• Home
  • »
  • News
  • »
  • lifestyle
  • »
  • Navratri Health Care: ನವರಾತ್ರಿಯ ಉಪವಾಸದ ನಡುವೆ ಈ ವಿಚಾರ ಮರೆಯದಿರಿ, ಆರೋಗ್ಯ ಜೋಪಾನ!

Navratri Health Care: ನವರಾತ್ರಿಯ ಉಪವಾಸದ ನಡುವೆ ಈ ವಿಚಾರ ಮರೆಯದಿರಿ, ಆರೋಗ್ಯ ಜೋಪಾನ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಂಜಕವು ನಮ್ಮ ಮೂಳೆ ಮತ್ತು ದೇಹದ ಬಲ ಮತ್ತು ಶಕ್ತಿ ನೀಡಲು ಬಹಳ ಮುಖ್ಯವಾಗಿದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದು ಮೂತ್ರಪಿಂಡದ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ನವರಾತ್ರಿ ಉಪವಾಸ ಸಮಯದಲ್ಲಿ ಮೂತ್ರಪಿಂಡದ ಆರೋಗ್ಯಕ್ಕಾಗಿ ರಂಜಕದ ಪ್ರಮಾಣ ಎಷ್ಟಿದೆ ಎಂದು ಗಮನಿಸುವುದು ಮುಖ್ಯ.

ಮುಂದೆ ಓದಿ ...
  • Share this:

    ನವರಾತ್ರಿ 2022 (Navaratri) ಇದೀಗ ಬಂದಿದೆ. 9 ದಿನಗಳ (Nine Days) ಕಾಲ ನಡೆಯುವ ಪೂಜೆಯಲ್ಲಿ ಮಹಿಳೆಯರು (Women’s) ಕೂಡ ಉಪವಾಸ (Fasting) ವ್ರತ ಮಾಡುತ್ತಾರೆ. ಸಾಮಾನ್ಯವಾಗಿ ಉಪವಾಸದ ವೇಳೆ ನಾವು ಕ್ಯಾಲೊರಿ ಕಡಿಮೆ ಸೇವನೆ ಮಾಡಲು ತುಂಬಾ ಕಾಳಜಿ (Care) ವಹಿಸುತ್ತೇವೆ. ಆದರೆ ರಂಜಕ ಸೇವನೆಯ ಬಗ್ಗೆ ಕಾಳಜಿ ವಹಿಸಲು ಮರೆತು ಬಿಡುತ್ತೇವೆ. ಉಪವಾಸ ವೇಳೆ ಕೆಲವೊಮ್ಮೆ ಹೆಚ್ಚಿನ ರಂಜಕವು ಪ್ಯಾಕ್ ಮಾಡಿದ ಆಹಾರ, ಸಂಸ್ಕರಿಸಿದ ಆಹಾರ ಮತ್ತು ಹೆಚ್ಚಿನ ಪ್ರೋಟೀನ್ ಆಹಾರದ ಜೊತೆ ಸೇವನೆ ಮಾಡಲಾಗುತ್ತದೆ. ರಂಜಕವು ನಮ್ಮ ಮೂಳೆ ಮತ್ತು ದೇಹದ ಬಲ ಮತ್ತು ಶಕ್ತಿ ನೀಡಲು ಬಹಳ ಮುಖ್ಯವಾಗಿದೆ.


    ಆದರೆ ಇದನ್ನು ಅತಿಯಾಗಿ ಸೇವಿಸುವುದು ಮೂತ್ರಪಿಂಡದ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ನವರಾತ್ರಿ ಉಪವಾಸ ಸಮಯದಲ್ಲಿ ಮೂತ್ರಪಿಂಡದ ಆರೋಗ್ಯಕ್ಕಾಗಿ ರಂಜಕದ ಪ್ರಮಾಣ ಎಷ್ಟಿದೆ ಎಂದು ಗಮನಿಸುವುದು ಮುಖ್ಯ.


    ಮೂಳೆಗಳ ಆರೋಗ್ಯಕ್ಕೆ ರಂಜಕ ಅತ್ಯಗತ್ಯ


    ರಂಜಕವು ಮೂಳೆಗಳಲ್ಲಿ ಕಂಡು ಬರುವ ಖನಿಜ. ಕ್ಯಾಲ್ಸಿಯಂ ಜೊತೆಗೆ ರಂಜಕವು ಮೂಳೆಗಳನ್ನು ಬಲಪಡಿಸುತ್ತದೆ. ದೇಹದ ಇತರ ಭಾಗಗಳನ್ನು ಆರೋಗ್ಯವಾಗಿಡುತ್ತದೆ. ಆರೋಗ್ಯವಂತ ವ್ಯಕ್ತಿಯ ಮೂತ್ರಪಿಂಡವು ರಕ್ತದಲ್ಲಿನ ಹೆಚ್ಚುವರಿ ರಂಜಕವನ್ನು ತೆಗೆದು ಹಾಕುತ್ತದೆ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಆದರೆ ದೇಹವು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇದ್ದಾಗ ಮೂತ್ರಪಿಂಡಗಳು ರಂಜಕವನ್ನು ಸಂಪೂರ್ಣವಾಗಿ ತೆಗೆದು ಹಾಕಲು ಸಾಧ್ಯವಾಗಲ್ಲ.




    ಹೀಗಾಗಿ ಹೆಚ್ಚಿನ ರಂಜಕ ಮಟ್ಟವು ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಹೆಚ್ಚುವರಿ ರಂಜಕವು ದೇಹದಿಂದ ಕ್ಯಾಲ್ಸಿಯಂ ಅನ್ನು ಹೊರ ತೆಗೆಯುತ್ತದೆ. ಇದು ಮೂಳೆಗಳು ದುರ್ಬಲವಾಗಿಸುತ್ತದೆ.


    ರಕ್ತದಲ್ಲಿ ರಂಜಕದ ಮಟ್ಟ ಎಷ್ಟಿರಬೇಕು?


    ರಕ್ತದಲ್ಲಿ ರಂಜಕದ ಸಾಮಾನ್ಯ ಮಟ್ಟವು 2.5 ರಿಂದ 4.5 mg/dL ಆಗಿರಬೇಕು. ಒಬ್ಬ ವ್ಯಕ್ತಿಯು ಕೆಲವು ಸಮಸ್ಯೆ ಹೊಂದಿದ್ದರೆ ಅವರು ಮೂತ್ರಪಿಂಡಶಾಸ್ತ್ರಜ್ಞರನ್ನು ಭೇಟಿ ಮಾಡಿ ಮಾಹಿತಿ ಪಡೆಯಬೇಕು. ಹಾಗಾಗಿ ಅವಶ್ಯಕತೆಗೆ ತಕ್ಕಷ್ಟು ರಂಜಕವನ್ನು ಆಹಾರದಲ್ಲಿ ಸೇವನೆ ಮಾಡಿ.


    ಆಹಾರದಲ್ಲಿ ರಂಜಕದ ಸಮತೋಲನ ಕಾಪಾಡಿ


    ಡಾ.ರಂಜಿತ್ ಹೇಳುವ ಪ್ರಕಾರ, ಆಹಾರದಲ್ಲಿ ರಂಜಕ ಸೇವನೆ ನಿಯಂತ್ರಿಸಿ. ಇದು ರಂಜಕದ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ. ರಂಜಕವು ಸಾಮಾನ್ಯವಾಗಿ ಪ್ರೋಟೀನ್-ಭರಿತ ಆಹಾರಗಳಾದ ಮಾಂಸ, ಕೋಳಿ, ಮೀನು, ಬೀಜಗಳು, ಬೀನ್ಸ್ ಮತ್ತು ಡೈರಿ ಉತ್ಪನ್ನಗಳಲ್ಲಿ ಇದೆ. ಪ್ರಾಣಿಗಳ ಆಹಾರದಲ್ಲಿ ಕಂಡು ಬರುವ ರಂಜಕವು ಸಸ್ಯ ಆಹಾರಗಳಲ್ಲಿ ಕಂಡು ಬರುವ ರಂಜಕಕ್ಕಿಂತ ಸುಲಭವಾಗಿ ಹೀರಲ್ಪಡುತ್ತದೆ.


    ರಂಜಕದ ಮಟ್ಟ ತಿಳಿಯಲು ಪೌಷ್ಟಿಕಾಂಶದ ಅಂಶ ಪರಿಶೀಲಿಸಿ


    ಆಹಾರವನ್ನು ಸಂರಕ್ಷಿಸಲು ರಂಜಕವನ್ನು ಸಂರಕ್ಷಕವಾಗಿ ಸೇರಿಸಲಾಗುತ್ತದೆ. ಫಾಸ್ಫರಸ್ ಫಾಸ್ಟ್ ಫುಡ್, ಪ್ಯಾಕ್ ಮಾಡಿದ ಆಹಾರ, ಬಾಟಲ್ ಪಾನೀಯ, ಸಂಸ್ಕರಿಸಿದ ಮಾಂಸ ಮತ್ತು ಹೆಚ್ಚಿನ ಸಂಸ್ಕರಿಸಿದ ಆಹಾರಗಳಲ್ಲಿ ಸಮೃದ್ಧವಾಗಿದೆ.


    ದೇಹವು ಅಜೈವಿಕ ರಂಜಕವನ್ನು ಸಂಯೋಜಕ ರೂಪದಲ್ಲಿ ಸಂಪೂರ್ಣವಾಗಿ ಹೀರಿಕೊಳ್ಳುವುದರಿಂದ ಇದು ಆರೋಗ್ಯಕ್ಕೆ ಹಾನಿಕರ. ಪೂರ್ವಸಿದ್ಧ ಆಹಾರ ಸೇವಿಸುತ್ತಿದ್ದರೆ ಪದಾರ್ಥಗಳ ಪೌಷ್ಟಿಕಾಂಶದ ಅಂಶಗಳ ಮಟ್ಟ ಮತ್ತು ರಂಜಕದ ಪ್ರಮಾಣ ಪರಿಶೀಲಿಸಿ.


    ಹೆಚ್ಚಿನ ರಂಜಕ ಸೇವನೆ ತಪ್ಪಿಸಲು ಈ ಆಹಾರ ಸೇವನೆ ತಪ್ಪಿಸಿ


    ಕೋಕೋ, ಚಾಕೊಲೇಟ್ ಪಾನೀಯ, ಡಾರ್ಕ್ ಕೋಲಾ, ಸೋಡಾ ನೀರು, ಹಾಲಿನ ಪಾನೀಯ, ಪೂರ್ವಸಿದ್ಧ ಐಸ್ ಟೀ, ಫಾಸ್ಫೇಟ್ ಹೊಂದಿರುವ ಪೂರ್ವಸಿದ್ಧ ಪಾನೀಯ ತಪ್ಪಿಸಿ. ಚೀಸ್, ಸಂಸ್ಕರಿಸಿದ ಹಾಲು, ಕ್ರೀಮ್ ಸೂಪ್, ಐಸ್ ಕ್ರೀಮ್, ಪುಡಿಂಗ್, ಸಿಂಪಿ, ಬೀಫ್ ಲಿವರ್, ಸಾರ್ಡೀನ್ಗಳು, ಚಿಕನ್ ಲಿವರ್, ಆರ್ಗನ್ ಮಾಂಸದ ಅತಿಯಾದ ಸೇವನೆ


    ಮತ್ತು ಚಾಕೊಲೇಟ್, ಮಿಠಾಯಿ, ಕ್ಯಾರಮೆಲ್ ಮಿಠಾಯಿ, ಹಾಟ್ ಡಾಗ್‌, ಸಾಸೇಜ್‌ ಮತ್ತು ಹೆಚ್ಚಿನ ಸಂಸ್ಕರಿತ ಆಹಾರಗಳು ಹೆಚ್ಚಿನ ರಂಜಕ ಹೊಂದಿರುತ್ತವೆ. ಹಾಗಾಗಿ ಅವುಗಳ ಸೇವನೆ ಕಡಿಮೆ ಮಾಡಿ.


    ಕಡಿಮೆ ಫಾಸ್ಫರಸ್ ಆಹಾರ ಉತ್ತಮ ಆಯ್ಕೆ


    ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಚಹಾ, ಟೋನ್ಡ್ ಹಾಲು, ಸೇಬಿನ ರಸ, ಕ್ರ್ಯಾನ್ಬೆರಿ ಜ್ಯೂಸ್, ದ್ರಾಕ್ಷಿ ರಸ, ಶುಂಠಿ ಚಹಾ, ನಿಂಬೆ ಪಾನಕ, ನಿಂಬೆ ಸೋಡಾವನ್ನು ಸೇವಿಸಿ. ಅಕ್ಕಿ ಹಾಲು, ಬಾದಾಮಿ ಹಾಲು, ಕಾಟೇಜ್ ಚೀಸ್, ಸಸ್ಯಾಹಾರಿ ಚೀಸ್,


    ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


    ಚಿಕನ್, ಮೀನು, ಮೊಟ್ಟೆ, ಹಂದಿ, ಕುರಿಮರಿ ಇತ್ಯಾದಿ ಸೇವಿಸಬಹುದು. ಸೇಬು, ಹಣ್ಣು, ದ್ರಾಕ್ಷಿ, ಕ್ಯಾರೆಟ್, ಸೌತೆಕಾಯಿ, ಅಕ್ಕಿ ಕೇಕ್, ಉಪ್ಪುರಹಿತ ಪಾಪ್ಕಾರ್ನ್, ಸಕ್ಕರೆ ಕುಕೀಸ್ ಇತ್ಯಾದಿ ಕಡಿಮೆ ಫಾಸ್ಫರಸ್ ಪರ್ಯಾಯಗಳಾಗಿ ಬಳಸಬಹುದು.

    Published by:renukadariyannavar
    First published: