• Home
  • »
  • News
  • »
  • lifestyle
  • »
  • Liver Cancer: ಈ ಲಕ್ಷಣಗಳು ಕರುಳಿನ ಕ್ಯಾನ್ಸರ್ ಸೂಚನೆಯಂತೆ, ಸಮಸ್ಯೆ ಬರದಂತೆ ತಡೆಯಲು ಹೀಗೆ ಮಾಡಿ

Liver Cancer: ಈ ಲಕ್ಷಣಗಳು ಕರುಳಿನ ಕ್ಯಾನ್ಸರ್ ಸೂಚನೆಯಂತೆ, ಸಮಸ್ಯೆ ಬರದಂತೆ ತಡೆಯಲು ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನವೆಂಬರ್ ತಿಂಗಳನ್ನು ಹೊಟ್ಟೆ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಆಚರಣೆ ಮಾಡಲಾಗುತ್ತದೆ. ಈ ವೇಳೆ ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲು ಆಸ್ಪತ್ರೆ ಮತ್ತು ಸಂಸ್ಥೆಗಳಲ್ಲಿ ವಿವಿಧ ಕಾರ್ಯಕ್ರಮ ಮತ್ತು ಅಭಿಯಾನ ನಡೆಸಲಾಗುತ್ತದೆ. ಹಾಗಾಗಿ ಈ ತಿಂಗಳಿನಲ್ಲಿ ಕರುಳಿನ ಕ್ಯಾನ್ಸರ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಅರಿವು ನೀಡಲಾಗುತ್ತದೆ.

ಮುಂದೆ ಓದಿ ...
  • Share this:

    ಭಾರತದಲ್ಲಿ (India) ಕ್ಯಾನ್ಸರ್ ಪ್ರಕರಣಗಳು (Cancer Cases) ಹೆಚ್ಚುತ್ತಿವೆ. ಅದರಲ್ಲೂ ಹೆಚ್ಚಿನ ಕ್ಯಾನ್ಸರ್ ಮತ್ತು ಸಾವುಗಳಿಗೆ ಕರುಳಿನ ಕ್ಯಾನ್ಸರ್ (Bowel Cancer) ಎರಡನೇ ಪ್ರಮುಖ ಕಾರಣ ಆಗಿದೆ. ಜೊತೆಗೆ ಕರುಳಿನ ಕ್ಯಾನ್ಸರ್ ಭಾರತದಲ್ಲಿ ನಾಲ್ಕನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ಇದು ಮಹಿಳೆಯರಿಗಿಂತ ಪುರುಷರಲ್ಲಿ (Men’s) ಹೆಚ್ಚಾಗಿ ಕಂಡು ಬರುತ್ತದೆ. ಅರವತ್ತು ವರ್ಷಗಳ ನಂತರ ಅದರ ಸಾಧ್ಯತೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹೊಟ್ಟೆಯ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಅದರ ಬಗ್ಗೆ ಜನರಲ್ಲಿ (People) ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಯಾಕಂದ್ರೆ ಸಾಮಾನ್ಯವಾಗಿ ಅದರ ರೋಗ ಲಕ್ಷಣ ಗುರುತಿಸುವುದು ಕಷ್ಟ. ಮತ್ತು ಕ್ರಮೇಣ ಅದು ಗಂಭೀರವಾಗುತ್ತದೆ.


    ಹಾಗಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ನವೆಂಬರ್ ತಿಂಗಳನ್ನು ಹೊಟ್ಟೆ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಆಚರಣೆ ಮಾಡಲಾಗುತ್ತದೆ. ಈ ವೇಳೆ ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲು ಆಸ್ಪತ್ರೆ ಮತ್ತು ಸಂಸ್ಥೆಗಳಲ್ಲಿ ವಿವಿಧ ಕಾರ್ಯಕ್ರಮ ಮತ್ತು ಅಭಿಯಾನ ನಡೆಸಲಾಗುತ್ತದೆ. ಹಾಗಾಗಿ ಈ ತಿಂಗಳಿನಲ್ಲಿ ಕರುಳಿನ ಕ್ಯಾನ್ಸರ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಅರಿವು ನೀಡಲಾಗುತ್ತದೆ.


    ಕರುಳಿನ ಕ್ಯಾನ್ಸರ್ ಉಂಟಾದಾಗ ಕಂಡು ಬರುವ ಸಾಮಾನ್ಯ ಲಕ್ಷಣಗಳು


    ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುವುದು,


    ನೀರು ಅಥವಾ ಆಹಾರ ನುಂಗಲು ತೊಂದರೆ ಉಂಟಾಗುವುದು,


    ಕಡಿಮೆ ಆಹಾರ ಸೇವಿಸಿದ ನಂತರವೂ ಹೊಟ್ಟೆ ತುಂಬಿದ ಭಾವನೆ ಉಂಟಾಗುವುದು,


    ತಿಂದ ನಂತರ ಉಬ್ಬಿದ ಭಾವನೆ, ಹುಳಿ ಬೆಲ್ಚಿಂಗ್ ಸಮಸ್ಯೆ,


    ವಾಕರಿಕೆ ಉಂಟಾಗುವುದು, ಆಗಾಗ್ಗೆ ವಾಂತಿ ಆಗುವುದು,


    ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


    ಹಸಿವಿನ ನಷ್ಟ ಆಗುವುದು,


    ಹೊಟ್ಟೆಯಲ್ಲಿ ಸುಡುವ ಸಂವೇದನೆ ಉಂಟಾಗುವುದು, ಹಠಾತ್ ತೂಕ ನಷ್ಟ ಆಗುವುದು,


    ದೈಹಿಕವಾಗಿ ಕೆಲಸ ಮಾಡದಿದ್ದರೂ ದಣಿದ ಭಾವನೆ, ಕಪ್ಪು ಮಲ,


    ಮಲದಲ್ಲಿ ರಕ್ತ ಬರುವುದು,


    ಆಗಾಗ್ಗೆ ಎದೆಯುರಿ ಮತ್ತು ಅನಿಲ ಸಮಸ್ಯೆ ಕಾಣಿಸುವುದು,


    ಕರುಳಿನ ಕ್ಯಾನ್ಸರ್ ಗೆ ಇತರೆ ಕಾರಣಗಳು ಹೀಗಿವೆ


    ಧೂಮಪಾನ ಮತ್ತು ತಂಬಾಕು ಬಳಕೆ ಮಾಡುವುದು,


    ಹೆಲಿಕೋಬ್ಯಾಕ್ಟರ್ ಪೈಲೋರಿ ಸೋಂಕು ಉಂಟಾದಾಗ,


    ಅತಿಯಾದ ಮಸಾಲೆ ಮತ್ತು ಉಪ್ಪು ಆಹಾರಗಳ ಸೇವನೆ ಮಾಡುವುದು,


    ಕಲ್ಲಿದ್ದಲು, ಲೋಹ, ರಬ್ಬರ್ ಮತ್ತು ಧೂಳು ಮತ್ತು ಕೊಳಕಿಗೆ ದೇಹ ಒಡ್ಡುವುದು,


    ಅಲ್ಸರ್ ಸಮಸ್ಯೆಯು ದೀರ್ಘಕಾಲವಿದ್ದಾಗ, ಅತಿಯಾದ ಮದ್ಯ ಸೇವನೆ,


    ಅಧಿಕ ತೂಕ ಹಾಗೂ ಕೆಂಪು ರಕ್ತ ಕಣಗಳ ಕೊರತೆ,


    ಹೊಟ್ಟೆಯಲ್ಲಿ ಉಬ್ಬುವಿಕೆ ಸಮಸ್ಯೆ, ಕುಟುಂಬದ ಇತಿಹಾಸ ಸಮಸ್ಯೆ ಹೆಚ್ಚಿಸಲು ಕಾರಣ ಆಗಿವೆ.


    ಕರುಳಿನ ಕ್ಯಾನ್ಸರ್ ನ್ನು ತಡೆಯಬಹುದೇ?


    ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ




    ನಾರಾಯಣ ಹೆಲ್ತ್‌ನ ವೈದ್ಯಕೀಯ ಆಂಕೊಲಾಜಿ ಡಾ.ಸಿದ್ಧಾರ್ಥ್ ತುರ್ಕರ್ ಹೇಳುವ ಪ್ರಕಾರ, ಪ್ಯಾಕ್ ಮಾಡಿದ ಆಹಾರ ಮತ್ತು ಉಪ್ಪನ್ನು ಸೇವಿಸುವ ವ್ಯಕ್ತಿಗೆ ಹೊಟ್ಟೆಯ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಕರುಳಿನ ಕ್ಯಾನ್ಸರ್ ಗೆ ದೊಡ್ಡ ಕಾರಣವೆಂದರೆ ಕೆಟ್ಟ ಆಹಾರ ಪದ್ಧತಿ ಆಗಿದೆ. ಹಾಗಾಗಿ ಸರಿಯಾದ ಆಹಾರ ಸೇವನೆ ಮಾಡಿ.


    ಆಹಾರದಲ್ಲಿ ವಿಟಮಿನ್ ಎ, ಫೈಬರ್, ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರ ತಿನ್ನುವುದನ್ನು ರೂಢಿಸಿಕೊಳ್ಳಿ. ಇದು ಕ್ಯಾನ್ಸರ್ ಸಾಧ್ಯತೆ ಕಡಿಮೆ ಮಾಡುತ್ತದೆ. ಫ್ರಿಜ್ ನಲ್ಲಿಟ್ಟ ಹಳಸಿದ ಆಹಾರ ಸೇವನೆ ಮಾಡಬೇಡಿ.


    ಧೂಮಪಾನ ಮತ್ತು ಮದ್ಯಪಾನ ಮಾಡದಿರಿ


    ಧೂಮಪಾನ ಮತ್ತು ಅತಿಯಾದ ಮದ್ಯಪಾನವು ಕರುಳಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಧೂಮಪಾನವನ್ನು ತ್ಯಜಿಸಿ . ಮದ್ಯ ಸೇವನೆ ಬಿಡಿ.


    ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!


    ತೂಕ ನಿಯಂತ್ರಿಸಿ


    ಹೆಚ್ಚಿನ ತೂಕ ಹೊಂದಿರುವ ಜನರಲ್ಲಿ ಕರುಳಿನ ಕ್ಯಾನ್ಸರ್ ಸಮಸ್ಯೆ ಕಂಡು ಬರುತ್ತದೆ. ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ದೈಹಿಕವಾಗಿ ಸಕ್ರಿಯರಾಗಿರಿ. ತೂಕ ಹೆಚ್ಚಾಗಲು ಕಾರಣವಾಗುವ ಅಂತಹ ಆಹಾರಗಳಿಂದ ದೂರವಿರಿ.

    Published by:renukadariyannavar
    First published: