Singer KK Death: ಕೆಕೆ ಸಾವಿಗೆ ಹೃದಯಸ್ತಂಭನ ಕಾರಣನಾ ಅಥವಾ ಬೇರೆ ಸಮಸ್ಯೆಯಿತ್ತಾ?

ಇಂತಹ ಘಟನೆಗಳು ಮೊದಲೇ ಅಡೆತಡೆಗಳು ಮತ್ತು ಒತ್ತಡದ ಸಂದರ್ಭದಲ್ಲಿ ಹೆಚ್ಚಾಗಿ ಸಂಭವಿಸುತ್ತವೆ. ಒಬ್ಬ ವ್ಯಕ್ತಿಯು ಎರಡು-ಮೂರು ಗಂಟೆಗಳ ಕಾಲ ನಿರಂತರವಾಗಿ ಹಾಡುತ್ತಿದ್ದರೆ, ಒತ್ತಡ ಉಂಟಾಗಿರಬೇಕು ಎಂಬುದು ಸ್ಪಷ್ಟವಾಗಿದೆ.

ಬಾಲಿವುಡ್ ಖ್ಯಾತ ಗಾಯಕ ಕೆಕೆ

ಬಾಲಿವುಡ್ ಖ್ಯಾತ ಗಾಯಕ ಕೆಕೆ

 • Share this:
  ಮಂಗಳವಾರ ರಾತ್ರಿ (Night) ಕೋಲ್ಕತ್ತಾದಲ್ಲಿ (Kolkata) ಲೈವ್ ಕನ್ಸರ್ಟ್ (Live Concert) ಸಮಯದಲ್ಲಿ (Time) ಬಾಲಿವುಡ್‌ (Bollywood) ಖ್ಯಾತ ಗಾಯಕ ಕೆಕೆ (ಕೃಷ್ಣ ಕುಮಾರ್ ಕುನ್ನತ್) ಹಠಾತ್ ಸಾವಿಗೀಡಾಗಿದ್ದಾರೆ. ಕಾರ್ಯಕ್ರಮದ ವೇಳೆ ಆರೋಗ್ಯ ಹದಗೆಟ್ಟ ಹಿನ್ನೆಲೆ ಅವರು ನೆಲದ ಮೇಲೆ ಕುಸಿದು ಬಿದ್ದಿದ್ದರು. ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಮಾರ್ಗ ಮಧ್ಯೆ ಕೆಕೆ ಸಾವನ್ನಪ್ಪಿದ್ದಾರೆ. 53 ವರ್ಷ ವಯಸ್ಸಿನವರಾಗಿದ್ದ, ಕೆಕೆ ಸಂಪೂರ್ಣವಾಗಿ ಫಿಟ್ ಆಗಿ ಕಾಣುತ್ತಿದ್ದರು. ಗಾಯಕನ ಹಠಾತ್ ನಿರ್ಗಮನದಿಂದ ಅವರ ಅಭಿಮಾನಿಗಳು ತುಂಬಾ ಆಶ್ಚರ್ಯ ಚಕಿತರಾಗಿದ್ದಾರೆ. ಆರಂಭಿಕ ವರದಿಗಳ ಪ್ರಕಾರ, ಕೆಕೆ ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ.

  ಕೆಕೆ ಗೆ ಹೃದಯಾಘಾತ ಅಥವಾ ಹೃದಯ ಸ್ತಂಭನ ಉಂಟಾಗಿತ್ತು

  ಆದರೆ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ. ಸದ್ಯಕ್ಕೆ ವೈದ್ಯರು ಈ ವಿಚಾರದಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಅದೇ ವೇಳೆ, ಮೇದಾಂತ ಆಸ್ಪತ್ರೆ ಅಧ್ಯಕ್ಷ ಮತ್ತು ಹೃದ್ರೋಗ ತಜ್ಞ ಡಾ.ನರೇಶ್ ಟ್ರೆಹಾನ್ ಅವರು ಕೆಕೆ ಸಾವಿನ ಕುರಿತು ಕೆಲವು ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ.

  ಕೆಕೆ ಸಾವನ್ನಪ್ಪಿದ್ದು ಹೇಗೆ?

  ಡಾ. ನರೇಶ್ ಟ್ರೆಹಾನ್ ಮಾತನಾಡಿ, 'ಇಂತಹ ಘಟನೆಗಳು ಮೊದಲೇ ಅಡೆತಡೆಗಳು ಮತ್ತು ಒತ್ತಡದ ಸಂದರ್ಭದಲ್ಲಿ ಹೆಚ್ಚಾಗಿ ಸಂಭವಿಸುತ್ತವೆ. ಒಬ್ಬ ವ್ಯಕ್ತಿಯು ಎರಡು-ಮೂರು ಗಂಟೆಗಳ ಕಾಲ ನಿರಂತರವಾಗಿ ಹಾಡುತ್ತಿದ್ದರೆ, ಒತ್ತಡ ಉಂಟಾಗಿರಬೇಕು ಎಂಬುದು ಸ್ಪಷ್ಟವಾಗಿದೆ.

  ಇದನ್ನೂ ಓದಿ: ಗರ್ಭಿಣಿಯರಲ್ಲಿ ಕಬ್ಬಿಣದ ಕೊರತೆಯಾಗದಂತೆ ನೋಡಿಕೊಳ್ಳಿ! ಇದು ಅಪಾಯಕ್ಕೆ ಅಹ್ವಾನ, ಏನೇನು ತಿನ್ನಬಹುದು?

  ಸಂಗೀತ ಕಛೇರಿಯಲ್ಲಿ ಹಾಡುವುದು ದೇಹಕ್ಕೆ ಸಾಕಷ್ಟು ಶಕ್ತಿ ಖರ್ಚಾಗುತ್ತದೆ. ಈ ವೇಳೆ ಕೆಕೆ ಕೂಡ ತಾಪದ ಬಗ್ಗೆ ಪದೇ ಪದೇ ದೂರು ನೀಡಿದ್ದರು. ಆದರೆ ಇದು ಹೃದಯಾಘಾತದ ಲಕ್ಷಣ ಎಂಬುದು ಬಹುಶಃ ಅವರಿಗೂ ಅದು ಗೊತ್ತಿರಲಿಲ್ಲ.

  ಹೀಟ್ ಸ್ಟ್ರೋಕ್ ಕೂಡ ಕಾರಣ ಆಗಿರಬಹುದು

  ಕೆಕೆ ಅಧಿಕಾರಿಯಾದ ಡಾ. ನರೇಶ್ ಟ್ರೆಹಾನ್ ಪ್ರಕಾರ, ಬೃಹತ್ ವೇದಿಕೆಯಲ್ಲಿ ನಿರಂತರವಾಗಿ ದೀಪಗಳ ಮುಂದೆ ಹಾಡಿನ ಪ್ರದರ್ಶನ ನೀಡುವಾಗ, ಅವರು ನಿರ್ಜಲೀಕರಣಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದರಿಂದ ಹೀಟ್ ಸ್ಟ್ರೋಕ್ ಸಮಸ್ಯೆ ತಲೆದೋರಿದೆ.

  ವಾಸ್ತವದಲ್ಲಿ ಶಾಖದ ಹೊಡೆತದಿಂದ ವ್ಯಕ್ತಿಯ ರಕ್ತವು ದಪ್ಪ ಆಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆ ಹೆಚ್ಚಿಸುತ್ತದೆ. ಮತ್ತು ವ್ಯಕ್ತಿಯು ಈಗಾಗಲೇ ಹೃದಯ ಸಂಬಂಧಿ ಕಾಯಿಲೆಗೆ ಬಲಿಯಾದಾಗ ಇದು ಸಂಭವಿಸುತ್ತದೆ.

  ಡಿಸೆಕ್ಷನ್ ಎಂದು ಕರೆಯಲ್ಪಡುವ 'ಪರಿಧಮನಿಯ ಛಿದ್ರ' ಸಮಸ್ಯೆ

  ಅಂತಹ ಸಂದರ್ಭದಲ್ಲಿ ವೈದ್ಯಕೀಯ ಭಾಷೆಯಲ್ಲಿ ಡಿಸೆಕ್ಷನ್ ಎಂದು ಕರೆಯಲ್ಪಡುವ 'ಪರಿಧಮನಿಯ ಛಿದ್ರ' ಸಮಸ್ಯೆ ಇರಬಹುದು. ಇದರಲ್ಲಿ ಹಠಾತ್ ಹೃದಯಾಘಾತ ಆಗುವ ಸಾಧ್ಯತೆ ತುಂಬಾ ಹೆಚ್ಚು ಇರುತ್ತವೆ. ಕೆಲವೊಮ್ಮೆ ರೋಗಿಗೆ ಅದರ ರೋಗ ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ, 25 ನೇ ವಯಸ್ಸಿನಲ್ಲಿ, ನೀವು ಖಂಡಿತ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

  ಹೃದ್ರೋಗವನ್ನು ಪ್ರಚೋದಿಸುವ ಹಲವು ಅಂಶಗಳು ಯಾವವು?

  ಹೃದ್ರೋಗಗಳ ಕಾರಣಗಳು ಮತ್ತು ಹೃದ್ರೋಗವನ್ನು ಪ್ರಚೋದಿಸುವ ಹಲವು ಅಂಶಗಳಿವೆ. ಅವುಗಳಲ್ಲಿ ಒತ್ತಡ, ಸ್ಥೂಲಕಾಯತೆ, ವ್ಯಾಯಾಮದ ಕೊರತೆ, ಮಧುಮೇಹ ಅಥವಾ ಪೂರ್ವ ಮಧುಮೇಹ ಮತ್ತು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮುಂತಾದ ಪ್ರಮುಖ ಅಂಶಗಳು ಅದನ್ನು ಉತ್ತೇಜಿಸುತ್ತವೆ.

  ಇದನ್ನೂ ಓದಿ: ಹಾಲಿನ ಜೊತೆ ಈ ವಸ್ತುಗಳನ್ನು ಮಿಕ್ಸ್ ಮಾಡಿ ಸೇವಿಸಿದ್ರೆ ವಿಷಕಾರಿ ಅಂಶ ಸೃಷ್ಟಿ! ಇರಲಿ ಎಚ್ಚರ

  ಇದರಲ್ಲಿ ವಯಸ್ಸು ಅಥವಾ ಕುಟುಂಬದ ಇತಿಹಾಸದಂತಹ ಅಂಶಗಳನ್ನು ಬದಲಾಯಿಸಲು ಆಗುವುದಿಲ್ಲ. ಆದರೆ ಉಳಿದ ಅಂಶಗಳನ್ನು ನಿಯಂತ್ರಿಸುವ ಮೂಲಕ ರೋಗಿಯ ಜೀವವನ್ನು ಉಳಿಸಬಹುದು.
  Published by:renukadariyannavar
  First published: