ಹೊಸ ಅಧ್ಯಯನ : ಯುವತಿಗಿಂತ ಯುವಕರೇ ಹೆಚ್ಚು ಸಕ್ರಿಯರು

news18
Updated:June 12, 2018, 12:41 PM IST
ಹೊಸ ಅಧ್ಯಯನ : ಯುವತಿಗಿಂತ ಯುವಕರೇ ಹೆಚ್ಚು ಸಕ್ರಿಯರು
news18
Updated: June 12, 2018, 12:41 PM IST
-ನ್ಯೂಸ್ 18 ಕನ್ನಡ

ಸಮಾಜದಲ್ಲಿ ಸ್ತ್ರೀಯರಿಗಿಂತ ಪುರುಷರೇ ಮೇಲು, ಗಂಡಿಗೆ ಹೆಣ್ಣು ಸರಿಸಾಟಿ ಎಂಬೆಲ್ಲಾ ವಾದಗಳು ನಡೆಯುತ್ತಲೇ ಇರುತ್ತದೆ. ಆದರೆ ಇತ್ತೀಚಿನ ಅಧ್ಯಯನವೊಂದು ಹರೆಯದ ಯುವತಿಗಿಂತ ಯುವಕರೇ ಹೆಚ್ಚು ದೈಹಿಕವಾಗಿ ಸಕ್ರಿಯರಾಗಿರುತ್ತಾರೆ ಎಂದು ತಿಳಿಸಿದೆ.

ಅಮೆರಿಕದಲ್ಲಿ ನಡೆಸಲಾದ ಈ ಸಂಶೋಧನೆಯಲ್ಲಿ 12 ರಿಂದ 29 ವಯಸ್ಸಿನ ಯುವಕ ಯುವತಿಯರು ಭಾಗವಹಿಸಿದ್ದರು. ಯುವತಿಯರು ಹದಿಹರೆಯದಿಂದ ವಯಸ್ಕರಾಗುವ ಸಂದರ್ಭದಲ್ಲಿ ಯುವಕರಿಗಿಂತ ದೈಹಿಕ ಕ್ಷಮತೆಯಲ್ಲಿ ಹಿಂದೆ ಬಿದ್ದಿದ್ದಾರೆ. ಈ ಹಿಂದುಳಿಯುವಿಕೆಗೆ ವರ್ಣ ಪದ್ದತಿ ಮತ್ತು ಆದಾಯದ ಅಸಮಾನತೆಯು ಕೂಡ ಕಾರಣವಾಗಿರಬಹುದು ಎಂದು ಅಧ್ಯಯನ ತಂಡ ತಿಳಿಸಿದೆ.

ಈ ದೈಹಿಕ ಚಟುವಟಿಕೆಯ ಅಧ್ಯಯನವು ಮುಖ್ಯವಾಗಿ ಯುವ ವಯಸ್ಕರ ಆರೋಗ್ಯ ಮತ್ತು ಹರೆಯದ ಚಟುವಟಿಕೆಗಳ ಮಾದರಿಗಳನ್ನು ಅವಲಂಭಿಸಿದೆ. ಇತ್ತೀಚಿನ ಅಧ್ಯಯನದ ಪ್ರಕಾರ ಪ್ರತಿದಿನ ಹದಿಹರೆಯದವರು ಕನಿಷ್ಟ 60 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅಲ್ಲದೆ ವಾರಕ್ಕೆ 150 ನಿಮಿಷಗಳ ಕಾಲ ಸಾಮಾನ್ಯ ದೈಹಿಕ ಚಟುವಟಿಕೆ ಅಥವಾ 75 ನಿಮಿಷಗಳ ಕಠಿಣ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದೆ.

2007 ರಿಂದ 2016 ರವರೆಗೆ ನ್ಯಾಷನಲ್ ಹೆಲ್ತ್ ಅಂಡ್ ನ್ಯುಟ್ರೀಷನ್ ಎಕ್ಸಾಮಿನೇಷನ್ ನಡೆಸಿದ ಈ ದೈಹಿಕ ಚಟುವಟಿಕೆಯ ಸಮೀಕ್ಷೆಯಲ್ಲಿ 9472 ಮಂದಿ ಯುವಕ ಯುವತಿಯರು ಭಾಗವಹಿಸಿದ್ದರು.
First published:June 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...