಸುಗಳು ಕ್ಯಾನ್ಸರ್ ನಿರೋಧಕ ಗುಣ ಹೊಂದಿದೆ


    ಸಿಹಿ ಗೆಣಸಿನ ಸಿಪ್ಪೆ ಆ್ಯಂಟಿಆಕ್ಸಿಡೆಂಟ್ ಮತ್ತು ಆ್ಯಂಟಿ ಕಾರ್ಸಿನೋಜೆನಿಕ್ ಗುಣ ಹೊಂದಿದೆ ಎಂದು ತಜ್ಞರು ಹೇಳ್ತಾರೆ. ಇದು ಕೆಲವು ರೀತಿಯ ಕ್ಯಾನ್ಸರ್ ದೇಹದಲ್ಲಿ ಬೆಳೆಯದಂತೆ ತಡೆಯುತ್ತದೆ. ಸಿಹಿ ಗೆಣಸನ್ನು ಮಿತವಾಗಿ ತಿಂದರೆ ಪ್ರಯೋಜನಕಾರಿ ಆಗಿದೆ.

    Published by:renukadariyannavar
    First published: