ವಕ್ರದಂತ ಸಮಸ್ಯೆಯೇ? ಇದಕ್ಕೆ ಬ್ರೇಸಸ್ ಚಿಕಿತ್ಸೆ ಉತ್ತಮವಂತೆ!

ವಕ್ರ ಹಲ್ಲು, ಉಬ್ಬು ಹಲ್ಲು, ಹಲ್ಲುಗಳ ನಡುವೆ ಅಂತರ ಇವುಗಳನ್ನು ಚಿಕ್ಕ ವಯಸ್ಸಿನಲ್ಲಿ ಸರಿ ಪಡಿಸಿಕೊಳ್ಳದಿದ್ದರೆ ಅವು ಜೀವನದುದ್ದಕ್ಕೂ ತೊಂದರೆ ಉಂಟು ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ವಕ್ರ ಹಲ್ಲು, ಉಬ್ಬು ಹಲ್ಲು, ಹಲ್ಲುಗಳ ನಡುವೆ ಅಂತರ ಇವೆಲ್ಲವೂ ಹಲ್ಲಿನ ಸಮಸ್ಯೆಗಳು. ಇವುಗಳಲ್ಲಿ ಒಂದು ಸಮಸ್ಯೆಯಿದ್ದರೂ ವ್ಯಕ್ತಿಯ ನಗು ಸುಂದರವಾಗಿ ಕಾಣುವುದಿಲ್ಲ. ಹಾಗಾಗಿ ಹಲ್ಲುಗಳ ಸುಂದರತೆಯೂ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಹಾಗಾಗಿ ಯಾವ ವ್ಯಕ್ತಿಯಲ್ಲಿ ವಕ್ರ ಹಲ್ಲು, ಉಬ್ಬು ಹಲ್ಲು, ಹಲ್ಲುಗಳ ನಡುವೆ ಅಂತರ ಇದ್ದರೆ ಬ್ರೇಸಸ್ ಚಿಕಿತ್ಸೆಗೆ ಒಳಗಾಗುವುದು ಉತ್ತಮ. ಇದನ್ನು ಯಾವ ವಯಸ್ಸಿನ ವ್ಯಕ್ತಿಗಳು ಹಾಕಿಕೊಳ್ಳಬೇಕು, ಎಷ್ಟು ದಿನ, ತಿಂಗಳು ವರ್ಷ ಇಟ್ಟುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುವುದರಿಂದ ಹಲ್ಲಿನ ಸಮಸ್ಯೆ ಇರುವವರು ಬ್ರೇಸಸ್ ಚಿಕಿತ್ಸೆಗೆ ಒಳಗಾಗುವುದು ಉತ್ತಮ.


ಬ್ರೇಸಸ್ ಚಿಕಿತ್ಸೆಯಿಂದ ಉಂಟಾಗುವ ಅನುಕೂಲಗಳು:
ವಕ್ರ ಹಲ್ಲು, ಉಬ್ಬು ಹಲ್ಲು, ಹಲ್ಲುಗಳ ನಡುವೆ ಅಂತರ ಇವುಗಳನ್ನು ಚಿಕ್ಕ ವಯಸ್ಸಿನಲ್ಲಿ ಸರಿ ಪಡಿಸಿಕೊಳ್ಳದಿದ್ದರೆ ಅವು ಜೀವನದುದ್ದಕ್ಕೂ ತೊಂದರೆ ಉಂಟು ಮಾಡುತ್ತದೆ. ಬ್ರೇಸಸ್ ಚಿಕಿತ್ಸೆಯು ನಿಮ್ಮ ನಗುವನ್ನು ಸುಂದರ ಗೊಳಿಸುವುದಲ್ಲದೇ, ಆತ್ಮ ವಿಶ್ವಾಸ ತುಂಬುತ್ತದೆ. ಚಿಕಿತ್ಸೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಇದಕ್ಕೆ ವಯಸ್ಸಿನ ಅಂತರವಿಲ್ಲ, ಎಂದು ಹೆಲ್ತ್​​ ಸ್ಪ್ರಿಂಗ್ ಕುಟುಂಬ ಆರೋಗ್ಯ ತಜ್ಞರ ವಿಭಾಗದ ದಂತ ಮುಖ್ಯಸ್ಥ ಡಾ. ಮೇಘಾ ಬನ್ಸೋಡೆ ಹೇಳುತ್ತಾರೆ.


1. ಗೋಚರಿಸುವ ವಕ್ರ ಹಲ್ಲುಗಳು:
ಇದು ಸ್ಮೈಲ್‍ಗೆ ಅಡ್ಡಿಯಾಗುವುದಲ್ಲದೆ, ಹಲ್ಲುಜ್ಜುವುದಕ್ಕೂ ಅಡ್ಡಿಪಡಿಸುತ್ತದೆ. ಇದರಿಂದ ಹಲ್ಲಿನ ನೈರ್ಮಲ್ಯ ಕಾಪಾಡಿಕೊಳ್ಳುವುದು ಅಸಾಧ್ಯವಾಗುತ್ತದೆ. ಇದರಿಂದ ಹಲ್ಲುಗಳ ನಡುವೆ ಸಣ್ಣ ಸಣ್ಣ ತೂತುಗಳು ಕಾಣಿಸಿಕೊಳ್ಳುತ್ತದೆ. ಆಹಾರವು ಹೆಚ್ಚಾಗಿ ಹಲ್ಲುಗಳ ನಡುವೆ ಸಿಲುಕಿಕೊಳ್ಳುತ್ತದೆ, ಇದು ಕೆಟ್ಟ ಉಸಿರಾಟ ಮತ್ತು ಒಸಡು ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಲ್ಲುಗಳ ನಡುವಿನ ಸ್ಥಳಾವಕಾಶದ ಕೊರತೆಯಿಂದ ಇದು ಸಂಭವಿಸುತ್ತದೆ. ಬ್ರೇಸಸ್ ವಕ್ರ ಹಲ್ಲುಗಳನ್ನು ಜೋಡಿಸುತ್ತವೆ.


2. ಹಲ್ಲುಗಳ ನಡುವಿನ ಅಂತರಗಳು:
ದವಡೆಯ ಮೂಳೆಗೆ ಹೋಲಿಸಿದರೆ ಹಲ್ಲುಗಳ ಗಾತ್ರವು ಚಿಕ್ಕದಾಗಿದ್ದಾಗ ಸಾಮಾನ್ಯವಾಗಿ ಹಲ್ಲುಗಳ ನಡುವೆ ಅಂತರಗಳು ಸಂಭವಿಸುತ್ತದೆ. ಅಂತರವು ನಾಲಿಗೆ ಒತ್ತುವಂತಹ ಅಭ್ಯಾಸಗಳಿಗೆ ಕಾರಣವಾಗಬಹುದು. ಪ್ಲೇಕ್ ಶೇಖರಣೆಯಿಂದಾಗಿ ಹಲ್ಲುಗಳ ನಡುವಿನ ಒಸಡುಗಳು ಉರಿಯೂತಕ್ಕೆ ಒಳಗಾಗುತ್ತವೆ. ಹಾಗಾಗಿ ಬ್ರೇಸಸ್ ಚಿಕಿತ್ಸೆಗೆ ಒಳಗಾದರೆ ಒಳಿತು.


ಇದನ್ನು ಓದಿ: ಮರೆಯದಿರಿ! ಅಡುಗೆ ಮಾಡುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳಿವು

3. ಆಹಾರ ಕಚ್ಚುವ ಸಮಸ್ಯೆ ಮತ್ತು ಮಾತಿನ ತೊಂದರೆ
ಅಗಿಯುವುದು ಮೇಲಿನ ಮತ್ತು ಕೆಳಗಿನ ಹಲ್ಲುಗಳ ಜೋಡಣೆ ಸಮರ್ಪಕವಾಗಿದ್ದಾಗ ಸರಿ ಇರುತ್ತದೆ. ಇದು ಸರಿ ಇಲ್ಲದಿದ್ದರೆ ಇದು ಮಾತಿನ ಸಮಸ್ಯೆಗೂ ಕಾರಣವಾಗುತ್ತದೆ. ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ ಕೃತಕ ಹಲ್ಲುಗಳ ಜೋಡಣೆಗೆ ಮುಂದಾಗಬೇಕಾಗುತ್ತದೆ. ತಣ್ಣನೆಯ ಮತ್ತು ಬಿಸಿ ನೀರಿನ ಪದಾರ್ಥ ಸೇವನೆ ಕಷ್ಟವಾಗುತ್ತದೆ. ಬ್ರೆಸಸ್ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.


4. ಅಗಿಯುವ ಕಾರ್ಯದಲ್ಲಿ ತೊಂದರೆ:
ಹಲ್ಲುಗಳ ಜೋಡಣೆ ಸರಿಯಾಗಿ ಇಲ್ಲದಿದ್ದರೆ, ಆಹಾರವನ್ನು ಅಗಿಯುವಾಗ ನಾಲಿಗೆ ಕಚ್ಚಿಕೊಳ್ಳುವುದು, ಕೆನ್ನೆಯ ಕಡಿತ, ತುಟಿ ಕಚ್ಚಿ ಕೊಳ್ಳುವುದು ಆಗುತ್ತದೆ. ಕೆಲವು ಸಂದರ್ಭದಲ್ಲಿ ಆಹಾರ ನುಂಗುವುದು ಸಹ ಕಷ್ಟವಾಗುತ್ತದೆ. ಹಲ್ಲುಗಳ ಪ್ರಾಥಮಿಕ ಕಾರ್ಯ ಎಂದರೆ ಆಹಾರವನ್ನು ಸರಿಯಾಗಿ ಪುಡಿ ಮಾಡುವುದು. ಸರಿಯಾಗಿ ಜೋಡಿಸಲಾಗದ ಹಲ್ಲುಗಳಿಂದ ಈ ಕಾರ್ಯ ಅಸಾಧ್ಯ. ಹಾಗಾಗಿ ಇದಕ್ಕೆ ಬ್ರೆಸಸ್ ಅಥವಾ ಆರ್ಥೊಡಾಂಟಿಕ್ಸ್ ಚಿಕಿತ್ಸೆಯು ಸಹಾಯ ಮಾಡುತ್ತದೆ.


5. ದವಡೆ ನೋವು
ಇದು ದವಡೆ ನೋವನ್ನು ಉಂಟು ಮಾಡುತ್ತದೆ. ದವಡೆ ನೋವು ಆರಂಭವಾದರೆ ತಲೆನೋವು ಹಾಗೂ ಕಿವಿ ನೋವು ಕೂಡ ಹಿಂದೆಯೆ ಬರುತ್ತದೆ. ಹಾಗಾಗಿ ಈ ಲಕ್ಷಣಗಳು ಟಿಎಂಜೆ ಅಸ್ವಸ್ಥತೆಗೆ ಸಂಬಂಧಿಸಿವೆ. ಆರ್ಥೊಡಾಂಟಿಕ್ ಚಿಕಿತ್ಸೆಯನ್ನು ಸೂಚಿಸಲಾಗುತ್ತದೆ.


First published: