ಹದಿಹರೆಯದ ಪ್ರೇಮದಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಾರೆ: ಅಧ್ಯಯನ

news18
Updated:September 1, 2018, 4:06 PM IST
ಹದಿಹರೆಯದ ಪ್ರೇಮದಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಾರೆ: ಅಧ್ಯಯನ
news18
Updated: September 1, 2018, 4:06 PM IST
-ನ್ಯೂಸ್ 18 ಕನ್ನಡ

ಹದಿಹರೆಯದಲ್ಲಿ ಮೂಡುವ ಪ್ರೀತಿ ಪ್ರೇಮದಲ್ಲಿ ಮನಸ್ತಾಪ ಮೂಡುವುದು ಸಹಜ. ಇಂತಹ ಸಂದರ್ಭದಲ್ಲಿ ಕೆಲವೊಂದು ಬಾರಿ ಪರಸ್ಪರ ಜಗಳಗಳು ಉಂಟಾಗಿ ಕೈ ಮೀಲಾಯಿಸುವ ಹಂತಕ್ಕೆ ತಲುಪಿ ಬಿಡುತ್ತೇವೆ. ಈ ರೀತಿಯ ವರ್ತನೆಯಲ್ಲಿ ಹುಡುಗಿಯರಿಕ್ಕಿಂತ ಹುಡುಗರೇ ಬಲಿಪಶುಗಳಾಗುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಹದಿಹರೆಯದಲ್ಲಿ ಸಂಗಾತಿಗಳೊಂದಿಗೆ ಉಂಟಾಗುವ ಭಿನ್ನಾಭಿಪ್ರಾಯದಲ್ಲಿ ಹುಡುಗಿಯರೇ ಹಿಂಸಾಚಾರಕ್ಕೆ ಇಳಿದು, ಹಲ್ಲೆ, ದೈಹಿಕ ಕಿರುಕುಳ ನೀಡುತ್ತಾರೆ ಎಂದು ಹೊಸ ಅಧ್ಯಯನ ತಂಡ ಕಂಡು ಕೊಂಡಿದ್ದಾರೆ. ಈ ಸಂಶೋಧನೆಯ ಪ್ರಕಾರ 2013 ರಲ್ಲಿ ಶೇ.5 ರಷ್ಟು ತಮ್ಮ ಸಂಗಾತಿಗಳು ಹಿಂಸೆ ಮತ್ತು ಹಲ್ಲೆಗಳ ಮೂಲಕ ಕಿರುಕುಳ ನೀಡಿದ್ದರು ಎಂದು ತಿಳಿಸಿದ್ದರು. ಅದೇ 2003 ರಲ್ಲಿ ಇದರ ಪ್ರಮಾಣವು ಶೇ.6 ರಷ್ಟಿತ್ತು, ಕಳೆದ ಕೆಲ ವರ್ಷಗಳಿಂದ ಈ ರೀತಿಯ ವರ್ತನೆಯು ಇಳಿಮುಖವಾಗುತ್ತಿದೆ. ಹಾಗೆಯೇ ಶೇ.5.8 ಹುಡುಗರು ಮತ್ತು ಶೇ.4.2 ಹುಡುಗಿಯರು ಕಳೆದ ವರ್ಷದಲ್ಲಿ ತಮ್ಮ ಸಂಗಾತಿಗಳಿಂದ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.ಸಂಗಾತಿಯೊಂದಿಗಿನ ಹಿಂಸೆಗೆ ಯಾವಾಗಲೂ ಹುಡುಗಿಯರು ಬಲಿಪಶುಗಳೆಂದು ಭಾವಿಸಲಾಗುತ್ತದೆ. ಆದರೆ ಹೊಸ ಅಧ್ಯಯನದಿಂದ ಇದು ಎಲ್ಲ ಸಂದರ್ಭಗಳಿಗೆ ಅನ್ವಹಿಸುವುದಿಲ್ಲ ಎಂದು ಕೆನಡಾದ ಪ್ರೊಫೆಸರ್ ಎಲಿಜಬೆತ್ ಸೈವಿಕ್ ಹೇಳಿದ್ದಾರೆ. ಸಂಬಂಧಗಳಲ್ಲಿ ಉಂಟಾಗುವ ಭಿನ್ನಾಭಿಪ್ರಾಯದಿಂದ ಹಿಂಸೆ, ಲೈಂಗಿಕ ಕಿರುಕುಳ, ಹಲ್ಲೆ, ದೋಷಾರೋಪ ಅಥವಾ ಯಾವುದೇ ರೂಪದ ಹಿಂಸಾಚಾರ ಮಾಡುವುದು ಅನಾಗರೀಕತೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಅಧ್ಯಯನಕ್ಕಾಗಿ 35 ಸಾವಿರದ ಒಂಭೈನೂರು ಹದಿಹರೆಯದವರ ಅಭಿಪ್ರಾಯ ಕಲೆಹಾಕಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಏಳು ಮತ್ತು 12 ವರ್ಷದೊಳಗಿನ ಪ್ರೇಮಿಗಗಳನ್ನು ತಮ್ಮ ಸಂಗಾತಿಯ ವರ್ತನೆಯ ಕುರಿತು ಪ್ರಶ್ನಿಸಲಾಗಿತ್ತು. ಈ ಸಂದರ್ಭದಲ್ಲಿ ಹುಡುಗ-ಹುಡುಗಿಯರಿಗೆ ಸಂಬಂಧಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳ ಅಗತ್ಯತೆ ಇರುವುದು ತಿಳಿದು ಬಂದಿದೆ ಎಂದು ಅಧ್ಯಯನ ತಂಡ ತಿಳಿಸಿದೆ.ತಮ್ಮ ಜೊತೆಗಾರರಿಂದ ಹಿಂಸೆಯನ್ನು ಅನುಭವಿಸುವ ಹದಿಹರೆಯದವರು ಅನಗತ್ಯವಾದ ಅಪಾಯಗಳನ್ನು ಎದುರಿಸುತ್ತಾರೆ. ಇದರಿಂದ ಖಿನ್ನತೆಗೆ ಒಳಗಾಗಬಹುದು ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಬಹುದು. ಇದಕ್ಕಾಗಿ ಯುವ ಸಮೂಹಕ್ಕೆ ಆರೋಗ್ಯಕರ ಸಂಬಂಧಗಳ ಕುರಿತಾದ ಕಾರ್ಯಕ್ರಮಗಳನ್ನು ಏಪರ್ಡಿಸಬೇಕು ಎಂದು ಸೈಮನ್ ಫ್ರೇಸರ್ ವಿಶ್ವವಿದ್ಯಾನಿಲಯದ ಲೇಖಕ ಕ್ಯಾಥರೀನ್ ಷಾಫರ್ ತಿಳಿಸಿದ್ದಾರೆ. ಹದಿಹರೆಯದವರಿಗೆ ಹೆಲ್ತ್​ ಕೇರ್ ಮೂಲಕ ಅಥವಾ ಪೋಷಕರ ಸಹಾಯದಿಂದ ಸಂಬಂಧಗಳ ಕುರಿತು ಅರಿವು ಮೂಡಿಸಬೇಕಿದೆ. ಇದರಿಂದ ಈ ರೀತಿಯ ದೌರ್ಜನ್ಯದಿಂದ ಯುವ ಪ್ರೇಮಿಗಳನ್ನು ರಕ್ಷಿಸಿಕೊಳ್ಳಬಹುದು. ಹಾಗೆಯೇ ಆರೋಗ್ಯಕರ ಸಂಬಂಧಗಳು ನೆಲೆ ನಿಲ್ಲಲು ಇದು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ