ಅಲೋವೆರಾ (Aloe vera) ಗಿಡ ಎಲ್ಲರ ಮನೆ ಅಂಗಳದಲ್ಲೂ ಇರುತ್ತೆ ಆದ್ರೆ ಪ್ರಯೋಜನ ಮಾತ್ರ ಹಲವರಿಗೆ ತಿಳಿದಿಲ್ಲ. ಅಲೋವೆರಾವನ್ನು ಆರೋಗ್ಯಕರ ಚರ್ಮಕ್ಕೆ ಸಾಂಪ್ರದಾಯಿಕ ಮನೆಮದ್ದು (Home remedies) ಅಂತಾನೆ ಪರಿಗಣಿಸಲಾಗುತ್ತೆ. ಸಣ್ಣ-ಪುಟ್ಟ ಸುಟ್ಟಗಾಯಗಳಿಗೆ ನಿರಂತರವಾಗಿ ಅಲೋವೆರಾ ಹಚ್ಚುವುದರಿಂದ ಗಾಯ ಮಾಯವಾಗುತ್ತೆ. ಚರ್ಮಕ್ಕೆ ಹೊರತುಪಡಿಸಿ ಆರೋಗ್ಯಕ್ಕೂ ಆಲೋವೆರಾ ಸೂಪರ್ ಮೆಡಿಸನ್ ಆಗಿದೆ. ಹೀಗಾಗಿ ಹಲವು ಪೌಷ್ಠಿಕತಜ್ಞರು (Nutritionists) ಅಲೋವೆರಾ ಜ್ಯೂಸ್ ಕುಡಿಯುವಂತೆ ಸಲಹೆ ನೀಡ್ತಾರೆ. ಅಲೋವೆರಾ ಪ್ರಾಚೀನ ಕಾಲದಿಂದಲೂ ಭಾರತೀಯ ಔಷಧದ ಭಾಗವಾಗಿದೆ. ಈ ಅಲೋವೆರಾ ಮದ್ದು ನಮ್ಮ ಆರೋಗ್ಯಕ್ಕೆ ಅದ್ಭುತ ಶಕ್ತಿ ಅಂತಾರೆ ನಟಿ ಶಿಲ್ಪಾ ಶೆಟ್ಟಿ (Shilpa Shetty), ಅಲೋವೆರಾ ಜ್ಯೂಸ್ನಿಂದ ಹಾಗೋ ಇತರ ಪ್ರಯೋಜನಗಳ ಬಗ್ಗೆ ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಮ್ (Instagram) ಪೇಜ್ನಲ್ಲಿ ಹಂಚಿಕೊಂಡಿದ್ದಾರೆ.
ಶೀತ, ಕೆಮ್ಮಿಗೆ ಅಲೋವೆರಾ ಮದ್ದು
ಸಾಮಾನ್ಯವಾಗಿ ಎಲ್ಲರೂ ಸನ್ಬರ್ನ್ ಚಿಕಿತ್ಸೆಗೆ ಅಲೋವೆರಾ ಉಪಯೋಗಿಸ್ತಾರೆ. ಆದ್ರೆ ಉತ್ತಮ ಆರೋಗ್ಯ ಹೊಂದಲು ಸಹ ನಾವು ಆಲೋವೆರಾ ಬಳಸಬಹುದು. ಶೀತ, ಕೆಮ್ಮಿಗೆ ಆಲೋವೆರಾ ಜ್ಯೂಸ್ ಮಾಡಿ ಕುಡಿದ್ರೆ ಕ್ರಮಣ ಶೀತ, ಕೆಮ್ಮು ಕಡಿಮೆಯಾಗುತ್ತೆ. ಅಲೋವೆರಾ ಜ್ಯೂಸ್ ವಿಟಮಿನ್, ಮಿನೆರಲ್ಸ್ ಆಂಟಿಆಕ್ಸಿಡೆಂಟ್ ಹೊಂದಿದೆ. ದೇಹದಲ್ಲಿ ಟಾಕ್ಸಿನ್ಗಳನ್ನು ಹೊರಹಾಕಿ ಶುದ್ಧೀಕರಿಸುತ್ತೆ. ಉತ್ತಮ ಫಲಿತಾಂಶಕ್ಕಾಗಿ ತಜ್ಞರು ಇದನ್ನು ಬೆಳಗ್ಗೆ ಬೇಗನೆ ಸೇವಿಸಲು ಸೂಚಿಸುತ್ತಾರೆ. ನೀವು ಇದನ್ನು ಅಮ್ಲಾ ಹಾಗೂ ತುಳಿಸಿ ರಸದೊಂದಿಗೆ ಸೇರಿಸಿ ಕುಡಿಯಬಹುದಾಗಿದೆ.
ಜೀರ್ಣಕ್ರಿಯೆಗೆ ಸಹಕಾರಿ
ಅಲೋವೆರಾ ಜ್ಯೂಸ್ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ನೀವು ಅಸಿಡಿಟಿಯಿಂದ ಬಳಲುತ್ತಿದ್ದರೆ ಒಮ್ಮೆ ಅಲೋವೆರಾ ಜ್ಯೂಸ್ ಕುಡಿಯಿರಿ. ಅಸಿಡಿಟಿ ದೂರವಾಗುತ್ತೆ. ಅಲೋವೆರಾ ಜ್ಯೂಸ್ ಕುಡಿಯೋದ್ರಿಂದ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸಬಹುದು.
ತೂಕ ಇಳಿಸಲು ಪರಿಣಾಮಕಾರಿ
ತೂಕ ಇಳಿಸಲು ಅಲೋವೆರಾ ಜ್ಯೂಸ್ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತೆ. ಜೀರ್ಣಕ್ರಿಯೆ ಸಮಸ್ಯೆಯನ್ನು ಸರಾಗಗೊಳಿಸುತ್ತೆ ಇದು ತೂಕ ಇಳಿಕೆಗೂ ಸಹಾಯ ಮಾಡುತ್ತೆ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದ್ರೆ ವೇಗವಾಗಿ ತೂಕ ಇಳಿಕೆ ಮಾಡಬಹುದು.
ಇದನ್ನೂ ಓದಿ: ಅಲೋವೆರಾದಲ್ಲಿದೆ ನಿಮ್ಮ ತ್ವಚೆಯ ಸೌಂದರ್ಯ
ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸುತ್ತದೆ
ಅಲೋವೆರಾ ಜ್ಯೂಸ್ ಕುಡಿಯೋದ್ರಿಂದ ಮಧುಮೇಹಿಗಳಿಗೆ ಹೆಚ್ಚು ಸಹಕಾರಿ ಅಂತ ಸಂಶೋಧನೆಯೇ ತಿಳಿಸಿದೆ. ಈ ಜ್ಯೂಸ್ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಮಧುಮೇಹ ಹಾಗೂ ಹೈಪರ್ಲಿಪಡೆಮಿಯಾ ರೋಗಿಗಳಲ್ಲಿ ಲಿಪಿಡ್ಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ತಜ್ಞರೇ ತಿಳಿಸಿದ್ದಾರೆ. ಗರ್ಭಿಣಿಯರಿಗೆ ಇದನ್ನು ಶಿಫಾರಸು ಮಾಡುವುದಿಲ್ಲ.
ಇದನ್ನೂ ಓದಿ: ಅಲೋವೆರ ಸೇವಿಸಿ ತ್ವಚೆ-ಕೂದಲಿನ ಆರೋಗ್ಯ ಕಾಪಾಡಿಕೊಳ್ಳಿ
ಉತ್ತಮ ಆರೋಗ್ಯ ಹೊಂದಲು ಇಷ್ಟೊಂದು ಉಪಕಾರಿಯಾಗಿರೋ ಅಲೋವೆರಾ ಜ್ಯೂಸ್ ಮಾಡೋದು ಹೇಗೆ ಅಂತ ಹೇಳ್ತಿವಿ ನೋಡಿ.
ಬೇಕಾಗಿರೋ ಸಾಮಾಗ್ರಿಗಳು ಅಲೋವೆರಾ ಎಲೆ ಹಾಗೂ 1 ಕಪ್ ನೀರು
ಮೊದಲು ಚಾಕುವಿನಿಂದ ಅಲೋವೆರಾ ಎಲೆಯ ಮೇಲಿನ ಪದರವನ್ನು ತೆಗೆದುಹಾಕಿ ಬಳಿಕ ಅಲೋವೆರಾದಲ್ಲಿರೋ ಹಳದಿ ಭಾಗವನ್ನು ತೆಗೆಯಿರಿ. ಬಿಳಿಯ ಜೆಲ್ನನ್ನು ಮಾತ್ರ ತೆಗೆದುಕೊಳ್ಳಿ. ಜೆಲ್ನನ್ನು ಮಿಕ್ಸಿ ಬ್ಲೆಂಡರ್ಗೆ ಹಾಕಿ 1 ಕಪ್ ನೀರು ಸೇರಿಸಿ ರುಬ್ಬಿಕೊಳ್ಳಿ ಬಳಿಕ ಅದನ್ನು 1 ಗ್ಲಾಸ್ಗೆ ಶೋಧಿಸಿಕೊಂಡು ಕುಡಿಯಿರಿ.
ಅಲೋವೆರಾ ಜ್ಯೂಸ್ನನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯೋದು ಉತ್ತಮ. ವಾರಕ್ಕೆ ಕನಿಷ್ಠ 3 ಬಾರಿ ಕುಡಿಯಿರಿ. ಇದರಿಂದ ವೇಗವಾಗಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಲೋವೆರಾ ಜ್ಯೂಸ್ ಕೇವಲ ಚರ್ಮ ಸಮಸ್ಯೆಗಳಿಗೆ ಸೀಮಿತ ಅಂತ ಹೇಳಲಾಗ್ತಿದೆ. ಆದ್ರೆ ಇದು ಆರೋಗ್ಯಕ್ಕೂ ಬಹಳ ಉಪಯೋಗಕಾರಿಯಾಗಿದೆ. ಅಲೋವೆರಾ ಜ್ಯೂಸ್ ಕುಡಿದು ಆರೋಗ್ಯ ಕಾಪಾಡಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ