• Home
 • »
 • News
 • »
 • lifestyle
 • »
 • Kidney Health: ದೇಹದ ಆರೋಗ್ಯ ಕಾಪಾಡುವ ಕಿಡ್ನಿಗಳ ಆರೋಗ್ಯಕ್ಕೆ ಏನು ಮಾಡ್ಬೇಕು? ಈ ಪದಾರ್ಥಗಳ ಸೇವನೆ ಮಾಡಿ ಸಾಕು!

Kidney Health: ದೇಹದ ಆರೋಗ್ಯ ಕಾಪಾಡುವ ಕಿಡ್ನಿಗಳ ಆರೋಗ್ಯಕ್ಕೆ ಏನು ಮಾಡ್ಬೇಕು? ಈ ಪದಾರ್ಥಗಳ ಸೇವನೆ ಮಾಡಿ ಸಾಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೂತ್ರಪಿಂಡಗಳು ದೇಹದ ಅತ್ಯಂತ ಮುಖ್ಯ ಅಂಗಗಳಲ್ಲಿ ಒಂದು. ಇದು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಂಪು ರಕ್ತ ಕಣಗಳನ್ನು ಸಕ್ರಿಯಗೊಳಿಸುತ್ತದೆ. ಮತ್ತು ಮೂಳೆಗಳನ್ನು ಬಲಪಡಿಸಲು ಸಹಕಾರಿ ಆಗಿದೆ. ಹಾಗಾಗಿ ದಿನವೂ ಕಿಡ್ನಿ ಆರೋಗ್ಯ ಕಾಪಾಡುವ ಪದಾರ್ಥಗಳ ಸೇವನೆ ಮಾಡುವುದು ಮುಖ್ಯವಾಗಿದೆ.

ಮುಂದೆ ಓದಿ ...
 • Share this:

  ದೇಹದಿಂದ (Body) ತ್ಯಾಜ್ಯ ತೆಗೆದು ಹಾಕುವ ಕೆಲಸ (Work) ಮಾಡುತ್ತದೆ ಮೂತ್ರಪಿಂಡ (Kidney). ಬೆನ್ನು ಮೂಳೆಯ ಎಲುಬುಗಳ ಎರಡೂ ಬದಿಯಲ್ಲಿರುವ ಹುರುಳಿ ಆಕಾರದ ಅಂಗಗಳನ್ನೇ (Parts) ಮೂತ್ರಪಿಂಡ ಎಂದು ಕರೆಯುತ್ತಾರೆ. ಕಿಡ್ನಿ ಅಂಗದ ಮುಖ್ಯ ಕಾರ್ಯ ಅಂದ್ರೆ ರಕ್ತದ (Blood) ಕೊಳೆಯನ್ನು ಫಿಲ್ಟರ್ ಮಾಡುವುದು. ಜೊತೆಗೆ ಇದು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಂಪು ರಕ್ತ ಕಣಗಳನ್ನು ಸಕ್ರಿಯಗೊಳಿಸುತ್ತದೆ. ಮತ್ತು ಮೂಳೆಗಳನ್ನು ಬಲಪಡಿಸಲು ಸಹಕಾರಿ ಆಗಿದೆ. ಮೂತ್ರಪಿಂಡದಲ್ಲಿ ಸ್ವಲ್ಪ ದೋಷವುಂಟಾದ್ರೂ ಸಹ ಅದು ಇಡೀ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಿಡ್ನಿ ರೋಗಗಳು ಬೇಗ ಗೊತ್ತೇ ಆಗುವುದಿಲ್ಲ.


  ಅದಾಗ್ಯೂ ಮೂತ್ರಪಿಂಡ ಕಾಯಿಲೆಯ ಅಪಾಯ ಕಡಿಮೆ ಮಾಡಲು ಹಲವು ಮಾರ್ಗಗಳಿವೆ. ಇದರಲ್ಲಿ ಕೆಲವು ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಗಿಡಮೂಲಿಕೆಗಳೂ ಇವೆ. ಅವುಗಳು ಯಾವವು ಎಂದು ಇಲ್ಲಿ ನೋಡೋಣ.


  ನೆಲ್ಲಿಕಾಯಿ


  ರಿಸರ್ಚ್‌ ಗೇಟ್‌ ಅಧ್ಯಯನದ ಪ್ರಕಾರ, ಆಮ್ಲಾದಲ್ಲಿ ಫೀನಾಲಿಕ್ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕಗಳಿವೆ. ಇವುಗಳು ಮೂತ್ರಪಿಂಡದ ಹಾನಿ ತಡೆಯುತ್ತವೆ. ಸಮಸ್ಯೆಗಳನ್ನು ಸರಿಪಡಿಸುತ್ತದೆ. ಜೊತೆಗೆ ಆಮ್ಲಾ ಸಾರವು ಫೈಬ್ರೋಸಿಸ್, ಆಕ್ಸಿಡೇಟಿವ್ ಒತ್ತಡ ಮತ್ತು ಮೂತ್ರಪಿಂಡದ ಅಪಸಾಮಾನ್ಯ ಕ್ರಿಯೆಗೆ ಸಂಬಂಧಿಸಿದ ಉರಿಯೂತ ತಡೆಯಲು ತುಂಬಾ ಪ್ರಯೋಜನಕಾರಿ ಆಗಿದೆ.


  ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


  ಶುಂಠಿ


  ಎನ್‌ ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಶುಂಠಿಯಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿವೆ. ಇದು ಮೂತ್ರಪಿಂಡ ಮತ್ತು ಯಕೃತ್ತಿನಿಂದ ವಿಷ ತೆಗೆದು ಹಾಕುತ್ತದೆ.


  ಅರಿಶಿನ


  ಅರಿಶಿನದಲ್ಲಿ ಹೃದಯ, ಯಕೃತ್ತು ಮತ್ತು ಮೂತ್ರಪಿಂಡಗಳನ್ನು ರೋಗಗಳಿಂದ ಮುಕ್ತವಾಗಿಡುವ ಗುಣಗಳು ಇವೆ. ಅರಿಶಿನದ ಸೇವನೆಯು ಮೂತ್ರಪಿಂಡದ ಸೋಂಕು ಮತ್ತು ಮೂತ್ರದ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


  ತ್ರಿಫಲ


  ಮೂರು ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಇದನ್ನು ಅನೇಕ ರೋಗಗಳ ಚಿಕಿತ್ಸೆಗೆ ಸಹಕಾರಿ ಆಗಿದೆ. ತ್ರಿಫಲ ತಿನ್ನುವುದರಿಂದ ಕಿಡ್ನಿ ಮತ್ತು ಲಿವರ್ ಆರೋಗ್ಯವಾಗಿರುತ್ತದೆ. ಇದು ಮೂತ್ರಪಿಂಡದ ಕಾರ್ಯ ಸರಿಯಾಗಿಸುತ್ತದೆ.


  ಕೊತ್ತಂಬರಿ ಸೊಪ್ಪು


  ಕೊತ್ತಂಬರಿ ಎಲೆಗಳು ಮತ್ತು ಬೀಜಗಳಲ್ಲಿ ಇರುವ ಮೂತ್ರವರ್ಧಕ ಗುಣಲಕ್ಷಣಗಳು ಮೂತ್ರಪಿಂಡವನ್ನು ಆರೋಗ್ಯವಾಗಿಡುತ್ತದೆ. ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ನೀರು ಕುಡಿದರೆ ಪರಿಣಾಮ ಬೇಗನೇ ಗೋಚರವಾಗುತ್ತದೆ.


  ಅನಾನಸ್


  ಸಾಕಷ್ಟು ಫೈಬರ್, ವಿಟಮಿನ್-ಸಿ ಮತ್ತು ಇತರ ಪೋಷಕಾಂಶಗಳು ಅನಾನಸ್‌ನಲ್ಲಿ ಇವೆ. ಇದು ಮೂತ್ರಪಿಂಡಗಳ ಆರೋಗ್ಯ ಕಾಪಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಾಗಾಗಿ ಕಿಡ್ನಿ ಆರೋಗ್ಯವಾಗಿರಲು ಅನಾನಸ್ ತಿನ್ನಿ.


  ದೊಡ್ಡ ಮೆಣಸಿನಕಾಯಿ


  ಕ್ಯಾಪ್ಸಿಕಂನಲ್ಲಿ ವಿಟಮಿನ್-ಸಿ ಹೇರಳವಾಗಿ ಇದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಮೂತ್ರಪಿಂಡವನ್ನು ಆರೋಗ್ಯವಾಗಿಡಲು, ಕ್ಯಾಪ್ಸಿಕಂ ನ್ನು ಆಹಾರದಲ್ಲಿ ಸೇವಿಸಿ.


  ಪಪ್ಪಾಯಿ


  ಪಪ್ಪಾಯಿಯಲ್ಲಿರುವ ಪೋಷಕಾಂಶಗಳು ಮೂತ್ರಪಿಂಡದ ಆರೋಗ್ಯ ಕಾಪಾಡುತ್ತವೆ. ಪಪ್ಪಾಯಿ ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳೂ ದೂರ ಆಗುತ್ತವೆ.


  ಹೂಕೋಸು


  ನಾರಿನಂಶವು ಸಾಕಷ್ಟು ಪ್ರಮಾಣದಲ್ಲಿ ಹೂಕೋಸಿನಲ್ಲಿ ಕಂಡು ಬರುತ್ತದೆ. ಇದು ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಸಹಕಾರಿ. ಹೂಕೋಸು ಸೇವಿಸಿ. ಮೂತ್ರಪಿಂಡದ ಸಮಸ್ಯೆ ತೊಡೆದು ಹಾಕಲು ಇದು ಸಹಾಯ ಮಾಡುತ್ತದೆ.


  ಮೊಸರು


  ಮೊಸರಿನಲ್ಲಿ ಪ್ರೋಬ್ಯಾಕ್ಟೀರಿಯಾಗಳು ಹೇರಳವಾಗಿ ಇವೆ. ನಿಯಮಿತವಾಗಿ ಮೊಸರನ್ನು ಸೇವಿಸಿದರೆ, ಅದು ಮೂತ್ರಪಿಂಡವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.


  ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!


  ಹಸಿರು ಎಲೆಗಳ ತರಕಾರಿಗಳು


  ಫೈಬರ್ ಮತ್ತು ಖನಿಜಗಳು ಮುಖ್ಯವಾಗಿ ಹಸಿರು ಎಲೆಗಳ ತರಕಾರಿಗಳಲ್ಲಿದೆ. ಪಾಲಕ್, ಮೂಲಂಗಿ ಇತ್ಯಾದಿ ಸೇವನೆ ಮಾಡಿ. ಇದು ಕಿಡ್ನಿಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ.

  Published by:renukadariyannavar
  First published: