• Home
  • »
  • News
  • »
  • lifestyle
  • »
  • Brain Cancer: ಮೆದುಳಿನ ಕ್ಯಾನ್ಸರ್‌ಗೆ ಕ್ಯಾನ್ಸರ್‌ ಕೋಶಗಳಿಂದಲೇ ಚಿಕಿತ್ಸೆ! ರೋಗಿಗಳ ಬದುಕಲ್ಲಿ ಬೆಳಕು ಮೂಡಿಸುತ್ತಾ ಹೊಸ ಸಂಶೋಧನೆ?

Brain Cancer: ಮೆದುಳಿನ ಕ್ಯಾನ್ಸರ್‌ಗೆ ಕ್ಯಾನ್ಸರ್‌ ಕೋಶಗಳಿಂದಲೇ ಚಿಕಿತ್ಸೆ! ರೋಗಿಗಳ ಬದುಕಲ್ಲಿ ಬೆಳಕು ಮೂಡಿಸುತ್ತಾ ಹೊಸ ಸಂಶೋಧನೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೆದುಳು ಕ್ಯಾನ್ಸರ್‌ ಜನರನ್ನು ಕಾಡುತ್ತಿರುವ ಗಂಭೀರ ಕಾಯಿಲೆ. ಇದಕ್ಕೆ ಲಸಿಕೆ, ಚಿಕಿತ್ಸೆಗಳ ಹೊಸ ಹೊಸ ಸಂಶೋಧನೆ ನಡೆಯುತ್ತಲೇ ಇದೆ.

  • Trending Desk
  • 5-MIN READ
  • Last Updated :
  • Share this:

ಕ್ಯಾನ್ಸರ್ (Cancer)‌ ಪ್ರಕಾರಗಳಲ್ಲಿ ಈ ಮೆದುಳು ಕ್ಯಾನ್ಸರ್‌ ತುಂಬಾ ಅಪಾಯಕಾರಿ. ಇಲ್ಲಿ ಮೆದುಳಿನ ಕೆಲವು ಜೀವಕೋಶಗಳು ಅಗತ್ಯಕ್ಕೂ ಹೆಚ್ಚು ಬೆಳವಣಿಗೆ ಪಡೆದು ಗಡ್ಡೆಗಳಾಗುತ್ತವೆ. ನಂತರ ಇದು ಮೆದುಳಿನ ಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಮೆದುಳಿನ ಕ್ಯಾನ್ಸರ್‌‌ಗೆ ಮೆದುಳಿನ ಜೀವಕೋಶಗಳೇ ಗಡ್ಡೆಗಳಾಗಬಹುದು ಅಥವಾ ಮೆದುಳಿಗೆ ಅಂಟಿಕೊಂಡಿರುವ ಇತರ ಅಂಗಗಳ ಜೀವಕೋಶಗಳು ಬೆಳೆದು ಬಂದು ಮೆದುಳಿಗೂ ಹರಡಿ ಕ್ಯಾನ್ಸರ್‌ ಉಂಟಾಗಬಹುದು. ಮೆದುಳು ಕ್ಯಾನ್ಸರ್‌ ಜನರನ್ನು ಕಾಡುತ್ತಿರುವ ಗಂಭೀರ ಕಾಯಿಲೆ. ಇದಕ್ಕೆ ಲಸಿಕೆ, ಚಿಕಿತ್ಸೆಗಳ ಹೊಸ ಹೊಸ ಸಂಶೋಧನೆ (Research) ನಡೆಯುತ್ತಲೇ ಇದೆ. ಇತ್ತೀಚಿನ ಒಂದು ಸಂಶೋಧನೆಯಲ್ಲಿ ವಿಜ್ಞಾನಿಗಳು ಮೆದುಳಿನ ಕ್ಯಾನ್ಸರ್ ಅನ್ನು ಏಕಕಾಲದಲ್ಲಿ ಕೊಲ್ಲಲು ಮತ್ತು ತಡೆಯಲು ಲಸಿಕೆಯೊಂದನ್ನು (Vaccination) ಅಭಿವೃದ್ಧಿಪಡಿಸಿದ್ದಾರೆ.


ಅದ್ಭುತ ಸಂಶೋಧನೆಯಲ್ಲಿ ವಿಜ್ಞಾನಿಗಳು ಕ್ಯಾನ್ಸರ್ ಕೋಶಗಳನ್ನು ಪ್ರಬಲ, ಕ್ಯಾನ್ಸರ್ ವಿರೋಧಿ ಏಜೆಂಟ್‌ಗಳಾಗಿ ಪರಿವರ್ತಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಈ ಮೂಲಕ ಮಾರಣಾಂತಿಕ ಮೆದುಳಿನ ಕ್ಯಾನ್ಸರ್ ಗ್ಲಿಯೊಬ್ಲಾಸ್ಟೊಮಾವನ್ನು ಕೊಲ್ಲಲು ಮತ್ತು ತಡೆಯಲು ಕ್ಯಾನ್ಸರ್ ಲಸಿಕೆಯನ್ನು ರಚಿಸಿದ್ದಾರೆ.


ಸೆಲ್ ಥೆರಪಿ ವಿಧಾನ
ಮಾಸ್ ಜನರಲ್ ಬ್ರಿಗಮ್ ಹೆಲ್ತ್‌ಕೇರ್ ಸಿಸ್ಟಮ್‌ನ ಸ್ಥಾಪಕ ಸದಸ್ಯರಾದ ಬ್ರಿಗಮ್ ಮತ್ತು ವುಮೆನ್ಸ್ ಆಸ್ಪತ್ರೆಯಲ್ಲಿ ಪ್ರಯೋಗಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಖಾಲಿದ್ ಷಾ, ಈ ಇಬ್ಬರು ವಿಜ್ಞಾನಿಗಳು ಗೆಡ್ಡೆಗಳನ್ನು ತೊಡೆದುಹಾಕಲು ಮತ್ತು ದೀರ್ಘಕಾಲೀನ ಪ್ರತಿರಕ್ಷೆಯನ್ನು ಪಡೆಯಲು ತಂಡವು ಹೊಸ ಸೆಲ್ ಥೆರಪಿ ವಿಧಾನವನ್ನು ಅಭಿವೃದ್ಧಿಪಡಿಸಿದೆ.


ಕ್ಯಾನ್ಸರ್‌ ಜೀವಂತ ಗೆಡ್ಡೆಯ ಕೋಶಗಳಿಂದಲೇ ಚಿಕಿತ್ಸೆ
ಮುಳ್ಳಿನಿಂದಲೇ ಮುಳ್ಳು ತೆಗೆಯಬೇಕು ಎಂಬ ಗಾದೆ ಮಾತಿನಂತೆ ವಿಜ್ಞಾನಿಗಳ ತಂಡವು ಕ್ಯಾನ್ಸರ್‌ಗಳಿಗೆ ಚಿಕಿತ್ಸೆಯು ಕ್ಯಾನ್ಸರ್‌ನಲ್ಲಿಯೇ ಇದೆ ಎಂದು ಕಂಡುಕೊಳ್ಳುವ ಮೂಲಕ ಈ ಹೊಸ ವಿಧಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಅಂದರೆ ಇಲ್ಲಿ ತಂಡವು ಜೀವಂತ ಗೆಡ್ಡೆಯ ಕೋಶಗಳನ್ನು ಮರುಬಳಕೆ ಮಾಡುವ ಮೂಲಕ ಮೆದುಳಿನ ಕ್ಯಾನ್ಸರ್ ಅನ್ನು ಏಕಕಾಲದಲ್ಲಿ ತೊಡೆದು ಹಾಕುವ ಗುರಿಯನ್ನು ಹೊಂದಿದೆ.


ವಿಜ್ಞಾನಿಗಳ ತಂಡವು ತಮ್ಮ ಡ್ಯುಯಲ್-ಆಕ್ಷನ್ ಸಂಶೋಧನೆಯನ್ನು ಮೆದುಳಿನ ಕ್ಯಾನ್ಸರ್ ಗ್ಲಿಯೊಬ್ಲಾಸ್ಟೊಮಾದ ಮೇಲೆ ಪ್ರಯೋಗ ನಡೆಸಿದ್ದು, ಭರವಸೆ ಫಲಿತಾಂಶಗಳನ್ನು ಕಂಡುಕೊಂಡಿದೆ ಎಂಬುವುದಾಗಿ ಸಂಶೋಧನೆಗಳನ್ನು ಸೈನ್ಸ್ ಟ್ರಾನ್ಸ್ಲೇಷನಲ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ.


ಕ್ಯಾನ್ಸರ್ ಕೋಶಗಳ ಮರುಬಳಕೆ


"ನಮ್ಮ ತಂಡವು ಕ್ಯಾನ್ಸರ್‌ಗೆ ಚಿಕಿತ್ಸೆಯಾಗಿ ಸರಳವಾದ ಉಪಾಯವನ್ನು ಅನುಸರಿಸಿದೆ. ಕ್ಯಾನ್ಸರ್ ಕೋಶಗಳನ್ನು ತೆಗೆದುಕೊಂಡು ಅವುಗಳನ್ನೇ ನಾವು ಇಲ್ಲಿ ಕ್ಯಾನ್ಸರ್‌ ನಾಶಕ ಲಸಿಕೆಗಳನ್ನಾಗಿ ಪರಿವರ್ತಿಸಿದ್ದೇವೆ" ಎಂದು ಖಾಲಿದ್ ಶಾ ಹೇಳಿದರು. "ಜೀನ್ ಇಂಜಿನಿಯರಿಂಗ್ ಅನ್ನು ಬಳಸಿಕೊಂಡು, ಗೆಡ್ಡೆಯ ಕೋಶಗಳನ್ನು ಕೊಲ್ಲುವ ಮತ್ತು ಪ್ರಾಥಮಿಕ ಗೆಡ್ಡೆಗಳನ್ನು ನಾಶಮಾಡಲು ಮತ್ತು ಕ್ಯಾನ್ಸರ್ ಅನ್ನು ತಡೆಗಟ್ಟಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವ ಚಿಕಿತ್ಸಕವನ್ನು ಅಭಿವೃದ್ಧಿಪಡಿಸಲು ನಾವು ಕ್ಯಾನ್ಸರ್ ಕೋಶಗಳನ್ನು ಮರುಬಳಕೆ ಮಾಡುತ್ತಿದ್ದೇವೆ" ಎಂದು ಅವರ ಸಂಶೋಧನೆಯನ್ನು ವಿವರಿಸಿದರು.


ಇದನ್ನೂ ಓದಿ: ಹಲ್ಲು ಕ್ಲೀನ್ ಮಾಡುವ ಟೂತ್‌ಪಿಕ್​ನ್ನು ಮನೆಯಲ್ಲಿ ಈ ರೀತಿಯೂ ಯೂಸ್ ಮಾಡಬಹುದಂತೆ!


ಪ್ರಪಂಚದಾದ್ಯಂತ ಕ್ಯಾನ್ಸರ್‌ಗೆ ಲಸಿಕೆ ಕಂಡುಹಿಡಿಯುವ ಸಂಶೋಧನೆ ಸಕ್ರೀಯವಾಗಿಯೇ ಇದೆ. ಈ ಮಧ್ಯೆ ಷಾ ಮತ್ತು ಅವರ ಸಹೋದ್ಯೋಗಿಗಳು ತೆಗೆದುಕೊಂಡ ವಿಧಾನವು ವಿಭಿನ್ನವಾಗಿದೆ ಎನ್ನಬಹುದು. ಇಲ್ಲಿ ವಿಜ್ಞಾನಿಗಳು ನಿಷ್ಕ್ರಿಯಗೊಂಡ ಗೆಡ್ಡೆಯ ಕೋಶಗಳನ್ನು ಬಳಸುವ ಬದಲು, ತಂಡವು ಜೀವಂತ ಗೆಡ್ಡೆಯ ಕೋಶಗಳನ್ನು ಪುನರುತ್ಪಾದಿಸಿ ಅವುಗಳ ಮೂಲಕ ಕ್ಯಾನ್ಸರ್‌ ತಡೆಗಟ್ಟುವಿಕೆಗೆ ಮುಂದಾಗಿದೆ.


ಜೀನ್ ಎಡಿಟಿಂಗ್ ಮೂಲಕ ಕೋಶಗಳ ವಿನ್ಯಾಸ


ಜೀವಂತ ಗೆಡ್ಡೆಯ ಕೋಶಗಳು ತಮ್ಮ ಸಹವರ್ತಿ ಗೆಡ್ಡೆಯ ಕೋಶಗಳ ಸ್ಥಳಕ್ಕೆ ಮರಳಲು ಮೆದುಳಿಗೂ ಸಂಚರಿಸುತ್ತವೆ. ಇದನ್ನೇ ಬಳಸಿಕೊಂಡ ತಂಡವು ಜೀನ್ ಎಡಿಟಿಂಗ್ ಟೂಲ್ CRISPR-Cas9 ಅನ್ನು ಬಳಸಿಕೊಂಡು ಜೀವಂತ ಗೆಡ್ಡೆಯ ಕೋಶಗಳನ್ನು ವಿನ್ಯಾಸಗೊಳಿಸಿತು ಮತ್ತು ಗೆಡ್ಡೆಯ ಕೋಶಗಳನ್ನು ಕೊಲ್ಲುವ ಏಜೆಂಟ್ ಅನ್ನು ಬಿಡುಗಡೆ ಮಾಡಲು ಅವುಗಳನ್ನು ಮರುರೂಪಿಸಿತು.




ಮಾನವ ಪ್ರತಿರಕ್ಷಣಾ ಸೂಕ್ಷ್ಮ ಪರಿಸರವನ್ನು ಅನುಕರಿಸುವ ಮೂಳೆ ಮಜ್ಜೆ, ಯಕೃತ್ತು ಮತ್ತು ಥೈಮಸ್ ಕೋಶಗಳನ್ನು ಹೊಂದಿರುವಂತಹ ವಿವಿಧ ಇಲಿಗಳ ತಳಿಗಳಲ್ಲಿ ತಂಡವು ಅವರ ಮರುಉದ್ದೇಶಿಸಿದ CRISPR- ವರ್ಧಿತ ಮತ್ತು ರಿವರ್ಸ್-ಎಂಜಿನಿಯರ್ಡ್ ಚಿಕಿತ್ಸಕ ಗೆಡ್ಡೆ ಕೋಶಗಳನ್ನು (ThTC) ಪರೀಕ್ಷಿಸಿತು. "ಜೀನ್ ಇಂಜಿನಿಯರಿಂಗ್ ಅನ್ನು ಬಳಸಿಕೊಂಡು, ನಾವು ಗೆಡ್ಡೆಯ ಕೋಶಗಳನ್ನು ಕೊಲ್ಲುವ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವ ಚಿಕಿತ್ಸಕವನ್ನು ಅಭಿವೃದ್ಧಿಪಡಿಸಲು ಕ್ಯಾನ್ಸರ್ ಕೋಶಗಳನ್ನು ಮರುರೂಪಿಸುತ್ತಿದ್ದೇವೆ, ಎರಡೂ ಪ್ರಾಥಮಿಕ ಗೆಡ್ಡೆಗಳನ್ನು ನಾಶಮಾಡಲು ಮತ್ತು ಕ್ಯಾನ್ಸರ್ ಅನ್ನು ತಡೆಗಟ್ಟಲು ಇದು ಪರಿಣಾಮಕಾರಿ" ಎಂದು ತಂಡವು ಹೇಳಿದೆ. ರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು