Bowel Cancer Symptoms: ಕರುಳಿನ ಕ್ಯಾನ್ಸರ್ ಎಂದರೇನು? ಇದರ ಸಾಮಾನ್ಯ ಲಕ್ಷಣಗಳಿವು

ಈಗೀಗ ಎಲ್ಲ ಕಡೆ ಹೆಚ್ಚಾಗುತ್ತಿರುವ ಕ್ಯಾನ್ಸರ್‌ ರೋಗ ಮಾನವನ ಅನಾರೋಗ್ಯದ ತೀವ್ರ ರೂಪ ಎಂದು ಹೇಳಬಹುದು. ಅದರಲ್ಲೂ ಭಾರತ ಮತ್ತು ವಿಶ್ವಾದ್ಯಂತ ಸಾಮಾನ್ಯ ಕ್ಯಾನ್ಸರ್‌ ಆಗಿರುವುದು ಈ ಕರುಳಿನ ಕ್ಯಾನ್ಸರ್‌ ಆಗಿದೆ. ಆದರೆ ಇದರ ಅಪಾಯಗಳನ್ನು ಪರೀಕ್ಷೆ ಮಾಡಲು ಒಂದು ಪ್ರಮುಖ ಮಾರ್ಗವಿದೆ. ಇದರ ಬಗ್ಗೆ ನಿಮಗೆ ಗೊತ್ತಿದಿಯಾ? ಇಲ್ಲದಿದ್ದರೆ ಇಲ್ಲೊಮ್ಮೆ ಈ ಲೇಖನವನ್ನು ಓದಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೋವಿಡ್‌ -19 ಎಂಬ ಸಾಂಕ್ರಾಮಿಕ ರೋಗವು ನಮಗೆ ಕಲಿಸಿದ ಮೊದಲ ವಿಷಯವೆಂದರೆ ʼಆರೋಗ್ಯವೇ ಭಾಗ್ಯʼ ಮೊದಲು ನಮ್ಮ ಆರೋಗ್ಯವನ್ನು (Health) ಕಾಪಾಡಿಕೊಳ್ಳುವುದು ಎಲ್ಲಕ್ಕಿಂತ ಬಹು ಮುಖ್ಯ ಎಂದು ಎಲ್ಲರಿಗೂ ಅರ್ಥ ಮಾಡಿಸಿದೆ. ಹಾಗೆಯೇ ನಮ್ಮ ದೇಹವು (Body) ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕಡೆ ಕೂಡ ನಾವು ಗಮನ ಹರಿಸಬೇಕಾಗುತ್ತದೆ. ಏಕೆಂದರೆ ನಮ್ಮ ದೇಹದ ಬಗ್ಗೆ ನಾವು ಸಂಪೂರ್ಣವಾಗಿ ತಿಳಿದುಕೊಂಡರೆ ನಮ್ಮ ದೇಹಕ್ಕೆ ಯಾವುದಾದರೂ ಅನಾರೋಗ್ಯ (Illness) ಬಂತೆಂದರೆ ಅದಕ್ಕೆ ಸೂಕ್ತವಾಗಿ ಚಿಕಿತ್ಸೆಯನ್ನು (Treatment) ನೀಡಿ ಗುಣಮುಖರಾಗಬಹುದು. ಆದರೆ ಕ್ಯಾನ್ಸರ್ (Cancer) ಅನ್ನುವುದು ತುಂಬಾ ಮಾರಕ ಕಾಯಿಲೆ. ಅದಕ್ಕೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಸಿಗದೆ ಇದ್ದರೆ ಆಗ ಪ್ರಾಣಹಾನಿಯಾಗುವುದು ಖಚಿತ.

ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳಿವೆ. ಇದರಲ್ಲಿ ಒಂದು ಕರುಳಿನ ಕ್ಯಾನ್ಸರ್. ಈಗೀಗ ಎಲ್ಲ ಕಡೆ ಹೆಚ್ಚಾಗುತ್ತಿರುವ ಕ್ಯಾನ್ಸರ್‌ ರೋಗ ಮಾನವನ ಅನಾರೋಗ್ಯದ ತೀವ್ರ ರೂಪ ಎಂದು ಹೇಳಬಹುದು. ಅದರಲ್ಲೂ ಭಾರತ ಮತ್ತು ವಿಶ್ವಾದ್ಯಂತ ಸಾಮಾನ್ಯ ಕ್ಯಾನ್ಸರ್‌ ಆಗಿರುವುದು ಈ ಕರುಳಿನ ಕ್ಯಾನ್ಸರ್‌ ಆಗಿದೆ. ಆದರೆ ಇದರ ಅಪಾಯಗಳನ್ನು ಪರೀಕ್ಷೆ ಮಾಡಲು ಒಂದು ಪ್ರಮುಖ ಮಾರ್ಗವಿದೆ. ಇದರ ಬಗ್ಗೆ ನಿಮಗೆ ಗೊತ್ತಿದಿಯಾ? ಇಲ್ಲದಿದ್ದರೆ ಇಲ್ಲೊಮ್ಮೆ ಈ ಲೇಖನವನ್ನು ಓದಿ.

ಯಾವ ವಿಧಾನದಿಂದ ಕ್ಯಾನ್ಸರ್‌ ಅನ್ನು ಪರೀಕ್ಷೆ ಮಾಡಬಹುದು?

  • ಕ್ಯಾನ್ಸರ್‌ ಅನ್ನು ಪರೀಕ್ಷೆ ಮಾಡುವ ವಿಧಾನವನ್ನು ಬಿಸಿಎ ಎಂಬ ವಿಧಾನದಿಂದ ಕರೆಯಲಾಗುತ್ತದೆ.

  •  ಬಿ ಎಂದರೆ 'ನಿಮ್ಮ ದೇಹದ ತ್ಯಾಜ್ಯವನ್ನು ಹೊರ ಹಾಕುವ ಸಂದರ್ಬದಲ್ಲಿ ಮಲದಲ್ಲಿ ರಕ್ತಸ್ರಾವ ಏನಾದರೂ ಆಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿ'

  • ಸಿ ಎಂದರೆ 3-4 ವಾರಗಳಿಗಿಂತ ಹೆಚ್ಚು ಕಾಲ ಉಳಿಯುವ ಸಾಮಾನ್ಯ ಕರುಳಿನ ನೋವುಗಳಲ್ಲಿ ಏನಾದರೂ ನೋವು ಇದೆಯೇ ಎಂಬುದನ್ನು ಪರೀಕ್ಷೆ ಮಾಡಿ.

  • ಎ ಎಂದರೆ ತೀವ್ರವಾದ ಆಯಾಸ ಮತ್ತು ಹೊಟ್ಟೆಯಲ್ಲಿ ಕರುಳಿನ ಭಾಗದಲ್ಲಿ ಗಡ್ಡೆ ಆಗಿ ಹೊಟ್ಟೆ ನೋವು ತೀವ್ರ ಸ್ವರೂಪ ಪಡೆಯುತ್ತದೆ.


ಹಾಗಿದ್ರೆ ಕರುಳಿನ ಕ್ಯಾನ್ಸರ್ ಎಂದರೇನು?
ಇದು ಮೊದಲು ತುಂಬಾ ಒಳಪದರದಲ್ಲಿ ಆರಂಭಗೊಳ್ಳುವ ಈ ಕ್ಯಾನ್ಸರ್‌ ನಂತರದಲ್ಲಿ ಕರುಳು ಮತ್ತು ಗುದನಾಳದ ಎಲ್ಲಾ ಕೋಶಗಳಿಗೆ ಹರಡುತ್ತದೆ. ಇದನ್ನೆ ಕರುಳಿನ ಕ್ಯಾನ್ಸರ್‌ ಎಂದು ಕರೆಯುತ್ತಾರೆ.

ಇದನ್ನೂ ಓದಿ: Edema Problem: ಎಡಿಮಾ ಕಾಯಿಲೆ ಉಂಟಾಗಲು ಕಾರಣಗಳೇನು ಮತ್ತು ಯಾವ ಪದಾರ್ಥಗಳ ಸೇವನೆ ತೊಂದರೆಯುಂಟು ಮಾಡುತ್ತದೆ?

ಆರಂಭಿಕ ಲಕ್ಷಣಗಳು ಗೋಚರಿಸುವುದಿಲ್ಲ:
ಆರಂಭಿಕ ಹಂತದಲ್ಲೇ ಕರುಳಿನ ಕ್ಯಾನ್ಸರ್ ಪತ್ತೆ ಹಚ್ಚಿದರೆ ಚಿಕಿತ್ಸೆ ನೀಡಬಹುದು. ಆದರೆ ಅಚ್ಚರಿಯೆಂದರೆ ಕರುಳಿನ ಕ್ಯಾನ್ಸರ್ ನಲ್ಲಿ ಹೊಸ ಪಾಲಿಪ್ಸ್ ಗಳು ಮತ್ತು ಅಸಾಮಾನ್ಯ ಕೋಶಗಳು ಬೆಳೆಯಲು 10-15 ವರ್ಷ ಬೇಕಾಗುವುದು. ಅಮೆರಿಕಾದ ಕ್ಯಾನ್ಸರ್ ಸೊಸೈಟಿ ಸಲಹೆ ನೀಡುವಂತೆ ಕರುಳಿನ ಕ್ಯಾನ್ಸರ್‌ನ ಸ್ಕ್ರೀನಿಂಗ್ 50ರ ಹರೆಯದಲ್ಲಿ ಆರಂಭವಾಗುವುದು ಮತ್ತು ಕ್ಯಾನ್ಸರ್ ನ ಕುಟುಂಬ ಇತಿಹಾಸ ಇರುವವರು ವೈದ್ಯರನ್ನು ಮೊದಲು ಸಂಪರ್ಕಿಸಬೇಕು.

ಕರುಳಿನ ಕ್ಯಾನ್ಸರ್ ಬರುವುದು ಅಧಿಕ:
ಕರುಳಿನ ಕ್ಯಾನ್ಸರ್ ನ ಅರ್ಧದಷ್ಟು ಸಾವುಗಳು ಓಟ, ಭೌಗೋಳಿಕತೆ ಮತ್ತು ಶಿಕ್ಷಣದ ಅಸಾಮಾನ್ಯತೆಯಿಂದ ಕೂಡಿದೆ ಎಂದು ಅಮೆರಿಕಾದ ಕ್ಯಾನ್ಸರ್ ಸೊಸೈಟಿ ಹೇಳಿದೆ. ಜನಾಂಗೀಯ ಅಲ್ಪಸಂಖ್ಯಾತರಾಗಿರುವವರು ಕರುಳಿನ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆಯು ಹೆಚ್ಚಿರುವುದು. ಕೆಲವೊಂದು ಜನಸಂಖ್ಯೆಯಲ್ಲಿ ಫಲಿತಾಂಶವು ತುಂಬಾ ಕೆಟ್ಟದಾಗಿರುವುದು.

ಕರುಳು ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳು:

  1. ಮಲದಲ್ಲಿ ರಕ್ತ

  2. ರಕ್ತಹೀನತೆ

  3. ಅತಿಯಾದ ಆಯಾಸ

  4. ಹೊಟ್ಟೆಯಲ್ಲಿ ನೋವು

  5. ಕರುಳಿನ ಚಲನೆಯಲ್ಲಿ ವ್ಯತ್ಯಾಸ

  6. ಕಾಮಾಲೆ


ಇದನ್ನೂ ಓದಿ:  Kidney Health: ಮೂತ್ರಪಿಂಡಗಳ ಆರೋಗ್ಯ ಹದಗೆಡಿಸುವ ಆಹಾರ ಪದಾರ್ಥಗಳು ಇವು

ಕ್ಯಾನ್ಸರ್‌ ಇಂದು ಬಹುತೇಕರನ್ನು ಕಾಡುವ ಕಾಯಿಲೆ ಆಗಿದೆ. ಇದಕ್ಕೆ ಭಯ ಪಡುವ ಬದಲು ಉತ್ತಮ ಜೀವನಶೈಲಿ, ಆಹಾರದಲ್ಲಿ ಬದಲಾವಣೆ, ಸುಖ ನಿದ್ರೆ, ಧ್ಯಾನ ಎಂಬಂತಹ ಉತ್ತಮ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಕ್ಯಾನ್ಸರ್‌ ಎಂಬ ಮಾರಕ ರೋಗದಿಂದ ಗುಣಮುಖರಾಗಬಹುದು.
Published by:Ashwini Prabhu
First published: