• Home
 • »
 • News
 • »
 • lifestyle
 • »
 • Bones Health: ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬೇಕಾ? ಹಾಗಿದ್ರೆ ಈ ಕೆಟ್ಟ ಅಭ್ಯಾಸಗಳನ್ನು ಬಿಡಿ

Bones Health: ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬೇಕಾ? ಹಾಗಿದ್ರೆ ಈ ಕೆಟ್ಟ ಅಭ್ಯಾಸಗಳನ್ನು ಬಿಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಹಾರದ ಜೊತೆಗೆ ನಮ್ಮ ಹವ್ಯಾಸ ಮತ್ತು ದೈಹಿಕ ಚಟುವಟಿಕೆಗಳು ಸಹ ಮೂಳೆಗಳ ಆರೋಗ್ಯಕ್ಕೆ ತುಂಬಾ ಮುಖ್ಯ. ಮೂಳೆಗಳ ಆರೋಗ್ಯಕ್ಕೆ ಕೆಲವು ಕೆಟ್ಟ ಅಭ್ಯಾಸಗಳು ಅಡ್ಡ ಪರಿಣಾಮ ಬೀರುತ್ತವೆ. ಧಾವಂತದ ಜೀವನದಲ್ಲಿ ನಾವು ನಮ್ಮ ಜೀವನಶೈಲಿಯನ್ನು ಸಾಕಷ್ಟು ಬದಲಾಯಿಸಿಕೊಂಡಿದ್ದೇವೆ.

 • Share this:

  ಆರೋಗ್ಯಕರ ಆಹಾರ (Healthy Food) ಸೇವನೆ ಇಡೀ ದೇಹಕ್ಕೆ (Body) ತುಂಬಾ ಅವಶ್ಯಕ. ಆರೋಗ್ಯಯುತ ಆಹಾರ ಸೇವನೆ ದೈಹಿಕ ಮತ್ತು ಮಾನಸಿಕ (Physical And Mental) ಆರೋಗ್ಯ ಕಾಪಾಡುತ್ತದೆ. ಸ್ನಾಯುಗಳ ಆರೋಗ್ಯಕ್ಕೆ ಎಷ್ಟು ಉತ್ತಮ ಆಹಾರ ಪದಾರ್ಥ (Ingredients) ಅಗತ್ಯವೋ ಅಷ್ಟೇ ಮೂಳೆಯ (Bones) ಆರೋಗ್ಯಕ್ಕೂ ಅಷ್ಟೇ ಇದು ಮುಖ್ಯ ಆಗಿದೆ. ನಮ್ಮ ಆಹಾರದ ಜೊತೆಗೆ ನಮ್ಮ ಹವ್ಯಾಸ ಮತ್ತು ದೈಹಿಕ ಚಟುವಟಿಕೆಗಳು ಸಹ ಮೂಳೆಗಳ ಆರೋಗ್ಯಕ್ಕೆ ತುಂಬಾ ಮುಖ್ಯ. ಮೂಳೆಗಳ ಆರೋಗ್ಯಕ್ಕೆ ಕೆಲವು ಕೆಟ್ಟ ಅಭ್ಯಾಸಗಳು ಅಡ್ಡ ಪರಿಣಾಮ ಬೀರುತ್ತವೆ. ಧಾವಂತದ ಜೀವನದಲ್ಲಿ ನಾವು ನಮ್ಮ ಜೀವನಶೈಲಿಯನ್ನು ಸಾಕಷ್ಟು ಬದಲಾಯಿಸಿಕೊಂಡಿದ್ದೇವೆ.


  ಮೂಳೆಯ ಆರೋಗ್ಯ ಕಾಪಾಡುವುದು


  ರಾತ್ರಿ ತಡವಾಗಿ ಮಲಗುವುದು, ಬೆಳಗ್ಗೆ ತಡವಾಗಿ ಏಳುವುದು, ಪ್ಲಾಸ್ಟಿಕ್ ಡಬ್ಬಿಯಲ್ಲಿಟ್ಟ ಆಹಾರ ಸೇವನೆ ಮತ್ತು ಪ್ಲಾಸ್ಟಿಕ್ ವಾಟರ್ ಬಾಟಲ್ ನಿಂದ ನೀರು ಕುಡಿಯುವುದು, ದಿನವಿಡೀ ಮೊಬೈಲ್ ನೋಡುವುದು, ಲ್ಯಾಪ್‌ಟಾಪ್‌ಗೆ ನೋಡುತ್ತ ದೀರ್ಘಕಾಲ ಕುಳಿತುಕೊಳ್ಳುವುದು.


  ಇಂತಹ ಹಲವು ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಮೂಳೆಗಳ ಆರೋಗ್ಯಕ್ಕೆ ಸಾಕಷ್ಟು ಹಾನಿ ಉಂಟು ಮಾಡುವ ಇಂತಹ ಕೆಲವು ಅಭ್ಯಾಸಗಳೂ ಇಲ್ಲಿ ಸೇರಿದೆ. ಐಜೆಎಂಆರ್ ಪ್ರಕಾರ, ಭಾರತದಲ್ಲಿ 4 ಮಹಿಳೆಯರಲ್ಲಿ ಒಬ್ಬರು ಆಸ್ಟಿಯೊಪೊರೋಸಿಸ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ.


  ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


  ಅನುರಾಧಾ ಬಿ ಖಂಡಿಲ್ಕರ್ ಮತ್ತು ನೇಹಾ ಎ ಕಾಜಲ್ ಅವರ ಸಂಶೋಧನಾ ವರದಿಯನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ ಪ್ರಕಟಿಸಿದೆ. ಇದರ ಪ್ರಕಾರ, ಮೂಳೆ ಸಮಸ್ಯೆ ವಿಶ್ವಾದ್ಯಂತ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಏಷ್ಯನ್ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ ಎಂದು ಹೇಳಿದೆ.


  ಐವತ್ತು ವರ್ಷ ಮೇಲ್ಪಟ್ಟ ನಾಲ್ಕು ಮಹಿಳೆಯರಲ್ಲಿ ಒಬ್ಬರು ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಋತುಬಂಧದ ನಂತರ ಸಂಭವಿಸುವ ಸಮಯದಲ್ಲಿ ಮೂಳೆ ನಷ್ಟವು ಸಾಮಾನ್ಯವಾಗಿದೆ.


  ಮೂಳೆಗಳ ಆರೋಗ್ಯಕ್ಕೆ ಈ ಕೆಟ್ಟ ಅಭ್ಯಾಸ ಬಿಟ್ಟು ಬಿಡಿ


   ಕೆಟ್ಟ ಆಹಾರ ಪದ್ಧತಿ


  ಮೂಳೆಗಳಿಗೆ ಕ್ಯಾಲ್ಸಿಯಂ ಅತ್ಯಂತ ಮುಖ್ಯ. ಇದು ಹಸಿರು ಎಲೆಗಳ ತರಕಾರಿಗಳು, ಧಾನ್ಯಗಳು, ಹಣ್ಣುಗಳು, ಬೀಜಗಳು, ಡೈರಿ ಉತ್ಪನ್ನಗಳಿಂದ ಬರುತ್ತದೆ. ನಾವು ನಮ್ಮ ಆಹಾರದ ಬಗ್ಗೆ ಗಮನ ಹರಿಸಿದರೆ, ಹೆಚ್ಚಿನ ಮಹಿಳೆಯರು ಬಿಡುವಿಲ್ಲದ ಕಾರಣ ಕ್ಯಾಲ್ಸಿಯಂ ಆಹಾರ ಸೇವನೆ ಮಾಡಲ್ಲ.


  ಪೂರ್ವಸಿದ್ಧ ಆಹಾರ ಸಕ್ಕರೆ, ಸಕ್ಕರೆ ಪಾಕ ಮತ್ತು ಸೋಡಿಯಂ ಅಧಿಕವಾಗಿರುತ್ತದೆ. ಇದು ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಇದನ್ನು ತಪ್ಪಿಸಿ.


  ಯಾವಾಗಲೂ ಮನೆಯೊಳಗೆ ಇರುವುದು, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದಿರುವುದು


  ಭಾರತದಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಮಹಿಳೆಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಜೊತೆಗೆ ದೇಹವು ಕ್ಯಾಲ್ಸಿಯಂ ಅನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲ್ಲ. ಮೂಳೆಗಳ ಆರೋಗ್ಯಕ್ಕೆ ಇದು ಅತ್ಯಗತ್ಯ.


  ಕೇವಲ ಆಹಾರದ ಮೂಲಕ ಸಾಕಷ್ಟು ವಿಟಮಿನ್ ಡಿ ಪಡೆಯುವುದು ಕಷ್ಟ. ಹಾಗಾಗಿ ಪ್ರತಿದಿನ ಕನಿಷ್ಠ ಅರ್ಧ ಘಂಟೆಯವರೆಗೆ ಸೂರ್ಯನ ಬಿಸಿಲಿಗೆ ಮೈಯೊಡ್ಡಿ.


  ಕೆಟ್ಟ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದು


  ಗಂಟೆಗಟ್ಟಲೆ ತಪ್ಪು ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದು, ಹೆಚ್ಚು ಹೊತ್ತು ನಿಂತು ಅಡುಗೆ ಮನೆಯಲ್ಲಿ ಕೆಲಸ ಮಾಡುವುದು, ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೀಗಾಗಿ ಸ್ನಾಯುವಿನ ಒತ್ತಡ, ಬೆನ್ನುಹುರಿಯ ತಿರುಚುವಿಕೆ ಇದಕ್ಕೆ ಕಾರಣವಾಗುತ್ತದೆ. ನೇರವಾಗಿ ಕುಳಿತುಕೊಳ್ಳಿ ಅಥವಾ ಎದ್ದು ನಿಂತುಕೊಳ್ಳಿ.


  ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ಸರಿಯಾದ ಭಂಗಿಯಲ್ಲಿ ಕುಳಿತು ಕೆಲಸ ಮಾಡಿ. ಎರಡೂ ಪಾದಗಳನ್ನು ನೆಲದ ಮೇಲೆ ದೃಢವಾಗಿ ನೆಟ್ಟು ನಿಮ್ಮ ತಲೆಯನ್ನು ನಿಮ್ಮ ಭುಜಗಳಿಗೆ ಅನುಗುಣವಾಗಿ ಇರಿಸಿ.


  ತಡವಾಗಿ ಮಲಗುವ ಅಭ್ಯಾಸ


  ಮೂಳೆಗಳ ಆರೋಗ್ಯ ಕಾಪಾಡಲು ಸಾಕಷ್ಟು ನಿದ್ರೆ ಮಾಡುವುದು ಮುಖ್ಯ. ಮತ್ತು ನಿಮ್ಮ ದೇಹಕ್ಕೆ ವಿಶ್ರಾಂತಿ ಮುಖ್ಯ. ನಿದ್ರೆಯ ಕೊರತೆ ಮೂಳೆಯ ಸಾಂದ್ರತೆ ಕಡಿಮೆ ಮಾಡುತ್ತದೆ. 7 ರಿಂದ 8 ಗಂಟೆಗಳ ನಿದ್ದೆ ಮಾಡುವುದು ಬಹಳ ಮುಖ್ಯ. ಒತ್ತಡ ರಹಿತ ನಿದ್ದೆ ಮಾಡಿ. ಆಗ ಉತ್ತಮ ನಿದ್ರೆ ಮಾಡಬಹುದು.


  ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


  ದೈಹಿಕ ಚಟುವಟಿಕೆ ಕೊರತೆ


  ವ್ಯಾಯಾಮ ಮಾಡುವಾಗ ಸ್ನಾಯುಗಳ ಜೊತೆಗೆ ಮೂಳೆಗಳು ಬಲಗೊಳ್ಳುತ್ತವೆ. ಹಾಗಾಗಿ ನಿಯಮಿತ ದೈಹಿಕ ಚಟುವಟಿಕೆಯು ಸಕಾರಾತ್ಮಕ ಪ್ರಯೋಜನ ನೀಡುತ್ತದೆ. ತೂಕ ನಿಯಂತ್ರಿಸುತ್ತದೆ. ಮೊಣಕಾಲು ರಕ್ಷಿಸಲ್ಪಡುತ್ತದೆ. ತೂಕ  ನಿಯಂತ್ರಿಸಲು ವಾಕಿಂಗ್, ಮೆಟ್ಟಿಲು ಹತ್ತುವುದು ಮಾಡಿ.

  Published by:renukadariyannavar
  First published: