ಮಾರಣಾಂತಿಕ ಕಾಯಿಲೆ (deadly disease) ಕ್ಯಾನ್ಸರ್ ನಲ್ಲಿ (Cancer) ಅನೇಕ ಪ್ರಕಾರಗಳಿವೆ. ದೇಹದ ಪ್ರತಿ ಭಾಗಕ್ಕೂ ಹರಡುವ ಈ ಕಾಯಿಲೆ ಹೊಟ್ಟೆಯ ಭಾಗದ ಕರುಳಿನಲ್ಲೂ ಉಂಟಾಗುತ್ತದೆ. ಕರುಳಿನ ಕ್ಯಾನ್ಸರ್ (Bowel Cancer) ದೊಡ್ಡ ಕರುಳಿನಲ್ಲಿ ಪ್ರಾರಂಭವಾಗುವ ಒಂದು ಕ್ಯಾನ್ಸರ್ ಆಗಿದೆ. ಇದು ಎಲ್ಲಿ ಪ್ರಾರಂಭವಾಗುತ್ತದೆ ಎಂಬುದರ ಆಧಾರದ ಮೇಲೆ, ಇದನ್ನು ಕೆಲವೊಮ್ಮೆ ಕೊಲೊನ್ ಅಥವಾ ಗುದನಾಳದ ಕ್ಯಾನ್ಸರ್ ಎಂದೂ ಕರೆಯಲಾಗುತ್ತದೆ. ಇದು ವಿಶ್ವಾದ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದ್ದು, 2021 ರ ರಾಷ್ಟ್ರೀಯ ಅಂಕಿಅಂಶಗಳ ಪ್ರಕಾರ 25000-30000 ಗುದನಾಳದ ಕ್ಯಾನ್ಸರ್ ಪ್ರಕರಣಗಳು 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಾದವರಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎಂದು ವರದಿಗಳು (Report) ತಿಳಿಸಿವೆ.
ಕರುಳಿನ ಕ್ಯಾನ್ಸರ್ ಎಂದರೇನು?
ಕರುಳಿನ ಕ್ಯಾನ್ಸರ್ ದೊಡ್ಡ ಕರುಳಿನಲ್ಲಿನ ಕ್ಯಾನ್ಸರ್ ಕೋಶಗಳ ಅಸಹಜ ಬೆಳವಣಿಗೆಯೊಂದಿಗೆ ಸಂಬಂಧಿಸಿದೆ, ಇದನ್ನು ಕೆಲವೊಮ್ಮೆ ಕೊಲೊನ್ ಅಥವಾ ಗುದನಾಳದ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ನಮ್ಮ ಕರುಳು ಹೊಟ್ಟೆಯ ಮೂಲಕ ಗುದದ್ವಾರಕ್ಕೆ ಹೋಗುವ ಟೊಳ್ಳಾದ ಸ್ನಾಯುವಿನ ಕೊಳವೆಯಾಗಿದ್ದು, ಇದು ಆಹಾರವನ್ನು ಒಡೆಯಲು ಮತ್ತು ತ್ಯಾಜ್ಯ ವಸ್ತುಗಳನ್ನು ಗುದನಾಳಕ್ಕೆ ಸಾಗಿಸಲು ಕೆಲಸ ಮಾಡುತ್ತದೆ. ಕೊಲೊನ್ ಅಥವಾ ಕರುಳಿನ ಕ್ಯಾನ್ಸರ್ ಮುಖ್ಯವಾಗಿ, ಕರುಳು ವಿಸ್ತಾರವಾಗುವ ಸ್ಥಿತಿಯಿಂದ ಪ್ರಾರಂಭವಾಗುತ್ತದೆ.
ಕರುಳಿನ ಕ್ಯಾನ್ಸರ್ ನ ಚಿಹ್ನೆಗಳು
ಮಲವಿಸರ್ಜನೆ ಮಾಡುವಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಅನೇಕ ಜನರಿದ್ದಾರೆ. ತಜ್ಞರ ಪ್ರಕಾರ, ಇದು ಕರುಳಿನ ಕ್ಯಾನ್ಸರ್ ಅಥವಾ ಗುದನಾಳದ ಕ್ಯಾನ್ಸರ್ನಿಂದ ಉಂಟಾಗುತ್ತದೆ. ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನರು ಸಂಪೂರ್ಣ ಮಲಬದ್ಧತೆ ಅಥವಾ ಅತಿಸಾರ ಮತ್ತು ಮಲದಲ್ಲಿ ರಕ್ತ ಮತ್ತು ಕೆಲವೊಮ್ಮೆ ಹೊಟ್ಟೆಯಲ್ಲಿ ನೋವಿನ ಲಕ್ಷಣಗಳನ್ನು ಎದುರಿಸುತ್ತಾರೆ.
ಇದನ್ನೂ ಓದಿ: Periods Food: ಸರಿಯಾಗಿ ಪಿರಿಯಡ್ಸ್ ಆಗ್ಬೇಕು ಅಂದ್ರೆ ಈ ಆಹಾರಗಳನ್ನು ಮಿಸ್ ಮಾಡ್ದೇ ತಿನ್ನಿ
ಕರುಳಿನ ಕ್ಯಾನ್ಸರ್ ಗೂ ಅತಿಯಾದ ವಾಯು ಬಿಡುವಿಕೆಗೆ ಸಂಬಂಧವಿದೆಯೇ?
ವಾಯು ಬಿಡುವಿಕೆ ಒಂದು ರೀತಿಯಲ್ಲಿ ಆರೋಗ್ಯಕರವೆಂದು ಹೇಳಲಾಗಿದ್ದರೂ ಇದು ಅತಿಯಾದರೆ ಅಪಾಯ ಎನ್ನಲಾಗುತ್ತದೆ. ಅತಿಯಾದ ವಾಯು ಬಿಡುವಿಕೆ ಡಿಸ್ಪೆಪ್ಸಿಯಾ, ಕ್ರೋನ್ಸ್ ಮತ್ತು ಅಲ್ಸರೇಟಿವ್ ಕೊಲೈಟಿಸ್‌ನಂತಹ ಉರಿಯೂತದ ಕರುಳಿನ ಕಾಯಿಲೆ ಅಥವಾ ಕೆರಳಿಸುವ ಕರುಳಿನ ಸಹಲಕ್ಷಣದಂತಹ ಹಾನಿಕರವಲ್ಲದ ಕಾಯಿಲೆಗಳ ಸಂಕೇತವಾಗಿರಬಹುದು. ಇದು ಕೊಲೊರೆಕ್ಟಲ್ ಕ್ಯಾನ್ಸರ್‌ನ ಸಂಕೇತವೂ ಆಗಿರಬಹುದು ಎನ್ನುತ್ತಾರೆ ವೈದ್ಯರು.
ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಅಭ್ಯಾಸಗಳು
ಇದನ್ನೂ ಓದಿ: Fatty Liver: ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ಹೋಗಲಾಡಿಸಲು ಈ ರೀತಿ ಮಾಡಿ, ಇಲ್ಲಿದೆ ಸುಲಭ ಉಪಾಯ
ಕರುಳಿನ ಕ್ಯಾನ್ಸರ್, ಅಲ್ಸರೇಟಿವ್ ಕೊಲೈಟಿಸ್, ಕ್ರೋನ್ಸ್‌ಗಳ ಕುಟುಂಬದ ಇತಿಹಾಸ ಹೊಂದಿರುವ ವ್ಯಕ್ತಿಗಳು 5 ವರ್ಷಗಳಿಗೊಮ್ಮೆ CT ಕೊಲೊನೋಗ್ರಫಿ ಪೆಲ್ವಿಸ್ (ಗುಯಿಕ್ ಆಧಾರಿತ, ಫೆಕಲ್ ಇಮ್ಯುನೊಕೆಮಿಕಲ್ ಪರೀಕ್ಷೆ) ಅನ್ನು 45 ವರ್ಷ ವಯಸ್ಸಿನ ನಂತರ ಮಾಡಿಸಿಕೊಳ್ಳಬೇಕು ಅಂತಾರೆ ತಜ್ಞರು.
ಕರುಳಿನ ಕ್ಯಾನ್ಸರ್ ತ್ವರಿತವಾಗಿ ಹರಡುತ್ತದೆಯೇ?
ಸಾಮಾನ್ಯವಾಗಿ, ಕರುಳಿನ ಕ್ಯಾನ್ಸರಿನ ಪ್ರಗತಿಯು ನಿಧಾನವಾಗಿರುತ್ತದೆ, ಆದರೆ ಇದು ಗಂಭೀರವಾದ ಕಾಯಿಲೆಯಾಗಿದ್ದು, ಲಕ್ಷಣಗಳು ಗೋಚರವಾಗುತ್ತಿದ್ದಂತೆ ತಕ್ಷಣದ ಚಿಕಿತ್ಸೆಯ ಅಗತ್ಯವಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ