Beauty Secret: ನಟಿ ಕರಿಷ್ಮಾ ಕಪೂರ್ ಆಗಲೂ, ಈಗಲೂ ಬ್ಯೂಟಿಫುಲ್! ಸೌಂದರ್ಯದ ರಹಸ್ಯ ಏನ್ ಗೊತ್ತಾ?

ಯಂಗ್, ಫಿಟ್ ಮತ್ತು ಬ್ಯೂಟಿಫುಲ್ ನಟಿ ಕರಿಷ್ಮಾ ಕಪೂರ್ ನಟಿ ಕರಿಷ್ಮಾ ಕಪೂರ್ ತರಹ ಯಂಗ್, ಫಿಟ್ ಮತ್ತು ಬ್ಯೂಟಿಫುಲ್ ಆಗಲು ನೀವು ಪ್ರಯತ್ನ ಮಾಡ್ತಿದ್ರೆ, ಅವರ ಬ್ಯೂಟಿ ಸೀಕ್ರೆಟ್ ಬಗ್ಗೆ ಇಲ್ಲಿ ಮಾಹಿತಿ ಇದೆ. ಕರಿಷ್ಮಾ ಕಪೂರ್ ತಮ್ಮ ತ್ವಚೆಯ ಆರೈಕೆಯ ದಿನಚರಿಯು ಹೇಗಿದೆ ಅಂದ್ರೆ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳನ್ನೇ ಬಳಸಿ, ತಮ್ಮ ತ್ವಚೆಯನ್ನು ಆರೈಕೆ ಮಾಡುತ್ತಾರೆ ಕರಿಷ್ಮಾ ಕಪೂರ್.

ಬಾಲಿವುಡ್ ನಟಿ ಕರಿಷ್ಮಾ ಕಪೂರ್

ಬಾಲಿವುಡ್ ನಟಿ ಕರಿಷ್ಮಾ ಕಪೂರ್

  • Share this:
    ಬಾಲಿವುಡ್‌ನ (Bollywood) ಸುಪ್ರಸಿದ್ಧ (Famous) ಸುಂದರಿ ಕರಿಷ್ಮಾ ಕಪೂರ್ (Actress Karishma Kapoor) ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಕ್ರಿಯರಾಗಿಲ್ಲ. ಆದರೆ ನಟಿ ಕರಿಷ್ಮಾ ಕಪೂರ್ 90 ರ ದಶಕದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ನಟಿ. ಇಂದಿಗೂ ಕೂಡ ಅವರ ಯೌವ್ವನ ಹಾಗೇ ಇದೆ. ನಟಿ ಕರಿಷ್ಮಾ ಕಪೂರ್ ಅವರ ಸೌಂದರ್ಯದ ಬಗ್ಗೆ ಇಂದಿಗೂ ಅಭಿಮಾನಿಗಳು ಫಿದಾ ಆಗುತ್ತಾರೆ. ತಮಗಿಂತ ಚಿಕ್ಕ ನಟಿಯರ ಜೊತೆಗೂ ಸ್ಪರ್ಧಿಸುವ ಮೈಕಾಂತಿ, ಚೆಲುವು ಇಂದಿಗೂ ನಟಿ ಕರಿಷ್ಮಾ ಕಪೂರ್ ನಲ್ಲಿದೆ. ತುಂಬಾ ಜನರು ಅವರನ್ನು ಕಂಡಾಗಲೆಲ್ಲಾ, ಇವರು ಯಾವ ಪ್ರೊಡಕ್ಟ ವಸ್ತುಗಳನ್ನು ಬಳಸುತ್ತಾರೆ? ಇವರ ಸೌಂದರ್ಯದ ರಹಸ್ಯವೇನು ಎಂದು ಇಂದಿಗೂ ನಿಬ್ಬೆರಗಾಗಿ ತಿಳಿಯಲು ಕಾತುರರಾಗಿರುತ್ತಾರೆ.

    ಯಂಗ್, ಫಿಟ್ ಮತ್ತು ಬ್ಯೂಟಿಫುಲ್ ನಟಿ ಕರಿಷ್ಮಾ ಕಪೂರ್

    ನಟಿ ಕರಿಷ್ಮಾ ಕಪೂರ್ ತರಹ ಯಂಗ್, ಫಿಟ್ ಮತ್ತು ಬ್ಯೂಟಿಫುಲ್ ಆಗಲು ನೀವು ಪ್ರಯತ್ನ ಮಾಡ್ತಿದ್ರೆ, ಅವರ ಬ್ಯೂಟಿ ಸೀಕ್ರೆಟ್ ಬಗ್ಗೆ ಇಲ್ಲಿ ಮಾಹಿತಿ ಇದೆ. ಕರಿಷ್ಮಾ ಕಪೂರ್ ತಮ್ಮ ತ್ವಚೆಯ ಆರೈಕೆಯ ದಿನಚರಿಯು ಹೇಗಿದೆ ಅಂದ್ರೆ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳನ್ನೇ ಬಳಸಿ, ತಮ್ಮ ತ್ವಚೆಯನ್ನು ಆರೈಕೆ ಮಾಡುತ್ತಾರೆ ಕರಿಷ್ಮಾ ಕಪೂರ್.

    ಕರಿಷ್ಮಾ ಕಪೂರ್ 48 ನೇ ವಯಸ್ಸಿನಲ್ಲಿಯೂ ಸೌಂದರ್ಯದಲ್ಲಿ ಹಿಂದೆ ಬಿದ್ದಿಲ್ಲ. ಆಕೆಯ ನೈಸರ್ಗಿಕ ಸೌಂದರ್ಯ, ದುಬಾರಿ ಉತ್ಪನ್ನಗಳನ್ನು ಬಳಸದೆ, ಕೆಲವು ಸರಳ ಸಲಹೆಗಳು ಮತ್ತು ವಸ್ತುಗಳನ್ನು ಬಳಸಿ, ತಮ್ಮ ತ್ವಚೆಯ ಬಗ್ಗೆ ನಟಿ ಕರಿಷ್ಮಾ ಕಪೂರ್ ಕಾಳಜಿ ವಹಿಸುತ್ತಾರೆ.

    ಇದನ್ನೂ ಓದಿ: ಜೀರ್ಣಕ್ರಿಯೆ ಮತ್ತು ರಕ್ತಹೀನತೆ ಸೇರಿದಂತೆ ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ ಕಮಲ ಹೂವಿನ ಬೇರುಗಳು

    ಶುದ್ಧ ತುಪ್ಪ

    ಲೈಫ್‌ಸ್ಟೈಲ್ ಏಷ್ಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಟಿ ಕರಿಷ್ಮಾ ಕಪೂರ್, ತನ್ನ ಅಜ್ಜಿ ಸಾಕಷ್ಟು ಶುದ್ಧ ತುಪ್ಪ ತಿನ್ನಲು ಸಲಹೆ ನೀಡುತ್ತಿದ್ದರು ಎಂದು ಹೇಳಿದ್ದಾರೆ. ಇದು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಕೇಲ್ ಮತ್ತು ಕ್ವಿನೋವಾ ಮುಂತಾದವುಗಳನ್ನು ಇಷ್ಟಪಡುವುದಿಲ್ಲ ಎಂದು ನಟಿ ಹೇಳಿದ್ದಾರೆ. ಬದಲಿಗೆ ಅವರು ತ್ವಚೆಯ ಕಾಂತಿಗೆ ಸಾಂಪ್ರದಾಯಿಕ ವಿಧಾನ, ಮನೆ ಮದ್ದು ಬಳಸಲು ಹೆಚ್ಚು ಇಷ್ಟ ಪಡುತ್ತಾರೆ. ಕರಿಷ್ಮಾ ತಮ್ಮ ಆಹಾರದಲ್ಲಿ ಶುದ್ಧ ತುಪ್ಪ ಸೇವನೆ ಮಾಡುತ್ತಾರೆ.

    ಮಾಯಿಶ್ಚರೈಸರ್ ಹಾಕುವುದು

    ಕರಿಷ್ಮಾ ಕಪೂರ್ ತ್ವಚೆಯನ್ನು ಆರ್ಧ್ರಕವಾಗಿಡಲು ಹೆಚ್ಚಿನ ಒತ್ತು ನೀಡುತ್ತಾರೆ. ಚರ್ಮವನ್ನು ಶುದ್ಧೀಕರಿಸಿದ ನಂತರ, ಅವರು ಉತ್ತಮ ಬ್ರ್ಯಾಂಡ್ ನ ಮಾಯಿಶ್ಚರೈಸರ್ ಅನ್ನು ಬಳಸುತ್ತಾರೆ. ಬೆಳಿಗ್ಗೆ ಅಥವಾ ರಾತ್ರಿ ಅದನ್ನು ತನ್ನ ಕ್ಲೀನ್ ಮುಖದ ಮೇಲೆ ಅನ್ವಯಿಸುತ್ತಾರೆ. ಬಿ-ಬ್ಯೂಟಿಫುಲ್‌ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದ ಕರಿಷ್ಮಾ ಅವರು ಉತ್ತಮ ಮತ್ತು ಸಮೃದ್ಧ ಮಾಯಿಶ್ಚರೈಸರ್ ಅನ್ನು ಬಳಸಲು ತಾಯಂದಿರಿಗೆ ಸಲಹೆ ನೀಡಿದ್ದಾರೆ.

    ಹೈಡ್ರೀಕರಿಸುವುದು

    ಉತ್ತಮ ತ್ವಚೆ ಪಡೆಯಲು ದೇಹವನ್ನು ಹೈಡ್ರೀಕರಿಸುವುದು ತುಂಬಾ ಮುಖ್ಯ. ಲೈಫ್‌ಸ್ಟೈಲ್ ಏಷ್ಯಾ ಜೊತೆ ಮಾತನಾಡುವಾಗ ಕರಿಷ್ಮಾ, ತಾನು ದಿನವಿಡೀ ಸಾಕಷ್ಟು ನೀರು ಕುಡಿಯುತ್ತೇನೆ ಎಂದು ಹೇಳಿದ್ದಾರೆ.  ಇದರೊಂದಿಗೆ, ಅವಳು ತನ್ನ ದೈನಂದಿನ ಆಹಾರದ ಭಾಗವಾಗಿ ತೆಂಗಿನ ನೀರು ಮತ್ತು ಮೊಸರು ಸೇವಿಸುತ್ತಾರೆ.

    ಮನೆ ಮದ್ದು

    ನೈಸರ್ಗಿಕ ಸೌಂದರ್ಯ ಕಾಪಾಡಿಕೊಳ್ಳಲು ನಟಿ ಕರಿಷ್ಮಾ ಕಪೂರ್ ಅವರು, ಒಳ್ಳೆಯ ನಿದ್ರೆ ಮಾಡುತ್ತಾರೆ. ದೇಹವನ್ನ ಸದಾ ಹೈಡ್ರೀಕರಿಸುತ್ತಾರೆ. ಮತ್ತು ಮಾಯಿಶ್ಚರೈಸರ್ ಅನ್ನು ಕಟ್ಟುನಿಟ್ಟಾಗಿ ಹಚ್ಚುತ್ತಾರೆ. ಕೆಲವು ಸರಳವಾದ ಮನೆಮದ್ದುಗಳನ್ನು ತಮ್ಮ ಚರ್ಮದ ಆರೈಕೆಯ ದಿನಚರಿಯ ಭಾಗವಾಗಿಸಿದ್ದಾರೆ.

    ಮೊಸರು, ಬಾದಾಮಿ ಎಣ್ಣೆ, ಪಪ್ಪಾಯಿ ಅಥವಾ ಕಾಲೋಚಿತ ಹಣ್ಣುಗಳು ಮತ್ತು ಅವುಗಳ ಸಿಪ್ಪೆಗಳು ಇತ್ಯಾದಿಗಳನ್ನು ಮುಖಕ್ಕೆ ಹಚ್ಚಿಕೊಳ್ಳುತ್ತೇನೆ ಎಂದು ನಟಿ ಕರಿಷ್ಮಾ ಕಪೂರ್ ಸಂದರ್ಶನದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಮಧುಮೇಹ ಮೂತ್ರಪಿಂಡ ಕಾಯಿಲೆ ಯಾರಲ್ಲಿ ಮತ್ತು ಯಾವಾಗ ಸಂಭವಿಸುತ್ತದೆ? ಇದರ ಲಕ್ಷಣಗಳು ಹೀಗಿವೆ

    ಹಾಟರ್‌ಫ್ಲೈಗೆ ನೀಡಿದ ಸಂದರ್ಶನದಲ್ಲಿ ಕರಿಷ್ಮಾ ಕಪೂರ್, ಒಮ್ಮೆ ಮುಖದಿಂದ ಮೇಕಪ್ ತೆಗೆಯದೆ ಮಲಗಿದ್ದೆ, ನಂತರ ಮುಖದಲ್ಲಿ ಮೊಡವೆಗಳಾಗಿದ್ದವು. ಎಷ್ಟೇ ದಣಿವಾಗಿದ್ದರೂ ಮುಖ ಸ್ವಚ್ಛವಾಗಿಟ್ಟುಕೊಂಡು ಮಲಗಬೇಕು ಎಂದು ನಟಿ ಹೇಳಿದ್ದಾರೆ.
    Published by:renukadariyannavar
    First published: