Bowel Cancer: ಕರುಳಿನ ಕ್ಯಾನ್ಸರ್ ​ಉಂಟಾಗಲು ಕಾರಣ ಮತ್ತು ಲಕ್ಷಣಗಳು ಯಾವವು?

ನಾವು ಯಾವುದೇ ಆಹಾರ ಸೇವಿಸಿದರೂ ಅದು ನೇರವಾಗಿ ನಮ್ಮ ಹೊಟ್ಟೆಗೆ ಬರುತ್ತದೆ. ಹೊಟ್ಟೆಯು ಈ ಆಹಾರವನ್ನು ಸಣ್ಣ ತುಂಡುಗಳಾಗಿ ಒಡೆಯಲು ಮತ್ತು ಜೀರ್ಣಿಸಿಕೊಳ್ಳಲು ಸಹಾಯ ಮಾಡುವ ಕೆಲಸ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಒಂಟಿಯಾಗಿರುವ (Alone) ಜನರಲ್ಲಿ (People) ಕರುಳಿನ ಕ್ಯಾನ್ಸರ್‌ (Bowel Cancer) ಆಗಿ ಸಾವನ್ನಪ್ಪುವವರ (Death) ಸಂಖ್ಯೆ ಹೆಚ್ಚಿದ್ದು, ಅಪಾಯಕಾರಿ ಎಂದು ಅಧ್ಯಯನವೊಂದು ತಿಳಿಸಿದೆ. ಮತ್ತೊಂದೆಡೆ ತಮ್ಮ ಸಂಗಾತಿ ಜೊತೆಗೆ ವಾಸಿಸುವ ಜನರು ಕ್ಯಾನ್ಸರ್ ನಿಂದ ಗುಣಮುಖರಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಹಿಂದಿನ ಅನೇಕ ಅಧ್ಯಯನಗಳಲ್ಲಿ, ಮದುವೆಯಾದವರನ್ನು ಅಕಾಲಿಕ ಮರಣದಿಂದ ರಕ್ಷಣೆ ಮಾಡಬಹುದು ಎಂದು ಹೇಳಲಾಗಿತ್ತು. ಈಗ ವಿವಾಹಿತರಲ್ಲಿ ಕ್ಯಾನ್ಸರ್ ಆದ ನಂತರವೂ ಬದುಕುಳಿಯುವವರ ಪ್ರಮಾಣ ಹೆಚ್ಚು ಎಂದು ಸಂಶೋಧಕರು ಹೇಳಿದ್ದಾರೆ. ಒಂಟಿಯಾಗಿರುವ ವ್ಯಕ್ತಿಗಳ ವಿಚಾರಕ್ಕೆ ಬಂದರೆ ಅವರು ಕರುಳಿನ ಕ್ಯಾನ್ಸರ್ ಬಾಧಿಸುವ ಮತ್ತು ಅಪಾಯ ತಂದೊಡ್ಡುವ ವಿಚಾರಗಳು ಹೆಚ್ಚಿವೆ ಎಂದು ಸಂಶೋಧನೆ ಹೇಳಿದೆ.

  ಅಪಾಯಕಾರಿ ಕರುಳಿನ ಕ್ಯಾನ್ಸರ್

  ಕೆಲವು ಕಾರಣಗಳಿಂದ ತಮ್ಮ ಸಂಗಾತಿ ಜೊತೆಯಿಂದ ಬೇರ್ಪಟ್ಟವರಿಗೆ ಯಾವ ರೀತಿ ಅಪಾಯಕಾರಿ ಎಂದು ಹೇಳಲಾಗಿದೆ. SWNS ನ ಹೇಳುವ ಪ್ರಕಾರ, ಅನ್ಹುಯಿ ವೈದ್ಯಕೀಯ ವಿಶ್ವವಿದ್ಯಾನಿಲಯದ ಸಂಬಂಧಿತ ಆರ್ಥರ್ ಪ್ರೊಫೆಸರ್ ಅಮನ್ ಕ್ಸು,  ಹೇಳಿರುವ ಪ್ರಕಾರ,

  ವಿವಾಹಿತರು ಆರ್ಥಿಕವಾಗಿ ತುಂಬಾ ಸ್ಥಿರವಾಗಿರುತ್ತಾರೆ ಮತ್ತು ಅವರ ಪಾಲುದಾರರಿಂದ ಭಾವನಾತ್ಮಕ ಬೆಂಬಲ ಪಡೆಯುತ್ತಾರೆ ಹೀಗಾಗಿ ಅವರು ಅಪಾಯದಿಂದ ಪಾರಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದರು.

  ಇದನ್ನೂ ಓದಿ: ಮೂವತ್ತರ ಹರೆಯದ ನಂತರ ಕೈ- ಕಾಲುಗಳ ಆರೈಕೆ ಹೇಗೆ ಮಾಡುವುದು?

  ಕರುಳಿನ ಕ್ಯಾನ್ಸರ್, ವಿಶ್ವದಲ್ಲಿ ಸಾವಿನ ಮೂರನೇ ಪ್ರಮುಖ ಕಾರಣವಾಗಿದೆ. ಪ್ರೊಫೆಸರ್ ಕ್ಸು ಮತ್ತು ಸಂಶೋಧಕರು ಯುಎಸ್‌ನಾದ್ಯಂತ 3,647 ಪ್ರಕರಣ ಪರಿಶೀಲನೆ ಮಾಡಿದರು. ಅಲ್ಲಿ ಗಡ್ಡೆ ಇನ್ನೂ ಅವರ ದೇಹದ ಉಳಿದ ಭಾಗಗಳಿಗೆ ಹರಡಿಲ್ಲ. ಈ ಎಲ್ಲಾ ರೋಗಿಗಳಿಗೆ 2010 ಮತ್ತು 2015 ರ ನಡುವೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ.

  ವಿವಾಹಿತರಿಗೆ ಬದುಕುಳಿಯುವ ಅವಕಾಶ ಸುಮಾರು 72 ಪ್ರತಿಶತದಷ್ಟು ಹೆಚ್ಚಿದೆ. ಈ ಸಂಶೋಧನೆಯಲ್ಲಿ, ಹೆಂಡತಿಯರಲ್ಲಿ ಬದುಕುಳಿಯುವ ಸಾಧ್ಯತೆಗಳು ಗಂಡಂದಿರಿಗಿಂತ ಹೆಚ್ಚು ಎಂದು ಕಂಡು ಬಂದಿದೆ. ಅದೇ ಸಮಯದಲ್ಲಿ ಅವರ ಪತ್ನಿ ಮರಣ ಹೊಂದಿದ ಪುರುಷರು, ಬದುಕುಳಿಯುವ ಸಾಧ್ಯತೆ 51 ಪ್ರತಿಶತದಷ್ಟು ಕಡಿಮೆ ಎಂದು ಕಂಡು ಬಂದಿದೆ. ಅಂತಹ ವೇಳೆ ಯಾರು ಬದುಕುತ್ತಾರೆ ಅಥವಾ ಇಲ್ಲ, ರೋಗಿಯು ವಿವಾಹಿತ ಅಥವಾ ಒಂಟಿಯಾಗಿದ್ದಾನೆಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.

  ಕರುಳಿನ ಕ್ಯಾನ್ಸರ್ ಎಂದರೇನು

  ನಾವು ಯಾವುದೇ ಆಹಾರ ಸೇವಿಸಿದರೂ ಅದು ನೇರವಾಗಿ ನಮ್ಮ ಹೊಟ್ಟೆಗೆ ಬರುತ್ತದೆ. ಹೊಟ್ಟೆಯು ಈ ಆಹಾರವನ್ನು ಸಣ್ಣ ತುಂಡುಗಳಾಗಿ ಒಡೆಯಲು ಮತ್ತು ಜೀರ್ಣಿಸಿಕೊಳ್ಳಲು ಸಹಾಯ ಮಾಡುವ ಕೆಲಸ ಮಾಡುತ್ತದೆ. ನಿಮ್ಮ ಹೊಟ್ಟೆಯ ಒಳ ಪದರದಲ್ಲಿ ಕ್ಯಾನ್ಸರ್ ಕೋಶಗಳು ರೂಪುಗೊಂಡಾಗ ಕರುಳಿನ ಕ್ಯಾನ್ಸರ್ ಆರಂಭವಾಗುತ್ತದೆ.

  ಈ ಜೀವಕೋಶಗಳು ಗಡ್ಡೆಗಳಾಗಿ ಬೆಳೆಯಬಹುದು. ಇದನ್ನು ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಕರುಳಿನ ಕ್ಯಾನ್ಸರ್ ಸಾಮಾನ್ಯವಾಗಿ ಹಲವು ವರ್ಷಗಳಿಂದ ನಿಧಾನವಾಗಿ ಆಗುತ್ತಾ ಹೋಗುತ್ತದೆ. 60 ರಿಂದ 80 ವರ್ಷ ವಯಸ್ಸಿನವರು ಈ ಕ್ಯಾನ್ಸರ್ ಅನ್ನು ಎದುರಿಸಬೇಕಾಗುತ್ತದೆ. ಕರುಳಿನ ಕ್ಯಾನ್ಸರ್ ದೇಹದ ಇತರ ಭಾಗಗಳಿಗೂ ಹರಡಬಹುದು.

  ಕರುಳಿನ ಕ್ಯಾನ್ಸರ್ ಲಕ್ಷಣಗಳು ಯಾವವು?

  ಆಹಾರ ನುಂಗಲು ಕಷ್ಟವಾಗುವುದು, ತಿಂದಾಗ ಹೊಟ್ಟೆ ಉಬ್ಬರಿಸುವುದು, ಸ್ವಲ್ಪ ತಿಂದಾಗಲೇ ಹೊಟ್ಟೆ ತುಂಬಿದ ಅನುಭವ, ಹೊಟ್ಟೆ ಉರಿ, ಅಜೀರ್ಣ, ಸುಸ್ತು, ಹೊಟ್ಟೆನೋವು, ಕಾರಣವಿಲ್ಲದೆ ತೂಕ ಕಡಿಮೆ ಆಗುವುದು, ವಾಂತಿ, ಇವೆಲ್ಲವೂ ಕರುಳಿನ ಕ್ಯಾನ್ಸರ್ ನ ಲಕ್ಷಣಗಳು ಆಗಿವೆ.

  ಯಾವ ಕಾರಣಗಳು ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತವೆ?

  ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (ಜಿಇಆರ್ಡಿ) ಇದರಲ್ಲಿ ಹೊಟ್ಟೆಯ ಆಮ್ಲವು ಆಹಾರದ ಪೈಪ್ನಲ್ಲಿ ಮತ್ತೆ ಸಂಗ್ರಹಗೊಳ್ಳುತ್ತದೆ.

  ಸ್ಥೂಲಕಾಯ,

  ಹೆಚ್ಚು ಉಪ್ಪು ಮತ್ತು

  ಆಹಾರದಲ್ಲಿ ಹಣ್ಣುಗಳು ಮತ್ತು ಹಸಿರು ತರಕಾರಿ ಸೇರಿಸದೇ ಇರುವುದು,

  ಕುಟುಂಬದ ಇತಿಹಾಸ

  ಇದನ್ನೂ ಓದಿ: ಮಹಿಳೆಯರನ್ನು ಸಾವಿನ ಕೂಪಕ್ಕೆ ತಳ್ಳುವ ಗರ್ಭಕಂಠದ ಕ್ಯಾನ್ಸರ್! ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಿ

  ದೀರ್ಘ ಕಾಲ ಹೊಟ್ಟೆಯಲ್ಲಿ ಸುಡುವ ಸಂವೇದನೆ,

  ಧೂಮಪಾನ

  ಎಲ್ಲಾ ವಿಷಯಗಳು ಕರುಳಿನ ಕ್ಯಾನ್ಸರ್ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.
  Published by:renukadariyannavar
  First published: