Skin Care Tips: ಬಾಲಿವುಡ್ ನಟಿ ಮಹಿಮಾ ಮಕ್ವಾನಾ ಗ್ಲಾಮರಸ್ ಲುಕ್ ಮತ್ತು ಅಂದದ ತ್ವಚೆಯ ರಹಸ್ಯ ಇಲ್ಲಿದೆ

ತಮ್ಮ ಸರಳತೆಯಿಂದ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟವರು ಮಹಿಮಾ. ಆದಾಗ್ಯೂ ಮಹಿಮಾ ಮಕ್ವಾನಾ ಅವರು ತಮ್ಮ ನಿಜ ಜೀವನದಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣುತ್ತಾರೆ.

ನಟಿ ಮಹಿಮಾ ಮಕ್ವಾನಾ

ನಟಿ ಮಹಿಮಾ ಮಕ್ವಾನಾ

  • Share this:
    ಬಾಲಿವುಡ್ (Bollywood) ನಟ (Actor) ಸಲ್ಮಾನ್ ಖಾನ್ (Salman Khan) ಅವರ ದಿ ಫೈನಲ್ ಟ್ರುತ್ ಚಿತ್ರದ (Movie) ಮೂಲಕ ಬಾಲಿವುಡ್‌ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದವರು ನಟಿ ಮಹಿಮಾ ಮಕ್ವಾನಾ (Mahima Makwana). ತಮ್ಮ ಸರಳತೆಯಿಂದ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟವರು ಮಹಿಮಾ. ಆದಾಗ್ಯೂ ಮಹಿಮಾ ಮಕ್ವಾನಾ ಅವರು ತಮ್ಮ ನಿಜ ಜೀವನದಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣುತ್ತಾರೆ. ಇದನ್ನ ಹೇಳ್ತಿರೋದು ನಾವಲ್ಲ. ಆದರೆ ಅವರ Instagram ಚಿತ್ರಗಳು ಅವರ ಅಂದದ ಬಗ್ಗೆ ಹೇಳುತ್ತವೆ. ನಟಿ ಮಹಿಮಾ ಮಕ್ವಾನಾ ಈಗ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ಅವರು ಬಹಳ ಹಿಂದೆಯೇ ಜನಪ್ರಿಯತೆ ಗಳಿಸಿದ್ದರು.

    ಸಿನಿಮಾದತ್ತ ಪಯಣ ಬೆಳೆಸಿರುವ ಮಹಿಮಾ ಮಕ್ವಾನಾ ಗ್ಲಾಮರಸ್ ಲುಕ್

    ನಟಿ ಮಹಿಮಾ ಅವರು ಬಾಲಿಕಾ ವಧು, ಸಪ್ನೆ ಸುಹಾನೆ ಲಡಕ್ಪಾನ್ ಮುಂತಾದ ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದಾರೆ. ಧಾರಾವಾಹಿಯಿಂದ ಸಿನಿಮಾದತ್ತ ಪಯಣ ಬೆಳೆಸಿರುವ ಮಹಿಮಾ ಮಕ್ವಾನಾ ಲುಕ್ ನಲ್ಲಿ ಈಗ ಸಾಕಷ್ಟು ಬದಲಾವಣೆ ಆಗಿದೆ. ಮೊದಲು ಮಹಿಮಾ ಮಕ್ವಾನಾ ಅವರ ಸರಳತೆ, ಮುಗ್ಧತೆ ಪ್ರತಿ ಪಾತ್ರದಲ್ಲೂ ಕಾಣುತ್ತಿತ್ತು.

    ಕಾಲಕ್ಕೆ ತಕ್ಕಂತೆ ನಟಿ ಮಹಿಮಾ ಮಕ್ವಾನಾ ಅವರಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಮಹಿಮಾ ಮೊದಲಿಗಿಂತ ಹೆಚ್ಚು ಸುಂದರವಾಗಿ ಕಾಣುತ್ತಾರೆ. ನಟಿ ಮಹಿಮಾ ಮಕ್ವಾನಾ ಪ್ರಕಾರ, ಈಗ ಅವರು ತಮ್ಮ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರಂತೆ.

    ಇದನ್ನೂ ಓದಿ: ಹೆವಿ ಫುಡ್ ನಂತರ ಅಸ್ವಸ್ಥತೆಯಾ? ಈ ಕೆಲವು ಡಿಟಾಕ್ಸ್ ವಾಟರ್​ ಕುಡಿದು ಲೈಟ್ ಫೀಲ್ ಮಾಡಿ

    ಬಾಲಿವುಡ್ ಬಬಲ್ ಗೆ ನೀಡಿದ ಸಂದರ್ಶನದಲ್ಲಿ ನಟಿ ಮಹಿಮಾ ಮಕ್ವಾನಾ ತಮ್ಮ ತ್ವಚೆಯ ಆರೈಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ತ್ವಚೆಯ ಅಂದ ಕಾಪಾಡುವ ಅನೇಕ ಸಣ್ಣ ಕೆಲಸಗಳನ್ನು ಮಾಡುತ್ತೇನೆ ಎಂದಿದ್ದಾರೆ. ತನ್ನ ಮುಖದ ಹೊಳಪನ್ನು ಹೆಚ್ಚಿಸಲು ತಾವು ಬಳಸುವ ಸರಳ ಸಲಹೆಗಳು ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

    ನಟಿ ಮಹಿಮಾ ಮಕ್ವಾನಾ ಅವರ ವಿಶೇಷ ಚರ್ಮದ ಆರೈಕೆ ಸಲಹೆಗಳನ್ನು ನಾವು ಇಂದು ನೋಡೋಣ.

    ಬೆಳಗ್ಗೆ ಎದ್ದು ಯಾವ ಕೆಲಸ ಮಾಡಿ

    ಮಹಿಮಾ ಅವರ ಚರ್ಮದ ಮೇಲೆ ನೈಸರ್ಗಿಕ ಹೊಳಪು ಇದೆ. ನಟಿ ಮಹಿಮಾ ಮಕ್ವಾನಾ ಪ್ರಕಾರ, ಅವರು ಚರ್ಮದ ಬಗ್ಗೆ ತುಂಬಾ ಕಾಳಜಿ ಮಾಡುತ್ತಾರೆ. ಚರ್ಮದ ಆರೈಕೆ ಮಾಡುವ ಯಾವುದೇ ಪ್ರಯೋಗವನ್ನು ಮಾಡುವುದಿಲ್ಲ. ಸಾಧ್ಯವಾದಷ್ಟು ನೈಸರ್ಗಿಕ ಅಂಶಗಳನ್ನು ಅನುಸರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

    ಇದಕ್ಕಾಗಿ ಮಹಿಮಾ ಮಕ್ವಾನಾ ತಾವು ಬೆಳಿಗ್ಗೆ ಎದ್ದ ನಂತರ ಮೊದಲು ಮುಖ ತೊಳೆದು ನಂತರ ಸಾಕಷ್ಟು ನೀರು ಕುಡಿಯುತ್ತಾರೆ. ಇದು ಅವಳ ದಿನಚರಿಯ ಭಾಗವಾಗಿದೆ.

    ಹೊಳೆಯುವ ಮತ್ತು ಆರೋಗ್ಯಕರ ಚರ್ಮದ ರಹಸ್ಯ ಏನು?

    ತ್ವಚೆಗೆ ಸರಿಯಾದ ಆಹಾರ ಸೇವಿಸುವುದು ಬಹಳ ಮುಖ್ಯ. ಅದಕ್ಕಾಗಿ ಎರಡು ವಿಷಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ದಿನವಿಡೀ ಸಾಕಷ್ಟು ನೀರು ಕುಡಿಯುವುದು. ಮತ್ತು ಎರಡನೆಯದು ತನ್ನ ಆಹಾರದಲ್ಲಿ ಸಾಕಷ್ಟು ತರಕಾರಿ ಸೇವನೆ ಮಾಡುವುದು. ಮಹಿಮಾ ಜಂಕ್ ಫುಡ್ ತಿನ್ನುವುದಿಲ್ಲ.

    ಅವಳು ಕಡಿಮೆ ತಿನ್ನಲು ಅಥವಾ ಸಾಧ್ಯವಾದಷ್ಟು ಸಂಸ್ಕರಿಸಿದ ಆಹಾರ ಸೇವನೆ ನಿರ್ಲಕ್ಷಿಸಲು ಪ್ರಯತ್ನಿಸುತ್ತಾಳೆ. ಇದಲ್ಲದೇ ಅಡುಗೆ ಮನೆಯಲ್ಲಿ ಇಟ್ಟಿರುವ ವಸ್ತುಗಳನ್ನು ಮುಖದ ಮೇಲೆ ಹಚ್ಚಿಕೊಳ್ಳುವುದರಿಂದ ಆಕೆಗೆ ಸಾಕಷ್ಟು ಲಾಭವಾಗುತ್ತದೆ.

    ನಟಿ ಮಹಿಮಾಗೆ ಲೆಸ್ ಮೇಕಪ್ ಇಷ್ಟ

    ನಾನು ಬಹಳ ಸಮಯದಿಂದ ಮೇಕಪ್ ಮಾಡಿಕೊಳ್ಳುತ್ತಿದ್ದೇನೆ. ಹೆಚ್ಚಾಗಿ ಲೆಸ್ ಮೇಕಪ್ ಮಾಡಿಕೊಳ್ಳುವುದಾಗಿ ಹೇಳಿದರು. ಮೇಕಪ್ ಲುಕ್ ಅನ್ನು ಅನುಸರಿಸುವುದಿಲ್ಲ. ಮೇಕ್ಅಪ್ ಇಲ್ಲದೆ ಉಳಿಯಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಇದರಿಂದ ಚರ್ಮವು ಉಸಿರಾಡುತ್ತದೆ. ಇದರ ಹೊರತಾಗಿ, ಅವರು ಮೇಕ್ಅಪ್ ಅನ್ನು ಪ್ರಯೋಗಿಸುವುದಿಲ್ಲ.

    ಪ್ರತಿದಿನ ಈ 4 ವಸ್ತುಗಳನ್ನು ಬಳಸಿ

    ಮಹಿಮಾ ಮಕ್ವಾನಾ ಅವರ ಪ್ರಕಾರ, ಚರ್ಮದ ಆರೈಕೆಗೆ ಕ್ಲೆನ್ಸಿಂಗ್, ಟೋನಿಂಗ್, ಮಾಯಿಶ್ಚರೈಸರ್ ಮತ್ತು ಸನ್‌ಸ್ಕ್ರೀನ್ ಬಳಸಬೇಕಂತೆ. ಇವನ್ನು ಪ್ರತಿದಿನ ಮಹಿಮಾ ಅನ್ವಯಿಸುತ್ತಾಳೆ. ಇದಲ್ಲದೆ, ಅವಳು ತನ್ನ ಚರ್ಮಕ್ಕೆ ಸೂಕ್ತವಾದ ವಸ್ತುಗಳನ್ನು ಮಾತ್ರ ಅನ್ವಯಿಸಲು ಇಷ್ಟಪಡುತ್ತಾಳೆ.

    ಇದನ್ನೂ ಓದಿ: ಬೇಸಿಗೆ ರೋಗಗಳಿಂದ ತಪ್ಪಿಸಿಕೊಳ್ಳಲು ನಿಮ್ಮ ಆಹಾರಕ್ರಮ ಹೀಗಿರಲಿ

    ದೈನಂದಿನ ದಿನಚರಿಯ ವ್ಯಾಯಾಮ

    ಸೆಲೆಬ್ರಿಟಿಗಳ ದೈನಂದಿನ ದಿನಚರಿಯ ವ್ಯಾಯಾಮ ಒಂದು ಪ್ರಮುಖ ಭಾಗ. ಹೆಚ್ಚು ಬೆವರುವುದು ನಿಮ್ಮನ್ನು ತೆಳ್ಳಗೆ ಮಾಡುವುದಲ್ಲದೆ ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ. ಮಹಿಮಾ ಪ್ರತಿನಿತ್ಯ ವ್ಯಾಯಾಮ ಮಾಡುತ್ತಾರೆ.
    Published by:renukadariyannavar
    First published: