Bones Health: ಮೂಳೆಗಳ ದೌರ್ಬಲ್ಯ ತಡೆಯಲು ಮತ್ತು ಕ್ಯಾಲ್ಸಿಯಂ, ವಿಟಮಿನ್ ಡಿ ಪೂರೈಸಲು ಈ ರಸಗಳ ಸೇವನೆ ಮಾಡಿ

ದೇಹವು ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪಡೆಯದೇ ಇದ್ದಾಗ ದುರ್ಬಲ ಮೂಳೆಗಳ ಸಮಸ್ಯೆ ಕಂಡು ಬರುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ ಮೂಳೆಗಳ ದೌರ್ಬಲ್ಯಕ್ಕೆ ಮುಖ್ಯ ಕಾರಣವಾಗಿದೆ. ವೈದ್ಯಕೀಯ ಭಾಷೆಯಲ್ಲಿ, ಇದನ್ನು ಆಸ್ಟಿಯೊಪೊರೋಸಿಸ್ ಎಂದು ಕರೆಯುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೆಟ್ಟ ಆಹಾರ ಪದ್ಧತಿ (Bad Food Habit) ಮತ್ತು ಜಡ ಜೀವನಶೈಲಿ (Bad Lifestyle) ಅನೇಕ ಜನರನ್ನು (People) ಅನಾರೋಗ್ಯಕ್ಕೆ (Unhealthy) ದೂಡಿದೆ. ಅದರಲ್ಲೂ ಮೂಳೆ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುವಂತೆ ಮಾಡಿದೆ. ಹಲವರು ಈಗಾಗಲೇ ಬೆನ್ನು ನೋವು, ಮಣಿಕಟ್ಟು ನೋವು, ಬೆರಳು ನೋವು ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವೆಲ್ಲಾ ಸಾಮಾನ್ಯ ಸಮಸ್ಯೆಗಳು ಮತ್ತು ಇವೆಲ್ಲವೂ ದುರ್ಬಲ ಮೂಳೆಯ ಲಕ್ಷಣಗಳು ಆಗಿವೆ. ನೀವು ಸ್ವಲ್ಪ ಕೆಲಸ ಮಾಡಿದರೂ ತುಂಬಾ ಸುಸ್ತಾಗಲು ಪ್ರಾರಂಭಿಸುತ್ತೀರಿ. ಇದು ನಿಮ್ಮ ಮೂಳೆಗಳು ದುರ್ಬಲವಾಗಿವೆ ಎಂಬುದರ ಸಂಕೇತ ಆಗಿದೆ. ಇದನ್ನು ನೀವು ಬೇಗ ಅರ್ಥ ಮಾಡಿಕೊಳ್ಳಬೇಕು.

  ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ

  ದೇಹವು ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪಡೆಯದೇ ಇದ್ದಾಗ ದುರ್ಬಲ ಮೂಳೆಗಳ ಸಮಸ್ಯೆ ಕಂಡು ಬರುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ ಮೂಳೆಗಳ ದೌರ್ಬಲ್ಯಕ್ಕೆ ಮುಖ್ಯ ಕಾರಣವಾಗಿದೆ. ವೈದ್ಯಕೀಯ ಭಾಷೆಯಲ್ಲಿ, ಇದನ್ನು ಆಸ್ಟಿಯೊಪೊರೋಸಿಸ್ ಎಂದು ಕರೆಯುತ್ತಾರೆ. ಇದರಲ್ಲಿ ಮೂಳೆಗಳು ದುರ್ಬಲಗೊಳ್ಳುತ್ತವೆ ಮತ್ತು ಸುಲಭವಾಗಿ ಮುರಿತಕ್ಕೆ ಒಳಗಾಗಬಹುದು.

  ಮೂಳೆಗಳನ್ನು ಬಲಪಡಿಸಲು ಏನು ಮಾಡಬೇಕು?

  ಸಮಯಕ್ಕೆ ಸರಿಯಾಗಿ ಇದರ ಬಗ್ಗೆ ಕಾಳಜಿ ವಹಿಸದಿದ್ದರೆ, ಈ ಸಮಸ್ಯೆಯು ತುಂಬಾ ತೀವ್ರವಾಗುತ್ತದೆ.  ನಂತರ ಮೂಳೆ ಮುರಿಯುವುದು, ಬೆನ್ನು ಬಾಗುವಿಕೆ ಅಥವಾ ಕೆಮ್ಮು, ಸೌಮ್ಯವಾದ ಒತ್ತಡವೂ ಸಹ ನಿಮ್ಮ ಮೂಳೆಗಳಿಗೆ ಬೇಗ ಹಾನಿಯುಂಟು ಮಾಡುತ್ತದೆ.

  ಇದನ್ನೂ ಓದಿ: ಸಿಗರೇಟ್, ತಂಬಾಕು ಸೇವನೆ ಮಾಡುವವರಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ! ತಜ್ಞರು ಹೇಳೋದೇನು?

  ಮೂಳೆಗಳನ್ನು ಬಲಪಡಿಸಲು, ವ್ಯಾಯಾಮ ಮಾಡುವುದು, ಧೂಮಪಾನ ತ್ಯಜಿಸುವುದು, ಕೆಲವು ವಿಟಮಿನ್ ಮತ್ತು ಖನಿಜಯುಕ್ತ ಪೂರಕ ಸೇವನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧ ಆಹಾರ ಸೇವನೆ ಬಹಳ ಮುಖ್ಯ. ಸಹಜವಾಗಿ, ಹಾಲು, ಮೊಸರು ಮತ್ತು ಚೀಸ್ ನಂತಹ ಡೈರಿ ಉತ್ಪನ್ನಗಳು ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣ ಹೊಂದಿರುತ್ತವೆ.

  ಆದರೆ ಸಾಕಷ್ಟು ಕ್ಯಾಲ್ಸಿಯಂ, ವಿಟಮಿನ್ ಡಿ, ರಂಜಕ, ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳನ್ನು ಒದಗಿಸುವ ಮೂಲಕ ನಿಮ್ಮ ಮೂಳೆಗಳನ್ನು ಬಲಪಡಿಸುವ ಕೆಲವು ಹಣ್ಣಿನ ಹಾಗೂ ರಸಗಳಿವೆ. ಅವುಗಳ ಬಗ್ಗೆ ಇಲ್ಲಿ ನಾವು ಇಂದು ತಿಳಿಯೋಣ.

  ದ್ರಾಕ್ಷಿಹಣ್ಣಿನ ರಸ

  ದ್ರಾಕ್ಷಿಹಣ್ಣಿನ ರಸ ಮೂಳೆಗಳನ್ನು ಬಲಪಡಿಸಲು ಸಹಕಾರಿ. ಇದು ಬೃಹತ್ ಪ್ರಮಾಣದ ವಿಟಮಿನ್ ಸಿ ಹೊಂದಿರುತ್ತದೆ. ಇದು ಮೂಳೆ ಮ್ಯಾಟ್ರಿಕ್ಸ್‌ನಲ್ಲಿ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಮತ್ತು ಮೂಳೆ ಆರೋಗ್ಯಕ್ಕೆ ಹಾನಿಕಾರಕವಾದ ಸ್ವತಂತ್ರ ರಾಡಿಕಲ್‌ಗಳನ್ನು ಹೊರ ಹಾಕುತ್ತದೆ.

  ದ್ರಾಕ್ಷಿಹಣ್ಣಿನ ತಿರುಳು ಇಲಿಗಳಲ್ಲಿ ಮೂಳೆಯ ಗುಣಮಟ್ಟ ಸುಧಾರಿಸುತ್ತದೆ ಎಂದು ಅಧ್ಯಯನವುವೊಂದು ಕಂಡು ಹಿಡಿದಿದೆ. ಆದರೆ ಇನ್ನೊಂದು ಅಧ್ಯಯನವು ದ್ರಾಕ್ಷಿಹಣ್ಣಿನ ರಸ ಕುಡಿಯುವುದು ಮೂಳೆಯ ಗುಣಮಟ್ಟ ಮತ್ತು ಮೂಳೆ ಖನಿಜಾಂಶ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕಂಡು ಹಿಡಿದಿದೆ.

  ಹಾಲು

  ಡೈರಿ ಉತ್ಪನ್ನಗಳು ಕ್ಯಾಲ್ಸಿಯಂನ ಉತ್ತಮ ಮೂಲಗಳು ಆಗಿವೆ. ಆದರೆ ಪಾಶ್ಚರೀಕರಿಸಿದ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಸಾಕಷ್ಟು ವಿಟಮಿನ್ ಡಿ ಪಡೆಯುವುದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಮೂಳೆಗಳನ್ನು ಬಲಪಡಿಸಲು ನೀವು ಇದನ್ನು ಪ್ರತಿದಿನ ಸೇವಿಸಬೇಕು. ಇದಲ್ಲದೆ, ಇದರಲ್ಲಿ ಸಾಕಷ್ಟು ಪ್ರೋಟೀನ್ ಕೂಡ ಕಂಡು ಬರುತ್ತದೆ.

  ಕೆಫೀರ್ ಹಾಲು

  ನೀವು ಹಾಲು ಕುಡಿಯದಿದ್ದರೆ, ಕೆಫೀರ್ ನಿಮಗೆ ಉತ್ತಮ ಆಯ್ಕೆ. ಇದು ಸಾಕಷ್ಟು ಕ್ಯಾಲ್ಸಿಯಂ ಹೊಂದಿರುತ್ತದೆ. ಇದು ವಿಟಮಿನ್ ಕೆ 2 ನ ಉತ್ತಮ ಮೂಲ. ಮೂಳೆ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶ ಇದರಲ್ಲಿದೆ. ಆಸ್ಟಿಯೊಪೊರೋಸಿಸ್ ರೋಗಿಗಳ ಮೇಲೆ 2015 ರ ಅಧ್ಯಯನವು ಆರು ತಿಂಗಳ ಕಾಲ ಅದನ್ನು ಸೇವಿಸಿದವರು ಬಲವಾದ ಮೂಳೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.

  ಹಸಿರು ಸ್ಮೂಥಿ

  ಕಡು ಹಸಿರು ಎಲೆಗಳ ತರಕಾರಿಗಳು ಕ್ಯಾಲ್ಸಿಯಂ ಒದಗಿಸುತ್ತವೆ. ಪಾಲಕ್ ಮತ್ತು ಎಲೆಕೋಸು ಎರಡೂ ದೊಡ್ಡ ಪ್ರಮಾಣದ ಕ್ಯಾಲ್ಸಿಯಂ ಹೊಂದಿರುತ್ತವೆ. ಮೂಳೆಗಳನ್ನು ಬಲಗೊಳಿಸಲು, ನೀವು ಹಸಿರು ಎಲೆಗಳ ತರಕಾರಿಗಳ ಸ್ಮೂಥಿ ಕುಡಿಯಬೇಕು. ನೀವು ಅದಕ್ಕೆ ಬಾಳೆಹಣ್ಣು ಮತ್ತು ಕಿತ್ತಳೆ ಕೂಡ ಸೇರಿಸಬಹುದು.

  ಇದನ್ನೂ ಓದಿ: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ

  ಬಾದಾಮಿ ಮತ್ತು ಸೋಯಾ ಹಾಲು

  ಮೂಳೆಗಳ ಆರೋಗ್ಯಕ್ಕೆ ಮತ್ತು ಬಲವಾಗಿಸಲು ನೀವು ಬಾದಾಮಿ ಮತ್ತು ಸೋಯಾ ಹಾಲು ಸೇವಿಸಬಹುದು. ಈ ಪಾನೀಯಗಳು ಸಾಮಾನ್ಯವಾಗಿ ಮೂಳೆಯ ನಷ್ಟ ತಡೆಗಟ್ಟುವ ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತವೆ.
  Published by:renukadariyannavar
  First published: