Immunity Booster: ಕೇಸರಿ ಬಳಸಿದ್ರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ ವೈದ್ಯರು

ಕೇಸರಿಯ ಕೆಂಪು ದಳಗಳ ಸೇವನೆ ಚರ್ಮಕ್ಕೆ, ತೂಕ ನಷ್ಟಕ್ಕೆ ಮತ್ತು ಕ್ಯಾನ್ಸರ್ ಕೋಶಗಳನ್ನು ದೂರವಿಡಲು ಸಹ ಪ್ರಯೋಜನಕಾರಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಳಿಗಾಲದಲ್ಲಿ(Winter) ನಾವು ಎಷ್ಟು ನಮ್ಮ ಆರೋಗ್ಯದ ಕಾಳಜಿ ವಹಿಸಿದರೂ ಸಾಲದು. ಈ ಸಮಯದಲ್ಲಿ ಮಕ್ಕಳು, ವಯಸ್ಕರರು, ವೃದ್ಧರವರೆಗೆ ಎಲ್ಲಾರೂ ಶೀತ, ಕೆಮ್ಮು, ಜ್ವರ ಅಂತ ಇನ್ನಿತರ ಕಾಯಿಲೆ ಅನುಭವಿಸುತ್ತಾರೆ. ಅದು ಅಲ್ಲದೇ ಈ ಕೊರೋನಾ(Corona) ನಮ್ಮೆಲ್ಲರನ್ನು ಬಾದಿಸುತ್ತಿದೆ. ಹೀಗಾಗಿ ಈ ಎಲ್ಲಾ ರೋಗಗಳ ಜತೆ ಹೋರಾಡಲು ನಾವು ಆರೋಗ್ಯವಾಗಿ ಸದೃಢವಾಗಿರಬೇಕು. ಆರೋಗ್ಯವಾಗಿ ಸದೃಢವಾಗಿರಲು ನಮ್ಮಲ್ಲಿ ಹೆಚ್ಚಿನ ರೋಗನಿರೋಧಕ (Booster) ಶಕ್ತಿಇರಬೇಕು. ವ್ಯಾಯಾಮ (Exercising) ಮಾಡಿದರೂ ಕೂಡ, ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೂ ನಮ್ಮ ದೇಹದ ರೋಗನಿರೋಧಕ ಶಕ್ತಿಯ ಮೇಲೆ ನಮಗೆ ನಂಬಿಕೆ ಇರುವುದಿಲ್ಲ.

ಇಮ್ಯುನಿಟಿ ಪವರ್ ಪಡೆಯಲು ಸಲಹೆ
ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಹೆಚ್ಚುತ್ತಿರುವ ಓಮಿಕ್ರಾನ್ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿಕೊಳ್ಳಲು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು WHO ಹೇಳಿದೆ. ರೋಗನಿರೋಧಕ ಶಕ್ತಿಯು ಸೋಂಕಿನ ಮತ್ತು ವೈರಸ್, ಬ್ಯಾಕ್ಟೀರಿಯಾಗಳ ವಿರುದ್ಧ ಬಲವಾಗಿ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೆ, ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಕಷ್ಟದ ಕೆಲಸವಲ್ಲ.

ಮೆಡಿಕಲ್ ಸ್ಟೋರ್‌ನಲ್ಲಿ ರೋಗನಿರೋಧಕ ಶಕ್ತಿ ವರ್ಧಕಗಳನ್ನು ಕೊಳ್ಳುವ ಬದಲು ನಮ್ಮ ಮನೆಯಲ್ಲಿ ಸಿಗುವ ಕೆಲ ಪದಾರ್ಥಗಳಿಂದಲೇ ನಾವು ಇಮ್ಯುನಿಟಿ ಪವರ್ ಪಡೆಯಬಹುದು. ಅದರಲ್ಲೂ ಭಾರತೀಯ ಅಡಿಗೆ ಮನೆ ಔಷಧಿ ಪದಾರ್ಥಗಳ ಉಗ್ರಾಣವಾಗಿದೆ. ನಮ್ಮ ಅಡುಗೆ ಮನೆಯಲ್ಲಿ ಸಿಗುವ ಹಲವು ಸ್ಪೈಸಸ್‌ಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ದುಪ್ಪಟ್ಟು ಮಾಡುತ್ತವೆ. ಇವುಗಳ ಸಾಲಿಗೆ ಮತ್ತೊಂದು ಸೂಪರ್ ಪವರ್ ಇರುವ ಪದಾರ್ಥ ಸೇರಿಸುವುದಾದರೆ ಅದು ಕೇಸರಿ.

ಇದನ್ನೂ ಓದಿ: Kashmiri Saffron: ತೆಲಂಗಾಣದಲ್ಲೂ ಕಾಶ್ಮೀರಿ ಕೇಸರಿ ಬೆಳೆಯಬಹುದಂತೆ...! ಇಲ್ಲಿದೆ ನೋಡಿ ಡೀಟೆಲ್ಸ್

ಆರೋಗ್ಯದ ಗುಟ್ಟು
ಹೌದು ಕೇಸರಿಯನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ. ಏಕೆಂದರೆ ಕೇಸರ್ ಎಂದೂ ಕರೆಯಲ್ಪಡುವ ಈ ಮಸಾಲೆ ಇತರ ಮಸಾಲೆಗಳಿಗೆ ಹೋಲಿಸಿದರೆ ಸಾಕಷ್ಟು ದುಬಾರಿಯಾಗಿದೆ. ಕೇವಲ 1 ಗ್ರಾಮ್ ಕೇಸರಿ ಬೆಲೆ ಬರೋಬ್ಬರಿ 300 ರೂ ಆಗಿದೆ. ಹೀಗಾಗಿ ಇದರ ಬಳಕೆ ವಿರಳ. ಕೇಸರಿಯ ಕೆಲವೇ ಎಳೆಗಳು ಆಹಾರಕ್ಕೆ ಪರಿಮಳ ಮತ್ತು ರುಚಿ ತಂದುಕೊಡುತ್ತದೆ. ರುಚಿ ಜತೆಗೆ ಕೇಸರಿಯಲ್ಲಿ ಬಹಳಷ್ಟು ಆರೋಗ್ಯದ ಗುಟ್ಟು ಅಡಗಿದೆ. ಗರ್ಭಿಣಿಯರು 5-6 ತಿಂಗಳ ನಂತರ ಪ್ರತಿನಿತ್ಯ ಈ ಕೇಸರಿ ದಳವನ್ನು ಹಾಲಿಗೆ ಹಾಕಿಕೊಂಡು ಸೇವಿಸುತ್ತಾರೆ. ಇದನ್ನು ಬಿಟ್ಟರೆ ಅಲ್ಲೋ ಇಲ್ಲೋ ಸಿಹಿ ತಿಂಡಿಗಳಲ್ಲಿ ಬಳಸುವುದನ್ನು ನೋಡಿರುತ್ತೇವೆ.

ಕೇಸರಿ ಸೇವನೆಯಿಂದಾಗುವ ಪ್ರಯೋಜನಗಳು
ಕೇಸರಿ ಸ್ವಲ್ಪ ದುಬಾರಿಯಾಗಿರಬಹುದು. ಆದರೆ ಅದರಿಂದ ಸಿಗುವ ಆರೋಗ್ಯ ಲಾಭಗಳು ಹಲವು. ಕೇಸರಿಯ ಕೆಂಪು ದಳಗಳ ಸೇವನೆ ಚರ್ಮಕ್ಕೆ, ತೂಕ ನಷ್ಟಕ್ಕೆ ಮತ್ತು ಕ್ಯಾನ್ಸರ್ ಕೋಶಗಳನ್ನು ದೂರವಿಡಲು ಸಹ ಪ್ರಯೋಜನಕಾರಿಯಾಗಿದೆ. ಕಾಶ್ಮೀರಿ ಮಸಾಲೆ ಪದಾರ್ಥಗಳಲ್ಲಿ ಹೆಚ್ಚು ಆರೋಗ್ಯಕರ ಅಂಶ ಅಡಗಿರುತ್ತದೆ. ಆ್ಯಂಟಿಆ್ಯಕ್ಸಿಡೆಂಟ್‌ ಹೇರಳವಾಗಿದ್ದು, ದೇಹದಲ್ಲಿನ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಇವುಗಳ ಜೊತೆಗೆ, ಕೇಸರಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮಹತ್ವದ ಪಾತ್ರ ವಹಿಸುತ್ತದೆ.

ಶ್ರೀಮಂತ ಔಷಧೀಯ ಗುಣ
ಕೇಸರಿ ವಿಟಮಿನ್ ಸಿ, ಮ್ಯಾಂಗನೀಸ್, ಹಾಗೂ ಕ್ರೋಸಿನ್ ಎಂಬ ಸಂಯುಕ್ತಗಳಿಂದ ಶ್ರೀಮಂತ ಔಷಧೀಯ ಗುಣಗಳನ್ನು ಒಳಗೊಂಡಿದೆ. ಕ್ರೋಕಸ್ ಸ್ಯಾಟಿವಸ್ ಹೂವಿನಿಂದ ಇದನ್ನು ಪಡೆದುಕೊಳ್ಳಲಾಗುತ್ತದೆ. ಕೇಸರಿಯ ಹಿತವಾದ ಪರಿಮಳ ನಮ್ಮ ಇಂದ್ರಿಯಗಳನ್ನು ಶಾಂತಗೊಳಿಸುತ್ತದೆ. ಇದರ ಒಂದೆರಡು ದಳಗಳ ಸೇವನೆ ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಕಾಯಿಲೆಗಳನ್ನು ದೂರ ಮಾಡುತ್ತದೆ. ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆ ಸ್ಕಿನ್ ಹೊಳಪಿಗೂ ಕೇಸರಿ ಹಾಲು ಉತ್ತಮವಾಗಿದೆ.

ಇದನ್ನೂ ಓದಿ: Benefits Of Kesari Water: ನಿದ್ರೆ ಸರಿಯಾಗಿ ಬರ್ತಿಲ್ಲ ಅಂದ್ರೆ ಕೇಸರಿ ನೀರು ಟ್ರೈ ಮಾಡಿ..

ಕೇಸರಿಯಲ್ಲಿ ಕ್ಯಾರೊಟಿನಾಯ್ಡ್‌ ಸಮೃದ್ಧವಾಗಿದ್ದು, ಇದು ನಮ್ಮ ದೇಹವನ್ನು ಅನಾರೋಗ್ಯದ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ನಿರ್ಮಿಸುತ್ತದೆ. ಇಷ್ಟೇ ಅಲ್ಲ, ಕೇಸರಿಯು ಅನಾರೋಗ್ಯದ ನಂತರದ ಚೇತರಿಕೆಗೂ ಸಹಾಯ ಮಾಡುತ್ತದೆ. ಬೆಚ್ಚಗಿನ ಹಾಲಿನಲ್ಲಿ ಒಂದು ಚಿಟಿಕೆ ಕೇಸರ್ ಬೆರೆಸಿ ಕುಡಿಯುವುದರಿಂದ ಅಪಾರ ರೋಗ ನಿರೋಧಕ ಶಕ್ತಿ ಪಡೆಯಬಹುದು. ಕೇಸರಿಯನ್ನು ಮಿತವಾಗಿ ತಿನ್ನಬೇಕು, ನಮ್ಮ ಆಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿಕೊಂಡರೆ ಅಡ್ಡ ಪರಿಣಾಮ ಎದುರಿಸಬೇಕಾಗುತ್ತದೆ.
Published by:vanithasanjevani vanithasanjevani
First published: