BP Checkup at Home: ಮಾನಿಟರ್, ಡಾಕ್ಟರ್​ ಸಹಾಯವಿಲ್ಲದೆ ಮನೆಯಲ್ಲಿಯೇ BP ಟೆಸ್ಟ್​ ಮಾಡಿಕೊಳ್ಳೋದು ಹೇಗೆ?

ಆಸ್ಪತ್ರೆಗೆ ಹೋಗದೆಯೂ ಹಾಗೂ ರಕ್ತದೊತ್ತಡ ಪರೀಕ್ಷಿಸುವ ಮಾನಿಟರ್(Monitor) ಇಲ್ಲದೆಯೂ ರಕ್ತದೊತ್ತಡದ ಪ್ರಮಾಣವನ್ನು ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಕ್ತದೊತ್ತಡ(Blood Pressure) ಒಂದು ರೀತಿಯ ಸೈಲೆಂಟ್ ಕಿಲ್ಲರ್(Silent Killer). ರಕ್ತದೊತ್ತಡ ಹೆಚ್ಚಾದರೂ ಅಪಾಯ, ಕಡಿಮೆಯಾದರೂ ತೊಂದರೆ. ಹಾಗಾಗಿ ಮನುಷ್ಯನಿಗೆ ರಕ್ತದೊತ್ತಡ ಸಮತೋಲನವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಯಾವುದೇ ಲಕ್ಷಣಗಳಿಲ್ಲದೇ(Symptoms) ಕಾಣಿಸಿಕೊಳ್ಳುವ ಏಕೈಕ ತೊಂದರೆ ಎಂದರೆ ಅದುವೇ ರಕ್ತದೊತ್ತಡ. ಇದು ಹೆಚ್ಚಾದರೆ ಪರಿಧಮನಿ, ಅಪಧಮನಿ, ಹೃದಯಾಘಾತ(Heart Attack) ಅಥವಾ ಹೃದಯಸ್ತಂಭನ, ಪಾರ್ಶ್ವವಾಯು(Stroke)ವಂತಹ ದೀರ್ಘಕಾಲದ ಕಾಯಿಲೆಗಳಿಗೆ ಸ್ವತಃ ನಾವೇ ಆಹ್ವಾನ ನೀಡಿದಂತಾಗುತ್ತದೆ. ಹಾಗಾಗಿ ನಾವು ಆರೋಗ್ಯ ತಪಾಸಣೆ(Health Checkup) ಅಥವಾ ಮನೆಯಲ್ಲಿಯೇ ಕೆಲವು ಮುನ್ನೆಚ್ಚರಿಕೆ ತೆಗೆದುಕೊಂಡರೆ ರಕ್ತದೊತ್ತಡದ ಸಮಸ್ಯೆಯಿಂದ ದೂರವಿರಬಹುದು. ಮನೆಯಲ್ಲಿ ಕೆಲಸ ಮಾಡುವುದು, ಸಮತೋಲಿತ ಆಹಾರ ಸೇವನೆ, ತಾಳ್ಮೆಯಿಂದ ಇರುವುದು, ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು ಅಧಿಕ ರಕ್ತದೊತ್ತಡ(High Blood Pressure) ನಿಯಂತ್ರಣ(Control)ದಲ್ಲಿಡಲು ಸಹಾಯವಾಗುತ್ತದೆ. ಇವುಗಳ ಜೊತೆಗೆ ನಿಯಮಿತವಾಗಿ ವೈದ್ಯರನ್ನು ಭೇಟಿ ನೀಡುವುದು ಕೂಡ ಉತ್ತಮ. ಆಸ್ಪತ್ರೆಗೆ ಹೋಗದೆಯೂ ಹಾಗೂ ರಕ್ತದೊತ್ತಡ ಪರೀಕ್ಷಿಸುವ ಮಾನಿಟರ್(Monitor) ಇಲ್ಲದೆಯೂ ರಕ್ತದೊತ್ತಡದ ಪ್ರಮಾಣವನ್ನು ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಬಹುದು.

ಮಾನಿಟರ್ ಇಲ್ಲದೇ ರಕ್ತದೊತ್ತಡ ಪರೀಕ್ಷಿಸಿಕೊಳ್ಳುವುದು ಹೇಗೆ?

ಮೊದಲು ಎಡಗೈಯಲ್ಲಿ ನಿಮ್ಮ ನಾಡಿಯನ್ನು ಹುಡುಕಿ. ರೇಡಿಯಲ್ ನಾಡಿಯೂ ಹೆಬ್ಬೆರಳಿನ ಕೆಳಗೆ ಮತ್ತು ಮಣಿಕಟ್ಟಿನ ಮೇಲೆ ನಿಮಗೆ ಸಿಗುತ್ತದೆ. ನೀವು ಈ ನಾಡಿಯನ್ನು ಸುಲಭವಾಗಿ ಪತ್ತೆಮಾಡಿದರೆ, ನಿಮ್ಮ ರಕ್ತದೊತ್ತಡವು ಕನಿಷ್ಠ 80MMHG ಇರುತ್ತದೆ. ಸಾಮಾನ್ಯ ನಾಡಿಮಿಡಿತವು 120/80 MMHG ಆಗಿರುತ್ತದೆ.

ಇದನ್ನೂ ಓದಿ:Benefits of Ashwagandha: ಸರ್ವರೋಗಕ್ಕೆ ಮನೆ ಮದ್ದು ಈ ಅಶ್ವಗಂಧ; ಇದರ ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಪಡ್ತೀರಾ..!

ಮನೆಯಲ್ಲಿ ರಕ್ತದೊತ್ತಡದ ಮಾನಿಟರಿಂಗ್: ಯಾವುದನ್ನು ಮಾಡಬೇಕು ಮತ್ತು ಮಾಡಬಾರದು?

ಯುಕೆ ರಕ್ತದೊತ್ತಡದ ಪ್ರಕಾರ, ಗಮನಹರಿಸಬೇಕಾದ ಕೆಲವು ಸಂಗತಿಗಳಿದ್ದು, ಇವುಗಳ ಮೂಲಕ ಯಾರ ಸಹಾಯವಿಲ್ಲದೇ ಸುಲಭವಾಗಿ ನಾವೇ ನಮ್ಮ ರಕ್ತದೊತ್ತಡದ ಪ್ರಮಾಣವನ್ನು ಸುಲಭವಾಗಿ ಅಳೆಯಬಹುದು.

• ರಕ್ತದೊತ್ತಡ ಅಳೆಯಲು ಯಾವಾಗಲೂ ಒಂದೇ ತೋಳನ್ನು ಬಳಸಿ, ಎಡಗೈ ಬಳಸಿದರೆ ಎಡಗೈ, ಬಲಗೈ ಬಳಸಿದರೆ ಬಲಗೈಯನ್ನೇ ಬಳಸಬೇಕು
• ರಕ್ತದೊತ್ತಡ ಪರೀಕ್ಷಿಸಲು ಪ್ರಾರಂಭಿಸಿದಾಗ ಎರಡೂ ತೋಳುಗಳಲ್ಲಿ ರಕ್ತದೊತ್ತಡ ಅಳೆಯಿರಿ
• ಅಳತೆಗಳನ್ನು ಮೇಲಿನ ಅಥವಾ ಕೆಳಗಿನ ಮಿತಿಗೆ ಪೂರ್ಣಗೊಳಿಸಬೇಡಿ
• ಪ್ರತಿದಿನ ಒಂದೇ ಸಮಯದಲ್ಲಿ ರಕ್ತದೊತ್ತಡ ಪರೀಕ್ಷೆ ತೆಗೆದುಕೊಳ್ಳಿ
• ನಿರೀಕ್ಷಿತ ಹೆಚ್ಚಿನ ರಕ್ತದೊತ್ತಡ ಪ್ರಮಾಣ ಬಂದರೆ ಹೆದರಬೇಡಿ
• ಪ್ರತಿದಿನ ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಬೇಡಿ
• ರಕ್ತದೊತ್ತಡ ಕಡಿಮೆಯಾದರೆ ಔಷಧಿಗಳನ್ನು ಬಿಟ್ಟುಬಿಡಬೇಡಿ
• ಶಾಂತ ಮತ್ತು ಆರಾಮದಾಯಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ
• ರಕ್ತದೊತ್ತಡ ಪರೀಕ್ಷೆ ಮಾಡಿಕೊಳ್ಳುವ ವೇಳೆ ಸಡಿಲವಾದ ಬಟ್ಟೆಗಳನ್ನು ಧರಿಸಿ
• ರಕ್ತದೊತ್ತಡ ಪರೀಕ್ಷೆ ಮಾಡಿಕೊಳ್ಳುವ ಮೊದಲು 5 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ
• ನಿಮ್ಮ ಹೃದಯಕ್ಕೆ, ತೋಳು ಸಮರ್ಪಕವಾದ ರೀತಿಯಲ್ಲಿರುವಂತೆ ನೋಡಿಕೊಳ್ಳಿ

ಇದನ್ನೂ ಓದಿ:Weight Loss Tips: ಬರೀ ವ್ಯಾಯಾಮದಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದುಕೊಂಡಿದ್ದೀರಾ..? ಇದನ್ನೊಮ್ಮೆ ಓದಿ

ರಕ್ತದೊತ್ತಡದ ಬಗ್ಗೆ ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳು

ರಕ್ತದೊತ್ತಡವು ಸಾಮಾನ್ಯವಾಗಿ ವ್ಯಕ್ತಿಯ ತೂಕ, ವಯಸ್ಸು, ಲಿಂಗ ಮತ್ತು ಅವರ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ರಕ್ತದೊತ್ತಡದ ಬಗ್ಗೆ ನಿಖರವಾದ ಫಲಿತಾಂಶ ಬೇಕಾದಲ್ಲಿ ತಜ್ಞರು ಪ್ರತಿದಿನ ಯಾವ ಸ್ಥಳದಲ್ಲಿ ಪರೀಕ್ಷೆ ಮಾಡಿಕೊಳ್ಳುವಿರೋ ಅದೇ ಸ್ಥಳದಲ್ಲಿ ಅದೇ ಸಮಯಕ್ಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
Published by:Latha CG
First published: